ಬೆಳಗಾವಿ: ಶೆಡ್​ನಲ್ಲಿ ಕೂಡಿ ಹಾಕಿ ಪತ್ನಿಗೆ ಟಾರ್ಚರ್​ ಕೊಟ್ಟ ಪೊಲೀಸ್​; ಬರೆ ಎಳೆದು ಚಿತ್ರಹಿಂಸೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 31, 2024 | 4:55 PM

ತೋಟದ ಮನೆಯ ಶೆಡ್​ನಲ್ಲಿ ಪತ್ನಿಯನ್ನು ಕೂಡಿ ಹಾಕಿ ಮೈ ಮೇಲೆ ಬರೆ ಎಳೆದು ಚಿತ್ರ ಹಿಂಸೆ ಕೊಟ್ಟಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನೊಂದವರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸ್ ಪೇದೆಯೇ ಈ ಕೃತ್ಯ ಎಸಗಿದ್ದಾನೆ. ಈಗ ನೊಂದ ಮಹಿಳೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾಳೆ. ಅಷ್ಟಕ್ಕೂ ಹೆಂಡತಿ ಮೇಲೆ ಪೊಲೀಸಪ್ಪ ಮೆರೆದ ಕ್ರೌರ್ಯ ಎಂತಹದ್ದು? ಅದ್ಯಾವ ಕಾರಣಕ್ಕೆ ಅಂತೀರಾ? ಈ ಸ್ಟೋರಿ ಓದಿ.

ಬೆಳಗಾವಿ: ಶೆಡ್​ನಲ್ಲಿ ಕೂಡಿ ಹಾಕಿ ಪತ್ನಿಗೆ ಟಾರ್ಚರ್​ ಕೊಟ್ಟ ಪೊಲೀಸ್​; ಬರೆ ಎಳೆದು ಚಿತ್ರಹಿಂಸೆ
ಯಲ್ಲಪ್ಪ, ಪ್ರತಿಭಾ
Follow us on

ಬೆಳಗಾವಿ, ಆ.31: ಬೆಳಗಾವಿ ಜಿಲ್ಲೆಯ ರಾಯಬಾಗ(Raybag) ತಾಲೂಕಿನ ನಿಡಗುಂದಿ ಗ್ರಾಮದ ಮಹಿಳೆ ಪ್ರತಿಭಾ ಎಂಬುವವರನ್ನು  ಅಥಣಿ ತಾಲೂಕಿನ ಕುನ್ನಾಳ ಗ್ರಾಮದ ಡಿಆರ್​ ಪೊಲೀಸ್ ಸಿಬ್ಬಂದಿಯಾಗಿರುವ ಯಲ್ಲಪ್ಪ ಅಸಗೆ ಎಂಬಾತನ ಜೊತೆಗೆ ಕಳೆದ 10 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಸದ್ಯ ಈ ದಂಪತಿಗೆ ಮೂರು ಜನ ಮುದ್ದಾದ ಮಕ್ಕಳಿದ್ದಾರೆ. ಚೆನ್ನಾಗಿದ್ದ ಈ ಸಂಸಾರದ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಕಳೆದ ಎರಡು ವರ್ಷದಿಂದ ಹೆಂಡತಿ ಪ್ರತಿಭಾ ಮೇಲೆ ಪತಿಗೆ ಇನ್ನಿಲ್ಲದ ಅನುಮಾನ ಶುರುವಾಗಿದೆ. ಎರಡು ತಿಂಗಳ ಇತ್ತೀಚೆಗೆ ಕೊಡಬಾರದ ಹಿಂಸೆಯನ್ನು ಪತಿ ಯಲ್ಲಪ್ಪ ಕೊಟ್ಟಿದ್ದಾನೆ. ತೋಟದ ಮನೆಯಲ್ಲಿ ಇರುವ ಶೆಡ್​ನಲ್ಲಿ ಕೂಡಿ ಹಾಕಿ, ಮೈ ಮೇಲೆ ಎಲ್ಲಾ ಕಡೆಗಳಲ್ಲಿ ಬರೆ ಎಳೆದಿದ್ದಾನೆ ಎಂದು ಪ್ರತಿಭಾ ಅವರು ಆರೋಪ ಮಾಡುತ್ತಿದ್ದಾರೆ.

