Chandrayaan 3 Moon Landing Highlights: ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್​​ ಯಶಸ್ವಿ: ಮೊದಲ ಫೋಟೋ ಬಿಡುಗಡೆ ಮಾಡಿದ ಇಸ್ರೋ

ವಿವೇಕ ಬಿರಾದಾರ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 23, 2023 | 11:04 PM

Chandrayaan-3 Landing Highlights News Updates: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಸುದೀರ್ಘ 40 ದಿನಗಳಕಾಲ ಅದರ ಚಲನವಲನವನ್ನು ವೀಕ್ಷಿಸಿದ್ದ ವಿಜ್ಞಾನಿಗಳಿಗೆ ಇದು ಸುದಿನ. ಚಂದಿರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದನ್ನು ಭಾರತೀಯರು ಕಣ್ತುಂಬಿಕೊಂಡಿದ್ದಾರೆ. ಈ ಕುರಿತ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​​ನಲ್ಲಿ ನೋಡಿ.

Chandrayaan 3 Moon Landing Highlights: ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್​​ ಯಶಸ್ವಿ: ಮೊದಲ ಫೋಟೋ ಬಿಡುಗಡೆ ಮಾಡಿದ ಇಸ್ರೋ
ವಿಕ್ರಮ್ ಲ್ಯಾಂಡರ್​ನ ಮೊದಲ ಫೋಟೋ ಬಿಡುಗಡೆ

Chandrayaan 3 Moon Landing Highlights News Updates: ಬಹುನಿರೀಕ್ಷಿತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಬುಧವಾರ ಸಂಜೆ 06:04ಕ್ಕೆ ಯಶಸ್ವಿಯಾಗಿ ಇಳಿದಿದೆ. ಚಂದ್ರಯಾನ-3ರ ವಿಕ್ರಮ ಲ್ಯಾಂಡರ್​ ಲ್ಯಾಂಡಿಂಗ್​ ಪ್ರಕ್ರಿಯೆಯನ್ನು ಇಡೀ ದೇಶವೇ ಇಂದು ಕಣ್ತುಂಬಿಕೊಂಡಿದೆ. ಇಸ್ರೋ ಕಮ್ಯಾಂಡಿಂಗ್ ಸೆಂಟರ್​ನಲ್ಲಿ ಈಗಾಗಲೇ ಸಂಭ್ರಮಾಚರಣೆ ಶುರುವಾಗಿದೆ. ಚಂದ್ರ ಚುಂಬನದಿಂದ ಸಿಬ್ಬಂದಿಗಳು ಪುಳಕಿತರಾಗಿದ್ದಾರೆ. ಚಂದ್ರಯಾನ 3 ಈಗ ದಕ್ಷಿಣ ಧ್ರುವದ ಮೇಲೆ ಇಳಿಸಲಾಗಿದೆ. ಬೆಂಗಳೂರಲ್ಲೇ ಚಂದ್ರನ 3 ಕಮಾಂಡ್ ಸೆಂಟರ್ ಇದ್ದು, ವಿಕ್ರಮ್ ಲ್ಯಾಂಡರ್‌ ಅನ್ನು ಬೆಂಗಳೂರಿನಿಂದಲೇ ಕಂಟ್ರೋಲ್ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯೋಜನೆಯ ಸಂಪೂರ್ಣ ಹೊಣೆಯನ್ನು ಹೊತ್ತುಕೊಂಡಿತ್ತು.

LIVE NEWS & UPDATES

The liveblog has ended.
  • 23 Aug 2023 10:56 PM (IST)

    Chandrayaan 3 Moon Landing Live: ರಾಜ್ಯದ ಸಾಹಿತಿಗಳಿಗೆ, ಬುದ್ದಿ ಜೀವಿಗಳಿಗೆ ಜೀವ ಬೆದರಿಕೆ: ಸೂಕ್ತ ಕ್ರಮ ವಹಿಸುವುದಾಗಿ ಸಿಎಂ ಭರವಸೆ

    ರಾಜ್ಯದ ಸಾಹಿತಿಗಳಿಗೆ, ಬುದ್ದಿ ಜೀವಿಗಳಿಗೆ ಜೀವ ಬೆದರಿಕೆ ಪ್ರಕರಣ ಹಿನ್ನೆಲೆ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ನಿಯೋಗ ಮನವಿ ಸಲ್ಲಿಸಿದ್ದಾರೆ. ಸೂಕ್ತ ಕ್ರಮ ವಹಿಸುವುದಾಗಿ ಹಿರಿಯ ಸಾಹಿತಿಗಳು, ಲೇಖಕರು ಮತ್ತು ಹೋರಾಟಗಾರರ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

  • 23 Aug 2023 10:46 PM (IST)

    Chandrayaan 3 Moon Landing Live: ಚಂದ್ರಯಾನ-3 ಯಶಸ್ವಿ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದನೆ

    ಚಂದ್ರಯಾನ-3 ಯಶಸ್ವಿ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್‌ ಮಾಡಿದ್ದು, ಚಂದ್ರಯಾನ-3 ಯಶಸ್ವಿ ಒಂದು ದೊಡ್ಡ ಮೈಲಿಗಲ್ಲು ಆಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಭಾವಶಾಲಿ ಪ್ರಗತಿಗೆ ನಿಸ್ಸಂಶಯವಾಗಿ ಸಾಕ್ಷಿಯಾಗಿದೆ. ಇಸ್ರೋ ವಿಜ್ಞಾನಿಗಳ ತಂಡ ಹಾಗೂ ಸಿಬ್ಬಂದಿಗೆ, ರಾಷ್ಟ್ರಪತಿ ಮತ್ತು ಪ್ರಧಾನಿಗೆ ಅಭಿನಂದನಾ ಸಂದೇಶ ಕಳಿಸಿದ್ದಾರೆ.

  • 23 Aug 2023 10:27 PM (IST)

    Chandrayaan 3 Moon Landing Live: ಪ್ರಜ್ಞಾನ್‌ ಹೊರಬಂದ ಚಿತ್ರ ಬಿಡುಗಡೆ ಮಾಡಿರುವ ಇಸ್ರೋ

    ವಿಕ್ರಮ್ ಲ್ಯಾಂಡರ್‌ನಿಂದ ಪ್ರಜ್ಞಾನ್‌ ರೋವರ್​ ಹೊರಬಂದಿದೆ. ಪ್ರಜ್ಞಾನ್‌ ಹೊರಬಂದ ಚಿತ್ರವನ್ನು  ಇಸ್ರೋ ಬಿಡುಗಡೆ ಮಾಡಿದೆ. 14 ದಿನ ಚಂದ್ರನ ಮೇಲ್ಮೈ ಅನ್ನು ಪ್ರಜ್ಞಾನ್​ ಅಧ್ಯಯನ ಮಾಡಲಿದೆ.

