ಶಿಡ್ಲಘಟ್ಟ ವೃದ್ಧ ದಂಪತಿ ಕೊಲೆ ಪ್ರಕರಣ: 3 ಆರೋಪಿಗಳನ್ನು ಇಬ್ಬರೇ ಪೊಲೀಸರು ಹಿಡಿದರು!!

Chikkaballapur SP Mithun Kumar: ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಹರೀಶ ಹಾಗೂ ಶ್ರೀಹರಿ ಅರಿಬ್ಬರೂ ಸಿನಿಮೀಯ ಶೈಲಿಯಲ್ಲಿ ಬರ್ತಿದ್ದ ಇವರನ್ನು ತಡೆಯಲು ಮುಂದಾದರು. ಆದರೆ ಆರೋಪಿಗಳು ಸ್ವಲ್ಪ ದೂರದಲ್ಲಿ ಬೈಕ್ ನ್ನು ನಿಲ್ಲಿಸಿ, ಎಸ್ಕೇಪ್ ಆಗಲು ಯತ್ನಿಸಿದರು. ಇದರಿಂದ ಅನುಮಾನಗೊಂಡ ಆ ಇಬ್ಬರೂ ಯಂಗ್ ಪೊಲೀಸ್ ಸಿಬ್ಬಂದಿ, ತಕ್ಷಣ ತಾವೂ ಸಿನಿಮೀಯ ಶೈಲಿಗೆ ಇಳಿದು ರನ್ನಿಂಗ್ ಚೇಸ್​ ಮಾಡಿ ತಲಾ ಒಬ್ಬೊಬ್ಬರನ್ನು ಹಿಡಿದುಕೊಂಡರು.

ಶಿಡ್ಲಘಟ್ಟ ವೃದ್ಧ ದಂಪತಿ ಕೊಲೆ ಪ್ರಕರಣ: 3 ಆರೋಪಿಗಳನ್ನು ಇಬ್ಬರೇ ಪೊಲೀಸರು ಹಿಡಿದರು!!
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರ ಬಲಕ್ಕೆ ಚಿಂತಾಮಣಿ ಉಪ ವಿಭಾಗದ ಡಿ.ವೈ.ಎಸ್ಪಿ ಎಸ್.ಟಿ.ಚಂದ್ರಶೇಖರ್ ಮತ್ತು ಎಡಕ್ಕೆ ಧರ್ಮೇಗೌಡ, ಪೊಲೀಸ್​ ಇನ್ಸ್​ಪೆಕ್ಟರ್​, ಶಿಡ್ಲಘಟ್ಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 29, 2022 | 10:03 PM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರವನ್ನೆ ಬೆಚ್ಚಿ ಬಿಳಿಸಿದ್ದ ದೊಂತಿ ಶ್ರೀನಿವಾಸಲು-ಪದ್ಮಾವತಿ ದಂಪತಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದೆ ರೋಚಕವಾಗಿದೆ. ಜೋಡಿ ಕೊಲೆ ಪ್ರಕರಣ ನಡೆದು ಬರೋಬ್ಬರಿ 45 ದಿನಗಳು ಆದ್ರೂ ತಮ್ಮನ್ನು ಯಾವುದೆ ಪೊಲೀಸರು ಗುರುತಿಸಲು ಹಾಗೂ ಪತ್ತೆ ಹಚ್ಚಲು ಸಾದ್ಯವಾಗಿಲ್ಲ ಅಂತ ತಮ್ಮ ಘನಘೋರ ಪಾಪದ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದ ಮೂರು ಜನ ಆರೋಪಿಗಳು, ಕೊನೆಗೆ ತಾವು ಪಾತಕ ನಡೆಸಿದ್ದ ಶಿಡ್ಲಘಟ್ಟ ನಗರಕ್ಕೇ ಆಗಮಿಸಿ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ (Sidlaghatta Police).

