Janardhana Reddy: ನಾನು ಕಿಂಗ್ ಆಗಲು ಬಯಸಲ್ಲ, ಕಿಂಗ್ ಮೇಕರ್ ಆಗುತ್ತೇನೆ: ಜನಾರ್ದನ ರೆಡ್ಡಿ ಗುಡುಗು
ಉತ್ತರ ಕರ್ನಾಟಕ ಭಾಗದಲ್ಲಿ 150 ಸೀಟ್ ಗೆಲುತ್ತೇವೆ. ಇದಕ್ಕಾಗಿ ನಾನ ಹೋರಾಟ ಮಾಡುದ್ದೇನೆ. ನಾನು ಕಿಂಗ್ ಆಗಲು ಬಯಸಲ್ಲ, ಕಿಂಗ್ ಮೇಕರ್ ಆಗುತ್ತಾನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನ ರೆಡ್ಡಿ ಹೇಳಿದರು.
ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ 150 ಸೀಟ್ ಗೆಲುತ್ತೇವೆ. ಇದಕ್ಕಾಗಿ ನಾನ ಹೋರಾಟ ಮಾಡುದ್ದೇನೆ. ನಾನು ಕಿಂಗ್ ಆಗಲು ಬಯಸಲ್ಲ, ಕಿಂಗ್ ಮೇಕರ್ ಆಗುತ್ತಾನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನ ರೆಡ್ಡಿ (Janardhana Reddy) ಹೇಳಿದರು. ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಅವರು ಮಾತನಾಡಿ, ಒಂದು ವಾರದಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಬಹಳ ಅದ್ಭುತವಾಗಿದೆ. ನಾನು ಯಾರಿಗೂ ಬನ್ನಿ ಅಂತಾ ಕರೆಯುತ್ತಿಲ್ಲ. ಜನರೇ ಸ್ವಯಂಪ್ರೇರಿತವಾಗಿ ಬರ್ತಾಯಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಗೆಲ್ಲುವ ಕ್ಷೇತ್ರಗಳು ಈಗಾಗಲೇ ಕಾಣಿಸುತ್ತಿವೆ. ಆದಷ್ಟು ಬೇಗ ಯಾವ ಕ್ಷೇತ್ರಗಳು ಅನ್ನೋದನ್ನ ಹೇಳುತ್ತೇನೆ. ಜಿಲ್ಲೆಯಲ್ಲಿ ಒಳ್ಳೆ ವಾತಾವರಣ ಇದೆ. ನಾಲ್ಕು ಕ್ಷೇತ್ರಗಳಿಂದ ಸಾಕಷ್ಟು ಜನ ಬಂದಿದ್ದಾರೆ. ಸ್ಟಡಿ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಈ ಭಾಗದ ಅಭಿವೃದ್ಧಿಗೆ ನಮ್ಮ ಪಕ್ಷದ ರೋಲ್ ಪ್ರಬಲ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಇರುವ ಇತಿಮಿತಿಗಳಲ್ಲಿ ಕಡಿಮೆ ಕಾಲಾವಧಿಯಲ್ಲಿ ಈ ಭಾಗದ ಅಭಿವೃದ್ಧಿಗೆ ಅನುಕೂಲ ಆಗುವಷ್ಟು ಸೀಟ್ ಗೆಲ್ತೇವಿ. 130ಸೀಟ್ ಹೇಲ್ತೆವಿ ಅಂತಾ ಹೇಳ್ತಿದ್ದಾರೆ ಅದು ಆಗದೇ ಇರುವುದು. ನಾನು ಹೋರಾಟ ಮಾಡ್ತಿದೀನಿ ಮೂರು ತಿಂಗಳಲ್ಲಿ ರಿಸಲ್ಟ್ ಬರುತ್ತೆ. ಈ ಭಾಗದ ಅಭಿವೃದ್ಧಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರೋಲ್ ಪ್ರಬಲವಾಗಿರುತ್ತೆ ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ: ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ ಸಂಸದ ದೇವೇಂದ್ರಪ್ಪ
ನಾನು ಯಾರನ್ನೂ ಆಹ್ವಾನ ಮಾಡಿಲ್ಲ ಎಂದ ಜನಾರ್ದನ ರೆಡ್ಡಿ
ಬಿಜೆಪಿ ಬಂಡಾಯ ಶಾಸಕರು ಮುಂದೆ ಪಕ್ಷಕ್ಕೆ ಬಂದ್ರೇ ಆಹ್ವಾನ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವೊಬ್ಬರನ್ನೂ ನಾನು ಸಂಪರ್ಕ ಮಾಡಿಲ್ಲ, ಬಂಡಾಯ ಅಭ್ಯರ್ಥಿಗಳು ಬರುವಿಕೆಗೆ ಕಾಯ್ತಿಲ್ಲ. ನಾನು ಯಾರನ್ನೂ ಆಹ್ವಾನ ಮಾಡಿಲ್ಲ. ಯಡಿಯೂರಪ್ಪರನ್ನ ಪಕ್ಷಕ್ಕೆ ಆಹ್ವಾನ ಮಾಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಡಿಯೂರಪ್ಪ ಅವರು ಅತ್ಯಂತ ಹಿರಿಯ ನಾಯಕರು. ಅವರಿಗೆ ಏನೂ ಬೇಕು ಸಿಕ್ಕಿದೆ.
ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅವರ ಬಗ್ಗೆ ಪ್ರತ್ಯೇಕವಾಗಿ ಗೌರವ ಇದೆ, ಅದನ್ನ ರಾಜಕೀಯವಾಗಿ ಉಪಯೋಗಿಸುವ ಪ್ರಯತ್ನ ಮಾಡಿಲ್ಲ. ಒಂದು ವಾರದ ಒಳಗಾಗಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಆಗುತ್ತೆ. ಬಿಜೆಪಿ ಪಕ್ಷಕ್ಕೆ ಹೊಡೆತ ಅಂದ್ರೂ, ಇಂದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಅಂತಿದ್ದಾರೆ. ಯಾರಿಗೂ ಹೊಡೆತ ಕೊಡಬೇಕು ಅನ್ನೋದು ಯೋಚನೆ ಇಲ್ಲಾ ಎಂದು ತಿಳಿಸಿದರು.
ಇದನ್ನೂ ಓದಿ: ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಸಜ್ಜಾದ ಜನಾರ್ದನ ರೆಡ್ಡಿ: ಪತಿಗೆ ಸಾಥ್ ನೀಡಿದ ಪತ್ನಿ, ಪ್ರಚಾರಕ್ಕಿಳಿದ ಪುತ್ರಿ
ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ ಸಂಸದ ದೇವೇಂದ್ರಪ್ಪ
ಮಹಾನ್ ನಾಯಕರೇ ಹೊಸ ಪಕ್ಷ ಕಟ್ಟಿ ವಾಪಸ್ ಬಂದಿದ್ದಾರೆ. ನಮ್ಮ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದರಿಂದ ಏನೂ ಆಗಲ್ಲ. ಅದು ಅಷ್ಟು ಸುಲಭವಲ್ಲ ಎಂದು ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಬಗ್ಗೆ ಬಳ್ಳಾರಿ ಸಂಸದ ದೇವೇಂದ್ರಪ್ಪ ಇತ್ತೀಚೆಗೆ ಕಿಡಿಕಾರಿದ್ದರು. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೆಆರ್ಪಿಪಿ ಎಷ್ಟು ಸೀಟು ಗೆಲ್ಲುತ್ತೆ ಅಂತಾ ಕಾದು ನೋಡೋಣ. ಸರ್ಕಾರದ ಯೋಜನೆ ಹೇಳಿದ್ರೂ ಮತ ಹಾಕೋಕೆ ಯೋಚಿಸ್ತಾರೆ. ಏಕಾಏಕಿ ಪಕ್ಷ ಕಟ್ಟಿದ್ರೆ ಯಾರು ಕೇಳ್ತಾರೆ. ರೆಡ್ಡಿ ವಾಪಸ್ ಕರೆ ತರುವು ವಿಚಾರ ಕೇಂದ್ರ ನಾಯಕರಿಗೆ ಬಿಟ್ಟಿದ್ದು. ಈ ಬಗ್ಗೆ ಚರ್ಚಿಸಿದ್ದೇವೆ, ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:52 pm, Sat, 11 February 23