  • 23 Aug 2023 08:39 PM (IST)

    Chandrayaan 3 Moon Landing Live: ವಿಕ್ರಮ್ ಲ್ಯಾಂಡರ್​ನ ಮೊದಲ ಫೋಟೋ ಬಿಡುಗಡೆ

    ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್​ನ ಮೊದಲ ಫೋಟೋ ಬಿಡುಗಡೆ ಮಾಡಿದೆ.

  • 23 Aug 2023 08:34 PM (IST)

    Chandrayaan 3 Moon Landing Live: ಇಸ್ರೋ ತಂಡಕ್ಕೆ ಅಭಿನಂದನೆ ತಿಳಿಸಿದ ವಿರಾಟ್​ ಕೋಹ್ಲಿ

    ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದೆ. ನೀವು ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡಿದ್ದೀರೆಂದು ಇಸ್ರೋ ತಂಡಕ್ಕೆ ವಿರಾಟ್​ ಕೋಹ್ಲಿ ಅಭಿನಂದನೆ ತಿಳಿಸಿದ್ದಾರೆ.

  • 23 Aug 2023 07:55 PM (IST)

    Chandrayaan 3 Moon Landing Live: ಇಸ್ರೋ ಮತ್ತೊಮ್ಮೆ ಸಾಧನೆ ಮಾಡಿದೆ: ರಾಜ್ಯಪಾಲ ಟಿ.ಸಿ.ಗೆಹ್ಲೋಟ್

    ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದ್ದು, ಇಸ್ರೋ ಮತ್ತೊಮ್ಮೆ ಸಾಧನೆ ಮಾಡಿದೆ ಎಂದು ರಾಜ್ಯಪಾಲ ಟಿ.ಸಿ.ಗೆಹ್ಲೋಟ್​​ ಹೇಳಿದ್ದಾರೆ. ಟ್ವೀಟ್‌ ಮಾಡುವ ಮೂಲಕ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿದ್ದಾರೆ.

  • 23 Aug 2023 07:23 PM (IST)

    Chandrayaan 3 Moon Landing Live: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ರಾಹುಲ್ ಗಾಂಧಿ

    ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದೆ. ಹಾಗಾಗಿ ಇಸ್ರೋ ವಿಜ್ಞಾನಿಗಳಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿದಿದೆ. ನಮ್ಮ ವೈಜ್ಞಾನಿಕ ಸಮುದಾಯದ ದಶಕಗಳ ಪ್ರಚಂಡ ಜಾಣ್ಮೆ. ಯುವ ಕನಸುಗಾರರ ಪೀಳಿಗೆಗೆ ಇದು ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.

  • 23 Aug 2023 07:01 PM (IST)

    Chandrayaan 3 Moon Landing Live: ಭಾರತಕ್ಕೆ ಅಭಿನಂದನೆ ತಿಳಿಸಿದ ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸೆನ್​​

    ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದ್ದು, ಭಾರತಕ್ಕೆ ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸೆನ್ ಅಭಿನಂದನೆ ತಿಳಿಸಿದ್ದಾರೆ. ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

  • 23 Aug 2023 06:50 PM (IST)

    Chandrayaan 3 Moon Landing Live: ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದಿಷ್ಟು

    ಎಲ್ಲರಿಗೂ ಗೊತ್ತಿರುವಂತೆ ಇದು ಅಷ್ಟು ಸುಲಭವಾಗಿರಲಿಲ್ಲ. ಎರಡು ಮೀಟರ್ ಪರ್ ಸೆಕೆಂಡ್​ಗೂ ಕಡಿಮೆ ವೆಲಾಸಿಟಿಯಲ್ಲಿ ಲ್ಯಾಂಡ್ ಆಗಿದೆ. ಆದಿತ್ಯ ಎಲ್ 1 ಮುಂದಿನ ತಿಂಗಳು ಆರಂಭಿಸುತ್ತೇವೆ. ಪ್ರತಿಯೊಬ್ಬ ಭಾರತೀಯನೂ ಈ ಯಶಸ್ಸಿಗಾಗಿ ಹರಸಿದ್ದರು ಎಂದು ಚಂದ್ರಯಾನ ಯಶಸ್ಸು ಬಳಿಕ ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದಾರೆ.

  • 23 Aug 2023 06:43 PM (IST)

    Chandrayaan 3 Moon Landing Live: ಚಂದ್ರಯಾನ 3 ಮಿಷನ್‌ ಯಶಸ್ಸಿಗೆ ಗೃಹ ಸಚಿವ ಅಮಿತ್ ಶಾ ಟ್ವೀಟ್

    ಚಂದ್ರಯಾನ 3 ಮಿಷನ್‌ ಯಶಸ್ಸಿನೊಂದಿಗೆ ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿದ ಮೊದಲ ರಾಷ್ಟ್ರವಾಗಿದೆ. ಹೊಸ ಬಾಹ್ಯಾಕಾಶ ಸಾಧನೆ ಭಾರತದ ಆಕಾಶದ ಮಹತ್ವಾಕಾಂಕ್ಷೆಗಳನ್ನು ಹೊಸ ಎತ್ತರಕ್ಕೆ ಹಾರಿಸುತ್ತದೆ. ಬಾಹ್ಯಾಕಾಶ ಯೋಜನೆಗಳಿಗೆ ವಿಶ್ವದ ಉಡಾವಣಾ ಕೇಂದ್ರವಾಗಿದೆ. ಭಾರತೀಯ ಕಂಪನಿಗಳಿಗೆ ಬಾಹ್ಯಾಕಾಶಕ್ಕೆ ಗೇಟ್‌ವೇ ತೆರೆಯುತ್ತದೆ. ಇದು ನಮ್ಮ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

  • 23 Aug 2023 06:33 PM (IST)

    Chandrayaan 3 Moon Landing Live: ಪರಿಶ್ರಮ ಹಾಕಿದ್ದಕ್ಕೆ ಫಲ ಸಿಕ್ಕಿದೆ: ಶಂಕರನ್

    ಚಂದ್ರನ ಅಂಗಳದಲ್ಲಿ ಇಳಿಯುವಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿದೆ. ಸಾಕಷ್ಟು ಪರಿಶ್ರಮ ಹಾಕಿದ್ದಕ್ಕೆ ಫಲ ಸಿಕ್ಕಿದೆ ಎಂದು​ U.R.ರಾವ್ ಸ್ಯಾಟಲೈಟ್ ಸೆಂಟರ್ ಮುಖ್ಯಸ್ಥ ಶಂಕರನ್ ಹೇಳಿದ್ದಾರೆ. ಚಂದ್ರಯಾನ-2ರಲ್ಲಿ ಆಗಿದ್ದ ನೋವು ಈಗ ಮರೆಯಾಗಿದೆ. ಚಂದ್ರಯಾನ-3 ನಮಗೆ ಹೊಸ ಟಾಸ್ಕ್ ಕೊಟ್ಟಿದೆ ಎಂದು ತಿಳಿಸಿದರು.

