ದರ್ಶನ್ಗೆ ರಾಜಾತಿಥ್ಯದಿಂದ ಕಟ್ಟುನಿಟ್ಟಾದ ಜೈಲುಗಳು: ಹಿಂಡಲಗಾ ಖೈದಿಗಳ ಪ್ರತಿಭಟನೆ
ಕೊಲೆ ಆರೋಪದಲ್ಲಿ ನಟ ದರ್ಶನ್ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾಗ ರಾಜಾತಿಥ್ಯ ನೀಡಿರುವ ಫೋಟೋ ವೈರಲ್ ಆಗಿತ್ತು. ನಂತರ ಸರ್ಕಾರ ರಾಜ್ಯದ ಎಲ್ಲ ಜೈಲುಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಇದರಿಂದ ಆಕ್ರೋಶಗೊಂಡು ಹಿಂಡಲಗಾ ಜೈಲು ಖೈದಿಗಳು ಪ್ರತಿಭಟನೆ ನಡೆಸಿದರು.
ಬೆಳಗಾವಿ, ಸಪ್ಟೆಂಬರ್ 01: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನಗೆ (Darshan) ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ (Bengaluru Central Jail) ರಾಜಾತಿಥ್ಯ ನೀಡಲಾಗಿದೆ ಎಂಬ ಫೋಟೋವೊಂದು ವೈರಲ್ ಆಗಿತ್ತು. ಈ ಫೋಟೋ ವೈರಲ್ ಆಗುತ್ತಿದ್ದಂತೆ, ಶೇಕ್ ಆದ ಸರ್ಕಾರ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ಖೈದಿಗಳಿಗೆ ದೊರಕುತ್ತಿದ್ದ ಮತ್ತು ಏರಿಸುವ ವಸ್ತುಗಳು ಬಂದ್ ಆಗಿವೆ. ಇದರಿಂದ ಆಕ್ರೋಶಗೊಂಡಿರುವ ಬೆಳಗಾವಿಯ ಹಿಂಡಲಗಾ ಜೈಲು (Hindalga Jail) ಖೈದಿಗಳು ವಿಶೇಷ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದರು.
ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಖೈದಿಗಳು ಬೆಳಗಿನ ಉಪಾಹಾರ ತಿರಸ್ಕರಿಸಿ ಪ್ರತಿಭಟನೆ ನಡೆಸಿದರು. ಬೀಡಿ, ಸಿಗರೇಟ್ ತಂಬಾಕು ಕೊಡುವವರಗೆ ನಾವು ತಿಂಡಿ, ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡದಿದ್ದಾರೆ ಎಂದು ಟಿವಿ9ಗೆ ಹಿಂಡಲಗಾ ಜೈಲಿನ ಮೂಲಗಳಿಂದ ಮಾಹಿತಿ ದೊರತಿದೆ.
ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ನಟ ದರ್ಶನ್ಗೆ ರಾಜಾತಿಥ್ಯ ದೊರೆಯುತ್ತಿರುವ ಫೋಟೋ ಹೊರ ಬರುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚತ್ತಿದ್ದು, ಕೂಡಲೆ ಒಂಬತ್ತು ಅಧಿಕಾರಿಗಳನ್ನು ಅಮಾನತು ಮಾಡಿದೆ. ಅಲ್ಲದೇ, ದರ್ಶನ್ರನ್ನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಮತ್ತು ದರ್ಶನ್ ಚಹಚರರನ್ನು ರಾಜ್ಯ ವಿವಿಧ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ: ದರ್ಶನ್ಗೆ ಅಭಿಮಾನಿಗಳಿಂದಲೇ ಸಂಕಷ್ಟ? ಪ್ರಕರಣದಲ್ಲಿ ಮುಂದಿನ ಹೆಜ್ಜೆಯೇನು?
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನರನ್ನ ಶಿಫ್ಟ್ ಮಾಡಿರುವ ವಿಚಾರವಾಗಿ ಜಿಲ್ಲೆಯ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಮಾತನಾಡಿ, ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿ ಇರಬಹುದು, ಡಿಜಿ ಅಲ್ಲ. ಜೈಲಿನಲ್ಲಿ ರಾಜಾತಿಥ್ಯದ ಫೋಟೋಗಳು ಮಾಧ್ಯಮದಲ್ಲೇ ಬಂದಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದು ಪೊಲೀಸ್ ಇಲಾಖೆ ತೀರ್ಮಾನ ಎಂದು ಹೇಳಿದರು.
ಬಳ್ಳಾರಿ ಜೈಲಿನಲ್ಲಿ ದರ್ಶನ್
ದರ್ಶನ್ ಬಳ್ಳಾರಿ ಜೈಲಿಗೆ ಬಂದು ಇಂದಿಗೆ ನಾಲ್ಕು ದಿನಗಳಾಗಿವೆ. ಶನಿವಾರ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಪತಿಯನ್ನು ಕಾಣಲು ಬಂದಿದ್ದರು. ಪತಿಗಾಗಿ ಎರಡು ಚೀಲಗಳಲ್ಲಿ ವಿವಿಧ ವಸ್ತುಗಳನ್ನು ತಂದಿದ್ದರು. ಕೆಲವು ತಿಂಡಿಗಳು, ಡ್ರೈ ಫ್ರೂಟ್ಸ್ ಗಳನ್ನು ತಂದಿದ್ದರು. ಬಟ್ಟೆಗಳನ್ನು ತಂದಿದ್ದರು. ಕಾಣಲು ಬಂದ ವಿಜಯಲಕ್ಷ್ಮಿ ಜೊತೆಗೆ ಸುಮಾರು ಅರ್ಧ ಗಂಟೆ ಕಾಲ ದರ್ಶನ್ ಮಾತನಾಡಿದ್ದಾರೆ. ಆ ನಂತರ ತುಸು ನಿರಾಳವಾಗಿ ಇದ್ದರಂತೆ ದರ್ಶನ್.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