ಚಿಕ್ಕೋಡಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ರಾಜ್ಯದ ಯೋಧ ಒಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಉತ್ತರಪ್ರದೇಶದಲ್ಲಿ ಕರ್ನಾಟಕ ರಾಜ್ಯದ ಯೋಧ ಸಾವನ್ನಪ್ಪಿದ್ದಾರೆ. CISF ನ ಯೋಧ ನವನಾಥ ಅಪ್ಪಾ ದಿವಟೆ (30) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದ ನಿವಾಸಿ, ದಿಢೀರ್ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಉತ್ತರಪ್ರದೇಶದಲ್ಲಿ ಕರ್ತವ್ಯನಿರತ ಯೋಧ ಸೋಮವಾರ ಸಾವನ್ನಪ್ಪಿದ್ದಾರೆ. ಕಳೆದ 10 ವರ್ಷಗಳಿಂದ ಭಾರತೀಯ ಸೈನ್ಯದಳದ ಸಿಐಎಸ್ಎಫ್‍ನಲ್ಲಿ ಯೋಧನಾಗಿ ಮೃತ ನವನಾಥ ಸೇವೆ ಸಲ್ಲಿಸಿದ್ದರು. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಬಂದೋಬಸ್ತಗಾಗಿ ಸೇವಾನಿರತರಾಗಿದ್ದರು. ಆಕಸ್ಮಿಕವಾಗಿ ಸೋಮವಾರ ಬೆಳಿಗ್ಗೆ ಅಸ್ವಸ್ಥತೆ ಉಂಟಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಯೋಧ ನವನಾಥ್ ಸಾವನ್ನಪ್ಪಿದ್ದಾರೆ. ಯೋಧನ ಪಾರ್ಥಿವ ಶರೀರ ಇಂದು ಕುರ್ಲಿ ಗ್ರಾಮಕ್ಕೆ ತಲುಪಲಿದೆ.
ಇದನ್ನೂ ಓದಿ: ಮಾನಸಿಕ ಖಿನ್ನತೆ: ಐವರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಹತನಾದ ಬೆಳಗಾವಿಯ BSF ಯೋಧ
ಇದನ್ನೂ ಓದಿ: ‘ಮೃತ ಯೋಧ ಅಲ್ತಾಫ್ಗೆ ಪರಿಹಾರ ಘೋಷಿಸಿ; ಹರ್ಷನ ಕುಟುಂಬಕ್ಕೆ 25 ಲಕ್ಷ ರೂ. ಕೊಡ್ತೀರಾ ಸೈನಿಕನಿಗೆ ಯಾಕೆ ಕೊಡಲ್ಲ?’
Published On - 3:55 pm, Wed, 9 March 22