  • 23 Aug 2023 06:28 PM (IST)

    Chandrayaan 3 Moon Landing Live: ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ

    ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್​ ಯಶಸ್ವಿಯಾಗಿ ಇಳಿಕೆಯಾಗಿದೆ. ಆ ಮೂಲಕ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ ಎಂದು ಚಂದ್ರಯಾನ-3 ಪ್ರಾಜೆಕ್ಟ್​ ನಿರ್ದೇಶಕ ವೀರ ಮುತ್ತುವೇಲ್​ ಹೇಳಿದರು. ಲಾಂಚ್​​ನಿಂದ ಲ್ಯಾಂಡ್ ಆಗುವ ತನಕ ಅಂದುಕೊಂಡಂತೆ ನಡೆದಿದೆ ಎಂದರು.

  • 23 Aug 2023 06:22 PM (IST)

    Chandrayaan 3 Moon Landing Live: ಪ್ರತಿಯೊಬ್ಬ ಭಾರತೀಯನಿಗೂ ಯಶಸ್ಸು ಸಲ್ಲುತ್ತೆ

    ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಬಹುದೂರದಲ್ಲಿರುವ ಚಂದ್ರನ ತಲುಪಲು ನಾವು ಯಶಸ್ವಿಯಾಗಿದ್ದೇವೆ. ಇದರ ಯಶಸ್ಸು ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತೆ. ಚಂದ್ರಯಾನ-3 ಯಶಸ್ಸಿಗೆ ಶ್ರಮಿಸಿದ ಪ್ರತಿ ವಿಜ್ಞಾನಿಗೂ ಧನ್ಯವಾದ. ಭಾರತದ ಯಶಸ್ಸಿನಿಂದ ಉಳಿದ ದೇಶಗಳಿಗೂ ಅನುಕೂಲವಾಗುತ್ತೆ. ಚಂದ್ರನ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುತ್ತೆ ಎಂದು ಪ್ರಧಾನಿ ಮೋದಿ ಹೇಳಿದರು.

  • 23 Aug 2023 06:19 PM (IST)

    Chandrayaan 3 Moon Landing Live: ವಿಕ್ರಮ್ ಲ್ಯಾಡರ್ ಲ್ಯಾಂಡಿಂಗ್ ಯಶಸ್ವಿ

    ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

  • 23 Aug 2023 06:16 PM (IST)

    Chandrayaan 3 Moon Landing Live: ಇದೊಂದು ಐತಿಹಾಸಿಕ ಕ್ಷಣ-ಪ್ರಧಾನಿ ಮೋದಿ

    ಪ್ರಧಾನಮಂತ್ರಿ ನರೇಂದ್ರ ಮೋದಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣ. ಈಗ ಭಾರತ ಚಂದ್ರನ ಮೇಲಿದೆ. ಇಸ್ರೋ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದು ಹೇಳಿದ್ದಾರೆ.

  • 23 Aug 2023 06:02 PM (IST)

    Chandrayaan 3 Moon Landing Live: ವಿಕ್ರಮ್ ಲ್ಯಾಂಡರ್ ಲ್ಯಾಂಡಿಗ್‌ಗೆ ಕ್ಷಣಗಣನೆ

    ಚಂದ್ರಯಾನ-3 ಶೀಘ್ರದಲ್ಲೇ ಚಂದ್ರನ ಮೇಲೆ ಇಳಿಯಲಿದೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದ ಪ್ರಕ್ರಿಯೆಯು 11 ನಿಮಿಷಗಳವರೆಗೆ ಇರುತ್ತದೆ. ಚಂದ್ರಯಾನ-3 ಸಂಜೆ 6.04ಕ್ಕೆ ಚಂದ್ರನ ಮೇಲೆ ಇಳಿಯಲಿದೆ.

  • 23 Aug 2023 05:57 PM (IST)

    Chandrayaan 3 Moon Landing Live: ಕೆಲವೇ ನಿಮಿಷಗಳಲ್ಲಿ ಚಂದ್ರಯಾನ ಲ್ಯಾಂಡಿಂಗ್

    ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್​ ಇಳಿಸುವ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ವಿಕ್ರಮ್ ಲ್ಯಾಂಡರ್​​ ಚಂದ್ರನಿಂದ 27 ಕಿ.ಮೀ. ದೂರದಲ್ಲಿದೆ. ಚಂದ್ರಯಾನ-3 ಲ್ಯಾಂಡಿಂಗ್‌ನ ನೇರ ಪ್ರಸಾರವನ್ನು ಇಸ್ರೋ ಸೈಟ್​ಲ್ಲೂ ಸಹ ನೋಡಬಹುದಾಗಿದೆ.

  • 23 Aug 2023 05:51 PM (IST)

    Chandrayaan 3 Moon Landing Live: ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆ ಆರಂಭ

    ಚಂದ್ರಯಾನ 3 ಸಾಪ್ಟ್ ಲ್ಯಾಂಡಿಂಗ್ ಆರಂಭವಾಗಿದ್ದು, ಒಟ್ಟು 15 ರಿಂದ 19 ನಿಮಿಷಗಳ ಪ್ರಕ್ರಿಯೆ ನಡೆಯಲಿದೆ. ಚಂದ್ರಯಾನ 3 ಲ್ಯಾಂಡಿಂಗ್​ ಪ್ರಕ್ರಿಯೆಯನ್ನು ಟಿವಿ9 ಡಿಜಿಟಲ್​ನಲ್ಲಿ ವೀಕ್ಷಿಸಬಹುದು.

  • 23 Aug 2023 05:46 PM (IST)

    Chandrayaan 3 Moon Landing Live: ವಿಕ್ರಮ್ ಲ್ಯಾಂಡರ್​ ಇಳಿಸಲು ವಿಜ್ಞಾನಿಗಳಿಂದ ಅಂತಿಮ ಹಂತದ ಸಿದ್ಧತೆ

    ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್​​ ಇಳಿಯಲಿದೆ. ವಿಕ್ರಮ್ ಲ್ಯಾಂಡರ್​ ಇಳಿಸಲು ಇಸ್ರೋ ವಿಜ್ಞಾನಿಗಳಿಂದ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • 23 Aug 2023 04:50 PM (IST)

    Chandrayaan 3 Moon Landing Live: ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ಇಳಿಯಲಿರುವ ವಿಕ್ರಮ್ ಲ್ಯಾಂಡರ್: ವರ್ಚುವಲ್ ಮೂಲಕ ಪ್ರಧಾನಿ ಮೋದಿ ವೀಕ್ಷಣೆ

    ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಪ್ರಕ್ರಿಯೆಯನ್ನು ವರ್ಚುವಲ್ ಮೂಲಕ ವೀಕ್ಷಣೆ ಮಾಡಲಿದ್ದಾರೆ.