ಪತಿಗೆ ಸಾಥ್ ನೀಡಿದ ಇಬ್ಬರು ಸಹೋದರಿಯರು

ಅಷ್ಟೇ ಅಲ್ಲದೇ ಕೊಲೆ ಬೇದರಿಕೆ ಸಹ ಹಾಕಿದ್ದಾರಂತೆ. ಪತಿಗೆ ಇಬ್ಬರು ಸಹೋದರಿಯರು ಕೂಡ ಸಾಥ್ ನೀಡಿದ್ದಾರೆ ಎನ್ನುವ ಆರೋಪ ಸಹ ಇದೆ. ಇನ್ನು ಶೆಡ್​ನಿಂದ ತಪ್ಪಿಸಿಕೊಂಡು ಲಾರಿ ಏರಿ ಬಂದ ಮಹಿಳೆ ಬೆಳಗಾವಿ ಜಿಲ್ಲಾಸ್ಪತ್ರೆ ಸೇರಿದ್ದು, ಮಹಿಳೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳೆಯ ಈ ಸ್ಥಿತಿ ಕಂಡು ಆಕೆಯ ಪೋಷಕರು ಸಹ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:KSRTC ಮಹಿಳಾ ಕಂಡಕ್ಟರ್​ಗಳಿಗೆ ಅಧಿಕಾರಿಗಳಿಂದ ಟಾರ್ಚರ್; ಕಣ್ಣೀರು ಹಾಕಿ ನೋವು ಹೇಳಿಕೊಂಡ ಸಿಬ್ಬಂದಿ

ಈ ಕುರಿತು ಮಾತನಾಡಿದ ಪ್ರತಿಭಾ ಪೋಷಕರು, ‘ಕಳೆದ ಅನೇಕ ದಿನಗಳ ಹಿಂದೆ ಆತನೇ ಫೋನ್ ಮಾಡಿದ್ರು, ತಮ್ಮ ಮಗಳಿಗೆ ಕೊಟ್ಟಿಲ್ಲ. ಆ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರೋ ಪ್ರತಿಭಾ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಸುಟ್ಟ ಗಾಯಗಳು ಮಾತ್ರ ಆಕೆಗೆ ಮತ್ತಷ್ಟು ನೋವು ಕೊಡುತ್ತಿವೆ. ಜೊತೆಗೆ ಯಲ್ಲಪ್ಪ ಅಸ್ತಿ ಸಹೋದರರು ಸಹ ಕದ್ದು ಮುಚ್ಚಿ ಅತ್ತಿಗೆ ನೋಡುವ ಪ್ರಯತ್ನ ಮಾಡಿದ್ದು, ಪತಿ ಬೆಳಗಾವಿಯ ಆಸ್ಪತ್ರೆ ಕಡೆ ಬಂದು ಹೋಗಿದ್ದಾನೆ ಎಂಬ ಅನುಮಾನಗಳ ಸಹ ಇವೆ. ಪತಿ ಸಹೋದರ ಮಾತ್ರ ನಾನು ಕೆಲಸಕ್ಕಾಗಿ ಮಹಾರಾಷ್ಟ್ರದಲ್ಲಿ ಇರ್ತಿನಿ, ನನಗೆ ಏನು ಗೊತ್ತಿಲ್ಲ ಎನ್ನುತ್ತಲೇ ಅತ್ತಿಗೆಗೆ ಅಕ್ರಮ ಸಂಬಂಧ ಇದೆ ಎಂದು ಹೇಳಿದ್ದಾನೆ.

ಒಂದು ಕಡೆ ಪತಿ ಸಂಶಯ ಮಾಡ್ತಿದ್ದು, ತನ್ನದೇನಾದರೂ ತಪ್ಪಿದ್ದರೂ ಕ್ಷಮಿಸುವಂತೆ ಪತ್ನಿ ಮನವಿ ಮಾಡಿಕೊಳ್ಳುತ್ತಿದ್ದಾಳೆ. ಹೆಂಡತಿ ತಪ್ಪು ಮಾಡಿದರೆ ಕುಟುಂಬಸ್ಥರನ್ನ ಕರೆದು ಬುದ್ದಿವಾದ ಹೇಳಬೇಕಿತ್ತು, ಇಲ್ಲವಾದರೆ ವಿಚ್ಛೇಧನ ತೆಗೆದುಕೊಳ್ಳಬಹುದಿತ್ತು. ನೊಂದವರಿಗೆ ನ್ಯಾಯ ಕೊಡುವ ಸ್ಥಾನದಲ್ಲಿರುವ ಪೊಲೀಸಪ್ಪನೇ ಈ ರೀತಿ ಕ್ರೌರ್ಯ ಮೆರೆದಿದ್ದು ಎಷ್ಟರ ಮಟ್ಟಿಗೆ ಸರಿ. ಐಗಳಿ ಪೊಲೀಸರು ಕೂಡ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಲಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