AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಶ್ವಾನಗಳ ಭರ್ಜರಿ ಪ್ರದರ್ಶನ; ದೇಶದ ನಾನಾ ರಾಜ್ಯದಿಂದ ಬಂದ ಶ್ವಾನಗಳು

ಬೆಳಗಾವಿ ನಗರದ ಶಗುನ್ ಗಾರ್ಡನ್​ನಲ್ಲಿ ನಡೆಯಿತು 1000ಕ್ಕೂ ಅಧಿಕ ಶ್ವಾನಗಳ ಪ್ರದರ್ಶನ

ಬೆಳಗಾವಿಯಲ್ಲಿ ಶ್ವಾನಗಳ ಭರ್ಜರಿ ಪ್ರದರ್ಶನ; ದೇಶದ ನಾನಾ ರಾಜ್ಯದಿಂದ ಬಂದ ಶ್ವಾನಗಳು
ಶ್ವಾನಗಳ ಪ್ರದರ್ಶನ
TV9 Web
| Updated By: ವಿವೇಕ ಬಿರಾದಾರ|

Updated on:Nov 01, 2022 | 3:49 PM

Share

ಭಾನುವಾರ (ಅ.30) ವಿಕೇಂಡ್ ಇದ್ದ ಹಿನ್ನೆಲೆ ಕುಂದಾನಗರಿಯಲ್ಲಿ ಶ್ವಾನಗಳ ಭರ್ಜರಿ ಪ್ರದರ್ಶನ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಈ ಶ್ವಾನಗಳ ಪ್ರದರ್ಶನಕ್ಕೆ ದೇಶದ ನಾನಾ ರಾಜ್ಯಗಳಿಂದ ಶ್ವಾನಗಳು ಬಂದಿರುತ್ತವೆ. ಎರಡು ದಿನದಲ್ಲಿ ಸಾವಿರಕ್ಕೂ ಅಧಿಕ ಶ್ವಾನಗಳು, 43 ವಿವಿಧ ತಳಿಗಳು ಪ್ರದರ್ಶನದಲ್ಲಿ ಭಾಗಿಯಾಗಿ ಟ್ರೋಫಿ ಮುಡಿಗೇರಿಸಿಕೊಂಡಿವೆ. ಅಷ್ಟಕ್ಕೂ ಯಾವೆಲ್ಲಾ ತಳಿಗಳು ಭಾಗಹಿಸಿದ್ದವೂ? ಹೇಗೆ ಶ್ವಾಗಳನ್ನ ಇಲ್ಲಿ ಆಯ್ಕೆ ಮಾಡಿ ಟ್ರೋಫಿ ನೀಡಲಾಯಿತು? ಇಲ್ಲಿದೆ ಮಾಹಿತಿ

ಒಂದಕ್ಕಿಂತ ಒಂದು ಸಿಂಗಾರಗೊಂಡು ಮುದ್ದಾಗಿ ಕಾಣುತ್ತಿರುವ ಶ್ವಾನಗಳು, ತಮ್ಮ ವೈಯಾರದ ನಡಿಗೆಯಿಂದಲೇ ನೋಡುಗರ ಗಮನ ಸೆಳೆದ ವಿವಿಧ ತಳಿಯ ನಾಯಿಗಳು. ಗೆದ್ದ ಶ್ವಾನಕ್ಕೆ ಟ್ರೋಫಿ, ವಿಕೇಂಡ್​ನಲ್ಲಿ ಭರ್ಜರಿ ಶ್ವಾನ ಪ್ರದರ್ಶನ ನೋಡಿ ಎಂಜಾಯ್ ಜನರು ಮಾಡಿದರು. ಈ ಶ್ವಾನ ಪ್ರದರ್ಶನ ನಡೆದಿದ್ದು, ಬೆಳಗಾವಿ ನಗರದ ಶಗುನ್ ಗಾರ್ಡನ್​ನಲ್ಲಿ. ಎರಡು ದಿನಗಳ ಕಾಲ ನಡೆದ ಈ ಶ್ವಾನ ಪ್ರದರ್ಶನದಲ್ಲಿ ಬರೋಬ್ಬರಿ 1000ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗುವುದರ ಮೂಲಕ ನೋಡುಗರಣ್ಣ ಸೆಳೆದಿವೆ.

ರವಿವಾರ (ಅ.30) ರಂದು 367ಕ್ಕೂ ಅಧಿಕ ಶ್ವಾನಗಳು 43ವಿವಿಧ ಬಗೆಯ ತಳಿಗಳು ಭಾಗಿಯಾಗಿದ್ದವು. ಮುಖ್ಯವಾಗಿ ನಮ್ಮದೇ ರಾಜ್ಯದ ಪ್ರಸಿದ್ಧ ಮುದೋಳ ನಾಯಿ ಸೇರಿದಂತೆ ಜರ್ಮನ್ ಶಫರ್ಡ್, ರಾಟ್ ವೇಲರ್, ಡಾಬರ್ ಮ್ಯಾನ್, ಇಂಗ್ಲಿಷ್ ಕ್ವಾಕರ್, ಗೋಲ್ಡನ್ ರಿಟ್ರೀವರ್, ರಾಜಪಾಳಿ, ಕನ್ನಿ, ಕಾರ್ವಾನಾ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಇನ್ನೂ ಪ್ರತಿಯೊಂದು ಶ್ವಾನವನ್ನ ವಿಭಿನ್ನವಾಗಿ ರೆಡಿ ಮಾಡಿಕೊಂಡು ಬರಲಾಗಿತ್ತು, ಸ್ಪರ್ಧೆಗೂ ತಯಾರಿ ನಡೆಸಿ ಮತ್ತೆ ಅವುಗಳಿಗೆ ಮೇಕಪ್ ಮಾಡಿ ಸಿದ್ದಪಡಿಸುವ ದೃಶ್ಯ ಕೂಡ ಕಂಡು ಬಂತು.