  • 23 Aug 2023 04:46 PM (IST)

    Chandrayaan 3 Moon Landing Live: ತಪ್ಪುಗಳಿಂದ ಇಸ್ರೋ ಪಾಠ ಕಲಿತಿದೆ

    ತಪ್ಪುಗಳು ಯಾವಾಗಲೂ ಪಾಠವನ್ನು ಕಲಿಸುತ್ತವೆ. ಹಿಂದಿನ ತಪ್ಪುಗಳಿಂದ ಪಾಠ ಕಲಿತ ಇಸ್ರೋ, ಚಂದ್ರಯಾನ-3 ಅನ್ನು ಚಂದ್ರನ ಅಂಗಳದಲ್ಲಿ ಮೃದುವಾಗಿ ಇಳಿಸಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ ಎಂದು ಸಿಎಸ್‌ಐಆರ್‌ನ ಹಿರಿಯ ವಿಜ್ಞಾನಿ ಸತ್ಯನಾರಾಯಣ್ ಹೇಳಿದ್ದಾರೆ.

  • 23 Aug 2023 04:28 PM (IST)

    Chandrayaan 3 Moon Landing Live: ಚಂದ್ರಯಾನ-3 ತನ್ನ ಕಾರ್ಯಾಚರಣೆಯತ್ತ ಸಾಗುತ್ತಿದೆ

    ಚಂದ್ರಯಾನ-3 ನಿಗದಿತ ಸಮಯಕ್ಕೆ ತನ್ನ ಕಾರ್ಯಾಚರಣೆಯತ್ತ ಸಾಗುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. 30 ಕಿಮೀ ಎತ್ತರದಲ್ಲಿ ವಿಕ್ರಮ್ ಲ್ಯಾಂಡರ್ ಪವರ್ ಡಿಸೆಂಟ್ ಅನ್ನು ಪ್ರಾರಂಭಿಸಲಿದ್ದು, 22.6 ಕಿಮೀ ದೂರವನ್ನು 690 ಸೆಕೆಂಡುಗಳಲ್ಲಿ, 7.4 ಕಿಮೀ ಎತ್ತರಕ್ಕೆ ಕ್ರಮಿಸಲಿದೆ ಎಂದು ತಿಳಿಸಿದೆ.

  • 23 Aug 2023 03:55 PM (IST)

    Chandrayaan 3 Moon Landing Live: ರಂಗೋಲಿಯಲ್ಲಿ ಅರಳಿದ ಚಂದ್ರಯಾನ 3 ಚಿತ್ತಾರ

    ಹುಬ್ಬಳ್ಳಿ ಶಾಂತಿನಗರ ನಿವಾಸಿ ದಿನೇಶ್ ಎಂಬುವವರಿಂದ ರಂಗೋಲಿಯಲ್ಲಿ ಚಂದ್ರಯಾನ 3ರ ಚಿತ್ತಾರ ಮೂಡಿಬಂದಿದೆ. ಆ ಮೂಲಕ ಬಣ್ಣ ಬಣ್ಣದ ಚಿತ್ತಾರದಲ್ಲಿ ರೋವರ್ ರಂಗವಲ್ಲಿ ಬಿಡಿಸಿ ವಿಭಿನ್ನಾಗಿ ಇಸ್ರೊ ವಿಜ್ಞಾನಿಗಳಿಗೆ ಶುಭ ಹಾರೈಸಿದ್ದಾರೆ. ತಮ್ಮ ಮನೆಯ ಆವರಣದಲ್ಲಿ ರೋವರ್, ಚಂದ್ರ ಹಾಗೂ ದೇವಿಯ ರಂಗವಲ್ಲಿ ಚಿತ್ರಬಿಡಿಸಿದ್ದಾರೆ.

  • 23 Aug 2023 03:39 PM (IST)

    Chandrayaan 3 Moon Landing Live: ನೆಹರು ತಾರಾಲಯದಲ್ಲಿ ಚಂದ್ರಯಾನ 3 ಲ್ಯಾಂಡಿಂಗ್​ ವೀಕ್ಷಣೆಗೆ ತಯಾರಿ

    ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್​ಗೆ ಕ್ಷಣಗಣನೆ ಆರಂಭವಾಗಿದ್ದು, ನೆಹರು ತಾರಾಲಯದಲ್ಲಿ ಲ್ಯಾಂಡಿಂಗ್ ವೀಕ್ಷಣೆಗೆ ತಯಾರಿ ಮಾಡಲಾಗಿದೆ. 500ಕ್ಕೂ ಹೆಚ್ಚು ಜನರು ತಾರಾಲಯಕ್ಕೆ ಆಗಮಿಸುತ್ತಿದ್ದು, ಸಂಜೆ 5:10 ರಿಂದ ಲೈವ್​ನಲ್ಲಿ ವೀಕ್ಷಣೆಗೆ ಅವಕಾಶವಿರಲಿದೆ. ಹೀಗಾಗಿ ನೆಹರು ತಾರಾಲಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್​ಎಸ್ ಬೋಸ್ ರಾಜ್​​ ಆಗಮಿಸಿದ್ದಾರೆ. ಕೊನೆ ದೃಶ್ಯದವರೆಗೂ ಸಾರ್ವಜನಿಕರೊಂದಿಗೆ ವೀಕ್ಷಣೆ ಮಾಡಲಿದ್ದಾರೆ.

  • 23 Aug 2023 03:18 PM (IST)

    Chandrayaan 3 Moon Landing Live: ಪುಟಾಣಿ ಮಕ್ಕಳಿಂದ ಚಂದ್ರಯಾನ ಯಶಸ್ವಿಗೆ ಭಜನೆ

    ಚಂದ್ರಯಾನ-3 ಯಶಸ್ವಿಗಾಗಿ ಯಾದಗಿರಿಯ ಶಹಾಪುರ ನಗರದ ರಾಘವೇಂದ್ರ ಸ್ವಾಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ದೇವಸ್ಥಾನದಲ್ಲಿ ದೀಪಲಾಂಕಾರ ಮಾಡಿ, ಪುಟಾಣಿ ಮಕ್ಕಳಿಂದ ಮತ್ತು ಮಹಿಳೆಯರಿಂದ ಭಜನೆ ಮಾಡಿ ಪ್ರಾರ್ಥನೆ ಮಾಡಿದ್ದಾರೆ.

