ಗೋವಾಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐವರ ಬಂಧನ: 3 ಲಕ್ಷ ರೂ. ಮೌಲ್ಯದ ಗೋಮಾಂಸ ವಶಕ್ಕೆ
3,10,800 ರೂ. ಮೌಲ್ಯದ 2,220 ಕೆಜಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಚೆಕ್ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ.
ಕಾರವಾರ: ಗೋವಾಕ್ಕೆ ಅಕ್ರಮವಾಗಿ ಗೋಮಾಂಸ (Beef) ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದು, 3,10,800 ರೂ. ಮೌಲ್ಯದ 2,220 ಕೆಜಿ ಗೋಮಾಂಸ ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಚೆಕ್ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಮಹೇಂದ್ರ ಪಿಕಪ್ ವಾಹನ ಸಮೇತ ಐವರು ಆರೋಪಿಗಳಾದ ಅಳ್ನಾವರ್ ಮೂಲದ ಸಾದಿಕ್, ಇಲಿಯಾಸ್, ದಾವಲಮಲೀಕ್, ಖಾನಾಪುರ ಮೂಲದ ಶಾಹಿದ್ ಹಾಗೂ ರಾಜಾಸಾಬ್ ಬಂಧಿಸಲಾಗಿದೆ. ಜೋಯಿಡಾ ತಾಲೂಕಿನ ರಾಮನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಕಲ್ಲು ಗಣಿಗಾರಿಕೆ ಮಾಡಿದ ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಬಿದ್ದು ವ್ಯಕ್ತಿ ಸಾವು
ವಿಜಯಪುರ: ಕಲ್ಲು ಗಣಿಗಾರಿಕೆ ಮಾಡಿದ ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಯ ಕೊಲ್ಹಾರ ಪಟ್ಟಣದ ಯುಕೆಪಿ ಬಳಿಯ ಕಲ್ಲಿನ ಕ್ವಾರಿಯಲ್ಲಿ ನಡೆದಿದೆ. ಕಲ್ಲಿನ ಕ್ವಾರಿಯಲ್ಲಿ ಸಂಗ್ರಹವಾಗಿದ್ದ ನೀರಲ್ಲಿ ಸ್ನಾನ ಮಾಡಲು ಹೋಗಿದ್ದ ವೇಳೆ ಅವಘಡ ಉಂಟಾಗಿದೆ. ಕೊಲ್ಹಾರ ಪಟ್ಟಣದ ವಾಸಿ ರಾವತ್ ದಳವಾಯಿ (50) ಮೃತ ವ್ಯಕ್ತಿ. ನೀರು ನಿಂತಿದ್ದ ಕಲ್ಲಿನ ಕ್ವಾರಿಯಲ್ಲಿ ಸ್ನಾನ ಮಾಡಿ ವಾಪಸ್ ಬರುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮೃತರಾಗಿದ್ದಾನೆ ಎನ್ನಲಾಗುತ್ತಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕವಡಿಮಟ್ಟಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 9 ಕುರಿಗಳು ಸಾವು
ಯಾದಗಿರಿ: ವಿದ್ಯುತ್ ತಂತಿ ಸ್ಪರ್ಶಿಸಿ ಒಂಬತ್ತು ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ನಡೆದಿದೆ. ಕುರಿಗಾಹಿ ಅಯ್ಯಪ್ಪ ಕೆಂಗೂರಿ ಎಂಬುವವರಿಗೆ ಸೇರಿದ ಕುರಿಗಳ ಸಾವಾಗಿದೆ. ದಿನ ನಿತ್ಯದಂತೆ ಜಮೀನಿನಲ್ಲಿ ಕುರಿ ಮೇಯಿಸಲಾಗುತ್ತಿತ್ತು. ಗಾಳಿಗೆ ವಿದ್ಯುತ್ ತಂತಿ ಹರಿದು ಜಮೀನಿನ ಸೋಲಾರ್ ಲೈನ್ ಮೇಲೆ ಬಿದ್ದಿದೆ. ಇದರಿಂದಾಗಿ ಸೋಲಾರ್ ಬಳಿ ಮೇಯುತ್ತಿದ್ದ ಒಂಬತ್ತು ಕುರಿಗಳು ಸಾವನ್ನಪ್ಪಿವೆ. ಪರಿಹಾರಕ್ಕಾಗಿ ಕುರಿಗಾಹಿ ಅಯ್ಯಪ್ಪ ಕೆಂಗೂರಿ ಆಗ್ರಹಿಸಲಾಗಿದೆ. ಸ್ಥಳಕ್ಕೆ ಸುರಪುರ ಪೋಲಿಸರ ಭೇಟಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.
ಮೊಬೈಲ್ ಕಳವು ಮಾಡಿ ಮಾರಾಟ
ಮೊಬೈಲ್ ಫೋನ್‌ಗಳನ್ನ ಕಳವು ಮಾಡಿದ ನಂತರ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದ್ದು, ಶೇಷಾದ್ರಿಪುರಂ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ರಹೀಂ ಪಾಶಾ (29) ಬಂಧಿತ ಆರೋಪಿಯಾಗಿದ್ದಾನೆ. ಸ್ಲಂ ಬೋರ್ಡ್ ಬಳಿ ಅನುಮಾಸ್ಪದವಾಗಿ ಮೊಬೈಲ್ ಮಾರಾಟದಲ್ಲಿ ತೊಡಗಿದ್ದ ರಹೀಂನನ್ನು ತಡೆದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಕಳ್ಳತನ ಬಗ್ಗೆ ತಿಳಿದುಬಂದಿದೆ. ಹೀಗಾಗಿ ರಹೀಂನನ್ನು ವಶಕ್ಕೆ ಪಡೆದ ಪೊಲೀಸರು, ಬಂಧಿತನಿಂದ 40 ಸಾವಿರ ಮೌಲ್ಯದ 8 ಮೊಬೈಲ್ ಫೋನ್‌ಗಳು ವಶಕ್ಕೆ ಪಡೆದಿದ್ದಾರೆ.
ಕನ್ನ ಕಳವು ಆರೋಪಿಯ ಬಂಧನ
ಹಾಡುಹಗಲೇ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಆಸಾಮಿಯನ್ನು ಮಹದೇವಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ ಬಂಧಿಸಿದ್ದಾರೆ. ಚೇತನ್ ಕುಮಾರ್(23) ಬಂಧಿತ ಆರೋಪಿ. ಮಹದೇವಪುರ ಠಾಣಾ ವ್ಯಾಪ್ತಿಯ ಅಬ್ಬಯ್ಯ ಲೇಔಟ್ನಲ್ಲಿ ಕೈಚಳಕ ತೋರಿಸಿದ್ದ ಆರೋಪಿ, ಮನೆಯ ಬಾಗಿಲಿನ ಲಾಕ್ ಮುರಿದು ಚಿನ್ನಾಭರಣ ದೋಚಿದ್ದನು. ಈ ಹಿಂದೆ ಸಹಚರನ ಜೊತೆ ಸೇರಿ ಬಸ್ನಲ್ಲಿ ಚಿನ್ನದ ಸರ ಎಗರಿಸಿದ್ದನು. ಸದ್ಯ ಈತನ ಬಂಧನದಿಂದ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಂಟು ಲಕ್ಷ ಮೌಲ್ಯದ 164 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.