ಚಿಕ್ಕೋಡಿ, ನವೆಂಬರ್ 9: ಗ್ಯಾಸ್ ಕಟರ್ ಬಳಸಿ ಎಸ್‌ಬಿಐ (SBI) ಎಟಿಎಂ ಕೊರೆದು ಲಕ್ಷಾಂತರ ರೂ. ಹಣ ದೋಚಿ ಕಳ್ಳರು ಪರಾರಿಯಾಗಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರ ಬಳಿರುವ ಎಟಿಎಂ ಮತ್ತು ಅಂಕಲಿ ಗ್ರಾಮದ ಎಕ್ಸಿಸ್ ಬ್ಯಾಂಕ್‌ಗೆ ಸೇರಿದ ಎಟಿಎಂನಲ್ಲೂ ತಡರಾತ್ರಿ ಕಳ್ಳತನ ಮಾಡಿದ್ದಾರೆ. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳಿಂದ ಎಸ್‌ಬಿಐ ಎಟಿಂನಲ್ಲಿದ್ದ ಅಂದಾಜು 23 ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎಟಿಎಂನಲ್ಲಿ ಒಟ್ಟು ಎಷ್ಟು ಹಣ ಇತ್ತು ಎಂಬ ಬಗ್ಗೆ ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಎಸ್‌ಬಿಐ ಎಟಿಎಂ ಕೊರೆದು ಹಣ ದೋಚಿ ದುಷ್ಕರ್ಮಿಗಳು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಎಟಿಎಂನಲ್ಲೂ ಕಳ್ಳತನಕ್ಕೆ ಯತ್ನಿಸಿದ್ದು, ವಿಫಲರಾಗಿದ್ದಾರೆ. ಸದ್ಯ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು, ಎಫ್‌ಎಸ್‌ಎಲ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ನಿರ್ಜನ ಪ್ರದೇಶದಲ್ಲಿ ಡ್ರಾಪ್ ಕೊಡುವ ಮುಂಚೆ ಹುಷಾರ್: ಅರಣ್ಯದೊಳಗೆ ಎಳೆದೊಯ್ದು ಸಾವಿರಾರು ರೂ. ಸುಲಿಗೆ
ಅದೇ ರೀತಿಯಾಗಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಮತ್ತೊಂದು ಎಟಿಎಂನಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ತಡರಾತ್ರಿ ಎಟಿಎಂ ಕೇಂದ್ರಗಳಿಗೆ ನಾಲ್ವರು ಮುಸುಕುಧಾರಿಗಳು ನುಗ್ಗಿ ಕಳ್ಳತನ ಮಾಡಿದ್ದಾರೆ. ಎಕ್ಸಿಸ್ ಬ್ಯಾಂಕ್‌ಗೆ ಸೇರಿದ ಎಟಿಎಂನಲ್ಲೂ ಕಳ್ಳತನವಾಗಿದ್ದು, ಎಟಿಎಂ ಕೇಂದ್ರದೊಳಗಿನ ಸಿಸಿ ಕ್ಯಾಮರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಮಾಡಿ ಕಳ್ಳತನ ಮಾಡಿದ್ದಾರೆ.
ತಡರಾತ್ರಿ ಒಟ್ಟು ಎರಡು ಎಟಿಎಂಗಳಲ್ಲಿ ಕಳ್ಳತನ ಹಾಗೂ ಒಂದು ಎಟಿಎಂನಲ್ಲಿ ಕಳ್ಳತನಕ್ಕೆ ವಿಫಲ ಯತ್ನವಾಗಿದೆ. ಅಂಕಲಿ ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಎರಡು ದಿನಗಳ ಹಿಂದೆ 17 ಲಕ್ಷ ರೂ. ಹಣ ತುಂಬಿಸಲಾಗಿತ್ತು. ಎಷ್ಟು ಹಣ ಕಳ್ಳತನವಾಗಿದೆ ಎಂಬುದರ ಪೊಲೀಸರು, ಬ್ಯಾಂಕ್ ಸಿಬ್ಬಂದಿಗಳು ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸರಣಿ ಎಟಿಎಂ ಕಳ್ಳತನದಿಂದ ಚಿಕ್ಕೋಡಿ ಜನರು ಬೆಚ್ಚಿಬಿದ್ದಾರೆ.
ಹುಬ್ಬಳ್ಳಿ: ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆಯನ್ನು ಅಟ್ಟಾಡಿಸಿ ಇಟ್ಟಂಗಿಯಿಂದ ಹಲ್ಲೆ ಮಾಡಿರುವಂತಹ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್ ಹಿಂಭಾಗ ನಡೆದಿದೆ. ಹಲ್ಲೆಗೊಳಗಾದ ಮಹಿಳೆ ಹಾಗೂ ಹಲ್ಲೆ ಮಾಡಿದ ವ್ಯಕ್ತಿ ನಡುವೆ ಅಕ್ರಮ ಸಂಬಂಧ ಹೊಂದಿದ್ದಾರೆ. ವ್ಯಕ್ತಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ವ್ಯಕ್ತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ಕಿಮ್ಸ್ನಲ್ಲಿ ಮಹಿಳೆ ಆಯಾ ಕೆಲಸ ಮಾಡುತ್ತಿದ್ದಳು.
ಕೆಲಸದಿಂದ ಮನೆಗೆ ಹೊರಡುವ ವೇಳೆ ವ್ಯಕ್ತಿ ಕುಟುಂಬಸ್ಥರಿಂದ ಹಲ್ಲೆ ಮಾಡಲಾಗಿದೆ. ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಹೆಂಡತಿ, ಮಕ್ಕಳಿಂದ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ತಂಗಿಯನ್ನು ಬಿಡಿಸಲು ಬಂದ ಅಕ್ಕನ ಮೇಲೆಯೂ ಹಲ್ಲೆ ಮಾಡಲಾಗಿದೆ.
ಇದನ್ನೂ ಓದಿ: ಶತ್ರುಗಳ ಗುಂಡಿಗೂ ಬಗ್ಗದ ಯೋಧ ಯುವತಿಯ ಲವ್ ಬಲೆಗೆ ಬಿದ್ದು ದುರಂತ ಅಂತ್ಯಕಂಡ
ಇಬ್ಬರ ಮೇಲೂ ಸಾರ್ವಜನಿಕ ಸ್ಥಳದಲ್ಲೇ ಹಿಗ್ಗಾಮುಗ್ಗ ಥಳಿತ, ಚಪ್ಪಲಿ ಹಾಗೂ ಇಟ್ಟಂಗಿಯಿಂದ ಹಲ್ಲೆ ಮಾಡಿದ್ದು, ಸ್ಥಳಕ್ಕೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಆಗಮಿಸಿ ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಮದ್ಲೇರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಮೂರು ಟಿಪ್ಪರ್ಗಳನ್ನ ಹಾಗೂ ಜೆಸಿಬಿ ವಶಕ್ಕೆ ಪಡೆಯಲಾಗಿದೆ. ಗ್ರಾಮದ ಸರ್ಕಾರಿ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಮೂರು ಟಿಪ್ಪರ್ ಒಂದು ಜೆಸಿಬಿ ವಶಕ್ಕೆ ಪಡೆದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Thu, 9 November 23