Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವಿದ್ಯುತ್ ಕಂಬ ಬಿದ್ದು 35% ಗಾಯಗೊಂಡ ವಿದ್ಯಾರ್ಥಿನಿ, ವಾಟರ್​ ಟ್ಯಾಂಕರ್ ಚಾಲಕ ಅರೆಸ್ಟ್

ವಿದ್ಯುತ್​ ತಂತಿ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೈಕೋ ಲೇಔಟ್​​ ಸಂಚಾರಿ ಠಾಣೆಯಲ್ಲಿ ಸ್ಥಳೀಯ ವ್ಯಕ್ತಿ ದೂರಿನ ಮೇರೆಗೆ ವಾಟರ್‌ ಟ್ಯಾಂಕರ್‌ ಚಾಲಕ ಹಾಗೂ ಸಿಮೆಂಟ್‌ ಮಿಕ್ಸರ್‌ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ವಾಟರ್​ ಟ್ಯಾಂಕರ್ ಚಾಲಕ ಸುನೀಲ್ ಎಂಬಾತನನ್ನು ಬಂಧಿಸಿದ್ದಾರೆ.

ಬೆಂಗಳೂರು: ವಿದ್ಯುತ್ ಕಂಬ ಬಿದ್ದು 35% ಗಾಯಗೊಂಡ ವಿದ್ಯಾರ್ಥಿನಿ, ವಾಟರ್​ ಟ್ಯಾಂಕರ್ ಚಾಲಕ ಅರೆಸ್ಟ್
ಧರೆಗುರುಳಿರುವ ವಿದ್ಯುತ್ ಕಂಬ
Follow us
Jagadisha B
| Updated By: ಆಯೇಷಾ ಬಾನು

Updated on: Aug 23, 2023 | 9:08 AM

ಬೆಂಗಳೂರು, ಆ.23: ಸುದ್ದಗುಂಟೆಪಾಳ್ಯ ಬಳಿ‌ಯ ಸೆಂಟ್ ಜೋಸೇಫ್ ಕಾಲೇಜು ಬಳಿ ವಿದ್ಯುತ್​ ತಂತಿ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದವು(Electrocute). ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಮೈಕೋ ಲೇಔಟ್​​ ಸಂಚಾರಿ ಠಾಣೆ ಪೊಲೀಸರು(Mico Layout Traffic Police Station) ವಾಟರ್​ ಟ್ಯಾಂಕರ್ ಚಾಲಕ ಸುನೀಲ್ ಎಂಬಾತನನ್ನು ಬಂಧಿಸಿದ್ದಾರೆ. ಸ್ಥಳೀಯ ವ್ಯಕ್ತಿ ದೂರಿನ ಮೇರೆಗೆ ವಾಟರ್‌ ಟ್ಯಾಂಕರ್‌ ಚಾಲಕ ಹಾಗೂ ಸಿಮೆಂಟ್‌ ಮಿಕ್ಸರ್‌ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ವಾಟರ್​ ಟ್ಯಾಂಕರ್​​​ ಚಾಲಕ, ಸಿಮೆಂಟ್​ ಮಿಕ್ಸರ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಮೊದಲು ಸಿಮೆಂಟ್‌ ಮಿಕ್ಸರ್‌ ಲಾರಿಗೆ ವಿದ್ಯುತ್ ಕೇಬಲ್‌ ಸಿಲುಕಿ ಕೆಳಗೆ ಬಂದಿತ್ತು. ನಂತರ ಅದೇ ಮಾರ್ಗವಾಗಿ ಬಂದಿದ್ದ ವಾಟರ್‌ ಟ್ಯಾಂಕ್​ಗೆ ಆ ಕೇಬಲ್‌ ಸಿಲುಕಿತ್ತು. ಈ ವೇಳೆ ಟ್ಯಾಂಕರ್ ವಿದ್ಯುತ್‌ ಕಂಬವನ್ನ ಎಳೆದು ಹಾಕಿತ್ತು. ಎಳೆದ ರಬಸಕ್ಕೆ ವಿದ್ಯುತ್‌ ಕಂಬ ಕೆಳಗೆ ಬಿದ್ದು ಅದರ ತಂತಿ ಯುವತಿ ಮೇಲೆ ಬಿದ್ದಿದೆ. ಈ ಹಿನ್ನಲೆ ವಾಟರ್‌ ಟ್ಯಾಂಕರ್‌ ಹಾಗೂ ಸಿಮೆಂಟ್‌ ಮಿಕ್ಸರ್‌ ಟ್ಯಾಂಕರ್‌ ಚಾಲಕರ ವಿರುದ್ಧ ಮೈಕೋ ಲೇಔಟ್​​ ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ವಾಟರ್ ಟ್ಯಾಂಕರ್ ಚಾಲಕನ ಬಂಧನವಾಗಿದೆ. ಇನ್ನು ಈ ಘಟನೆ ತನ್ನಿಂದಾದರೂ ಏನು ತಿಳಿಯದಂತೆ ವಾಹನ ನಿಲ್ಲಿಸದೇ ಸ್ಥಳದಿಂದ ಸುನೀಲ್ ತೆರಳಿದ್ದ. ಬಳಿಕ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿ ಗಾಡಿ ನಂಬರ್ ಪತ್ತೆ ಮಾಡಿ ಆರೋಪಿ ಸುನಿಲ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರಸ್ತೆಯಲ್ಲಿ ಹೋಗ್ತಿದ್ದ ವಿದ್ಯಾರ್ಥಿನಿ ತಲೆ ಮೇಲೆ ವಿದ್ಯುತ್​ ತಂತಿ ಬಿದ್ದು ಗಾಯ; ಆಸ್ಪತ್ರೆಗೆ ದಾಖಲು

