Crime News: ಕೋಕಾ ಪ್ರಕರಣ; ಭೂಗತ ಪಾತಕಿ ಬನ್ನಂಜೆ ರಾಜಾ ಭವಿಷ್ಯ ಇಂದು ನಿರ್ಧಾರ

| Updated By: ganapathi bhat

Updated on: Mar 30, 2022 | 9:21 AM

ಹುಬ್ಬಳ್ಳಿಯಲ್ಲಿ ಕಂಪನಿ ಸ್ಥಾಪಿಸಿ ಪ್ರಾಜೆಕ್ಟ್ ಅಪ್ರೂವಲ್ ಆಮಿಷ ಒಡ್ಡಲಾಗಿತ್ತು. ಸಿಂಗಾಪುರ ಮೂಲದ ಹೊಸ ಪ್ರಾಜೆಕ್ಟ್ ಅಪ್ರೂವಲ್ ಆಮಿಷ ನೀಡಿ ಬರೋಬ್ಬರಿ 3.5 ಕೋಟಿ ರೂಪಾಯಿ ವಂಚಿಸಲಾಗಿದೆ. ಹುಬ್ಬಳ್ಳಿ ಶಹರ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲು ಮಾಡಲಾಗಿದೆ.

Crime News: ಕೋಕಾ ಪ್ರಕರಣ; ಭೂಗತ ಪಾತಕಿ ಬನ್ನಂಜೆ ರಾಜಾ ಭವಿಷ್ಯ ಇಂದು ನಿರ್ಧಾರ
ಬನ್ನಂಜೆ ರಾಜಾ
Follow us on

ಬೆಳಗಾವಿ: ಭೂಗತ ಪಾತಕಿ ಬನ್ನಂಜೆ ರಾಜಾ ಭವಿಷ್ಯ ಇಂದು ನಿರ್ಧಾರ ಆಗಲಿದೆ. ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಬೆಳಗಾವಿಯ ಕೋಕಾ ನ್ಯಾಯಾಲಯದಿಂದ ಇಂದು ಅಂತಿಮ ತೀರ್ಪು ಪ್ರಕಟ ಆಗಲಿದೆ. ಅಂಕೋಲಾ ಉದ್ಯಮಿ, ಬಿಜೆಪಿ ನಾಯಕ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತೀರ್ಪು ಬರಲಿದೆ. 2013 ರ ಡಿಸೆಂಬರ್ 21 ರಂದು ಸುಪಾರಿ ನೀಡಿ ಆರ್.ಎನ್. ನಾಯಕ್ ಹತ್ಯೆ ಆರೋಪ ಕೇಳಿಬಂದಿತ್ತು. 3 ಕೋಟಿ ರೂ. ಹಫ್ತಾ ನೀಡದ ಹಿನ್ನೆಲೆ ಹತ್ಯೆ ಮಾಡಿದ ಆರೋಪ ಕೇಳಿಬಂದಿತ್ತು. ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿದ್ದರು. 2015ರ ಫೆಬ್ರವರಿ 12 ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜಾ ಬಂಧನವಾಗಿತ್ತು. ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಡಿ ಮೊರಕ್ಕೊದಲ್ಲಿ ಬಂಧಿಸಲಾಗಿತ್ತು. ಬಳಿಕ ಭಾರತಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಹಸ್ತಾಂತರಿಸಲಾಗಿತ್ತು. 2015ರ ಆಗಸ್ಟ್ 14ರಂದು ಭಾರತಕ್ಕೆ ಬನ್ನಂಜೆ ರಾಜಾ ಕರೆತರಲಾಗಿತ್ತು. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಬೆಳಗಾವಿ ಕೋಕಾ ವಿಶೇಷ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಲಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 13 ಆರೋಪಿಗಳ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಹಿರಿಯ ವಕೀಲ ಕೆ.ಜಿ. ಪುರಾಣಿಕಮಠ ಸರ್ಕಾರದ ಪರ ವಕಾಲತ್ತು ವಹಿಸಿದ್ದಾರೆ.

ಹುಬ್ಬಳ್ಳಿ: ಸಾಫ್ಟ್‌ವೇರ್ ಕಂಪನಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಸಾಫ್ಟ್‌ವೇರ್ ಕಂಪನಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಹೊಸ ಪ್ರಾಜೆಕ್ಟ್ ಹೆಸರಿನಲ್ಲಿ 3.5 ಕೊಟಿ ರೂಪಾಯಿ ವಂಚನೆ ಮಾಡಲಾಗಿದೆ. ಹುಬ್ಬಳ್ಳಿಯ CBT ಕಿಲ್ಲಾದ ವಿನೋದ್​ ರಾಠೋಡ್​ಗೆ ವಂಚನೆ ಆಗಿದ್ದು, ಹುಬ್ಬಳ್ಳಿಯ ಅಮಿತ್ ಪ್ರಭು, ಅಂಕಿತಾ ಕಾಮತ್ ಹಾಗೂ ಬೆಂಗಳೂರಿನ ದೀಪಕ್ ಶರಣಕುಮಾರ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. BLH ಹೈಟೆಕ್ ಪ್ರೈ.ಲಿ ಎಂಬ ಕಂಪನಿ ಹೆಸರಿನಲ್ಲಿ ವಂಚಿಸಲಾಗಿದೆ. ಹುಬ್ಬಳ್ಳಿಯಲ್ಲಿ ಕಂಪನಿ ಸ್ಥಾಪಿಸಿ ಪ್ರಾಜೆಕ್ಟ್ ಅಪ್ರೂವಲ್ ಆಮಿಷ ಒಡ್ಡಲಾಗಿತ್ತು. ಸಿಂಗಾಪುರ ಮೂಲದ ಹೊಸ ಪ್ರಾಜೆಕ್ಟ್ ಅಪ್ರೂವಲ್ ಆಮಿಷ ನೀಡಿ ಬರೋಬ್ಬರಿ 3.5 ಕೋಟಿ ರೂಪಾಯಿ ವಂಚಿಸಲಾಗಿದೆ. ಹುಬ್ಬಳ್ಳಿ ಶಹರ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಮೈಸೂರು: ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು

ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಸೀಗೂರು ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ. 35 ವರ್ಷದ ಷಡಕ್ಷರಿಸ್ವಾಮಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದಿಂದ ಗ್ರಾಮಕ್ಕೆ ಬರುವಾಗ ಅಪಘಾತ ಸಂಭವಿಸಿದೆ. ಕೇರಳ ಮೂಲದ ಕಾರು ಡಿಕ್ಕಿ ಆಗಿದ್ದು, ಕಾರಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ಇದ್ದರು ಎಂದು ತಿಳಿದುಬಂದಿದೆ. ವೇಗವಾಗಿ ಬಂದ ಹಿನ್ನೆಲೆ ಅಪಘಾತ ಆರೋಪ ಕೇಳಿಬಂದಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಕಾರು ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯನಗರ: ಬಾರ್​ನಲ್ಲಿ ಕೊಲೆ ಪ್ರಕರಣ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೊಸಪೇಟೆಯ ಬಾರ್ ಒಂದರಲ್ಲಿ ಹಾಡುಹಗಲೇ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಂಗಾಧರ್​ನನ್ನು ಕೊಲೆ ಮಾಡಿರೋ ದೃಶ್ಯಗಳು CVTV ಯಲ್ಲಿ ಸೆರೆ ಆಗಿದೆ. ಬಾರ್ ಒಳಗಡೆ ಇರೋ CCTVಯಲ್ಲಿ ದೃಶ್ಯಗಳು ಸೆರೆಯಾಗಿವೆ. ಬಾರ್ ಹೊರಗಡೆಯಿಂದ ಬಂದು ಎರಡು ಬಾರಿ ಎದೆಗೆ ಚಾಕು ಇರಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಗಂಗಾಧರ್​ನನ್ನು ಆರೋಪಿಗಳು ಇರಿದು ಕೊಲೆ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿರೋ ಯಶ್ ಬಾರ್​ನಲ್ಲಿ ಗಲಾಟೆ ನಡೆದಿದೆ.

ಕೂಡ್ಲಿಗಿಯಲ್ಲಿ ಎಫ್‌ಡಿಎ ಮಲ್ಲಿಕಾರ್ಜುನ ಎಸಿಬಿ ಬಲೆಗೆ

ಕೂಡ್ಲಿಗಿಯಲ್ಲಿ ಎಫ್‌ಡಿಎ ಮಲ್ಲಿಕಾರ್ಜುನ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ. ಶಿಕ್ಷಕಿ ಸುಲೋಚನಾರ ಡಿಸಿಆರ್ ಹಣ ಮಗನಿಗೆ ನೀಡಲು ಲಂಚ ಕೇಳಿದ್ದರು. ಮಗ ಗೋಪಾಲಕೃಷ್ಣ ಬಳಿ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿಕ್ಕಜೋಗಿಹಳ್ಳಿ ತಾಂಡಾದ ಸುಲೋಚನಾ ಮಗ ಗೋಪಾಲಕೃಷ್ಣ ಬಳಿ ಲಂಚ ಕೇಳಿ ಸಿಕ್ಕಿಬಿದ್ದಿದ್ದಾರೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಎಂಬಲ್ಲಿ ಘಟನೆ ನಡೆದಿದೆ.

ಹಾಸನ: ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಇಂಜಿನಿಯರ್ ಮನೆ ಮೇಲೆ ಎಸಿಬಿ ರೇಡ್

ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಇಂಜಿನಿಯರ್ ಮನೆ ಮೇಲೆ ಎಸಿಬಿ ರೇಡ್ ಮಾಡಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ಬೆಸ್ಕಾಂ ಇಂಜಿನಿಯರ್ ಲಕ್ಷ್ಮೀಶ ಎಂಬವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಲಾಳನಕೆರೆಯಲ್ಲಿರುವ ಲಕ್ಷ್ಮೀಶ ನಿವಾಸದಲ್ಲಿ ದಾಳಿ ನಡೆಸಲಾಗಿದೆ. ಎಸಿಬಿ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿವೈ‌ಎಸ್‌ಪಿ ಸತೀಶ್, ಇನ್ಸ್‌ಪೆಕ್ಟರ್‌ಗಳಾದ ವೀಣಾ, ಶಿಲ್ಪ ಹಾಗೂ ಹತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಶಿಡ್ಲಘಟ್ಟ ವೃದ್ಧ ದಂಪತಿ ಕೊಲೆ ಪ್ರಕರಣ: 3 ಆರೋಪಿಗಳನ್ನು ಇಬ್ಬರೇ ಪೊಲೀಸರು ಹಿಡಿದರು!!

ಇದನ್ನೂ ಓದಿ: Crime News: ಹಿರಿ ಸಹೋದರನನ್ನು ಕೊಲೆ ಮಾಡಿದವನ ಬಂಧನ, ಕೃಷಿ ಹೊಂಡದಲ್ಲಿ ತಾಯಿ-ಮಗನ ಶವ ಪತ್ತೆ