AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಕೋರ್ಟ್​ಗೆ ಹೋದ್ರೆ ನ್ಯಾಯ ಸಿಗುತ್ತೆಂದು ಹೇಳಕ್ಕಾಗಲ್ಲ, ಧರ್ಮಸ್ಥಳಕ್ಕೆ ಹೋಗಿ ದೂರು ನೀಡಿದ್ರೆ ನ್ಯಾಯ ಸಿಗುತ್ತೆ”

ಕೋರ್ಟ್​ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಖಂಡಿತ ಹೇಳಲಾಗಲ್ಲ, ಪೊಲೀಸ್ ಠಾಣೆಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳುವುದಕ್ಕಾಗಲ್ಲ. ಆದರೆ ಧರ್ಮಸ್ಥಳಕ್ಕೆ ಹೋಗಿ ನೀವು ದೂರು ನೀಡಿದರೆ ನ್ಯಾಯ ಸಿಗುತ್ತದೆ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ಕೋರ್ಟ್​ಗೆ ಹೋದ್ರೆ ನ್ಯಾಯ ಸಿಗುತ್ತೆಂದು ಹೇಳಕ್ಕಾಗಲ್ಲ, ಧರ್ಮಸ್ಥಳಕ್ಕೆ ಹೋಗಿ ದೂರು ನೀಡಿದ್ರೆ ನ್ಯಾಯ ಸಿಗುತ್ತೆ
ಬಿಜೆಪಿ ನಾಯಕ ಬಿ.ಎಲ್.ಸಂತೋಷ್
TV9 Web
| Edited By: |

Updated on:Oct 10, 2022 | 8:53 PM

Share

ಬೆಳಗಾವಿ: ಕೋರ್ಟ್​ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಖಂಡಿತ ಹೇಳಲಾಗಲ್ಲ, ಪೊಲೀಸ್ ಠಾಣೆಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳುವುದಕ್ಕಾಗಲ್ಲ. ಆದರೆ ಧರ್ಮಸ್ಥಳಕ್ಕೆ (Dharmasthala) ಹೋಗಿ ನೀವು ದೂರು ನೀಡಿದರೆ ನ್ಯಾಯ ಸಿಗುತ್ತದೆ ಎಂದು ನೂರಾರು ವರ್ಷಗಳ ಪರಂಪರೆ ಹೇಳುತ್ತದೆ ಎಂದು ಕನ್ನೇರಿ ಮಠದ ಸಂತ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh) ಹೇಳಿದ್ದಾರೆ.

ತರಳಬಾಳು ಪೀಠಕ್ಕೆ ದೂರು ನೀಡಿದರೆ ನ್ಯಾಯಸಿಗುತ್ತೆ ಎಂದು ಚಿತ್ರದುರ್ಗ ಜಿಲ್ಲೆಯ ಜನರ ಹೇಳುತ್ತಾರೆ. ಅಲ್ಲಿ ತೀರ್ಪು ಸಿಗಲ್ಲ ನ್ಯಾಯ ಸಿಗುತ್ತೆ, ಇದು ದೇಶದ ಧರ್ಮದ ಸಾಮರ್ಥ್ಯವಾಗಿದೆ. ಧರ್ಮ ಎಂದು ಹೇಳಿದರೆ ಕೇವಲ ಪೂಜೆ ಮಾಡುವುದಕ್ಕೆ ಸೀಮಿತವಾಗಿಲ್ಲ. ನಮ್ಮ ದೇಶದಲ್ಲಿ ಮನೆ, ಮಠ, ಮಂದಿರ ಎಂಬ ಸಂಸ್ಕಾರ ಕೇಂದ್ರಗಳಿವೆ. ಮನೆಗೆ ಅಧಿಪತಿ ತಾಯಿ. ಮಠ ಈ ದೇಶವನ್ನು ಭಾರತವನ್ನಾಗಿ ಉಳಿಸಿಕೊಂಡಿವೆ. ದೇವಸ್ಥಾನ ಅನ್ನೋ ವ್ಯವಸ್ಥೆಯಿದೆ. ಅಲ್ಲಿ ಪೂಜೆ ಮಾಡುವವರಿದ್ದಾರೆ, ಅವರೇ ಬಹುಸಂಖ್ಯಾತರು. 2 ಸಾವಿರ ವರ್ಷಗಳಿಂದಲೂ ಮುಸಲ್ಮಾನರು ಆಕ್ರಮಣ ಮಾಡುತ್ತಿದ್ದಾರೆ. ಆಕ್ರಮದ ಬಳಿಕವೂ ರಾಮ, ಕೃಷ್ಣ, ಈಶ್ವರ ಹೆಸರಿಟ್ಟುಕೊಳ್ಳುವವರಿದ್ದಾರೆ ಎಂದು ಹೇಳಿದರು.

