ಕರ್ನಾಟಕದ ಸಂಪತ್ತು, ತೆರಿಗೆ ಹಣವನ್ನು ಲೂಟಿ ಮಾಡಿದ ಅಮಿತ್​ ಶಾ: ಕುಮಾರಸ್ವಾಮಿ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Feb 11, 2023 | 10:31 PM

ಕರ್ನಾಟಕದ ಸಂಪತ್ತು, ತೆರಿಗೆ ಹಣವನ್ನು ಲೂಟಿ ಮಾಡಿ ಕೊಂಡೊಯ್ದಿದ್ದೀರಿ. ಅಭಿವೃದ್ಧಿ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಮಾಡಿ ಮಧ್ಯಪ್ರದೇಶಲ್ಲಿ ಸುರಿದಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ಹರಿಹಾಯ್ದಿದ್ದಾರೆ.

ಕರ್ನಾಟಕದ ಸಂಪತ್ತು, ತೆರಿಗೆ ಹಣವನ್ನು ಲೂಟಿ ಮಾಡಿದ ಅಮಿತ್​ ಶಾ: ಕುಮಾರಸ್ವಾಮಿ ವಾಗ್ದಾಳಿ
ಹೆಚ್ ಡಿ ಕುಮಾರಸ್ವಾಮಿ
Follow us on

ಬೆಳಗಾವಿ: ಕರ್ನಾಟಕದ (Karnataka) ಸಂಪತ್ತು, ತೆರಿಗೆ ಹಣವನ್ನು ಲೂಟಿ ಮಾಡಿ ಕೊಂಡೊಯ್ದಿದ್ದೀರಿ. ಅಭಿವೃದ್ಧಿ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಮಾಡಿ ಮಧ್ಯಪ್ರದೇಶಲ್ಲಿ (Madhyapradesh) ಸುರಿದಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ (HD Kumaraswamy), ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ವಿರುದ್ಧ ಹರಿಹಾಯ್ದಿದ್ದಾರೆ. ಇಂದು (ಫೆ.11) ಚುನಾವಣಾ ಚಾಣಕ್ಯ ಅಮಿತ್ ಶಾ ಮಂಗಳೂರಿಗೆ (Managaluru) ಭೇಟಿ ನೀಡಿದ್ದ ವೇಳೆ, ಸಮಾವೇಶವೊಂದರಲ್ಲಿ ಜೆಡಿಎಸ್ (JDS)​ಗೆ ಮತ ಹಾಕಿದರೆ ಕಾಂಗ್ರೆಸ್​ (Congress) ಗೆ ಮತ ಹಾಕಿದ ಹಾಗೆ ಎಂದು ಹೇಳಿದ್ದರು.

ಈ ಕುರಿತು ಬೆಳಗಾವಿ (Belagavi) ಜಿಲ್ಲೆಯ ರಾಯಬಾಗದಲ್ಲಿ (Raybag) ಇಂದು (ಫೆ.13) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಕಾಂಗ್ರೆಸ್​ನವರು ಹೇಳುತ್ತಾರೆ ಜೆಡಿಎಸ್​ಗೆ ಮತ ಹಾಕಿದರೇ ಬಿಜೆಪಿಗೆ ಅನುಕೂಲ, ಬಿಜೆಪಿಯವರು ಹೇಳುತ್ತಾರೆ ಜೆಡಿಎಸ್​ಗೆ ಮತ ಹಾಕಿದರೆ ಕಾಂಗ್ರೆಸ್​ಗೆ ಲಾಭ ಅಂತ. ಕಾಂಗ್ರೆಸ್​, ಬಿಜೆಪಿ ತೆಗೆದು ಜೆಡಿಎಸ್​ಗೆ ಮತ ಹಾಕಿದರೆ ಆಯ್ತಲಾ. ಜೆಡಿಎಸ್​ಗೆ ಮತ ಹಾಕಿದರೆ ಕನ್ನಡನಾಡನ್ನು ರಕ್ಷಿಸಲು ಇರುತ್ತಾರೆ ಎಂದು ಹೇಳಿದರು.

