ಚಂದಮಾಮನ ಮುತ್ತಿಡಲಿದೆ ವಿಕ್ರಮ್ ಲ್ಯಾಂಡರ್; ಚಂದ್ರಯಾನ-3ರ ಯಶಸ್ಸಿಗಾಗಿ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ

Chandrayaan-3: ಚಂದ್ರನ ಗುಳಿ ಕೆನ್ನೆಗೆ ವಿಕ್ರಮ್​ ಲ್ಯಾಂಡರ್ ಮುತ್ತಿಕ್ಕಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಚಂದಿರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗೋ ಮೂಲಕ ಹೊಸ ಇತಿಹಾಸ ನಿರ್ಮಿಸಲಿದೆ. ಈ ನಡುವೆಯೇ ದೇಶಾದ್ಯಂತ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಅದರ ವಿವರ ಇಲ್ಲಿದೆ.

ಚಂದಮಾಮನ ಮುತ್ತಿಡಲಿದೆ ವಿಕ್ರಮ್ ಲ್ಯಾಂಡರ್; ಚಂದ್ರಯಾನ-3ರ ಯಶಸ್ಸಿಗಾಗಿ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ
ಚಂದ್ರಯಾನ-3ರ ಯಶಸ್ಸಿಗಾಗಿ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ
Follow us
| Updated By: ಆಯೇಷಾ ಬಾನು

Updated on: Aug 23, 2023 | 8:10 AM

ಬೆಂಗಳೂರು, ಆ.23: ವಿಕ್ರಮ್ ಲ್ಯಾಂಡರ್(Vikram Lander), ಚಂದ್ರನ ಮೇಲೆ ಇಳಿಯೋ ಕ್ಷಣಕ್ಕಾಗಿ ಇಡೀ ದೇಶ ಭಾರಿ ಕುತೂಹಲದಿಂದ ಕಾಯುತ್ತಿದೆ(Chandrayaan-3). ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಜುಲೈ 14ರ ಶುಕ್ರವಾರ ಆಕಾಶಕ್ಕೆ ಹಾರಿದ್ದ ಚಂದ್ರಯಾನ್ 3 ಮಿಷನ್ ಯಶಸ್ಸಿನಂತ ಸಾಗಿದ್ದು ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿಯಲಿದೆ. 17 ನಿಮಿಷದಲ್ಲಿ ವಿಕ್ರಮ್ ಲ್ಯಾಂಡಿಂಗ್ ಪ್ರಕ್ರಿಯೆ ನಡೆಯಲಿದೆ. ಇನ್ನು ಚಂದ್ರಯಾನ-3ರ ಯಶಸ್ಸಿಗಾಗಿ ಭಾರತೀಯರು ದೇವರ ಮೊರೆ ಹೋಗಿದ್ದು ದೇಶದೆಲ್ಲೆಡೆ ಪೂಜೆ-ಪುನಸ್ಕಾರಗಳನ್ನು ಮಾಡಲಾಗುತ್ತಿದೆ. ಅದರ ವಿವರ ಇಲ್ಲಿದೆ.

