ಪಕ್ಕಾ ಸ್ಕೆಚ್ ಹಾಕಿ ವೃದ್ಧ ದಂಪತಿಯ ಕ್ರೂರ ಹತ್ಯೆ ಮಾಡಿದ್ದರು.. ಅಸಲಿಗೆ ಆ ಮೂರೂ ಆರೋಪಿಗಳು ಗವಾಕ್ಷಿಯಿಂದ ಮನೆಯೊಳಕ್ಕೆ ಇಳಿದಿದ್ದು ಹೇಗೆ ಗೊತ್ತಾ?
ಸ್ವತಃ ಆರೋಪಿಗಳೆ ಬಾಯಿ ಬಿಟ್ಟಿರುವ ಮಾಹಿತಿ ಪ್ರಕಾರ, ವಾಸಗಿ ಬಡಾವಣೆಯಲ್ಲಿದ್ದ ವೃದ್ಧ ದಂಪತಿಗಳ ಮನೆಯನ್ನೆ ಮೊದಲೆ ನೋಡಿಕೊಂಡಿದ್ದರು. ಆ ಮನೆಯ ಸುತ್ತಮುತ್ತ ಸಂಚರಿಸಿ ಮನೆಯಲ್ಲಿ ಎಷ್ಟು ಜನ ಇದ್ದಾರೆ. ಅವರು ಏನು ಮಾಡುತ್ತಾರೆ. ಆ ಮನೆಗೆ ಕಿಟಕಿ ಬಾಗಿಲು ಮನೆಯ ಮೇಲಿರುವ ಗವಾಕ್ಷಿಯನ್ನು ಗಮನಿಸಿದ್ದರು.
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದ್ದ ಶ್ರೀಮಂತ ವೃದ್ದ ದಂಪತಿಯ ಹತ್ಯೆ(Couple Murder) ಪ್ರಕರಣದ ಆರೋಪಿಗಳು ಅಂದರ್ ಆಗಿದ್ದು, ಪೊಲೀಸರ ತನಿಖೆಯಲ್ಲಿ ಬಗೆದಷ್ಟು ಮಾಹಿತಿ ಲಭ್ಯವಾಗುತ್ತಿದೆ. ಆರೋಪಿಗಳು ಬಾಯಿಬಿಟ್ಟ ಸತ್ಯ ಕೇಳಿ ಪೊಲೀಸರೆ ಶಾಕ್ ಆಗುವಂತಾಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ನಗರದ ನಿವಾಸಿಗಳಾದ ಪೈಜ್ ಹಾಗೂ ಆತನ ಇಬ್ಬರು ಅಪ್ರಾಪ್ತ ಸ್ನೇಹಿತರು ಪಕ್ಕಾ ಸ್ಕೆಚ್ ಹಾಕಿ ವೃದ್ಧ ದಂಪತಿಯ ಮನೆ ದರೋಡೆ ಮಾಡಿ ಹತ್ಯೆ ಮಾಡಿದ್ದಾರೆ.
ಆರೋಪಿಗಳು ಮನೆಯೋಳಗೆ ಹೋಗಿದ್ದು ಹೇಗೆ? ಸ್ವತಃ ಆರೋಪಿಗಳೆ ಬಾಯಿ ಬಿಟ್ಟಿರುವ ಮಾಹಿತಿ ಪ್ರಕಾರ, ವಾಸಗಿ ಬಡಾವಣೆಯಲ್ಲಿದ್ದ ವೃದ್ಧ ದಂಪತಿಗಳ ಮನೆಯನ್ನೆ ಮೊದಲೆ ನೋಡಿಕೊಂಡಿದ್ದರು. ಆ ಮನೆಯ ಸುತ್ತಮುತ್ತ ಸಂಚರಿಸಿ ಮನೆಯಲ್ಲಿ ಎಷ್ಟು ಜನ ಇದ್ದಾರೆ. ಅವರು ಏನು ಮಾಡುತ್ತಾರೆ. ಆ ಮನೆಗೆ ಕಿಟಕಿ ಬಾಗಿಲು ಮನೆಯ ಮೇಲಿರುವ ಗವಾಕ್ಷಿಯನ್ನು ಗಮನಿಸಿದ್ದರು. ಇನ್ನು ದರೋಡೆ ಮಾಡುವ ದಿನ ಅಂದ್ರೆ ಪೆಬ್ರುವರಿ 9ರಂದು ಎರಡು ಮೂರು ಬಾರಿ ಮನೆಯ ಬಳಿ ಆಗಮಿಸಿದ್ದರು. ವೃದ್ಧ ದಂಪತಿ ಅಂದು ತಲೆಗೆ ಎಣ್ಣೆ ಇಟ್ಟುಕೊಂಡು ಇಬ್ಬರೆ ಮನೆಯ ಹೊರಗೆ ಇರುವುದನ್ನು ಆರೋಪಿಗಳು ಗಮನಿಸಿದ್ದರು.
