AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯವರಿಗೆ ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡುವ ಪ್ಲಾನ್ ಇದೆ -ಡಿಕೆ ಶಿವಕುಮಾರ್ ಗಂಭೀರ ಆರೋಪ

ಕೋವಿಡ್ ಇದೆ ಅಂತ ರಾಹುಲ್ ಗಾಂಧಿಗೆ ಯಾತ್ರೆ ನಿಲ್ಲಿಸಲು ಹೇಳಿದ್ದಾರೆ. ಮೇಕೆದಾಟು ಸಮಯದಲ್ಲೂ ನಮಗೆ ಇದೇ ರೀತಿ ಆಗಿತ್ತು. ಆಗ ಕೇಸ್ ಕೂಡ ಹಾಕಿದ್ರು.

ಬಿಜೆಪಿಯವರಿಗೆ ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡುವ ಪ್ಲಾನ್ ಇದೆ -ಡಿಕೆ ಶಿವಕುಮಾರ್ ಗಂಭೀರ ಆರೋಪ
ಡಿಕೆ ಶಿವಕುಮಾರ
TV9 Web
| Updated By: ಆಯೇಷಾ ಬಾನು|

Updated on:Dec 22, 2022 | 12:47 PM

Share

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಆತಂಕ ಮತ್ತೆ ಹುಟ್ಟುಕೊಂಡಿದೆ. ನೆರೆಯ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಸಭೆ, ಚರ್ಚೆಗಳು ಹೆಚ್ಚಾಗುತ್ತಿವೆ. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿಯವರಿಗೆ ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡುವ ಪ್ಲಾನ್ ಇದೆ. ಹಾಗಾಗಿ ಕೊರೊನಾ ಆತಂಕ ಹುಟ್ಟಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಪಕ್ಷಗಳ ಪ್ರತಿಭಟನೆ ನಡೆದಾಗ ಮಾತ್ರ ಕೋವಿಡ್ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಕೋವಿಡ್ ಇದೆ ಅಂತ ರಾಹುಲ್ ಗಾಂಧಿಗೆ ಯಾತ್ರೆ ನಿಲ್ಲಿಸಲು ಹೇಳಿದ್ದಾರೆ. ಮೇಕೆದಾಟು ಸಮಯದಲ್ಲೂ ನಮಗೆ ಇದೇ ರೀತಿ ಆಗಿತ್ತು. ಆಗ ಕೇಸ್ ಕೂಡ ಹಾಕಿದ್ರು. ರಾಹುಲ್‌ ಗಾಂಧಿಗೆ ಜನರು ತೋರಿಸುತ್ತಿರುವ ಪ್ರೀತಿಗೆ ಹೀಗೆ ಮಾಡಲಾಗ್ತಿದೆ. ಕೋವಿಡ್ ನೆಪದಲ್ಲಿ ಎಲೆಕ್ಷನ್ ಮಾಡಿ ಅನ್ನೊ ಪ್ಲಾನ್ ಇದೆ ಅಂತ ಡಿಕೆಶಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೋವಿಡ್ ನೆಪದಲ್ಲಿ ಇಲೆಕ್ಷನ್ ಮಾಡಿ ಅಂತ ಹೇಳಲಾಗಿದೆಯಂತೆ‌. ಈ ಬಗ್ಗೆ ಪ್ರಿಪರೇಶನ್ ಮಾಡಿಕೊಳ್ಳಲು ಹೇಳಿದ್ದಾರಂತೆ. ಡಿಜೆ ಜೊತೆ ಮಾತನಾಡಿದ್ದಾರೆ ಅನ್ನೋ ಊಹಾಪೋಹದ ಸುದ್ದಿ ಕೇಳಿ ಬರ್ತಿದೆ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಓಮಿಕ್ರಾನ್ ಹೊಸ ತಳಿ: ಎರಡು ವಾರ ಕಾದು ನೋಡುವ ತಂತ್ರಕ್ಕೆ ಮುಂದಾದ ತಜ್ಞರು

ಸಚಿವ ಸೋಮಶೇಖರ್​ಗೆ ಕೋ ಆಪರೇಟಿವ್ ವಿಷಯ ಗೊತ್ತಿತ್ತು. ಅವರು ಒಳ್ಳೆ ಕೆಲಸ ಮಾಡ್ತಾರೆ ಅನ್ಕೊಂಡಿದ್ದೆ. ಆದ್ರೆ ಭ್ರಷ್ಟಾಚಾರ ನಡೀತಿದೆ. ಫ್ಯಾಕ್ಟರಿಗಳಿಗೆ, ಸುಗರ್ ಫ್ಯಾಕ್ಟರಿಗಳಿಗೆ ಅನುಕೂಲ ಮಾಡಿಕೊಡ್ತಿದಾರೆ. ಇದಕ್ಕೆ ಸೋಮಶೇಖರ್ ಕುಮ್ಮಕ್ಕು ಇದೆ. ಅಮೀತ್ ಶಾ ಭಾಗಿ ಆರೋಪವಿದೆ. ಇಂಥ ಕೆಲಸ ಮಾಡ್ತಾರೆ ಅಂತ ಅಂದುಕೊಂಡಿರ್ಲಿಲ್ಲ ಎಂದು ಡಿಕೆ ಶಿವಕುಮಾರ್ ಸಚಿವ ಸೋಮಶೇಖರ್​ ವಿರುದ್ಧ ಆರೋಪ ಮಾಡಿದ್ರು.

ಇನ್ನು ಇದೇ ವೇಳೆ ಡಿಕೆಶಿ, ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶಗಳಿವೆ. ಆದ್ರೆ ಸರ್ಕಾರ ಎಲ್ಲರಿಗೂ ಚಾಕಲೇಟ್ ಕೊಡ್ತಿದೆ. 2ಎ ಮೀಸಲಾತಿ ವಿಚಾರದ ಬಗ್ಗೆ ಪಾರ್ಟಿಲಿ ಚರ್ಚೆ ಮಾಡುತ್ತೇವೆ. ಆ ಸಮುದಾಯದವರು ಬಂದು ಭೇಟಿಯಾಗಿದ್ದಾರೆ. ಒಕ್ಕಲಿಗರು ಮೀಸಲಾತಿ ಕೇಳಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಲಿ. ಸಮಾಜದ ಹಿಂದುಳಿದ ವರ್ಗಗಳಿಗೆಲ್ಲಾ ಶೇರ್ ಸಿಗಬೇಕು. ಬೇಕು, ಬೇಡ ಅಂತ ಹೇಳಲ್ಲ. ಇಂದು ಪಂಚಮಸಾಲಿ ಸಮಾವೇಶ ಇದೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:47 pm, Thu, 22 December 22