ಬೆಳಗಾವಿ: ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳು (Embryos) ಪತ್ತೆ ವಿಚಾರ ಪ್ರಕರಣದಲ್ಲಿ ಬೇಜವಾಬ್ದಾರಿ ತೋರಿದ್ದ ಅಧಿಕಾರಿ ರಕ್ಷಣೆಗೆ ಆರೋಗ್ಯ ಇಲಾಖೆ ನಿಂತ್ತಿದೆ. ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎ.ವಿ ಕಿವುಡಸನ್ನವರ್‌ಗೆ ಇಲಾಖೆಯಿಂದಲೇ ಶ್ರೀರಕ್ಷೆ ದೊರೆತಿದ್ದು, ಕೆಪಿಎಂಇ, ಪಿಸಿ ಆ್ಯಂಡ್ ಪಿಎನ್‌ಡಿಟಿ ಜವಾಬ್ದಾರಿಯನ್ನ ಇಲಾಖೆ ವಾಪಾಸ್ ಪಡೆದಿದೆ. ಸ್ಕ್ಯಾನ್ ಸೆಂಟರ್ ಮತ್ತು ಆಸ್ಪತ್ರೆಗಳ ಪರಿಶೀಲನೆ ಮಾಡದೇ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದರು. ಅಧಿಕಾರಿ ಬೇಜವಾಬ್ದಾರಿ ಹಿನ್ನೆಲೆ ವೆಂಕಟೇಶ ಆಸ್ಪತ್ರೆಯಲ್ಲಿ ಏಳು ಭ್ರೂಣ ಪತ್ತೆಯಾಗಿದ್ದವು. ಏಳು ಭ್ರೂಣಗಳನ್ನ ಒಂದು ವರ್ಷದಿಂದ ಸಿಬ್ಬಂದಿಗಳು ತೆಗೆದಿಟ್ಟು ಹಳ್ಳಕ್ಕೆ ಎಸೆದಿದ್ದರು. ಜೂನ್.24ರಂದು ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣಗಳು ಪತ್ತೆಯಾಗಿದ್ದವು. ಆಸ್ಪತ್ರೆ ಹಾಗೂ ಸ್ಕ್ಯಾನ್ ಸೆಂಟರ್‌ಗಳಲ್ಲಿ ದಾಖಲೆಗಳನ್ನ ನಿರ್ವಹಣೆ ಮಾಡದೇ ಗರ್ಭಕ್ಕೆ ಕತ್ತರಿ ಹಾಕಲಾಗಿತ್ತು. ಇದರಿಂದ ಲಿಂಗಪತ್ತೆ ಮಾಡಿ ಆಪರೇಷನ್ ಮಾಡಲಾಗುತ್ತಿದೆ ಅನ್ನೋ ಅನುಮಾನ ಕೂಡ ವ್ಯಕ್ತವಾಗಿತ್ತು.
ಇದನ್ನೂ ಓದಿ: Translated Story: ನೆರೆನಾಡ ನುಡಿಯೊಳಗಾಡಿ; ‘ನೀನು ನಿನ್ನ ಹೊಸ ತಾಯಿಯನ್ನು ನೋಡಿರುವೆಯಾ?’
ಸಿಎಂ ಬಸವರಾಜ ಬೊಮ್ಮಾಯಿ ಕೂಡ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಇದೀಗ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಯ ಬೆನ್ನಿಗೆ ಆರೋಗ್ಯ ಇಲಾಖೆ ನಿಂತ್ತಿದೆ. ಆಸ್ಪತ್ರೆ, ಸ್ಕ್ಯಾನ್ ಸೆಂಟರ್‌ಗಳಲ್ಲಿ ಪರಿಶೀಲನೆ ಮಾಡದೇ ಇರುವುದರಿಂದ, ಈ ಘಟನೆ ಸಂಭವಿಸಿದೆ ಅಂತಾ ಜವಾಬ್ದಾರಿ ವಾಪಸ್ ಪಡೆದ ಆದೇಶ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಆದೇಶ ಪತ್ರದಲ್ಲೇ ಘಟನೆ ಕಾರಣ ಕಿವುಡಸನ್ನವರ್ ಅಂತಿದ್ರೂ ಇಲಾಖೆ ಕ್ರಮ ಕೈಗೊಂಡಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮುಂದುವರೆಯುವಂತೆ ಆದೇಶಿಸಲಾಗಿದೆ. ಕೆಪಿಎಂಇ-ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ 201ರ ಅದಿನೀಯಮದ ಪ್ರಕಾರ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಬಿ.ಎನ್.ತುಕ್ಕಾರ ಅವರನ್ನ ಕೆಪಿಎಂಇ ಅಧಿಕಾರಿಯಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ.
ಏನಿದು ಪ್ರಕರಣ?
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಹಳ್ಳದಲ್ಲಿ ನಾಲ್ಕು ನವಜಾತ ಶಿಶುಗಳ ಮೃತ ದೇಹ ಶುಕ್ರವಾರ ಪತ್ತೆಯಾಗಿತ್ತು. ಒಟ್ಟು ಐದು ಬಾಟಲ್ಗಳಲ್ಲಿ ಏಳು ಭ್ರೂಣಗಳನನ್ನು ಹಾಕಿ ಹಳ್ಳದಲ್ಲಿ ಬಿಟ್ಟಿದ್ದರು. ಇದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.
185ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ರೇಡ್:
ಬೆಳಗಾವಿ ಜಿಲ್ಲೆಯಾದ್ಯಂತ ಒಂದೇ ದಿನ 185ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ರೇಡ್ ಮಾಡಲಾಗಿದೆ. ಬೆಳಗಾವಿ ತಾಲೂಕು 64, ಅಥಣಿ 24, ಸವದತ್ತಿ 8, ರಾಯಬಾಗ 8, ಚಿಕ್ಕೋಡಿ 18, ಖಾನಾಪುರ 8, ರಾಮದುರ್ಗ 6, ಗೋಕಾಕ್ 40, ಬೈಲಹೊಂಗಲ 6 ಮತ್ತು ಹುಕ್ಕೇರಿ ಪಟ್ಟಣದಲ್ಲಿ 3 ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ಮಾಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೆ.