ಚೋರ್ಲಾ ಘಾಟ್ ಬಳಿ 400 ಕೋಟಿ ದರೋಡೆಗಿಲ್ಲ ಪ್ರತ್ಯಕ್ಷದರ್ಶಿಗಳು: ಎಸ್ಐಟಿಗೆ ಸವಾಲಾದ ತನಿಖೆ!
ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣವು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಅಮಾನ್ಯಗೊಂಡ 2000 ರೂ. ನೋಟುಗಳಿದ್ದ ಕಂಟೇನರ್ ಹೈಜಾಕ್ ಆಗಿದೆ ಎನ್ನಲಾಗಿದ್ದರೂ, ಪ್ರತ್ಯಕ್ಷದರ್ಶಿಗಳು ಲಭ್ಯವಿಲ್ಲ. ಕಿಡ್ನಾಪ್ ಆಗಿದ್ದ ವ್ಯಕ್ತಿ ಕೂಡ ದರೋಡೆಗೆ ಸಾಕ್ಷಿಯಾಗಿಲ್ಲ. ಈ ಪ್ರಕರಣದಲ್ಲಿ ರಾಜಕೀಯ ನಾಯಕನ ಹೆಸರು ಕೇಳಿಬಂದಿದ್ದು, ಗುಜರಾತ್ ಮೂಲದ ಆಶ್ರಮವೊಂದರ ನಂಟಿನ ಬಗ್ಗೆಯೂ SIT ತನಿಖೆ ನಡೆಸುತ್ತಿದೆ.

ಬೆಳಗಾವಿ, ಜನವರಿ 28: ಚೋರ್ಲಾ ಘಾಟ್ ಬಳಿ 400 ಕೋಟಿ ದರೋಡೆ ಪ್ರಕರಣ ಸಂಬಂಧ ಪ್ರತ್ಯಕ್ಷದರ್ಶಿಗಾಗಿ ಮೂರು ರಾಜ್ಯಗಳ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಹೋಗ್ತಿದ್ದ ಅಮಾನ್ಯಗೊಂಡ 2000 ಮುಖ ಬೆಲೆಯ 400 ಕೋಟಿ ಹಣ ತುಂಬಿದ್ದ ಕಂಟೇನರ್ ಹೈಜಾಕ್ ಮಾಡಲಾಗಿದೆ ಎನ್ನಲಾಗಿದ್ದರೂ ಆ ಬಗ್ಗೆ ಸಾಕ್ಷಿಗಳೇ ಪೊಲೀಸರಿಗೆ ಸಿಗುತ್ತಿಲ್ಲ. ಸಾಲು ಸಾಲು ಪ್ರಶ್ನೆಗಳು ತನಿಖೆ ವೇಳೆ ಎದುರಾಗ್ತಿದ್ದು, ಇವುಗಳಿಗೆ ಉತ್ತರ ಹುಡುಕೋದೇ ಈಗ ಖಾಕಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.
ಪ್ರಕರಣ ಸಂಬಂಧ ಉದ್ಭವಿಸಿರೋ ಪ್ರಶ್ನೆಗಳೇನು?
- ಗೋವಾ ರಾಜ್ಯದ ಯಾವ ಸ್ಥಳದಲ್ಲಿ ಕಂಟೇನರ್ಗಳಿಗೆ ಹಣ ತುಂಬಲಾಯ್ತು?
- ಕಂಟೇನರ್ಗೆ ಹಣ ತುಂಬಿದ್ದನ್ನು ಕಣ್ಣಾರೆ ನೋಡಿರುವವರು ಯಾರು?
- ಯಾವ ಮಾರ್ಗವಾಗಿ ಆ ಕಂಟೇನರ್ಗಳು ಚೋರ್ಲಾ ಘಾಟ್ ಪ್ರವೇಶಿಸಿದ್ದವು?
- ಚೋರ್ಲಾ ಘಾಟ್ನ ಯಾವ ಸ್ಥಳದಲ್ಲಿ ಹಣ ತುಂಬಿದ್ದ ಕಂಟೇನರ್ ಹೈಜಾಕ್ ಆಗಿವೆ?
- ಆ ಕಂಟೇನರ್ ವಾಹನದ ನಂಬರ್ ಏನು? ಅವುಗಳ ಮಾಲೀಕ ಯಾರು?
ಇದನ್ನೂ ಓದಿ: 400 ಕೋಟಿ ಮಾಲೀಕ ಗುಜರಾತ್ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!
ಇನ್ನು ಪ್ರಕರಣ ಸಂಬಂಧ ಕಿಡ್ನಾಪ್ ಆಗಿದ್ದ ಸಂದೀಪ್ ಪಾಟೀಲ್ ಕೂಡ ದರೋಡೆಯನ್ನು ಕಣ್ಣಾರೆ ನೋಡಿಲ್ಲ.ಕಿಡ್ನಾಪ್ ಮಾಡಿದವರು ಹೇಳಿದ್ದನ್ನೇ ದೂರಿನಲ್ಲಿ ದಾಖಲು ಮಾಡಲಾಗಿದೆ. ಈ ನಡುವೆ ಕಿಂಗ್ಪಿನ್ ಕಿಶೋರ್ ಸಾಳ್ವೆ ಬಗ್ಗೆ ಸಾಕ್ಷಿ ಎಸ್ಐಟಿ ಸಂಗ್ರಹಿಸುತ್ತಿದ್ದು, ಮತ್ತೊಂದೆಡೆ ಅರೆಸ್ಟ್ ಆಗಿರೋ ಏಳು ಜನ ಆರೋಪಿಗಳ ತೀವ್ರ ವಿಚಾರಣೆಯೂ ನಡೆಯುತ್ತಿದೆ. ಹೀಗಿದ್ದರೂ ಮಹಾರಾಷ್ಟ್ರ ಎಸ್ಐಟಿಗೆ ಸಂಬಂಧ ಐ ವಿಟ್ನೆಸ್ ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ.
ದರೋಡೆ ಪ್ರಕರಣದಲ್ಲಿ ರಾಜಕೀಯ ನಾಯಕನೋರ್ವನ ಹೆಸರೂ ತಳಕು ಹಾಕಿಕೊಂಡಿದ್ದು, ವೈರಲ್ ಆಗಿರೋ ಸಂಭಾಷಣೆ ಜಾಡು ಹಿಡಿದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಎಸ್ಐಟಿ ಮುಖ್ಯಸ್ಥ ಆದಿತ್ಯ ಮೀರಖೇಲಕರ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯಲ್ಲಿ ಗುಜರಾತನ ದೊಡ್ಡ ರಾಜಕಾರಣಿ ಯಾರು? ಗುಜರಾತ್ನ ಅಹಮದಾಬಾದ್ ಮೂಲದ ಆಶ್ರಮ ಯಾವುದು? ಹಣ ಎಲ್ಲಿದೆ? ಆಶ್ರಮದಲ್ಲಿಯೇ ಬ್ಲಾಕ್ ಆ್ಯಂಡ್ ವೈಟ್ ದಂಧೆ ಮಾಡುತ್ತಿದ್ದಾರಾ? ಎಂಬ ಹಲವು ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 am, Wed, 28 January 26