ಬಿಜೆಪಿ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾ ಮೃಗದ ಚರ್ಮ: ವಿಪಕ್ಷ ನಾಯಕ ಸಿದ್ದರಾಮಯ್ಯ
ಬಿಜೆಪಿ ಸರ್ಕಾರ ಇರಬೇಕಾ? ಯಾವುದೇ ಕಾರಣಕ್ಕೂ ಇರಬಾರದು. ಈ ಸರ್ಕಾರ ಬೇರು ಸಮೇತ ಕಿತ್ತು ಎಸೆದಾಗ ದೇಶ ಉಳಿಯುತ್ತೆ. ಈ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾ ಮೃಗದ ಚರ್ಮ
ಬೆಳಗಾವಿ: ಅಗತ್ಯ ವಸ್ತು ಬೆಲೆ ಏರಿಕೆ ಆಗಿ ಎಲ್ಲಾ ಒನ್ ಟು ಡಬಲ್ ಆಗಿದೆ. ಒಂದು ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ಲೂಟಿ ಹೊಡೆಯುವುದು. ಪಿಎಸ್‌ಐ ನೇಮಕಾತಿಯಲ್ಲಿ ಸುಮಾರು 300 ಕೋಟಿ ಹೊಡೆದಿದ್ದಾರೆ. ಬಿಜೆಪಿ ಸರ್ಕಾರ ಇರಬೇಕಾ? ಯಾವುದೇ ಕಾರಣಕ್ಕೂ ಇರಬಾರದು. ಈ ಸರ್ಕಾರ ಬೇರು ಸಮೇತ ಕಿತ್ತು ಎಸೆದಾಗ ದೇಶ ಉಳಿಯುತ್ತೆ. ಈ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾ ಮೃಗದ ಚರ್ಮ ಎಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಜಾತಿ ಹೇಳಿಕೊಂಡು, ದುಡ್ಡು ತೆಗೆದುಕೊಂಡು ವೋಟ್ ಕೇಳಲು ಬರ್ತಾರೆ. ಲೂಟಿ ಹೊಡೆದ ದುಡ್ಡನ್ನ ತಗೆದುಕೊಂಡು ಬರ್ತಾರೆ. ಯಾವುದೇ ಆಸೆ ಆಮೀಷಗಳಿಗೆ ಒಳಗಾಗಬೇಡಿ. ಈ ಸರ್ಕಾರಕ್ಕೆ ಕಣ್ಣು ಕಾಣಿಸಲ್ಲ, ಕಿವಿನೂ ಕೇಳಿಸಲ್ಲ ಎಂದು ಹೇಳಿದರು.
ನಾವು 2023ರಲ್ಲಿ ಜನ ಆಶೀರ್ವಾದ ಮಾಡಿ ಅಧಿಕಾರಕ್ಕೆ ಬಂದ್ರೆ 10ಕೆಜಿ ಅಕ್ಕಿ ಕೊಡುತ್ತೇವೆ. ನಮ್ಮ ಸರ್ಕಾರ ಬಂದ ಮೇಲೆ ನೇಕಾರರ ಸಮಸ್ಯೆ ಬಗೆ ಹರಿಸೋಣ. ಪ್ರವಾಹ ಪೀಡಿತ ಊರುಗಳನ್ನ ಶಿಫ್ಟ್ ಮಾಡೋಣ. ಮುಂದೆ ಪ್ರವಾಹಕ್ಕೆ ತುತ್ತಾಗದಂತೆ ಮಾಡಿಕೊಡೋಣ. ಕೈಜೋಡಿ ಪ್ರಾರ್ಥನೆ ಮಾಡ್ತೇನೆ ಮತ್ತೆ ಕಾಂಗ್ರೆಸ್‌ಗೆ ಅವಕಾಶ ಕೊಡಿ. ಕೊರೊನಾದಲ್ಲಿ ಅನ್ನ ಭಾಗ್ಯ ಕಾರ್ಯಕ್ರಮ ಇಲ್ಲದಿದ್ರೇ ಬದುಕಲಿಕ್ಕೆ ಆಗ್ತಿತ್ತಾ. ರಾಜ್ಯದಲ್ಲಿ ಜನವಿರೋಧಿ ಸರ್ಕಾರ ಇದೆ. ಅದನ್ನ ತೋಲಗಿಸಿದ್ರೇ ನೀವು ನಾವು ಉಳಿಯುತ್ತೇವೆ. ನಾವು ಅಧಿಕಾರಕ್ಕೆ ಬರಲು ಅಲ್ಲಾ ಬಿಜೆಪಿ ತೊಲಗಿಸಲು ಅಧಿಕಾರಕ್ಕೆ ಬರಬೇಕು ಎಂದರು.