ಎರಡು ದಿನಗಳ ಕಾಲ ನಡೆದ ಈ ಶ್ವಾನ ಪ್ರದರ್ಶನದಲ್ಲಿ ಶ್ವಾನಗಳ ನಡುವೆ ಸ್ಪರ್ಧೆ ಕೂಡ ಏರ್ಪಟ್ಟಿತ್ತು. ಗೆದ್ದ ಶ್ವಾನಕ್ಕೆ ಟ್ರೋಫಿ ನೀಡುವುದರ ಜತೆಗೆ ಪಾಯಿಂಟ್ಸ್ ಕೂಡ ನೀಡಲಾಯಿತು. ಇನ್ನೂ ಸ್ಪರ್ಧೆಯಲ್ಲಿ ಭಾಗಿಯಾದ ಶ್ವಾನಗಳ ಓಟ, ನಡಿಗೆ, ಅವುಗಳ ಹಲ್ಲುಗಳ ಸ್ವಚ್ಛತೆ, ಆರೋಗ್ಯ ಮತ್ತು ಎಷ್ಟು ಸ್ಟ್ರಾಂಗ್, ಯಾವ ರೀತಿ ಅವುಗಳಿಗೆ ಆಹಾರ ನೀಡಲಾಗುತ್ತಿದೆ ಅನ್ನೊದು ಸೇರಿದಂತೆ ಹಲವು ಅಂಶಗಳನ್ನ ಗಮನಿಸಿ ಆಯ್ಕೆ ಮಾಡಲಾಯಿತು. ಈ ಶ್ವಾನ ಪ್ರದರ್ಶನಕ್ಕೆ ಬೆಳಗಾವಿ, ಬೆಂಗಳೂರು, ದೆಹಲಿ, ಮುಂಬೈ, ಕೇರಳ, ತಮಿಳುನಾಡು, ಗೋವಾ, ಆಂದ್ರಪ್ರದೇಶ, ಪಂಜಾಬ್, ಹರಿಯಾಣಾ, ಔರಾಂಗಾಬಾದ್, ಛತ್ತಿಸಗಡ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಶ್ವಾನಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದವು.

ಈ ಸ್ಪರ್ಧೆಯಲ್ಲಿ ಗೆದ್ದ ಶ್ವಾನಗಳಿಗೆ ಪಾಯಿಂಟ್ಸ್ ಸಿಕ್ಕು ವರ್ಷದ ಉತ್ತಮ ಶ್ವಾನವಾಗಿ ಹೊರ ಹೊಮ್ಮುತ್ತೆ ಇದರಿಂದ ದೇಶದ ಯಾವುದೇ ಮೂಲೆಯಲ್ಲಿ ಶ್ವಾನ ಪ್ರದರ್ಶನ ನಡೆದರೂ, ಕೆಲವರು ಹಾಜರಾಗಿ ತಮ್ಮ ಶ್ವಾನವನ್ನ ವರ್ಷದ ಶ್ವಾನವಾಗಿ ಮಾಡಲು ಪ್ರಯತ್ನ ಮಾಡುತ್ತಾರೆ.

ಶ್ವಾನಪ್ರಿಯರು ವಿವಿಧ ಬಗೆಯ ಹತ್ತು ಹಲವು ಶ್ವಾನಗಳನ್ನ ನೋಡಿ ಖುಷಿ ಪಟ್ಟರೇ, ಶ್ವಾನ ಪ್ರದರ್ಶನದಲ್ಲಿ ತಾವು ಸಾಕಿದ ನಾಯಿಗಳ ಸಮೇತ ಆಗಮಿಸಿ ಭಾಗವಿಸಿ ಸ್ಪರ್ಧೆಯಲ್ಲಿ ವಿಜೇತರಾದರೇ, ಇನ್ನೂ ಕೆಲವರು ಮುಂದೆ ಹೇಗೆಲ್ಲಾ ಶ್ವಾನಗಳನ್ನ ತಯಾರಿ ಮಾಡಬೇಕು ಅನ್ನೋದನ್ನ ಕಲಿತು ವಾಪಾಸ್ ಆಗಿದ್ದಾರೆ.

ಸಹದೇವ ಮಾನೆ ಟಿವಿ9 ಬೆಳಗಾವಿ

Published On - 3:49 pm, Tue, 1 November 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