Gokak Falls: ಮೈದುಂಬಿ ಹರಿಯುತ್ತಿರುವ ಬೆಳಗಾವಿಯ ಗೋಕಾಕ್ ಫಾಲ್ಸ್​ಗೆ ಪ್ರವೇಶ ನಿರ್ಬಂಧ, ಬಿಗಿ ಪೊಲೀಸ್ ಬಂದೋಬಸ್ತ್

ಪ್ರವಾಸಿಗರ ಸೆಲ್ಫಿ ಹುಚ್ಚಾಟ ತಡೆಯಲು ಪೊಲೀಸ್ ಇಲಾಖೆ ಗೋಕಾಕ್ ಜಲಪಾತದ ಬಳಿ ಬಂದೋಬಸ್ತ್ ಕೈಗೊಂಡಿದೆ. ಬ್ಯಾರಿಕೇಟ್ ಹಾಕಲಾಗಿದೆ. ಇನ್ನು ಮತ್ತೊಂದೆಡೆ ನಿಷೇಧ ವಿದ್ದರೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಫಾಲ್ಸ್ ಮುಂದೆ ಎಣ್ಣೆ ಪಾರ್ಟಿ ಮಾಡಿದ ಘಟನೆ ನಡೆದಿದೆ.

Follow us
| Updated By: ಆಯೇಷಾ ಬಾನು

Updated on:Jul 31, 2023 | 12:56 PM

ಬೆಳಗಾವಿ, ಜುಲೈ 31: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಭಾರತದ ನಯಾಗರ ಜಲಪಾತ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತ(Gokak Waterfall) ಉಕ್ಕಿ ಹರಿಯುತ್ತಿದೆ. ಇನ್ನು ಜಲಧಾರೆಯನ್ನ ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ ಉಡುಪಿ ಘಟನೆ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ಜಲಪಾತಗಳಿಗೆ ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜೊತೆಗೆ ಪ್ರವಾಸಿಗರ ಸೆಲ್ಫಿ ಹುಚ್ಚಾಟ ತಡೆಯಲು ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ. ಜಲಪಾತದ ಒಳಗೆ ಇಳಿಯದಂತೆ ಬ್ಯಾರಿಕೇಟ್ ಹಾಕಲಾಗಿದೆ. ಇನ್ನು ಮತ್ತೊಂದೆಡೆ ನಿಷೇಧ ವಿದ್ದರೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಫಾಲ್ಸ್ ಮುಂದೆ ಎಣ್ಣೆ ಪಾರ್ಟಿ ಮಾಡಿದ ಘಟನೆ ನಡೆದಿದೆ.

ಗೋಕಾಕ್ ನಗರದಿಂದ ಹತ್ತು ಕಿಮೀ ದೂರದಲ್ಲಿರುವ ಗೋಕಾಕ್ ಫಾಲ್ಸ್​ಗೆ ಜೀವ ಕಳೆ ಬಂದಿದೆ. ಬಂಡೆಗಲ್ಲುಗಳನ್ನ ಸೀಳಿಕೊಂಡು ನುಗ್ಗುತ್ತಿರುವ ಘಟಪ್ರಭೆ, ಸುಮಾರು 180 ಅಡಿ ಮೇಲಿಂದ ಧುಮ್ಮಿಕ್ಕುತ್ತಿದೆ. ಈ ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಫಾಲ್ಸ್​ಗಳ ಬಳಿ ಹೆಚ್ಚು ಅಪಾಯ ಇರುವ ಹಿನ್ನೆಲೆ ಪೊಲೀಸ್ ಇಲಾಖೆ ಬ್ಯಾರಿಕೇಟ್ ಹಾಕಿ ಕಟ್ಟೆಚ್ಚರ ವಹಿಸಿದೆ. ಜೊತೆಗೆ ಬೆಳಗಾವಿ ಜಲಪಾತಗಳಿಗೆ ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಫಾಲ್ಸ್ ‌ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸರ ‌ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಹುಸಿಯಾದ ನಿರೀಕ್ಷೆ; ಅರಿಶಿನಗುಂಡಿ ಜಲಪಾತದ ಪ್ರಪಾತಕ್ಕೆ ಬಿದ್ದು ಕಾಲವಶವಾದ ಶರತ್ ಕುಮಾರ್ ಕುಟುಂಬದ ದುಃಖಕ್ಕೆ ಎಣೆಯಿಲ್ಲ