ಮರಳುಕಲೆ ಮೂಲಕ ಚಂದ್ರಯಾನಕ್ಕೆ ಶುಭಾಶಯ

ದೇಶದ ಮೂಲೆ ಮೂಲೆಯಿಂದ ಚಂದ್ರಯಾನ-3ರ ಯಶಸ್ಸಿಗಾಗಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ. ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ತಂಡ ಶುಭ ಕೋರಿದ್ದು ಒಡಿಶಾದ ಪುರಿ ಬೀಚ್​​ನಲ್ಲಿ ಮರಳು ಕಲೆ ರಚಿಸಿ ವಿಕ್ರಂ ಲ್ಯಾಂಡರ್​​​ನ ಸಾಫ್ಟ್​ ಲ್ಯಾಂಡಿಂಗ್‌ಗೆ ಶುಭ ಕೋರಿದ್ದಾರೆ. ಬೀಚ್‌ಗೆ ಬರುವ ಪ್ರವಾಸಿಗರು ಕೂಡ ಮರಳು ಕಲೆಯಲ್ಲಿ ಮೂಡಿರುವ ಚಂದ್ರಯಾನವನ್ನ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್‌ಗೆ ಉತ್ತರಾಖಂಡದ ಋಷಿಕೇಶದಲ್ಲಿ ಗಂಗಾರತಿ ಮಾಡಲಾಯ್ತು. ಋಷಿಕೇಶದ ಪರಮಾರ್ಥ ನಿಕೇತನ ಘಾಟ್‌ನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ ಮಾಡಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಲಿ, ದೇಶದ ಕೀರ್ತಿ ಪತಾಕೆ ಮೇಲಕ್ಕೆ ಹಾರಲಿ ಅಂತಾ ಪ್ರಾರ್ಥಿಸಲಾಯ್ತು.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಹಂತಗಳನ್ನು ವಿವರಿಸಿದ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ

ವಿಘ್ನ ವಿನಾಯಕನಿಗೆ ವಿಶೇಷ ಪೂಜೆ

ಚಂದ್ರಯಾನ ಯಶಸ್ಸಿಗೆ ರಾಜ್ಯಾದ್ಯಂತ ಪೂಜೆ, ಪುನಸ್ಕಾರವೇ ನಡೆಯುತ್ತಿದೆ. ಬೆಂಗಳೂರಿನ ಬಸವನಗುಡಿ ದೇವಾಲಯದಲ್ಲಿ ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ಮಾಡಲಾಯ್ತು. ದೊಡ್ಡ ಗಣೇಶನ ಮುಂದೆ ಚಂದ್ರಯಾನ- 3 ರಾಕೆಟ್ ಪೋಸ್ಟರ್ ಇಟ್ಟು ಪೂಜೆ ಸಲ್ಲಿಸಲಾಯ್ತು.

ಸರ್ವಾರ್ಥ ಸಿದ್ಧಿಗಾಗಿ ಯಾಗ

ಇತ್ತ ಚಂದ್ರಯಾನ 3 ಯಶಸ್ಸಿಗೆ ವಿಜಯಪುರದಲ್ಲಿ ಹೋಮ-ಹವನ ನಡೆಸಲಾಯ್ತು. ಲ್ಯಾಂಡರ್ ಯಶಸ್ವಿ ಆಗಿ ಇಳಿಯಲೆಂದು ಸರ್ವಾರ್ಥ ಸಿದ್ಧಿಯಾಗ ನಡೆಸಲಾಯ್ತು. ವಿಜಯಪುರದ ಸರ್ವಜ್ಞ ವಿದ್ಯಾಪೀಠದಲ್ಲಿ ನಡೆದ ಯಾಗದಲ್ಲಿ ನರಸಿಂಹಸ್ವಾಮಿಗೆ ಹವನ ನೆರವೇರಿಸಲಾಯ್ತು. ಸರ್ವಾರ್ಥ ಸಿದ್ಧಿಯಾಗದಿಂದ ಅಡೆತಡೆ ನಿವಾರಣೆಯ ನಂಬಿಕೆಯಿದೆ. 4 ಗಂಟೆಗಳ ಕಾಲ 8 ಅರ್ಚಕರಿಂದ ಸಿದ್ಧಿಯಾಗ ನೆರವೇರಿಸಲಾಯ್ತು.

ಸತತ 4 ಗಂಟೆಗಳ ಕಾಲ ಹೋಮ-ಹವನ

ಇನ್ನು ಕೋಲಾರದಲ್ಲಿ ಶಕ್ತಿ ದೇವತೆಗೆ ಸಂಸದ ಮುನಿಸ್ವಾಮಿ ವಿಶೇಷ ಪೂಜೆ ಮಾಡಿದ್ರು. ಇನ್ನು ವಿಜಯಪುರ ನಗರದ ಸರ್ವಜ್ಞ ವಿದ್ಯಾಪೀಠದಲ್ಲಿ ಸತತ 4 ಗಂಟೆಗಳ ಕಾಲ ಹೋಮ-ಹವನ ಮಾಡಲಾಯ್ತು. ಇಷ್ಟೇ ಅಲ್ಲ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರ್ವಸಿದ್ಧ ಯಾಗ ಮಾಡಲಾಯಿತು.