ಅಂದು ಸಂಜೆ ಆಗುತ್ತಿದ್ದಂತೆ ಮನೆಯ ಬಳಿ ಬಂದ ಆರೋಪಿಗಳು ಬಾಗಿಲು ಮುಚ್ಚಿರುವುದನ್ನು ಗಮನಿಸಿ ಮನೆಯ ಮೇಲೆ ಹತ್ತಿದ್ದಾರೆ. ಶ್ರೀನಿವಾಸಲು ಮನೆಯ ಮೇಲೆ ಗವಾಕ್ಷಿಗೆ ಅಳವಡಿಸಿದ್ದ ಜಾಲರಿಯನ್ನು ಕಿತ್ತು ಓರ್ವ ಅಗ್ಗದ ಸಹಾಯದಿಂದ ಮನೆಯ ಒಳಗೆ ಇಳಿದಿದ್ದಾನೆ. ಮತ್ತೋರ್ವ ಮನೆಯ ಹಿಂದಿನ ಬಾಗಿಲ ಬಳಿ ಕಾಯುತ್ತಿದ್ದ ಇನ್ನೋರ್ವ ಅಕ್ಕ ಪಕ್ಕದ ಮನೆಯವರ ಚಲನವಲನಗಳನ್ನು ಗಮನಿಸುತ್ತಿದ್ದ. ಮೇಲೆ ಗವಾಕ್ಷಿ ಮೂಲಕ ಮನೆಯ ಒಳಗೆ ಇಳಿದ ಆರೋಪಿಯೋರ್ವ ತಕ್ಷಣ ಮನೆಯ ಹಿಂಬದಿ ಡೋರ್ ನ್ನು ತೆಗೆದು ಹೊರಗೆ ಇದ್ದವನ್ನು ಒಳಗೆ ಕರೆದುಕೊಂಡಿದ್ದಾನೆ. ನಂತರ ಇಬ್ಬರು ತಮ್ಮ ಬಳಿ ಇದ್ದ ರಾಡ್ ನಿಂದ ವೃದ್ಧ ಶ್ರೀನಿವಾಸನ ತಲೆಗೆ ಹೊಡೆದಿದ್ದಾರೆ. ಆಗ ವೃದ್ಧ ಸ್ಥಳದಲ್ಲೆ ಕುಸಿದು ಬಿದ್ದಿದ್ದಾನೆ. ಅದರಲ್ಲೊಬ್ಬ ವೃದ್ಧನನ್ನು ಎಳೆದುಕೊಂಡು ಹೋಗಿ ಬಾತ್ ರೂಮ್ ಬಳಿ ಬಿಸಾಡಿದ್ದಾನೆ. ಇನ್ನೋರ್ವ ವೃದ್ಧೆ ಪದ್ಮಾವತಿಯ ತಲೆಗೂ ಹೊಡೆದಿದ್ದಾನೆ ಆಕೆಯೂ ಕುಸಿದು ಬಿದ್ದಿದ್ದಾಳೆ. ಆಗ ಮನೆಯಲ್ಲಿದ್ದ ಬೀರು ಶೋಧ ನಡೆಸಿರುವ ಆರೋಪಿಗಳು ಮನೆಯಲ್ಲಿದ್ದ ಹಣ ಚಿನ್ನಾಭರಣವನ್ನು ತುಂಬಿಕೊಂಡು ಮನೆಯ ಹಿಂದಿನ ಬಾಗಿಲ ಮೂಲಕ ಪರಾರಿಯಾಗಿದ್ದಾರೆ.
ರಾತ್ರಿ ಇಡೀ ರಕ್ತದ ಮಡುವಿನಲ್ಲಿ ನರಳಿ ನರಳಿ ವೃದ್ಧ ದಂಪತಿಗಳು ಪ್ರಾಣ ಬಿಟ್ಟಿದ್ದಾರೆ. ಕೊನೆಗೆ ಮನೆಯ ಕೆಲಸದಾಳು ಬೆಳಿಗ್ಗೆ 10ಗಂಟೆಗೆ ಮನೆ ಬಳಿ ಬಂದು ಬಾಗಿಲು ಬಡಿದ್ರೆ ಯಾರು ತೆಗೆದಿಲ್ಲ. ಅನುಮಾನ ಬಂದು ಹಿಂದಿನ ಬಾಗಿಲು ಬಳಿ ಬಂದ್ರೆ ಬಾಗಿಲು ತೆರೆದಿತ್ತು ಆಗ ಒಳಗೆ ಹೋಗಿ ನೋಡಿದರೆ ವೃದ್ಧ ದಂಪತಿಗಳು ಹೆಣವಾಗಿದ್ದು ಕಂಡು ಬಂದಿತ್ತು. ಸದ್ಯ ಶಿಡ್ಲಘಟ್ಡ ಪೊಲೀರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ಶಿಡ್ಲಘಟ್ಟ ವೃದ್ಧ ದಂಪತಿ ಕೊಲೆ ಪ್ರಕರಣ: 3 ಆರೋಪಿಗಳನ್ನು ಇಬ್ಬರೇ ಪೊಲೀಸರು ಹಿಡಿದರು!!