  • 23 Aug 2023 02:40 PM (IST)

    Chandrayaan 3 Moon Landing Live: ಚಂದ್ರಯಾನ 3 ಯಶಸ್ಸಿಗೆ ಶುಭ ಹಾರೈಸಿದ ಸಂಸದೆ ಸುಮಲತಾ

    ನಿಜವಾಗಿಯೂ ಇವತ್ತು ಐತಿಹಾಸಿಕ ದಿನ. ಹೆಮ್ಮೆಯ ದಿನ. ಈ ದಿನಕ್ಕೊಸ್ಕರ ಇಡಿ ದೇಶ‌‌ ಕಾಯುತ್ತಿದೆ. ಚಂದ್ರಯಾನ 3 ಯಶಸ್ವಿಯಾಗಲಿ‌ ಎಂದು ಇಡಿ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನಸೌಧದಲ್ಲಿ ಮಂಡ್ಯ ಸಂಸದೆ ಸುಮಲತಾ ಹೇಳಿದರು.

  • 23 Aug 2023 02:31 PM (IST)

    Chandrayaan 3 Moon Landing Live: ಚಂದ್ರಯಾನ3 ಯಶಸ್ಸಿಗಾಗಿ ಪೇಜಾವರ ಶ್ರೀಗಳಿಂದ ವಿಶೇಷ ಪೂಜೆ

  • 23 Aug 2023 01:44 PM (IST)

    Chandrayaan 3 Moon Landing LIVE: ವಿಕ್ರಮ್ ಲ್ಯಾಂಡರ್​ ಮಾದರಿಗೆ ಪೂಜೆ ಮಾಡಿದ ವಿದ್ಯಾರ್ಥಿಗಳು

    ಚಿಕ್ಕಬಳ್ಳಾಫುರ: ಚಂದ್ರಯಾನ-3 ಯಶಸ್ವಿಗೆ ಹಾರೈಸಿ ವಿಕ್ರಮ್ ಲ್ಯಾಂಡರ್ ಮಾಡಲ್​​ಗೆ ಚಿಕ್ಕಬಳ್ಳಾಫುರದ ಎಸ್.ಜೆ.ಸಿ.ಐ.ಟಿ ಕಾಲೇಜಿನ ಏರೋನಾಟಿಕಲ್ ಇಂಜನಿಯರಿಂಗ್ ಹಾಗೂ ಏರೊ ಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪೂಜೆ ಮಾಡಿದರು. ರಾಕೇಟ್ ಲಾಂಚರ್, ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಮಾದರಿ ತಯಾರಿಸಿ ಪೂಜೆ ಮಾಡಿ ಚಂದ್ರಯಾನ- 3 ಗೆ ಯಶಸ್ವಿಯಾಗಲೆಂದು ಹಾರೈಸಿದರು.

  • 23 Aug 2023 01:13 PM (IST)

    Chandrayaan 3 Moon Landing LIVE: ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್, ಲ್ಯಾಂಡ್​ಗೆ ಸಮಯ ನಿಗದಿ; ಇಸ್ರೋ ಟ್ವೀಟ್​​

    ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಪ್ರಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನದ ನಿರೀಕ್ಷೆ. ಕಾರ್ಯಾಚರಣೆಯ ನೇರ ಪ್ರಸಾರ ಸಂಜೆ 5.20ರಿಂದ ಆರಂಭವಾಗಲಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಚಂದಿರನನ್ನು ಸ್ಪರ್ಶ ಮಾಡಲಿದೆ ಎಂದು ಇಸ್ರೋ ಟ್ವೀಟ್​ ಮಾಡಿದೆ.

  • 23 Aug 2023 12:38 PM (IST)

    Isro chandrayaan 3 live: ಕೊನೆಯ ಪ್ರಕ್ರಿಯೆವರೆಗೂ ಯಶಸ್ಸು ಕಾಣಲಿ ಅಂತ ಶುಭ ಹಾರೈಸಿದ ಶೋಭಾ ಕರಂದ್ಲಾಜೆ

    ಉಡುಪಿ: ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಪ್ರಪಂಚದ ಹಲವಾರು ದೇಶಗಳ ರಾಕೆಟ್​​ ಉಡಾವಣೆಗೆ ಇಸ್ರೋ ಸಹಾಯ ಮಾಡಿದೆ. ಇಸ್ರೋಗೆ ಸೌಲಭ್ಯ, ಸೌಕರ್ಯ ಇಲ್ಲ ಅನ್ನುವ ಕಾಲವೊಂದು ಇತ್ತು. ಅಮೆರಿಕದ ನಾಸಾ,‌ ರಷ್ಯಾದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಇವತ್ತು ಭಾರತದ ಇಸ್ರೋವನ್ನು ಪ್ರಪಂಚ ಕೊಂಡಾಡುವ ರೀತಿ ಆಗಿದೆ. ಚಂದ್ರಯಾನ 3 ಚಂದ್ರನ ಅಂಗಳವನ್ನು ಚುಂಬಿಸುತ್ತೆ ಅನ್ನೋದು ಖುಷಿಯ ವಿಚಾರ. ಬೆಳಗ್ಗೆ ಕೃಷ್ಣಮಠಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಭಾರತ 641 ಕೋಟಿ ರೂ ಖರ್ಚು ಮಾಡಿದ್ದು, ವಿಜ್ಞಾನಿಗಳು ಪ್ರಯತ್ನ ಮಾಡಿದ್ದಾರೆ. ವಿಜ್ಞಾನಿಗಳ ಪ್ರಯತ್ನ ಯಶಸ್ಸು ಕಾಣಲಿ ವಿಜ್ಞಾನಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಕಳೆದ ಬಾರಿ ಚಂದ್ರಯಾನ ಉಡಾವಣೆ ವಿಫಲವಾದಾಗ ಇಸ್ರೋ ಅಧ್ಯಕ್ಷರಿಗೆ  ಪ್ರಧಾನಿ ಸಮಾಧಾನ ಮಾಡಿದ್ದರು. ಕೆಲವು ಸಂದರ್ಭ ಬೇರೆ ಬೇರೆ ಕಾರಣಗಳಿಗೆ ವಿಫಲ ಆಗಬಹುದು. ಪ್ರಧಾನಿಗಳು ವಿಜ್ಞಾನಿಗಳನ್ನು ಹುರುದುಂಬಿಸಿ ಮತ್ತೆ ಹಣ ನೀಡಿದ್ದರು. ಹೀಗಾಗಿ ಮತ್ತೊಮ್ಮೆ ನಮ್ಮ ವಿಜ್ಞಾನಿಗಳು ಈ ಪ್ರಯತ್ನ ಮಾಡಿದ್ದಾರೆ. ಇಲ್ಲಿಯ ತನಕ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಕೊನೆಯ ಪ್ರಕ್ರಿಯೆವರೆಗೂ ಯಶಸ್ಸು ಕಾಣಲಿ ಅಂತ ಶುಭ ಹಾರೈಸುತ್ತೇನೆ ಎಂದು ಶುಭಕೂರಿದರು.