ಶಿವಸೇನೆ ಮುಖಂಡನಿಂದ ಪೂಜೆ

ಮಹಾರಾಷ್ಟ್ರದಲ್ಲಿ ಶಿವ ಸೇನಾ ಮುಖಂಡ ಆನಂದ ದುಬೆ ಮುಂಬೈನ ಚಂದ್ರಮೌಳೇಶ್ವರ ಶಿವ ಮಂದಿರದಲ್ಲಿ ಹೋಮ ಹವನ ಮಾಡಿಸಿ ಚಂದ್ರಯಾನ-3 ಯಶಸ್ವಿಗೆ ಪ್ರಾರ್ಥನೆ ಸಲ್ಲಿಸಿದ್ರು. ಇನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಸ್ಥಳೀಯರು ಹೋಮ ಹವನ ನಡೆಸಿ, ಚಂದ್ರಯಾನ ಯಶಸ್ವಿಗೆ ಹಾರೈಸಿದ್ರು. ಇನ್ನು ಉತ್ತರ ಪ್ರದೇಶದ ಲಖನೌದ ಮಸೀದಿಯಲ್ಲೂ ಚಂದ್ರಯಾನ 3ಯಶಸ್ಸಿಗೆ ಪ್ರಾರ್ಥನೆ ಮಾಡಲಾಯ್ತು.

ಹಿಂದೂ ಜಾಗರಣ ವೇದಿಕೆಯಿಂದ ಪೂಜೆ

ಚಂದ್ರಯಾನ-3 ವಿಕ್ರಮ್ ಯಶಸ್ವಿ ಲ್ಯಾಂಡಿಂಗ್​​​​ಗಾಗಿ ಉಡುಪಿಯಲ್ಲಿ ವಿಶೇಷ ಪೂಜೆ ಮಾಡಲಾಯ್ತು. ಉಡುಪಿಯ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೂಜೆ ಮಾಡಿದ್ರು. ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸೇಫಾಗಿ ಇಳಿಯುವಂತೆ ಪ್ರಾರ್ಥನೆ ಸಲ್ಲಿಸಲಾಯ್ತು. ವಿಶೇಷ ಹೂವಿನ ಪೂಜೆ ಅರ್ಪಿಸಿ, ಪ್ರಾರ್ಥಿಸಲಾಯಿತು.

ಆರ್ಚಕರಿಂದ 3 ಗಂಟೆಗಳು ಪಾರಾಯಣ

ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡ್ ಆಗಲೆಂದು ಕಲಬುರಗಿಯಲ್ಲಿ ಪ್ರಾರ್ಥಿಸಲಾಯಿತು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತ್ತಿ ಚಂದ್ರಲಾಂಬೆ ದೇವಸ್ಥಾನದಲ್ಲಿ ಪಾರಾಯಣ ಮಾಡಲಾಯ್ತು. ಶ್ರೀ ಸೂಕ್ತ ಪಾರಾಯಣ ಮಾಡಿ ಅರ್ಚಕರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು. ಸತತ ಮೂರು ಗಂಟೆಗಳ ಕಾಲ ಆರ್ಚಕರು ಪಾರಾಯಣ ಮಾಡಿದ್ರು. ಶಿವಮೊಗ್ಗದ ಶನೇಶ್ವರ ದೇವಾಲಯದಲ್ಲಿ ಅರ್ಚಕರು 108 ತೆಂಗಿನಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ಮಾಡಲಾಯ್ತು.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಮತ್ತು ಚಂದ್ರಯಾನ 2 ನಡುವಿನ ವ್ಯತ್ಯಾಸವೇನು? ಈ ತಪ್ಪುಗಳಿಂದ ಕಲಿತ ಪಾಠಗಳು