ಅರಣ್ಯ ವ್ಯಾಪ್ತಿಯ ಫಾಲ್ಸ್​ಗಳಿಗೆ ಸಾರ್ವಜನಿಕರ ಭೇಟಿ ನಿಷೇಧ

ಇನ್ನು ಅರಣ್ಯ ವ್ಯಾಪ್ತಿಯ ಫಾಲ್ಸ್​ಗಳಿಗೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ. ಆದ್ರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್​ಗೆ ಅಕ್ರಮ ಪ್ರವೇಶ ಮಾಡಿ ನಿಷೇಧದ ನಡುವೆಯೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಹುಚ್ಚಾಟ ಮೆರೆದಿದೆ. ಹೆಸ್ಕಾಂ ವಾಹನದಲ್ಲೇ ಬಂದು ಫಾಲ್ಸ್ ಮುಂಭಾಗದಲ್ಲಿ ಗ್ಯಾಸ್ ಬಳಸಿ ಅಡುಗೆ ಮಾಡಿ ಹೆಸ್ಕಾಂ ಸಿಬ್ಬಂದಿ, ಖಾಸಗಿ, ಸರ್ಕಾರಿ ಆಸ್ಪತ್ರೆ ವೈದ್ಯರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಸದ್ಯ ಈ ಘಟನೆ ಸಂಬಂಧ ಓರ್ವ ವೈದ್ಯ ಸೇರಿ ನಾಲ್ಕು ಜನರ ವಿರುದ್ಧ ಕೇಸ್ ದಾಖಲಾಗಿದೆ. ನಿರ್ಬಂಧ ಪ್ರದೇಶದಲ್ಲಿ ಅಕ್ರಮ ಪ್ರವೇಶ ಹಿನ್ನೆಲೆ ವೈಲ್ಡ್ ಲೈಫ್ ಆಕ್ಟ್ 7 ಅಡಿಯಲ್ಲಿ ಜಾಂಬೋಟಿ ವಲಯ ಅರಣ್ಯ ಕಚೇರಿಯಲ್ಲಿ ಕೇಸ್ ದಾಖಲಾಗಿದೆ. ಅರಣ್ಯಾಧಿಕಾರಿಗಳು ಗ್ಯಾಸ್ ಸ್ಟೋ, ಅಡಿಗೆ ಸಾಮಗ್ರಿ ಸೀಜ್ ಮಾಡಿದ್ದಾರೆ.

ಅರಣ್ಯ ಪ್ರದೇಶ ವ್ಯಾಪ್ತಿಯ ಫಾಲ್ಸ್​ಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಜುಲೈ‌ 26ರಂದು ಆದೇಶ ಹೊರಡಿಸಿದ್ದರು. ನಿರ್ಬಂಧದ ನಡುವೆಯೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಫಾಲ್ಸ್ ಮುಂದೆ ಪಾರ್ಟಿ ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದ ಜಾಂಬೋಟಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು ಪೊಲೀಸರನ್ನ ಯಾಮಾರಿಸಿ ಸರ್ಕಾರಿ ವಾಹನ‌ ಬಳಸಿ ಅರಣ್ಯ ಪ್ರದೇಶಕ್ಕೆ ಹೋಗಿ ಮೋಜು ಮಸ್ತಿ ಮಾಡಲಾಗಿದೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:42 pm, Mon, 31 July 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