AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3ಗೆ ಯುವ ವಿಜ್ಞಾನಿಯಿಂದ ಮಹತ್ತರ ಕೊಡುಗೆ, ಬೆಳಗಾವಿಯಲ್ಲಿ ಸಿದ್ದವಾಗಿವೆ ರಾಕೆಟ್​​​ನ ಬಿಡಿಭಾಗಗಳು

ಚಂದ್ರಯಾನ-3ರ ವಿಕ್ರಮ ಲ್ಯಾಂಡರ್​ ಚಂದಿರನ ಸ್ಪರ್ಶಕ್ಕೆ ಭಾರತ ಅಷ್ಟೆ ಅಲ್ಲದೇ ವಿಶ್ವವೇ ಕೌತಕದಿಂದ ಎದುರು ನೋಡುತ್ತಿದೆ. ಈಗಾಗಲೇ ನಭಕ್ಕೆ ಹಾರಿರುವ ರಾಕೇಟ್​ನ ಬಿಡಿ ಭಾಗಗಳ ತಯಾರಿಕೆಯಲ್ಲಿ ರಾಜ್ಯದ ಕುಂದಾನಗರಿ ಬೆಳಗಾವಿಯ ನಂಟಿದೆ.

ಚಂದ್ರಯಾನ-3ಗೆ ಯುವ ವಿಜ್ಞಾನಿಯಿಂದ ಮಹತ್ತರ ಕೊಡುಗೆ, ಬೆಳಗಾವಿಯಲ್ಲಿ ಸಿದ್ದವಾಗಿವೆ ರಾಕೆಟ್​​​ನ ಬಿಡಿಭಾಗಗಳು
ಎಂ.ಡಿ. ದೀಪಕ ಧಡೂತಿ
ಸಹದೇವ್​ ಮಾನೆ
| Edited By: ವಿವೇಕ ಬಿರಾದಾರ|

Updated on:Aug 23, 2023 | 12:08 PM

Share

ಬೆಳಗಾವಿ: ಚಂದ್ರಯಾನ-3ರ (Chandrayaana-3) ವಿಕ್ರಮ ಲ್ಯಾಂಡರ್​ ಚಂದಿರನನ್ನು ಸ್ಪರ್ಶ ಮಾಡುವ ಗಳಿಗೆಯನ್ನು ನೋಡಲು ವಿಶ್ವವೇ ಕೌತಕದಿಂದ ಕಾಯುತ್ತಿದೆ. ಚಂದ್ರಯಾನ-3 ಉಪಗ್ರಹ ಮತ್ತು ರಾಕೆಟ್​​ನ ತಯಾರಿಕೆಯಲ್ಲಿ ಅನೇಕ ವಿಜ್ಞಾನಿಗಳ ಪರಿಶ್ರಮವಿದೆ. ಈ ಪರಿಶ್ರಮದಲ್ಲಿ ರಾಜ್ಯದ ಕುಂದಾನಗರಿ ಬೆಳಗಾವಿ (Belagavi)ಯ ಓರ್ವ ಯುವ ವಿಜ್ಞಾಯ ಪಾಲು ಇದೆ. ಹೌದು ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದ ರಾಕೆಟ್​​​ನ ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯಲ್ಲಿರುವ ರಾಜ್ಯದ ಪ್ರತಿಷ್ಠಿತ ಕಂಪನಿಯ ಸ್ಥಾಪಕ.

ಹೌದು ಚಂದ್ರಯಾನ-3 ರಾಕೇಟ್​​​ಗೆ ಕೆಲವು ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್. ಸ್ವದೇಶಿ ಹಾಗೂ ವಿದೇಶಿ ಟೆಕ್ನಾಲಜಿಯನ್ನು ಬಳಸಿ ರಾಕೇಟ್​​​ನ ಬಿಡಿ ಭಾಗಗಳನ್ನು ತಯಾರಿಸಾಲಾಗಿದೆ. ಈ ಹಿಂದೆ 2013 ರಲ್ಲಿ ನಡೆದ ಭಾರತದ  ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ)ದ ರಾಕೇಟ್​​​​​ನ ಬಿಡಿಭಾಗಗಳನ್ನೂ ಸಹ ಇದೇ ಕಂಪನಿ ತಯಾರಿಸಿತ್ತು. ಈ ಉಪಗ್ರಹ ಐತಿಹಾಸಿಕ ಪಯಣ ಬೆಳೆಸಿ ಮಂಗಳನ ಅಂಗಳದಲ್ಲಿ ಪ್ರವೇಶ ಮಾಡಿತ್ತು‌. ಅಂದು ಇಡೀ ಭಾರತವೇ ಹೆಮ್ಮೆ ಪಟ್ಟಿತ್ತು. ಈಗ ಮತ್ತೆ ಚಂದ್ರಯಾನ-3ರ ರಾಕೇಟ್​​​​​ನ ಬಿಡಿಭಾಗಗಳನ್ನು ಇದೇ ಕಂಪನಿ ತಯಾರಿಸಿದೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್​​ ಕಂಪನಿ ಸ್ಥಾಪಕ ದೀಪಕ ಧಡೂತಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಹಂತಗಳನ್ನು ವಿವರಿಸಿದ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ 

ಒಟ್ಟಿನಲ್ಲಿ ಚಂದ್ರಯಾನ-3 ಮೊದಲ ಹಂತದಲ್ಲೇ ಯಶಸ್ವಿಯಾಗಿದ್ದು ಇಡೀ ಜಗತ್ತು ನಿಬ್ಬೆರಗಾಗಿ ಭಾರತದತ್ತ ನೋಡುತ್ತಿದೆ. ಚಂದ್ರಯಾನ 3 ಸಕ್ಸಸ್ ಆಗಲಿ ಭಾರತೀಯರು ವಿಶ್ವದ ಮುಂದೆ ಮತ್ತೊಮ್ಮೆ ಹೆಮ್ಮೆ ಪಡುವಂತಾಗಲಿ ಎನ್ನುವುದು ಪ್ರತಿ ಭಾರತೀಯನ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:42 am, Wed, 23 August 23

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More