ಕೋಲಾರ ಜಿಲ್ಲೆ ಶ್ರೀನಿವಾಸಪುರ ನಗರದ ನಿವಾಸಿಗಳಾದ 20 ವರ್ಷದ ಫೈಜ್​ ಹಾಗೂ ಆತನ ಇಬ್ಬರು ಅಪ್ರಾಪ್ತ ವಯಸ್ಸಿನ ಸ್ನೇಹಿತರು ಒಂದೇ ಬೈಕ್ ನಲ್ಲಿ ಶಿಡ್ಲಘಟ್ಟಕ್ಕೆ ಆಗಮಿಸಿದ್ದರು. ಈ ಸರಿ ಸರಿಯಾಗಿ ಕಳ್ಳತನ ಮಾಡಬೇಕು ಲೈಫ್​ ಸೆಟ್ಲ್ ಆಗಬೇಕು ಅಂತ ಸ್ಕೇಚ್ ಹಾಕಿಕೊಂಡು ಬಂದಿದ್ದರು. ಹಗಲು ವೇಳೆ ಶಿಡ್ಲಘಟ್ಟದಾದ್ಯಂತ ರೋಮಿಂಗ್ ಮಾಡಿದ್ದರು. ರಾತ್ರಿ ಹೋಗುವಾಗ ಮಣ ಭಾರ ಹಣ, ಚಿನ್ನಾಭರಣ ತೆಗೆದುಕೊಂಡು ಹೋಗಬೇಕು ಅಂತ ಕನಸನ್ನೂ ಕಂಡಿದ್ದರು. ರಾತ್ರಿ ಶಿಡ್ಲಘಟ್ಟ ನಗರದ ಮುಖ್ಯ ರಸ್ತೆಯಲ್ಲಿ ಒಂದೆ ಬೈಕ್ ನಲ್ಲಿ ರೊಯ್ಯಂತಾ ಬರ್ತಿದ್ದ ಇವರನ್ನು ಕಂಡು ಸ್ವತಃ ನೈಟ್ ಬೀಟ್ ಪೊಲೀಸರು ಅಲರ್ಟ್​ ಆಗಿಬಿಟ್ಟರು.

ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಹರೀಶ ಹಾಗೂ ಶ್ರೀಹರಿ ಅರಿಬ್ಬರೂ ಸಿನಿಮೀಯ ಶೈಲಿಯಲ್ಲಿ ಬರ್ತಿದ್ದ ಇವರನ್ನು ತಡೆಯಲು ಮುಂದಾದರು. ಆದರೆ ಆರೋಪಿಗಳು ಸ್ವಲ್ಪ ದೂರದಲ್ಲಿ ಬೈಕ್ ನ್ನು ನಿಲ್ಲಿಸಿ, ಎಸ್ಕೇಪ್ ಆಗಲು ಯತ್ನಿಸಿದರು. ಇದರಿಂದ ಅನುಮಾನಗೊಂಡ ಆ ಇಬ್ಬರೂ ಯಂಗ್ ಪೊಲೀಸ್ ಸಿಬ್ಬಂದಿ, ತಕ್ಷಣ ತಾವೂ ಸಿನಿಮೀಯ ಶೈಲಿಗೆ ಇಳಿದು ರನ್ನಿಂಗ್ ಚೇಸ್​ ಮಾಡಿ ತಲಾ ಒಬ್ಬೊಬ್ಬರನ್ನು ಹಿಡಿದುಕೊಂಡರು. ಅಷ್ಟೊತ್ತಿಗೆ ಮತ್ತೋರ್ವ ಬೆದರಿ ನಿಂತಿದ್ದ. ಅವನನ್ನು ಹಿಡಿದು ತಕ್ಷಣ ಶಿಡ್ಲಘಟ್ಟ ನಗರ ಠಾಣೆ ಪಿ.ಎಸ್.ಐ ಹರೀಶಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಪಿ.ಎಸ್.ಐ ಮೂರೂ ಜನರನ್ನು ಜೀಪ್ ನಲ್ಲಿ ಕೂಡಿಸಿಕೊಂಡು ಠಾಣೆಯತ್ತ ಹೊರಟರು. ಠಾಣೆಯಲ್ಲಿ ತನಿಖೆ ಕೈಗೊಂಡಾಗ ಆರೋಪಿಗಳು ಮಾಡಿದ ತಾವು ಮಾಡಿದ್ದ ಆ ಘನಘೋರ ಪಾಪದ ಬಗ್ಗೆ ಆದ್ಯಂತವಾಗಿ ಬಾಯಿ ಬಿಟ್ಟರು. ನಗರದಲ್ಲಿ ವೃದ್ಧ ದಂಪತಿಯ ಹತ್ಯೆ ಮಾಡಿ, ನಗರದಲ್ಲಿಯೇ ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೀಗೆ. ಆರೋಪಿಗಳ ಪತ್ತೆಗಾಗಿ ಹೆಚ್ಚಿನ ಶ್ರಮ ವಹಿಸಿದ ಕಾನ್ಸ್​ಟೇಬಲ್​​ಗಳಾದ ಹರೀಶ್ ಹಾಗೂ ಶ್ರೀ ಹರಿ ಅವರುಗಳಿಗೆ ಜಿಲ್ಲಾ ಎಸ್​ಪಿ ಪ್ರಶಸ್ತಿ ಘೋಷಿಸಿದ್ದಾರೆ.

ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು: ಜೋಡಿ ಕೊಲೆ ಪ್ರಕರಣ ಭೇದಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಚಿಂತಾಮಣಿ ಉಪ ವಿಭಾಗದ ಡಿ.ವೈ.ಎಸ್ಪಿ ಎಸ್.ಟಿ.ಚಂದ್ರಶೇಖರ್ ನೇತೃತ್ವದಲ್ಲಿ ಘಟಾನುಘಟಿ ಪೊಲೀಸ್ ಇನ್ಸ್​ಪೆಕ್ಟರ್ ಗಳಾದ ಧರ್ಮೆಗೌಡ, ಪುರುಷೋತ್ತಮ, ಲಿಂಗರಾಜು, ರಾಜು ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದಿರು. ವಿವಿಧ ತನಿಖಾ ತಂಡಗಳು ಮೊಬೈಲ್ ಟವರ್ ಡಂಪ್, ಸಿ.ಡಿ.ಆರ್, ಕಾಲ್ ಡಿಟೇಲ್ಸ್, ಫಿಂಗರ್ ಪ್ರಿಂಟ್ಸ್​, ಸಿಸಿಟಿವಿ ಫೂಟೇಜ್, ಎಂ.ಒ.ಬಿ (ಮೋಡಸ್​ ಆಪರೆಂಡಿ) ಅಸಾಮಿಗಳು ಸೇರಿದಂತೆ ರೌಡಿ ಶೀಟರ್ ಗಳ ವಿಚಾರಣೆಯನ್ನೂ ನಡೆಸಿದ್ದರು. ಆದರೂ ಆರೋಪಿಗಳ ಪತ್ತೆ ಆಗಿರಲಿಲ್ಲ.

ಸಾವಿರಾರು ಪೋನ್ ನಂಬರ್ ಗಳ ಪರಿಶೀಲನೆ: ಅನುಮಾನಸ್ಪದ ಪೋನ್ ನಂಬರ್ ಗಳ ತನಿಖೆಯೂ ನಡೆದಿತ್ತು. ಸಾವಿರಕ್ಕೂ ಹೆಚ್ಚು ನಂಬರ್ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು. ಏಕೆಂದರೆ ಆರೋಪಿಗಳು ಪಕ್ಕಾ ಸ್ಕೆಚ್ ಹಾಕಿ ಪೋನ್ ಗಳನ್ನು ಬಳಸದೆ, ಸಿಸಿಟಿವಿಗಳು ಇಲ್ಲದ ಕಡೆಯಿಂದ ಬಂದು ವೃದ್ದರನ್ನು ಹತ್ಯೆ ಮಾಡಿ ದರೋಡೆ ಮಾಡಿದ್ದರು. ಆದರೂ ಪೊಲೀಸರಿಗೆ ಆರೋಪಿಗಳು ಯಾರು ಅಂತ ಪತ್ತೆ ಆಗಲಿಲ್ಲ.

ಕೊನೆಗೆ ವೃದ್ದರ ಶಾಪ ಆರೋಪಿಗಳಿಗೆ ತಟ್ಟಿದ್ದು ಆರೋಪಿಗಳನ್ನು ಶಿಡ್ಲಘಟ್ಟಕ್ಕೆ ಕರೆ ತಂದು ಪೊಲೀಸರಿಗೆ ಒಪ್ಪಿಸುವಂತಾಗಿದೆ. ಪೈಶಾಚಿಕವಾಗಿ ಹತ್ಯೆಗೀಡಾಗದ ಅಮಾಯಕ ವೃದ್ದರ ಆತ್ಮಗಳು ಪೊಲೀಸರ ತನಿಖೆಗೆ ಸಹಕರಿಸಿರುವ ಬಗ್ಗೆಯೂ ನಗರದಲ್ಲಿ ಜನ ಮಾತನಾಡಿಕೊಳ್ಳತೊಡಗಿದ್ದಾರೆ. -ಭೀಮಪ್ಪ ಪಾಟೀಲ್, ಟಿವಿ9, ಚಿಕ್ಕಬಳ್ಳಾಪುರ

ಇದನ್ನೂ ಓದಿ: ಶಿಡ್ಲಘಟ್ಟದ ಜೋಡಿ ಕೊಲೆ ಪ್ರಕರಣ ಬಯಲು, 2 ಅಪ್ರಾಪ್ತರು, ಒಬ್ಬ ಯುವಕ ಅರೆಸ್ಟ್; ದುಷ್ಕೃತ್ಯ ನಡೆದಿದ್ದು ಹೇಗೆ? ಉದ್ದೇಶವೇನಾಗಿತ್ತು?

ಇದನ್ನೂ ಓದಿ: ಶಿಡ್ಲಘಟ್ಟದ ಇತಿಹಾಸದಲ್ಲಿಯೇ ದಂಪತಿಯ ಭೀಕರ ಕೊಲೆ, ಗವಾಕ್ಷಿಯಿಂದ ಇಳಿದು ಕುಕೃತ್ಯ, ನಗನಾಣ್ಯ ದರೋಡೆ

Published On - 8:23 pm, Tue, 29 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