  • 23 Aug 2023 12:24 PM (IST)

    Isro chandrayaan 3 live: ಇಸ್ರೋದಿಂದ ಇತಿಹಾಸ ನಿರ್ಮಾಣದ ಕೆಲಸ ನಡೆಯುತ್ತಿದೆ; ನಳೀನ್​ ಕುಮಾರ್​ ಕಟೀಲ್​

    ಚಿಕ್ಕಮಗಳೂರು: ಇಸ್ರೋದಿಂದ ಇತಿಹಾಸ ನಿರ್ಮಾಣದ ಕೆಲಸ ನಡೆಯುತ್ತಿದೆ. ವಿಜ್ಞಾನದಲ್ಲೂ ಭಾರತ ಮುಂದುವರೆದ ರಾಷ್ಟ್ರವಾಗಿದೆ. ಚಂದ್ರಯಾನ ಯಶಸ್ವಿಯಾಗಲೇಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆ ವಿಜ್ಞಾನಿಗಳಿಗೆ ಹುಮ್ಮಸ್ಸು ನೀಡಿದೆ. ಚಂದ್ರಯಾನ ಯಶಸ್ವಿಯಾದರೇ ಜಗತ್ತಿನಲ್ಲಿ ಅದ್ಭುತವಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

  • 23 Aug 2023 12:14 PM (IST)

    Isro chandrayaan 3 live: ಜ್ಞಾನಿಗಳ ಮೇಲೆ ನಮಗೆ ಅತೀವ ಪ್ರೀತಿ ಗೌರವ ಮೂಡಿದೆ

    ರಾಮನಗರ: ವಿಜ್ಞಾನಿಗಳ ಮೇಲೆ ನಮಗೆ ಅತೀವ ಪ್ರೀತಿ ಗೌರವ ಮೂಡಿದೆ. ಚಂದ್ರಯಾನ -3 ‌ಯಶಸ್ವಿ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ವಿಜ್ಞಾನಿಗಳಿಗೆ ಶುಭವಾಗಲಿ ಎಂದು ಶಾಂತಿನಿಕೇತನ ವಿದ್ಯಾರ್ಥಿಗಳು ಹಾರೈಸಿದರು.

  • 23 Aug 2023 12:00 PM (IST)

    Isro chandrayaan 3 live: ಸಿದ್ದಾಂಜನೇಯ ಸ್ವಾಮಿ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ

    ಚಿಕ್ಕಬಳ್ಳಾಫುರ: ಚಂದ್ರಯಾನ-3 ಯಶಸ್ವಿಯಾಗಲಿ, ಚಂದ್ರಯಾನಕ್ಕೆ ಯಾವುದೆ ಅಡಚಣೆಗಳು ಆಗದಂತೆ ಲ್ಯಾಂಡ್​​ ಆಗಲಿ ಎಂದು ಚಿಕ್ಕಬಳ್ಳಾಪುರದ ಸಿದ್ದಾಂಜನೇಯ ಸ್ವಾಮಿ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಮಾಡಿ ಆಂಜನೇಯ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

  • 23 Aug 2023 11:34 AM (IST)

    Chandrayaan 3 Moon Landing LIVE: ಆಲ್ ದಿ ಬೆಸ್ಟ್ ಇಸ್ರೋ ಎಂದ ವಿದ್ಯಾರ್ಥಿಗಳು

    ಧಾರವಾಡ: ಚಂದ್ರಯಾನ 3 ಯಶಸ್ಸಿಗಾಗಿ ಧಾರವಾಡದ ವಿಜೇತ ಪಿಯು ಕಾಲೇಜಿನ ವಿದ್ಯಾರ್ಥಿಗಳು ಆಲ್ ದಿ ಬೆಸ್ಟ್ ಇಸ್ರೋ ಅಂತ ಘೋಷಣೆ ಕೂಗುವ ಮೂಲಕ ಹಾರೈಸಿದ್ದಾರೆ.

  • 23 Aug 2023 11:32 AM (IST)

    Chandrayaan 3 Moon Landing LIVE: ಶುಭ ಕೋರಿದ ಡಿಸಿಎಂ ಡಿಕೆ ಶಿವಕುಮಾರ್​​

    ಬೆಂಗಳೂರು: ಭಾರತಕ್ಕೆ ಇದು ಸಂತಸದ ದಿನ. ಚಂದ್ರಯಾನ ಯಶಸ್ವಿಯಾಗುತ್ತದೆ. ನಾನು ಸಮಯ‌ ಮಾಡಿಕೊಂಡು ವೀಕ್ಷಣೆ ಮಾಡುತ್ತೇನೆ. ಇದಕ್ಕೆ ಶ್ರಮ ಪಟ್ಟವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ವಿಜ್ಞಾನಿಗಳ ಕೆಲಸಕ್ಕೆ ಶುಭ ಕೋರುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.  ‌

  • 23 Aug 2023 11:03 AM (IST)

    Chandrayaan 3 Moon Landing LIVE: ಬೆಂಗಳೂರಿನ‌ ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ವ್ಯವಸ್ಥೆ

    ಬೆಂಗಳೂರು: ಚಂದ್ರನ ದಕ್ಷಿಣ ಧೃವದ ಮೇಲೆ ಚಂದ್ರಯಾಣ-3ಯ ವಿಕ್ರಮ ಲ್ಯಾಂಡರ್​​​​​​ ಸ್ಪರ್ಶಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಈ ಲ್ಯಾಂಡ್​​ ಅನ್ನು ವೀಕ್ಷಿಸಲು ಬೆಂಗಳೂರಿನ‌ ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಬೆಂಗಳೂರಿನ‌ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದೇವೆ. ದೊಡ್ಡ LED ಸ್ಕ್ರೀನ್​ನಲ್ಲಿ ಸಾಫ್ಟ್ ಲ್ಯಾಂಡಿಂಗ್ ಲೈವ್ ವೀಕ್ಷಿಸಬಹುದು. ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಲೈವ್ ಆರಂಭವಾಗಲಿದೆ. ಮೊದಲು ಬೆಂಗಳೂರಿನ ಬಳ್ಳಾಲದ ಇಸ್ರೋಗೆ ಮಾಹಿತಿ ಬರುತ್ತೆ. ಬಳಿಕ ವಿಜ್ಞಾನಿಗಳು ಟ್ರ್ಯಾಕಿಂಗ್ ಸೆಂಟರ್​ನಲ್ಲಿ ಮಾಹಿತಿ ಪಡೆಯುತ್ತಾರೆ.  ಬಳಿಕ ನೆಹರು ತಾರಾಲಯದಲ್ಲಿ ಲೈವ್ ಆರಂಭವಾಗುತ್ತೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಕಾಯುತ್ತಿದ್ದಾರೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದ್ದಾರೆ.