2023ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ  ಜನ ಇತಿಶ್ರೀ ಹಾಡುತ್ತಾರೆ

ರಾಜ್ಯ ಬಿಜೆಪಿ ಸರ್ಕಾರ ಜನರಿಗೆ ಏನೇನು ಒಳ್ಳೆಯದು ಮಾಡಿದೆ. 8 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಏನು ಕೊಟ್ಟಿದೆ. ಅಮಿತ್​ ಶಾ ಅವರೇ ಕರ್ನಾಟಕಕ್ಕೆ ಯಾವ ವಿಶೇಷ ಯೋಜನೆ ನೀಡಿದ್ದೀರಿ? ನೆರೆಯಿಂದ ಮನೆಗಳು ಬಿದ್ದಾಗ ಹೆಚ್ಚಿನ ನೆರವು ನೀಡಿದ್ದೀರಾ ಹೇಳಿ ?ಯಾವುದಾದರೂ ನೀರಾವರಿ ಸೌಲಭ್ಯಗಳಿಗೆ ಒಳ್ಳೆಯದು ಮಾಡಿದೀರಾ? ಎನೂ ಕೊಟ್ಟಿದೀರಿ ಕರ್ನಾಟಕಕ್ಕೆ ಬರೀ ಲೂಟಿ ಮಾಡಿದ್ರಿ. ಕರ್ನಾಟಕದಲ್ಲಿ ಈ ಬಾರಿ 2 ರಾಷ್ಟ್ರೀಯ ಪಕ್ಷಗಳು ನೆಲಕಚ್ಚುವುದರಲ್ಲಿ ಯಾವುದೇ ಅನುಮಾನ ಇಲ್ಲ. 2023ರಲ್ಲಿ ಕರ್ನಾಟಕದಲ್ಲಿ ಇದಕ್ಕೆ ಜನ ಇತಿಶ್ರೀ ಹಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲುವುದೇ ಕಷ್ಟವಿದೆ

ಜೆಡಿಎಸ್​ 123 ಸ್ಥಾನ ಗೆಲ್ಲಲ್ಲ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿರುದ್ಧ ಹರಿಹಾಯ್ದ ಅವರು ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲುವುದೇ ಕಷ್ಟವಿದೆ. ಮುಂದಿನ ಚುನಾವಣೆಯಲ್ಲಿ 120-130 ಸ್ಥಾನ ಗೆಲ್ಲುವ ಗುರಿಯಿದೆ. 1 ವರ್ಷದಿಂದ ಸಂಘಟನೆ, ಕಾರ್ಯಕರ್ತರ ಶ್ರಮದಿಂದ ಕೆಲಸ ಮಾಡಿದ್ದೇವೆ. ಜೆಡಿಎಸ್​ ಕಾರ್ಯಕರ್ತರ ಜೊತೆ ಶ್ರಮದಿಂದ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಸ್ಪರ್ಧೆಗೆ ಕ್ಷೇತ್ರವಿಲ್ಲದೆ ಇನ್ನೂ ತಡಕಾಡುತ್ತಿದ್ದಾರೆ. ಎಲ್ಲಿಂದ ಸ್ಪರ್ಧಿಸಬೇಕು ಅನ್ನೋದು ಸಿದ್ದರಾಮಯ್ಯಗೆ ಗ್ಯಾರಂಟಿ ಇಲ್ಲ. ಇಂತಹ ಸ್ಥಿತಿಯಲ್ಲಿರುವ ಸಿದ್ದರಾಮಯ್ಯಗೆ ಜೆಡಿಎಸ್​ ಬಗ್ಗೆ ಯಾಕೆ ಚಿಂತೆ ಎಂದು ವಾಗ್ದಾಳಿ ಮಾಡಿದರು.

60-65 ಹೆಸರು ರೆಡಿ ಮಾಡ್ತಿದ್ದೇವೆ ಅದರ ಜತೆಗೆ ಹಾಸನದ್ದೂ ಟಿಕೇಟ್​ ಘೋಷಣೆ ಮಾಡ್ತೇವಿ

ಹಾಸನ ಟಿಕೆಟ್ ಗೊಂದಲ ವಿಚಾರವಾಗಿ ಮಾತನಾಡಿದ ಅವರು ನಾಳೆ ಯಾವುದೇ ರೀತಿಯ ಟಿಕೆಟ್ ಘೋಷಣೆ ಆಗುತ್ತಿಲ್ಲ. ನಾಳೆ ಅರಸೀಕೆರೆ ಕಾರ್ಯಕ್ರಮಕ್ಕೆ ಹೋಗ್ತಾ ಇದೀನಿ ಚರ್ಚೆ ಮಾಡುತ್ತೇನೆ. ಎರಡನೇ ಹಂತದ ಪಟ್ಟಿ ಬಿಡುಗಡೆ ಮಾಡಬೇಕು. ಈಗಾಗಲೇ 60-65 ಹೆಸರು ರೆಡಿ ಮಾಡುತ್ತಿದ್ದೇವೆ ಅದರ ಜೊತೆಗೆ ಹಾಸನದ್ದೂ ಘೋಷಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.