ಚುನಾವಣೆ ಅಕ್ರಮ ಆರೋಪ: ಮತಗಟ್ಟೆಗಳಲ್ಲಿ ಸಿಸಿಕ್ಯಾಮರಾ ಹಾಕಬೇಕು- ಡಿಕೆ ಶಿವಕುಮಾರ್ ಹೇಳಿಕೆ

| Updated By: ganapathi bhat

Updated on: Nov 29, 2021 | 6:25 PM

ಮತದಾನ ವೇಳೆ ಮತಗಟ್ಟೆಗಳಲ್ಲಿ ಸಿಸಿಕ್ಯಾಮರಾ ಹಾಕಬೇಕು. ಹೆಚ್ಚಿನ ಪೊಲೀಸ್​ ಬಂದೋಬಸ್ತ್ ಮಾಡಬೇಕೆಂದು ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗೆ ನಾನು ದೂರು ನೀಡ್ತೇನೆ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಚುನಾವಣೆ ಅಕ್ರಮ ಆರೋಪ: ಮತಗಟ್ಟೆಗಳಲ್ಲಿ ಸಿಸಿಕ್ಯಾಮರಾ ಹಾಕಬೇಕು- ಡಿಕೆ ಶಿವಕುಮಾರ್ ಹೇಳಿಕೆ
ಡಿ.ಕೆ.ಶಿವಕುಮಾರ್
Follow us on

ಬೆಳಗಾವಿ: ಇಲ್ಲಿನ ಗೋಕಾಕ್, ರಾಯಬಾಗದಲ್ಲಿ ಚುನಾವಣೆ ಅಕ್ರಮ ಆರೋಪಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಮತದಾರರ ಚೀಟಿ ಪಡೆದು ಬೇರೆಯವರಿಗೆ ಮತಚಲಾವಣೆ ಮಾಡಲಾಗಿದೆ. ಚೀಟಿ ಪಡೆದು ಬೇರೆಯವರಿಗೆ ಮತ ಹಾಕೋದು ನಡೆದುಕೊಂಡು ಬಂದಿದೆ. ಹೀಗಾಗಿ, ಮತದಾನ ವೇಳೆ ಮತಗಟ್ಟೆಗಳಲ್ಲಿ ಸಿಸಿಕ್ಯಾಮರಾ ಹಾಕಬೇಕು. ಹೆಚ್ಚಿನ ಪೊಲೀಸ್​ ಬಂದೋಬಸ್ತ್ ಮಾಡಬೇಕೆಂದು ಶಿವಕುಮಾರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗೆ ನಾನು ದೂರು ನೀಡ್ತೇನೆ. ಎಲ್ಲಾ ಕಡೆಗಳಲ್ಲಿ ಸಿಸಿಟಿವಿ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ಆಗ್ರಹ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಚಾರವಾಗಿ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲಿಂದ ಅವರ ಪಕ್ಷದಲ್ಲಿ ಅಧಿಕಾರ ನಡೆಸುವುದಕ್ಕೆ ಬರಲ್ಲ. ಬಿಜೆಪಿಯಲ್ಲಿ ಅಧಿಕಾರ ದಾಹ ಒಬ್ಬರಿಗಿಂತ ಒಬ್ಬರಿಗೆ ಹೆಚ್ಚಿದೆ. ಆಡಳಿತ ನಡೆಸುವುದು ಗೊತ್ತಿಲ್ಲ, ಜನರ ನೋವು ಗೊತ್ತಿಲ್ಲ ಎಂದು ವಿಜಯಪುರದಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಎಪಿಎಂಸಿ ಕಾಯ್ದೆ ವಿಚಾರವಾಗಿ ಪ್ರಧಾನಿ ಬಗ್ಗೆ ಶಿವಕುಮಾರ್ ಮಾತನಾಡಿದ್ದಾರೆ. ಪ್ರಧಾನಿ ಕ್ಷಮಾಪಣೆ, ಮಾಫಿ ಮಾಡಿರಿ ಎಂದು ಕೇಳಿದ್ದರಲ್ಲ. ಹಾಗೆ ಕರ್ನಾಟಕದಲ್ಲೂ ಮಂತ್ರಿಗಳೇ ನಿಂತುಕೊಂಡಿದ್ದಾರೆ. ಇನ್ನೂ ಬೊಮ್ಮಾಯಿ ಯಾಕೆ ಇಟ್ಕೊಂಡಿದ್ದಾರೋ ಗೊತ್ತಿಲ್ಲ. ಸಚಿವರ ಬಗ್ಗೆ ವಿಶ್ವಾಸ ಇಲ್ಲದೆ ಮೇಲೆ ಅವರೂ ಇರಬಾರದು. ಯಡಿಯೂರಪ್ಪ ಮೇಲೆ ವಿಶ್ವಾಸವಿಲ್ಲ ಎಂದಾಗ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರು. ಅದೇ ರೀತಿ ಬೊಮ್ಮಾಯಿ ಮೇಲೂ ವಿಶ್ವಾಸವಿಲ್ಲ ಅಂದ್ಮೇಲೆ, ಬೊಮ್ಮಾಯಿ ರಾಜೀನಾಮೆ ಕೊಟ್ಟು, ಅವರ ಕೆಲಸ ನೋಡ್ಬೇಕು ಎಂದು ವಿಜಯಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.