  • 23 Aug 2023 10:40 AM (IST)

    Chandrayaan 3 live updates today: ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ

    ಶಿವಮೊಗ್ಗ: ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಲಿ ಎಂದು ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ದುರ್ಗಾ ಸಪ್ತಸತಿ ಪಾರಾಯಣ, ಚಂಡಿಕಾ ಹೋಮ ಮಾಡಲಾಗಿದೆ. ದೇವಸ್ಥಾನದ ಧರ್ಮದರ್ಶಿ ಎಸ್.ರಾಮಪ್ಪ ನೇತೃತ್ವದಲ್ಲಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.

  • 23 Aug 2023 10:25 AM (IST)

    Chandrayaan 3 live updates today: ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ರುದ್ರಾಭಿಷೇಕ

    ಹುಬ್ಬಳ್ಳಿ: ಚಂದ್ರಯಾನ-3 ಯಶಸ್ವಿಯಾಗಲೆಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭಕ್ತರಿಂದ ಚಂದ್ರಯಾನ ರಾಕೇಟ್ ಭಾವಚಿತ್ರ ಹಿಡಿದು ಪೂಜೆ ಮಾಡಲಾಯಿತು. ಲ್ಯಾಂಡರ್ ಸುರಕ್ಷಿತವಾಗಿ ಚಂದ್ರ ಮೇಲೆ ಇಳಿಲೆಂದು ಪ್ರಾರ್ಥಿಸಲಾಯಿತು.

  • 23 Aug 2023 10:19 AM (IST)

    Chandrayaan 3 live updates today: ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಹೋಮ-ಹವನ

    ಬೆಂಗಳೂರು: ಚಂದ್ರಯಾನ 3 ಯಶಸ್ವಿಗಾಗಿ ನಗರದ ಗವಿಗಂಗಾದರೇಶ್ವರ ದೇವಸ್ಥಾನದಲ್ಲಿ ಹೋಮ-ಹವನ ನಡೆಯುತ್ತಿದೆ.  ಇವತ್ತು ಇಡೀ ವಿಶ್ವವೇ ಗಮನಿಸುವ ಸನ್ನಿವೇಶ ಬಂದಿದೆ. ಚಂದ್ರನ ಮೇಲೆ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಪೂಜೆ ಮಾಡಲಾಗಿದೆ. ನವಗ್ರಹಗಳ ಪೂಜೆ ಹಾಗೂ ಚಂದ್ರ ಹೋಮ ನಡೆಯುತ್ತಿದೆ. ಸುಮಾರು ಒಂದು ಗಂಟೆಗಳ ಕಾಲ ಹೋಮ ನಡೆಯಲಿದೆ. ಯಾವುದೇ ಅಡೆತಡೆಗಳು ಬಾರದಂತೆ ನಿರ್ವಿಘ್ನವಾಗಿ ಚಂದ್ರಯಾನ ಕ್ಕೆ ಯಶಸ್ಸು ಸಿಗಲಿ ಎಂದು ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ಹೇಳಿದರು.

  • 23 Aug 2023 10:08 AM (IST)

    Chandrayaan 3 Moon Landing Live: ಶುಭಹಾರೈಸಿದ ಹೆಚ್​​ಡಿ ದೇವೇಗೌಡ

    ಇಸ್ರೋ ವಿಶ್ವ ದರ್ಜೆಯ ವೈಜ್ಞಾನಿಕ ಸಂಸ್ಥೆಯಾಗಿದ್ದು, ದಶಕಗಳಿಂದ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಅವರ ಅಮೋಘ ಸಾಧನೆಗಳು ನಮ್ಮನ್ನು ವಿಶ್ವದ ಅಗ್ರಸ್ಥಾನದಲ್ಲಿರಿಸಿದೆ. ದೇವರು ನಮ್ಮ ರಾಷ್ಟ್ರ ಮತ್ತು ನಮ್ಮ ವಿಜ್ಞಾನಿಗಳನ್ನು ಆಶೀರ್ವದಿಸಲಿ. ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಶುಭ ಹಾರೈಸಿದರು.

  • 23 Aug 2023 10:04 AM (IST)

    Chandrayaan 3 Moon Landing Live: ಅನಿವಾಸಿ ಭಾರತೀಯರಿಂದ ವಿಶೇಷ ಪೂಜೆ

    ನವದೆಹಲಿ: ಚಂದ್ರಯಾನ-3 ಯಶಸ್ಸಿಗಾಗಿ ಅಮೆರಿಕದ ನ್ಯೂಜೆರ್ಸಿಯ ಮನ್ರೋದಲ್ಲಿರುವ ಅನಿವಾಸಿ ಭಾರತೀಯರು ಪೂಜೆ ಓಂ ಶ್ರೀಸಾಯಿ ಬಾಲಾಜಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

  • 23 Aug 2023 09:31 AM (IST)

    Chandrayaan-3 Moon Landing Live: ಚಂದ್ರಯಾನ-3 ಯಶಸ್ಸಿಗೆ ಶ್ರೀಶೈಲ ಜಗದ್ಗುರುಗಳು ಶುಭ ಹಾರೈಕೆ

