ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ; ವೈದ್ಯ ಸೇರಿ ಐವರು ಅರೆಸ್ಟ್

ಮದುವೆಗೂ ಮುನ್ನ ಗರ್ಭಿಣಿಯಾಗಿ ಅಬಾಷನ್ ಮಾಡಿಸಬೇಕು ಅನ್ನೋರನ್ನೇ ಟಾರ್ಗೆಟ್ ಮಾಡಿ ಏಳು, ಎಂಟು ತಿಂಗಳು ತುಂಬಿದ ಬಳಿಕ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇಧಿಸಿದ್ದಾರೆ. ಐವರನ್ನು ಅರೆಸ್ಟ್ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ; ವೈದ್ಯ ಸೇರಿ ಐವರು ಅರೆಸ್ಟ್
ಬಂಧನ
Follow us
| Updated By: ಆಯೇಷಾ ಬಾನು

Updated on: Jun 10, 2024 | 10:51 AM

ಬೆಳಗಾವಿ, ಜೂನ್.10: ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲವೊಂದು ಪೊಲೀಸರ ಬಲೆಗೆ ಬಿದ್ದಿದೆ. ಆರ್‌ಎಂಪಿ ವೈದ್ಯ ಸೇರಿ ಐದು ಜನರನ್ನು ಬೆಳಗಾವಿಯ (Belagavi) ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಮದುವೆಗೂ ಮುನ್ನ ಗರ್ಭಿಣಿಯಾಗಿ ಅಬಾಷನ್ ಮಾಡಿಸಬೇಕು ಅನ್ನೋರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಏಳು, ಎಂಟು ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಸದ್ಯ ಪೊಲೀಸರು ಈ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಮದುವೆಗೂ ಮುಂಚೆ ಗರ್ಭಿಣಿಯಾಗಿ ಮಗುವನ್ನು ಸಾಕಲಾಗದೆ ನರಳಾಡುವ ಅಸಹಾಯಕ ಹೆಣ್ಮುಕ್ಕಳನ್ನು ಟಾರ್ಗೆಟ್ ಮಾಡಿ ಆರ್‌ಎಂಪಿ ವೈದ್ಯ ಅಬ್ದುಲ್ ಎಂಬುವವರು ಆಪರೇಷನ್ ಮಾಡಿ ಮಗುವನ್ನು ತಾವೇ ಸಾಕುವುದಾಗಿ ಹೇಳಿ ಮಗುವನ್ನು ರಕ್ಷಿಸುತ್ತಿದ್ದರು. ಬಳಿಕ ಎರಡ್ಮೂರು ತಿಂಗಳು ಮಗು ಆರೈಕೆ ಮಾಡಿ ಮಗುವನ್ನ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಮಕ್ಕಳಿಲ್ಲದವರಿಗೆ ಅರವತ್ತು ಸಾವಿರದಿಂದ ಒಂದೂವರೆ ಲಕ್ಷ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದು ಮಕ್ಕಳ ಮಾರಾಟ ಗ್ಯಾಂಗ್ ಹಿಂದೆ ಬಿದ್ದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ಬಿಜೆಪಿ ವಿಜಯೋತ್ಸವ ಮುಗಿಸಿ ಮನೆಗೆ ಹೋಗುತ್ತಿದ್ದ ಇಬ್ಬರಿಗೆ ಚಾಕು ಇರಿತ, ಮೂವರು ವಶಕ್ಕೆ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ಟೀಮ್ ಈ ಜಾಲವನ್ನು ಭೇದಿಸಲು ಮೊದಲು ಮಕ್ಕಳ ಮಾರಾಟ ಜಾಲದ ಮಹಾದೇವಿ ಜೈನ್​ಗೆ ಸಂಪರ್ಕಿಸಿದ್ದರು. ಈ ವೇಳೆ ಆರೋಪಿ ಮಹಾದೇವಿ 1ಲಕ್ಷ 40 ಸಾವಿರ ರೂಪಾಯಿಗೆ ಮಗು ನೀಡುವುದಾಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಇದಕ್ಕೆ ಒಪ್ಪಿ ಬೆಳಗಾವಿಯ ರಾಮತೀರ್ಥ ನಗರಕ್ಕೆ ಮಗು ತರುವಂತೆ ಅಧಿಕಾರಿಗಳು ಹೇಳಿದ್ದರು. ಈ ವೇಳೆ ಮಗುವಿನ ಜೊತೆಗೆ ಬಂದು ಮಹಾದೇವಿ ಆ್ಯಂಡ್ ಗ್ಯಾಂಗ್ ತಗ್ಲಾಕ್ಕೊಂಡಿದೆ. ಕಿಂಗ್ ಪಿನ್ ವೈದ್ಯ ಅಬ್ದಲ್ ಗಫಾರ್ ಖಾನ್ ನಿಂದ ಅರವತ್ತು ಸಾವಿರಕ್ಕೆ ಮಗು ಖರೀದಿ ಮಾಡಿದ್ದ ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್, ಬಳಿಕ 1ಲಕ್ಷ 40ಸಾವಿರ ಹಣಕ್ಕೆ ಮಗು ಮಾರಾಟ ಮಾಡಲು ಯತ್ನಿಸಿ ಜೈಲು ಸೇರಿದ್ದಾರೆ.

ಪ್ರೀತಿಯಲ್ಲಿ ಎಡವಿ ಜೈಲು ಸೇರಿದ ಜೋಡಿ

ಪವಿತ್ರಾ ಮತ್ತು ಪ್ರವೀಣ್ ಇಬ್ಬರು ಪರಸ್ಪರ ಪ್ರೀತಿಸುತ್ತಿರುತ್ತಾರೆ. ವಿವಾಹಕ್ಕೂ ಮುನ್ನ ಇಬ್ಬರೂ ದೈಹಿಕ ಸಂಪರ್ಕ ಬೆಳಿಸಿ ಪವಿತ್ರಾ ಏಳು ತಿಂಗಳು ಗರ್ಭಿಣಿಯಾಗುತ್ತಾಳೆ. ಮನೆಯಲ್ಲಿ ಗೊತ್ತಾದ್ರೇ ಸಮಸ್ಯೆ ಆಗುತ್ತೆ ಅಂತಾ ಕಿತ್ತೂರಿನಲ್ಲಿರುವ ಅಬ್ದುಲ್ ಗಫಾರ್ ಖಾನ್ ಬಳಿ ಈ ಜೋಡಿ ಹೋಗುತ್ತೆ. ಈ ವೇಳೆ ಇಪ್ಪತ್ತು ಸಾವಿರ ಹಣ ಪಡೆದು ಆಪರಷೇನ್ ಮಾಡಿ ವೈದ್ಯ ಅಬ್ದುಲ್ ಮಗು ತೆಗೆದಿದ್ದರು. ಬಳಿಕ ಮಗುವನ್ನ ಅರವತ್ತು ಸಾವಿರಕ್ಕೆ ಮಹಾದೇವಿಗೆ ಮಾರಾಟ ಮಾಡಿದ್ದರು. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ಸಂಬಂಧ ಕಿಂಗ್ ಪಿನ್ ಕಿತ್ತೂರಿ‌ನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಮತ್ತು ಪ್ರವೀಣ್​ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
‘ನಟ ದರ್ಶನ್​​​ ಗ್ರಹಗತಿ ಸರಿಯಾಗಿಲ್ಲ, ಅಪಾಯಗಳು ಬರುತ್ತಿವೆ’ ಅರ್ಚಕರ ಹೇಳಿಕ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