ಮುಂದುವರಿದ ಜಿ.ಟಿ. ದೇವೇಗೌಡ, ಸಿದ್ದರಾಮಯ್ಯ ಪ್ರೀತಿ
ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಪ್ರೀತಿ ಮುಂದುವರಿದಿದೆ. ಜೆಡಿಎಸ್ ಶಾಸಕ ಹಾಗೂ ಕಾಂಗ್ರೆಸ್ ನಾಯಕ ನಡುವಿನ ಮಾತುಕತೆ ಮುಂದುವರಿದಿದೆ. ಮೈಸೂರು ತಾಲೂಕಿನ ದಡದಕಲ್ಲಹಳ್ಳಿಯಲ್ಲಿ ಕೊನೆ ಕಾರ್ತಿಕ ಸೋಮವಾರ ಹಿನ್ನೆಲೆ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಜಿ.ಟಿ. ದೇವೇಗೌಡ ಭಾಗಿ ಆಗಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ದೇವರ ಪೂಜೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ, ಜಿ.ಟಿ. ದೇವೇಗೌಡ ಭಾಗಿ ಆಗಿದ್ದಾರೆ. ಪ್ರತಿ ವರ್ಷ ಶಾಸಕ ಜಿ.ಟಿ. ದೇವೇಗೌಡ ನೇತೃತ್ವದಲ್ಲಿ ಇಲ್ಲಿ ಪೂಜೆ ನಡೆಸಲಾಗುತ್ತದೆ. ಈ ಬಾರಿ ಪೂಜೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ ಆಗಿದ್ದಾರೆ.

ಇದನ್ನೂ ಓದಿ: Siddaramaiah: ಜಿಟಿ ದೇವೇಗೌಡ ನನ್ನನ್ನೇ ಚುನಾವಣೆಯಲ್ಲಿ ಸೋಲಿಸಿದ್ದ ಗಿರಾಕಿ; ಜಿಟಿಡಿ ಬಗ್ಗೆ ಸಿದ್ದರಾಮಯ್ಯ ಗುಣಗಾನ

ಇದನ್ನೂ ಓದಿ: ಲಂಚ ತೆಗೆದುಕೊಳ್ಳುವ ಇಲಾಖೆಯಿಂದಲೇ ತನಿಖೆ ಮಾಡಿಸೋದಾ? ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ- ಸಿದ್ದರಾಮಯ್ಯ ಆಗ್ರಹ

Published On - 6:15 pm, Mon, 29 November 21