ಬೆಳಗಾವಿ ಅಖಾಡಕ್ಕಿಳಿದ ಬಿ.ಎಲ್.ಸಂತೋಷ್, ಬಣ ಬೇಗುದಿಗೆ ಸಿಗುವುದೇ ಮುಲಾಮು?

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಭಾಷ್ಯ ಬರೆಯುವ ಬೆಳಗಾವಿಯಲ್ಲಿ (Belagavi) ಕಳೆದ ಕೆಲವು ವರ್ಷಗಳಿಂದ ಬಿಜೆಪಿಯದ್ದೇ ಪಾರುಪತ್ಯ. ಕಾಂಗ್ರೆಸ್ ನಾಯಕರು ಕಮಲದ ಭದ್ರಕೋಟೆಯನ್ನು ಅದೆಷ್ಟೋ ಬಾರಿ ಬೇಧಿಸಲು ಹೊರಟರೂ ಅದು ಸಾಧ್ಯವಾಗಿರಲಿಲ್ಲ. ಆದ್ರೆ, ಇದೀಗ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಬೆಳಗಾವಿ ಬಿಜೆಪಿ ಹೊಡೆದು ಹೋಳು ಹೋಳಾಗಿದೆ. ಮೂಲ ಬಿಜೆಪಿಗರು ಹಾಗೂ ಜಾರಕಿಹೊಳಿ ಬದರ್ಸ್​ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ.

ಅಖಾಡಕ್ಕಿಳಿದ ಬಿಎಲ್​ ಸಂತೋಷ್​

ಇದಕ್ಕೆ ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅಖಾಡಕ್ಕಿಳಿದಿದ್ದು, ಜಿಲ್ಲೆಯಲ್ಲಿನ ಬಣಗಳ ಒಳಬೇಗುದಿಯನ್ನು ತಣಿಸಲು ಮುಂದಾಗಿದ್ದಾರೆ.

2 ಬಣಗಳಾಗಿ ಎಂಎಲ್‌ಸಿ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯನ್ನು ಒಗ್ಗೂಡಿಸಲು ಬಿ.ಎಲ್​.ಸಂತೋಷ್​ ನೇತೃತ್ವದಲ್ಲಿ ಸಾವಗಾಂವ್​​​​ನ ಅಂಗಡಿ ಕಾಲೇಜಿನಲ್ಲಿ ಸಭೆ ಮಾಡುವ ಮೂಲಕ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ. ಎರಡು ಬಣಗಳಾಗಿ ಎಂ.ಎಲ್‌.ಸಿ ಚುನಾವಣೆಯಲ್ಲಿ ಎರಡು ಸ್ಥಾನ ಕಳೆದುಕೊಂಡಿದ್ದ ಬಿಜೆಪಿ, ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಬಣ ರಾಜಕೀಯದಿಂದ ಪರಿಣಾಮ ಆಗದಂತೆ ಮುನ್ನೆಚ್ಚರಿಕೆ ವಹಿಸಿದೆ. ಈ ಹಿನ್ನೆಲೆ ಸವದಿ ಬಣ ಹಾಗೂ ಜಾರಕಿಹೊಳಿ ಬಣ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರ ಜತೆಗೆ ಮಹತ್ವದ ಸಭೆ ನಡೆಸಿದರು.

ಈ ವರೆಗೂ ಪಕ್ಷದ ಕಾರ್ಯಚಟುವಟಿಕೆಗಳಿಂದ ಸಭೆಗಳಿಂದ ಅಂತರ ಕಾಯ್ದುಕೊಂಡಿದ್ದ ಜಾರಕಿಹೊಳಿ ಬ್ರದರ್ಸ್ (ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ) ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

18 ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಬಿಜೆಪಿಯು ತನ್ನ ನೆಲೆ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಖುದ್ದು ಬಿ.ಎಲ್.ಸಂತೋಷ್ ಅವರನ್ನು ಅಖಾಡಕ್ಕಿಳಿಸಿರುವುದು ವಿಶೇಷ.

ಜಾರಕಿಹೊಳಿ ಬ್ರದರ್ಸ್​ ವಿರುದ್ಧ ದೂರು ನೀಡಿದ್ದ ಬಿಜೆಪಿ

ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯಾನ್ನಾಗಿ ಕಣಕ್ಕಿಳಿಸಿ ಬಿಜೆಪಿ ಅಭ್ಯರ್ಥಿ, ಹಿರಿಯ ನಾಯಕ ಮಹಾಂತೇಶ ಕವಟಿಗಿಮಠ ಸೋಲಿಗೆ ಕಾರಣರಾಗಿದ್ದಾರೆ. ಇದು ಬೆಳಗಾವಿ ಜಿಪಿಯಲ್ಲಿನ ಭಿನ್ನಮತಕ್ಕೆ ಪ್ರಮುಖ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 pm, Mon, 10 October 22

‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