Crime News: ಮೂವರು ಗೆಳೆಯರಿಂದ ಅತ್ಯಾಚಾರಕ್ಕೊಳಗಾಗಿದ್ದ 10 ವರ್ಷದ ಬಾಲಕ ಸಾವು!
ಕಳೆದ ತಿಂಗಳ ಅಂತ್ಯದಲ್ಲಿ ಆ 10 ವರ್ಷದ ಬಾಲಕನ ಸೋದರ ಸಂಬಂಧಿ ಸೇರಿದಂತೆ ಮೂವರು ಸ್ನೇಹಿತರು ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆ ಬಾಲಕ ಇಂದು ಮೃತಪಟ್ಟಿದ್ದಾನೆ.
ನವದೆಹಲಿ: ದೆಹಲಿಯ (Delhi) ಸೀಲಾಂಪುರ ಪ್ರದೇಶದಲ್ಲಿ 10 ವರ್ಷದ ಬಾಲಕನ ಮೇಲೆ ಆತನ ಮೂವರು ಗೆಳೆಯರು ಸಾಮೂಹಿಕ ಅತ್ಯಾಚಾರವೆಸಗಿದ್ದ (Gang Rape) ವಿಚಿತ್ರವಾದ ಘಟನೆ ನಡೆದಿತ್ತು. ಆ ಬಾಲಕನ ಮೇಲೆ ಅತ್ಯಾಚಾರವೆಸಗಿರುವುದು ಮಾತ್ರವಲ್ಲದೆ ಆತನ ಗೆಳೆಯರೇ ಆತನ ಖಾಸಗಿ ಅಂಗಗಳಿಗೆ ರಾಡ್ ಹಾಕಿ ಗಾಯಗೊಳಿಸಿದ್ದರು. ಆ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ ಆ ಬಾಲಕ ಮೃತಪಟ್ಟಿದ್ದಾನೆ.
ಕಳೆದ ತಿಂಗಳ ಅಂತ್ಯದಲ್ಲಿ ಆ 10 ವರ್ಷದ ಬಾಲಕನ ಸೋದರ ಸಂಬಂಧಿ ಸೇರಿದಂತೆ ಮೂವರು ಸ್ನೇಹಿತರು ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆ ಬಾಲಕ ಇಂದು ಬೆಳಗ್ಗೆ ದೆಹಲಿ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾಗಲೇ ಮೃತಪಟ್ಟಿದ್ದಾನೆ. ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವವರೆಲ್ಲರೂ 10 ರಿಂದ 12 ವರ್ಷ ವಯಸ್ಸಿನ ಬಾಲಕರಾಗಿದ್ದಾರೆ.
ಇದನ್ನೂ ಓದಿ: Rajasthan: ರಾಜಸ್ಥಾನದಲ್ಲಿ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, 8 ಜನರ ಬಂಧನ
ವೈದ್ಯರು ವರದಿಯ ಪ್ರಕಾರ, ಆ ಬಾಲಕನ ಗುಪ್ತಾಂಗಕ್ಕೆ ಆಗಿದ್ದ ಗಾಯಗಳು ಎಷ್ಟು ಭೀಕರವಾಗಿದ್ದವು ಎಂದರೆ ಅವರಿಗೆ ಡಿಸೆಂಬರ್ 2012ರ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ನೆನಪಿಸುವಂತಿದ್ದವು. ನಾಲ್ಕೈದು ದಿನಗಳ ಹಿಂದೆ ನಡೆದ ದೈಹಿಕ ಹಲ್ಲೆಯಿಂದಾಗಿ ಸುಮಾರು 10 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸ್ ತಂಡವು ಆಸ್ಪತ್ರೆಗೆ ತಲುಪಿ ಮಗುವಿನ ಪೋಷಕರನ್ನು ಭೇಟಿ ಮಾಡಿದ್ದರು. ಆದರೆ, ಅವರು ಹೇಳಿಕೆ ನೀಡಲು ನಿರಾಕರಿಸಿದ್ದರು. ನಂತರ ಆ ಮಗುವನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿತ್ತು.
ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಕೂಡ ಈ ಸಂಬಂಧ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು. ತನ್ನ ಮಗನ ಖಾಸಗಿ ಭಾಗಗಳಲ್ಲಿ ರಾಡ್ ಅಳವಡಿಸಿದ ಬಾಲಕರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಸೆ. 24ರವರೆಗೆ ಆ ಬಾಲಕನ ಮನೆಯವರು ಪೊಲೀಸರಿಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ, ಆ ಹುಡುಗನ ತಾಯಿ ಅಂತಿಮವಾಗಿ ತನ್ನ ಮಗನ ಮೇಲೆ ಆತನ ಮೂವರು ಸ್ನೇಹಿತರು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದರು.
ಇದನ್ನೂ ಓದಿ: Shocking News: ದೆಹಲಿಯಲ್ಲಿ 12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ರಾಡ್ ಹಾಕಿದ ಗೆಳೆಯರು!
ಈ ಘಟನೆಯ ಮಾಹಿತಿ ತಿಳಿದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್, “ದೆಹಲಿಯಲ್ಲಿ ಹುಡುಗರಿಗೆ ಕೂಡ ಸುರಕ್ಷತೆಯಿಲ್ಲ” ಎಂದು ಟೀಕಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ಮಲಿವಾಲ್, “12 ವರ್ಷದ ಬಾಲಕನ ಮೇಲೆ ನಾಲ್ವರು ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾರೆ ಮತ್ತು ಕೋಲುಗಳಿಂದ ಹೊಡೆದಿದ್ದಾರೆ. ನಂತರ ಆತನ ಗುಪ್ತಾಂಗಗಳಿಗೆ ರಾಡ್ ಹಾಕಿ ಹಿಂಸೆ ನೀಡಲಾಗಿದೆ. ಇದರಿಂದ ಆ ಬಾಲಕ ಪ್ರಜ್ಞಾಹೀನನಾಗಿದ್ದಾನೆ” ಎಂದಿದ್ದರು.
ಆ ಎಲ್ಲಾ ಆರೋಪಿಗಳು ಆ ಬಾಲಕನ ಮನೆಯ ಸಮೀಪ ವಾಸಿಸುತ್ತಿದ್ದಾರೆ. ಅವರ ಮಧ್ಯೆ ನಡೆದ ಸಣ್ಣ ವಿಷಯಕ್ಕಾಗಿ ಜಗಳವಾಡಿದ ನಂತರ ಅವನಿಗೆ ಪಾಠ ಕಲಿಸಲು ಅವರು ಈ ರೀತಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.