ಧಾರಾಕಾರ ಮಳೆಗೆ ಬೆಳಗಾವಿಯಲ್ಲಿ ಕುಸಿದ ಮನೆಗಳು: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವೃದ್ಧರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2022 | 3:06 PM

ಮಳೆಯ ಆರ್ಭಟ ಮುಂದುವರೆದಿದ್ದು, ಮಳೆಯಿಂದ ಗ್ರಾಮದ 400 ಕುಟುಂಬ ಜಲ ದಿಗ್ಬಂಧನವಾಗಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಚೆರಿಯಪರಂಬು ಗ್ರಾಮದಲ್ಲಿ ನಡೆದಿದೆ.

ಧಾರಾಕಾರ ಮಳೆಗೆ ಬೆಳಗಾವಿಯಲ್ಲಿ ಕುಸಿದ ಮನೆಗಳು: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವೃದ್ಧರು
ಧಾರಾಕಾರ ಮಳೆಗೆ ಕುಸಿದ ಮನೆ.
Follow us on

ಬೆಳಗಾವಿ: ನಗರದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಧಾರಾಕಾರ ಮಳೆಗೆ (heavy rain) ನಗರದಲ್ಲಿ ಮನೆಗಳು ಕುಸಿಯುತ್ತಿವೆ. ಶಹಾಪುರದ ಸಪಾರ್ ಗಲ್ಲೆಯಲ್ಲಿ ಎರಡು ಮನೆ ಕುಸಿತವಾಗಿದೆ. ಶಂಕ್ರೆವ್ವಾ ಹಂಗರಕಿ, ಮಲ್ಲವ್ವಾ ಕುಮಶೆಟ್ಟಿ ಎಂಬುವರ ಮನೆ ಕುಸಿತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ವೃದ್ಧರು ಪಾರಾಗಿದ್ದಾರೆ. ನೀರು ತುಂಬಲು ಹೊರ ಬಂದಿದ್ದ ವೃದ್ದ ಬಸವರಾಜ್, ವೃದ್ದೆ ಶಂಕ್ರೆವ್ವಾ ಅಡುಗೆ ಮಾಡುತ್ತಿದ್ದಾಗ ಘಟನೆ ನಡೆದಿದೆ. ಮನೆ ಮೇಲ್ಛಾವಣಿ ಕುಸಿಯುತ್ತಿದ್ದಂತೆ ಓಡಿ ಹೊರ ಬಂದು ಶಂಕ್ರೆವ್ವಾ ಜೀವ ರಕ್ಷಣೆ ಮಾಡಿಕೊಂಡರು. ಮನೆಯಲ್ಲಿದ್ದ ಆಹಾರ ಸಾಮಾಗ್ರಿಗಳು, ಪಾತ್ರೆ, ಬಟ್ಟೆ, ಹಾಸಿಗೆ ಹಾನಿಯಾಗಿದ್ದು, ಎಲ್ಲವನ್ನೂ ಕಳೆದುಕೊಂಡು ವೃದ್ದ ಕುಟುಂಬ ಬೀದಿಗೆ ಬಂದಿದೆ.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ: ಆಗುಂಬೆಯಲ್ಲಿ ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು

ಮಳೆಯಿಂದ ಗ್ರಾಮದ 400 ಕುಟುಂಬ ಜಲ ದಿಗ್ಬಂಧನ

ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮಳೆಯಿಂದ ಗ್ರಾಮದ 400 ಕುಟುಂಬ ಜಲ ದಿಗ್ಬಂಧನವಾಗಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಚೆರಿಯಪರಂಬು ಗ್ರಾಮದಲ್ಲಿ ನಡೆದಿದೆ. ಕೊಡಗು ಜೀವ ಪಣಕ್ಕಿಟ್ಟು ಗ್ರಾಮಸ್ಥರು ಪ್ರವಾಹ ದಾಟುತ್ತಿದ್ದಾರೆ. ಪೊಲೀಸ್ ಠಾಣೆಯಿಂದ ಗ್ರಾಮಸ್ಥರು ಮರಳು ತೆಪ್ಪ ತಂದಿದ್ದು, ಅದರ ಮೂಲಕ ಗ್ರಾಮಸ್ಥರು ಹೋಗುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಗೆ ಕುಸಿದ್ದು ಬಿದ್ದ ವಾಸದ ಮನೆ 

ಹಾಸನ: ನಗರದಲ್ಲಿ ಭಾರೀ ಮಳೆಗೆ ವಾಸದ ಮನೆ ಕುಸಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಭದ್ರಮ್ಮ ಎಂಬುವವರಿಗೆ ಸೇರಿದ ಮನೆ ಕುಸಿತವಾಗಿದೆ.

ರಾತ್ರಿ ಊಟಕ್ಕೆ ಕುಳಿತಿದ್ದಾಗ ಏಕಾಏಕಿ ಮನೆ ಕುಸಿದಿದ್ದು, ಶಬ್ದ ಕೇಳುತ್ತಿದ್ದಂತೆ ಮನೆಯಿಂದ ಕುಟುಂಬಸ್ಥರು ಹೊರ‌ಬಂದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮನೆಯಲ್ಲಿರುವ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದು, ರಾಗಿ, ಅಕ್ಕಿ ಸೇರಿದಂತೆ ದವಸಧಾನ್ಯಗಳು ಮಣ್ಣು ಪಾಲಾಗಿವೆ. ಸೂಕ್ತ ಪರಿಹಾರ ಒದಗಿಸುವಂತೆ ಕುಟುಂಬಸ್ಥರು ಒತ್ತಾಯಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.