    ಚಿಕ್ಕೋಡಿ‌: ಚಂದ್ರಯಾನ-3 ಯಶಸ್ಸಿಗೆ ಶ್ರೀಶೈಲ ಜಗದ್ಗುರುಗಳು ಶುಭ ಹಾರೈಸಿದ್ದಾರೆ. ಅಲ್ಲದೇ ಇಂದು (ಆ.23) ರಂದು ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭವ್ಯಭಾರತ ಆಶಾಕಿರಣವಾದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ 2ದಂತೆ ಕೊನೆ ಘಳಿಗೆಯಂತೆ ವಿಫಲವಾಗದೇ ಚಂದ್ರಯಾನ 3 ಯಶಸ್ವಿಯಾಗಲಿ. ಚಂದ್ರಯಾನ 3 ಚಂದ್ರನನ್ನ ತಲುಪಿ ನಮ್ಮ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ ಮಾಡಲಿ. ಈಗಾಗಲೇ ಉಳವಿ ಸಮೀಪದ ಅನುಷ್ಠಾನದಲ್ಲಿ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಇಂದು ಸಂಜೆಯೇ ಚಂದ್ರನ ತಲುಪುವ ಸಮಯ ಇದೆ. ಭಗವಂತನ ಕೃಪೆಯಿಂದ ಯಶಸ್ವಿಯಾಗಿ ಸಂಪೂರ್ಣ ಸಂಪನ್ನಗೊಳ್ಳಬೇಕು. ಇದಕ್ಕಾಗಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ, ಜಗದ್ಗುರು ಸೂರ್ಯಸಿಂಹಾಸನ ಪಂಡಿತಾರಾಧ್ಯ ಪೀಠದ ಲಿಂಗೊದ್ಭವ ಮೂರ್ತಿಗೆ ವಿಶೇಷ ಪೂಜೆ ಮಾಡಲಾಗಿದೆ. ಹೊಸ ಹೊಸ ತಂತ್ರಜ್ಞಾನ ಬಳಸಿ ನಮ್ಮ ವಿಜ್ಞಾನಿಗಳು ಯಾವುದೇ ವಿಫಲತೆಗೆ ಅವಕಾಶ ನೀಡದೆ ಉಡಾವಣೆ ಮಾಡಿದ್ದಾರೆ. ಆದಷ್ಟು ಬೇಗ ಸಿಹಿಸುದ್ದಿ ಬರಲಿ ಭಾರತ ವಿಶ್ವದಾದ್ಯಂತ ತನ್ನ ಹೆಸರು ಗಳಿಸಲಿ ಎಂದು ಹಾರೈಸುವೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

  • 23 Aug 2023 09:05 AM (IST)

    Chandrayaan-3 Moon Landing Live: ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ

    ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್‌ಗೆ ಉತ್ತರಾಖಂಡದ ಋಷಿಕೇಶದಲ್ಲಿ ಗಂಗಾರತಿ ಮಾಡಲಾಯ್ತು. ಋಷಿಕೇಶದ ಪರಮಾರ್ಥ ನಿಕೇತನ ಘಾಟ್‌ನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ ಮಾಡಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಲಿ, ದೇಶದ ಕೀರ್ತಿ ಪತಾಕೆ ಮೇಲಕ್ಕೆ ಹಾರಲಿ ಅಂತಾ ಪ್ರಾರ್ಥಿಸಲಾಯ್ತು.

  • 23 Aug 2023 09:02 AM (IST)

    Chandrayaan-3 Moon Landing Live: ಚಂದ್ರಯಾನ-3 ರ ಯಶಸ್ವಿಗೆ ಮಂತ್ರಾಲಯದಲ್ಲಿ ಬಿಜೆಪಿ ಮುಖಂಡರಿಂದ ವಿಶೇಷ ಪೂಜೆ

    ಮೈಸೂರು: ಚಂದ್ರಯಾನ-3 ರ ಯಶಸ್ಸು ಕೋರಿ ಮೈಸೂರು ಬಿಜೆಪಿ ಮುಖಂಡರು ಮಂತ್ರಾಲಯಕ್ಕೆ ತೆರಳಿ ಗುರು ರಾಘವೇಂದ್ರರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆ ಸಲ್ಲಿಸುವ ಸಲುವಾಗಿ ನಿನ್ನೆ(ಆ.22) ರಂದೇ 82 ಬಿಜೆಪಿ ಕಾರ್ಯಕರ್ತರು ಮೈಸೂರಿನಿಂದ ಮಂತ್ರಾಲಯಕ್ಕೆ ಹೋಗಿದ್ದಾರೆ. ಇಂದು ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಶಾಸಕ ಶ್ರೀವತ್ಸ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

  • 23 Aug 2023 08:29 AM (IST)

    Chandrayaan-3 Moon Landing Live: ಚಂದ್ರಯಾನ-3 ಯಶಸ್ವಿಗೆ ವಿಶೇಷ ರೀತಿಯಲ್ಲಿ ಶುಭಕೋರಿದ ಮಕ್ಕಳು

    ಚಂದ್ರಯಾನ-3 ಯಶಸ್ವಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಸಂಜೆ ವಿಕ್ರಮ ಲ್ಯಾಂಡರ್​​ ಚಂದ್ರನನ್ನು ಸ್ಪರ್ಶ ಮಾಡಲಿರುವ ಹಿನ್ನೆಲೆಯಲ್ಲಿ ಚಂದ್ರಯಾನ-3 ಗೆ ಶಾಲಾ ಮಕ್ಕಳು ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ.  ಕೊಪ್ಪಳ ಜಿಲ್ಲೆ ಗಂಗಾವತಿಯ ಸೇಂಟ್ ಪಾಲ್ಸ್ ಶಾಲೆಯ ಮಕ್ಕಳು ಚಂದ್ರಯಾನ-3 ನ ಪ್ರತಿ ಹಂತದ ಚಿತ್ರ ಬಿಡಿಸಿ ಶುಭಕೋರಿದ್ದಾರೆ.  ಚಂದ್ರಯಾನ-3 ಚಿತ್ರ ಬಿಡಿಸಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.

  • 23 Aug 2023 08:20 AM (IST)

    Chandrayaan-3 Moon Landing Live: ಮರಳುಕಲೆ ಮೂಲಕ ಚಂದ್ರಯಾನಕ್ಕೆ ಶುಭಾಶಯ

    ದೇಶದ ಮೂಲೆ ಮೂಲೆಯಿಂದ ಚಂದ್ರಯಾನ-3ರ ಯಶಸ್ಸಿಗಾಗಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ. ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ತಂಡ ಶುಭ ಕೋರಿದ್ದು ಒಡಿಶಾದ ಪುರಿ ಬೀಚ್​​ನಲ್ಲಿ ಮರಳು ಕಲೆ ರಚಿಸಿ ವಿಕ್ರಂ ಲ್ಯಾಂಡರ್​​​ನ ಸಾಫ್ಟ್​ ಲ್ಯಾಂಡಿಂಗ್‌ಗೆ ಶುಭ ಕೋರಿದ್ದಾರೆ. ಬೀಚ್‌ಗೆ ಬರುವ ಪ್ರವಾಸಿಗರು ಕೂಡ ಮರಳು ಕಲೆಯಲ್ಲಿ ಮೂಡಿರುವ ಚಂದ್ರಯಾನವನ್ನ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

  • Published On - Aug 23,2023 8:18 AM

    Follow us
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