ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ 24 ಗಂಟೆ ವಿದ್ಯುತ್ ವ್ಯವಸ್ಥೆ, ದೇವದಾಸಿಯರಿಗೆ ಮನೆ ನಿರ್ಮಾಣ: ಕುಮಾರಸ್ವಾಮಿ ಆಶ್ವಾಸನೆ
ರೈತರಿಗೆ 24 ಗಂಟೆಗಳ ಕಾಲವೂ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡುತ್ತೇವೆ. ತರಕಾರಿ ಬೆಳೆಯುವ ರೈತರಿಗೆ ಗೋಡೌನ್ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ H.D.ಕುಮಾರಸ್ವಾಮಿ ಹೇಳಿದರು.
ಬೆಳಗಾವಿ: ರೈತರಿಗೆ 24 ಗಂಟೆಗಳ ಕಾಲವೂ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡುತ್ತೇವೆ. 1 ಎಕರೆಗೆ 10,000 ರೂಪಾಯಿ ಒದಗಿಸುವ ವ್ಯವಸ್ಥೆ ಮಾಡುತ್ತೇನೆ. ತರಕಾರಿ ಬೆಳೆಯುವ ರೈತರಿಗೆ ಗೋಡೌನ್ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ H.D.ಕುಮಾರಸ್ವಾಮಿ (H.D. Kumaraswamy) ಹೇಳಿದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ಪಂಚರತ್ನ ಯಾತ್ರೆಯಲ್ಲಿ ಅವರು ಮಾತನಾಡಿ, ರಾಜ್ಯದ ಎಲ್ಲಾ ಕಡೆ ಪಂಚರತ್ನ ಯಾತ್ರೆ ಮಾಡಿದ್ದೇನೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯವೇ ಇಲ್ಲ. ಸರ್ಕಾರಿ ಶಾಲೆಗಳನ್ನ ಉನ್ನತ ಮಟ್ಟಕ್ಕೆ ಒಯ್ಯುವ ಪ್ರಯತ್ನ ಮಾಡ್ತೇನೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 30 ಬೆಡ್ಗಳುಳ್ಳ ವ್ಯವಸ್ಥೆ ಮಾಡ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ದೇವದಾಸಿಯರಿಗೆ ಮನೆ ನಿರ್ಮಾಣ, ವೃದ್ಧರಿಗೆ 5,000 ರೂ. ನೀಡುವುದಾಗಿ ಕುಮಾರಸ್ವಾಮಿ ಆಶ್ವಾಸನೆ ನೀಡಿದರು.
ಇದನ್ನೂ ಓದಿ: ಕೋಮುವಾದಿ ಸರ್ಕಾರ ಅಧಿಕಾರದಲ್ಲಿರಬಾರದೆಂದು ಕುಮಾರಸ್ವಾಮಿಗೆ ಸಿಎಂ ಸ್ಥಾನ ಕೊಟ್ಟೆವು: ಸಿದ್ಧರಾಮಯ್ಯ
ಜೆಡಿಎಸ್ಗೆ ಅವಕಾಶ ಕೊಟ್ಟರೆ ಸಾಲ ಮನ್ನಾ
ಮುಂದಿನ ಬಾರಿ ಮತ್ತೆ ನನಗೆ ಅವಕಾಶ ಕೊಟ್ಟರೆ ಸಂಪೂರ್ಣವಾಗಿ ಸಾಲ ಮನ್ನಾ ಮಾಡುತ್ತೇನೆ. ದೇವೆಗೌಡರನ್ನ ಹಾಗೂ ನನ್ನ ಅರ್ಧದಲ್ಲಿ ಕೈ ಬಿಟ್ಟಿದ್ದಾರೆ. 1994ರಲ್ಲಿ ಬೆಳಗಾವಿ 18 ಮತಕ್ಷೇತ್ರದಲ್ಲಿ 12 ಸ್ಥಾನ ಜೆಡಿಎಸ್ ಪಡೆದಿತ್ತು. ಕರಗಾಂವ, ಬೆಂಡವಾಡ, ಹನುಮಾನ ಏತ ನೀರಾವರಿ ಯೋಜನೆಗೆ ಸ್ವತಃ ನಾನೇ ಶಂಕು ಸ್ಥಾಪನೆ ಮಾಡಿ ಚಾಲನೆ ನೀಡುತ್ತೇನೆ. ನ್ಯಾಯ ಬೆಲೆ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ. ಮನೆ ಮನೆಗೆ ರೇಷನ್ ಕಳಿಸುವ ವ್ಯವಸ್ಥೆ ನಾನು ಮಾಡುತ್ತೇನೆ ಎಂದರು.
ಇದನ್ನೂ ಓದಿ: Hassan Politics: ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯ ಅಲ್ಲ; ಹೆಚ್ಡಿ ಕುಮಾರಸ್ವಾಮಿ
ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ
ನೀವು ಮನಸ್ಸು ಮಾಡಿದ್ದರೆ ಹಳೆಯ ಜೆಡಿಎಸ್ನ್ನು ಮತ್ತೆ ಇಲ್ಲಿ ಗೆಲ್ಲಿಸಬಹುದು. ಪ್ರತಾಪ್‌ರಾವ್ ಪಾಟೀಲ್ ಅವರ ನೇತೃತ್ವದಲ್ಲಿ ಚುನಾವಣೆ ನಡೆಯ ಬೇಕಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ, ಕುಡಚಿ, ರಾಯಬಾಗ ತಾಲೂಕಿನಲ್ಲಿ ಪ್ರತಾಪ್‌ರಾವ್ ಅವರಿಗೆ ಶಕ್ತಿ ತುಂಬಿ. ಅಲ್ಲಿರುವ ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ನನ್ನ ಮುಂದಿನ ನಡೆ ಕ್ಷೇತ್ರದ ಮತದಾರರು ತೀರ್ಮಾನಿಸುತ್ತಾರೆ: ಶಿವಲಿಂಗೇಗೌಡ
ಯಾವ ಪಕ್ಷಕ್ಕೆ ಸೇರಬೇಕು ಅಥವಾ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೇ ಎಂಬುದು ಫೆ.12ರಂದು ನಡೆಯುವ ಸಮಾವೇಶದ ನಂತರ ನಿರ್ಧಾರ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಗೊಂದಲದಲ್ಲಿ ಇಲ್ಲ. ಫೆ.12ರಂದು ಅರಸೀಕೆರೆಯಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿ ಏನು ತೀರ್ಮಾನ ಆಗುತ್ತದೆಯೋ ಅದರ ಆಧಾರದ ಮೇಲೆ ನಾನು ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ಗೆ ಹೋಗಿ ಅಂತಾ ನನ್ನ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಕ್ಷೇತ್ರದ ಜನರು ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹೇಳಿದರೆ ಅದಕ್ಕೂ ಸಿದ್ಧ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.