ಅಶ್ಲೀಲ ವಿಡಿಯೋ ಫೊಟೋ ವಿಚಾರಕ್ಕೆ ನಡೆದ ಜಗಳದಲ್ಲಿ ಬಿತ್ತು ಹೆಣ
ಸಹೋದರಿಯ ಅಶ್ಲೀಲ ವಿಡಿಯೋ, ಫೋಟೋ ಹೊಂದಿದ್ದ ಆರೋಪ ಸಂಬಂಧ ನಡೆದ ಜಗಳದಲ್ಲಿ ಓರ್ವ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ: ಸಹೋದರಿಯ ಬೆತ್ತಲೆ ಫೋಟೋ ಹೊಂದಿದ್ದ ಆರೋಪ ಸಂಬಂಧ ನಡೆದ ಜಗಳದಲ್ಲಿ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋವನ್ನು ಹೊಂದಿದ್ದಕ್ಕೆ ಆಕ್ರೋಶಗೊಂಡಿದ್ದ ದರ್ಶನ್, ತನ್ನ ಸಹಚರ ಆಶ್ರಯ್ ಜೊತೆ ಸೇರಿಕೊಂಡು ದೊಡ್ಡಬಳ್ಳಾಪುರ ಮೂಲದ ನಂದನ್ ಎಂಬಾತನನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ದೊಡ್ಡಬಳ್ಳಾಫುರ ಮೂಲದ ಯುವಕ ನಂದನ್ (ಕೊಲೆಯಾದವ) ಎಂಬಾತ ಚಿಕ್ಕಬಳ್ಳಾಫುರ ತಾಲೂಕಿನ ಹಾರೋಬಂಡೆ ಗ್ರಾಮದ ದರ್ಶನ್ ಎಂಬ ಯುವಕನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋವನ್ನು ಹೊಂದಿದ್ದನು. ಈ ಸಂಬಂಧ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಇದೀಗ ಹಾರೋಬಂಡೆ ಗ್ರಾಮದ ಬಳಿ ನಂದನ್ ಹೆಣವಾಗಿ ಬಿದ್ದಿದ್ದು, ವಿಡಿಯೋ, ಫೋಟೋ ವಿಚಾರಕ್ಕೆ ದ್ವೇಷದಿಂದ ದರ್ಶನ್ ಮತ್ತು ಆಶ್ರಯ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬರ್ಬರ ಕೊಲೆ ವಿಚಾರ ತಿಳಿದ ಚಿಕ್ಕಬಳ್ಳಾಫುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
50ರಿಂದ 60 ಭಾರಿ ಚಾಕುವಿನಿಂದ ಚುಚ್ಚಿ ಕೊಲೆ
ಕೊಲೆ ಪ್ರಕರಣದ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ ಮಾಹಿತಿ ನಿಡಿದ್ದು, ದರ್ಶನ್ ಹಾಗೂ ಆಶ್ರಯ್ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೆ, ಆರೋಪಿ ದರ್ಶನ್ ತಂಗಿಯನ್ನು ನಂದನ್ ಚುಡಾಯಿಸುತ್ತಿದ್ದನಂತೆ. ತಂಗಿಯನ್ನು ಚುಡಾಯಿಸಿದ ಕಾರಣ ಕರೆದುಕೊಂಡು ಬಂದು ಕೊಲೆ ಮಾಡಿರುವ ಬಗ್ಗೆ ಮಾಹಿತಿ ಇದೆ. ನಿನ್ನೆ ಸಂಜೆ 5 ಗಂಟೆಗೆ ಮೂವರು ಸೇರಿಕೊಂಡು ಮದ್ಯಪಾನ ಮಾಡಿದ್ದಾರೆ. ಈ ವೇಳೆ ನಂದನ್ ಮೊಬೈಲ್ನಲ್ಲಿ ದರ್ಶನ್ ತಂಗಿ ಹಾಗೂ ನಂದನ್ ಚಾಟಿಂಗ್ ಸಿಕ್ಕಿದೆ. ಆಗ ಇಬ್ಬರ ಮದ್ಯೆ ವಾಗ್ವಾದ ತಳ್ಳಾಟ ನೂಕಾಟ ಆಗಿದೆ. ಜಗಳ ತಾರಕಕ್ಕೇರಿ ದರ್ಶನ್ 50ರಿಂದ 60 ಭಾರಿ ಚಾಕುವಿನಿಂದ ನಂದನ್ಗೆ ಇರಿದಿದ್ದಾನೆ. ಪರಿಣಾಮವಾಗಿ ನಂದನ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದ್ದೊಬ್ಬ ಮಗನನ್ನು ಕಳೆದುಕೊಂಡು ತಾಯಿಯ ಗೋಳಾಟ
ಇದ್ದೊಬ್ಬ ಮಗನನ್ನು ಕಳೆದುಕೊಂಡು ತಾಯಿ ರತ್ನಮ್ಮ ಚಿಕ್ಕಬಳ್ಳಾಪುರದ ಗ್ರಾಮಾಂತರ ಠಾಣೆ ಬಳಿ ಗೋಳಾಡುತ್ತಿದ್ದಾರೆ. ಕಡುಬಡತನದಲ್ಲಿ ಮಗನನ್ನು ಬೆಳೆಸಿದ್ದ ರತ್ನಮ್ಮ, ಗಂಡ ಬಿಟ್ಟು ಹೊದರೂ ಮಗನಲ್ಲಿ ನೂರೇಂಟು ಕನಸ್ಸು ಕಂಡಿದ್ದರು. ನಂದನ್ ಗಾರ್ಮೇಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಈಗ ಮಗನೂ ಇಲ್ಲ ಬದುಕಿ ನಾನೇನು ಮಾಡಲಿ ಎಂದು ರತ್ನಮ್ಮ ಕಣ್ಣೀರು ಸುರಿಸುತ್ತಿದ್ದಾರೆ.
ಜೈಲಿನಲ್ಲಿ ವಿಚಾರಣಾದೀನ ಕೈದಿ ಆತ್ಮಹತ್ಯೆ
ಬೆಳಗಾವಿ: ಜಿಲ್ಲೆಯ ಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಿಡಲಗಾ ಜೈಲಿನಲ್ಲಿ ಇದ್ದ ವಿಚಾರಣಾದೀನ ಕೈದಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಚ್ಚನಕೇರಿ ಗ್ರಾಮದ ಮಂಜುನಾಥ ನಾಯ್ಕರ (20) ಆತ್ಮಹತ್ಯೆ ಮಾಡಿಕೊಂಡ ಕೈದಿ. ಮೂರು ತಿಂಗಳ ಹಿಂದೆ ಪೋಕ್ಸೊ ಪ್ರಕರಣದಲ್ಲಿ ಹಿಡಲಗಾ ಜೈಲು ಸೇರಿದ್ದ ಮಂಜುನಾಥ, ಕ್ವಾರಂಟೈನ್ ಕೊಠಡಿಯಲ್ಲಿ ಬೆಡ್ಶೀಟ್ನಿಂದ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 am, Sun, 2 October 22