ರಂಭಾಪುರಿ ಪೀಠದ ಜಗದ್ಗುರುಗಳು ಶುಭ ಹಾರೈಕೆ

ಚಂದ್ರಯಾನ-3 ಗೆ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಶುಭ ಹಾರೈಸಿದ್ದಾರೆ. ನಮ್ಮ ವಿಜ್ಞಾನಿಗಳ ಈ ಕೆಲಸ ವಿಶ್ವಕ್ಕೆ ಮಾದರಿಯಾಗಿದ್ದು, ಇಂದು ಇಡೀ ಜಗತ್ತೆ ಭಾರತದತ್ತ ಮುಖ ಮಾಡಿದೆ. ಚಂದ್ರಯಾನದಿಂದ ದೇಶದ ಘನತೆ ಗೌರವ ಹೆಚ್ಚಿದೆ. ವಿಕ್ರಂ ಲ್ಯಾಂಡಿಂಗ್ ಸುವರ್ಣ ಘಳಿಗೆಯನ್ನ ನಾನು ಕಣ್ತುಂಬಿಕೊಳ್ಳುತ್ತೇನೆ. ಇಸ್ರೋ ವಿಜ್ಞಾನಿಗಳ ಮುಂದಿನ ಭವಿಷ್ಯವೂ ಸುಖಕಾರವಾಗಿರಲಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಶುಭ ಹಾರೈಸಿದ್ರು.

ಸಾಗರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ಚಂದ್ರಯಾನ-3ದ ಯಶಸ್ಸಿಗಾಗಿ ಶಿವಮೊಗ್ಗದ ಸಾಗರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು. ಇಂದು ಚಂದಿರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡಿಂಗ್​​ ಆಗಲಿದೆ. ವಿಕ್ರಂ ಯಶಸ್ವಿಗಾಗಿ ಇಳಿಯಲಿ ಎಂದು ಮುಸ್ಲಿಂ ಭಾಂಧವರು ಪ್ರಾರ್ಥಿಸಿದ್ರು. ಸಾಗರ ನಗರದ ಶಿವಪ್ಪ ನಾಯಕ ವೃತ್ತದ ಹಜರತ್ ಸೈಯದ್ ರಾಜ್ ಬಕ್ಷ್ ವಲಿ ಅಲ್ಲಾಹ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು.

ಸಾಫ್ಟ್​​​​ ಲ್ಯಾಂಡಿಂಗ್​ಗಾಗಿ ದರ್ಗಾದಲ್ಲಿ ಪ್ರಾರ್ಥನೆ

ಚಂದ್ರಯಾನ-3ದ ವಿಕ್ರಮ್​ ಸಾಫ್ಟ್​​​​ ಲ್ಯಾಂಡಿಂಗ್​​​​​ಗಾಗಿ ರಾಮನಗರದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ರು. ರಾಮನಗರ ಹಳೆ ಬಸ್ ಸ್ಟ್ಯಾಂಡ್‌ ಬಳಿ ಇರುವ ಹಜರತ್ ಪೀರೇನ್ ಶಾ ವಲಿ ದರ್ಗಾಕ್ಕೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಭೇಟಿ ನೀಡಿದ್ರು. ಚಂದ್ರಯಾನ ಸಕ್ಸಸ್ ಆಗಲಿ ಅಂತ‌ ಮುಸ್ಲಿಂ ಬಾಂಧವರ ಪ್ರಾರ್ಥನೆ ಸಲ್ಲಿಸಿದ್ರು. ದರ್ಗಾಕ್ಕೆ ಹೂ ಕೊಟ್ಟು, ಚಾದರ ಹೊದಿಸಿ ಶಾಸಕ ಇಕ್ಬಾಲ್ ಹುಸೇನ್ ನಮಿಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