ಘಟನೆ ವಿವರ

ನಾಲ್ಕು ದಿನಗಳಲ್ಲಿ ನಗರದಲ್ಲಿ ವರದಿಯಾದ ಎರಡನೇ ಘಟನೆ ಇದಾಗಿದೆ. ಸುದ್ದಗುಂಟೆಪಾಳ್ಯ ಬಳಿ‌ ಇರುವ ಸೆಂಟ್ ಜೋಸೇಫ್ ಕಾಲೇಜು ಬಳಿ ಆ.22ರ ಮಧ್ಯಾಹ್ನ 3 ಗಂಟೆಯ ಸಂದರ್ಭದಲ್ಲಿ ಪ್ರಿಯ ಮೇಲೆ ವಿದ್ಯುತ್ ತಂತಿ ಬಿದ್ದಿದ್ದು 35% ಸುಟ್ಟ ಗಾಯಗಳಾಗಿವೆ. ಈಕೆ ಕೂಗಳತೆ ದೂರದಲ್ಲೇ ಇರುವ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿ. ಪ್ರಿಯಾ ಪ್ರಥಮ ವರ್ಷದ ಬಿಎ ಓದುತ್ತಿದ್ದಾಳೆ. ನಿನ್ನೆ ಕ್ಲಾಸ್ ಮುಗಿಸಿಕೊಂಡು ಮಧ್ಯಾಹ್ನ ತಾನು ವಾಸವಿದ್ದ ಪಿಜಿ ಕಡೆಗೆ ಪ್ರಿಯಾ ಹೆಜ್ಜೆ ಹಾಕುತಿದ್ದಳು. ಈ ವೇಳೆ ಸಿಮೆಂಟ್‌ ಮಿಕ್ಸರ್‌ ಲಾರಿಗೆ ವಿದ್ಯುತ್ ಕೇಬಲ್‌ ಸಿಲುಕಿಕೊಂಡಿತ್ತು. ಅದೇ ಮಾರ್ಗವಾಗಿ ಬಂದಿದ್ದ ವಾಟರ್‌ ಟ್ಯಾಂಕ್​ಗೆ ಆ ಕೇಬಲ್‌ ಸಿಲುಕಿದೆ. ಆಗ, ಗಾಡಿ ಹೋದ ರಬಸಕ್ಕೆ ಆ ಕೇಬಲ್ ವಿದ್ಯುತ್ ಕಂಬ ಸಹಿತ ನೆಲಕ್ಕುರುಳಿಸಿದೆ. ಈ ಪರಿಣಾಮ ನೆಲಕ್ಕೆ ಬಿದ್ದ ಕಂಬದ ತಂತಿ ಅಲ್ಲೆ ನಡೆದು ಹೋಗುತಿದ್ದ ಪ್ರಿಯಾ ಮೇಲೆ ಬಿದಿದ್ದು, ಆಕೆಗೆ ಗಂಭೀರ ಗಾಯಗಳಾಗಿವೆ.

ವಿದ್ಯುತ್ ತಂತಿಯಿಂದ ತಪ್ಪಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಸೆಂಟ್ ಜಾನ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಘಟನೆಯಿಂದ ಪ್ರಿಯಾ ದೇಹ ಶೇಕಡ 35ರಷ್ಟು ಸುಟ್ಟಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