ನಮ್ಮ ಸರ್ಕಾರ ಇದ್ದಾಗ ಎರಡೂವರೆ ಸಾವಿರ ಕೋಟಿ ರಾಮದುರ್ಗ ಕ್ಷೇತ್ರಕ್ಕೆ ಕೊಟ್ಟಿದ್ದೆ. ಅಶೋಕ ಪಟ್ಟಣ ಯಾಕೆ ಸೋತ್ರೂ ಐ ಡೋಂಟ್ ನೋ. ಈಗ ಇರುವ ಶಾಸಕ ಕ್ಷೇತ್ರಕ್ಕೆ ಎಷ್ಟು ಹಣ ತಂದಿದ್ದಾರೆ ಕೇಳಿ. ನೇಕಾರರ ಸಾಲ ಮನ್ನಾ ಮಾಡಿದ್ದು ನಾನು. ಯಡಿಯೂರಪ್ಪ, ಬೊಮ್ಮಾಯಿ ಅವರು ಒಂದು ರೂಪಾಯಿ ಸಾಲ ಮನ್ನಾ ಮಾಡಿದ್ದನ್ನ ತೋರಿಸಲಿ. ಪ್ರವಾಹ ಬಂದ ಸಂದರ್ಭದಲ್ಲಿ ರಾಮದುರ್ಗಕ್ಕೆ ನಾನು ಬಂದಿದ್ದೆ. ಮೂರು ಬಾರಿ ಅಧಿವೇಶನದಲ್ಲಿ ಪ್ರವಾಹದ ಬಗ್ಗೆ ಧ್ವನಿ ಎತ್ತಿದೆ. ಈ ಸರ್ಕಾರ ಸತ್ತು ಹೋಗಿದೆ, ಮಾನ ಮರ್ಯಾದೆ ಇಲ್ಲ. ಪ್ರವಾಹ ಬಂದು ಜನ ಕಷ್ಟಕ್ಕೆ ಸಿಲುಕಿದ್ದಾರೆ ಪರಿಹಾರ ಕೊಡಿ ಅಂತಾ ಯಡಿಯೂರಪ್ಪಗೆ ಹೇಳಿದೆ. ಆದ್ರೇ ಯಡಿಯೂರಪ್ಪ ಕೊಡಲಿಲ್ಲ ಬಸವರಾಜ ಬೊಮ್ಮಾಯಿ ಕೊಡಲಿಲ್ಲ. ಬಸವರಾಜ ಬೊಮ್ಮಾಯಿ ಎಲೆಕ್ಟೇಡ್ ಚೀಫ್ ಮಿನಿಸ್ಟರ್ ಅಲ್ಲಾ ಅಪಾಯಿಂಟೇಡ್ ಚೀಫ್ ಮಿನಿಸ್ಟರ್. ನಾನು ಮುಖ್ಯಮಂತ್ರಿಯಾಗಿದ್ದಾಗ ಹದಿನೈದು ಲಕ್ಷ ಮನೆ ಕಟ್ಟಿಸಿಕೊಟ್ಟಿದೆ. ಇವರ ಜನ್ಮಕ್ಕೆ ಒಂದು ಮನೆ ಕಟ್ಟಿಸಿಕೊಡಲು ಆಗಿಲ್ಲ. ಏಳು ಕೆಜಿ ಅಕ್ಕಿಯನ್ನ ನಾನು ಉಚಿತವಾಗಿ ಕೊಟ್ಟಿದ್ದೆ. ಈಗ ಎರಡು ಕೆಜಿ ಕಡಿಮೆ ಮಾಡಿದ್ದಾರೆ ಮುಂದೆ ಎನೂ ಮಾಡ್ತಾರೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.