ಬೆಳಗಾವಿ, ಜನವರಿ 20: ರೀಲ್ಸ್ ಹಾಕಿ ಉರಿಸಿದ್ದಕ್ಕೆ ಕುಸ್ತಿ ಪೈಲ್ವಾನ್ ಅನ್ನು ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕಿ ಕೊಲೆ (kill) ಮಾಡಿರುವಂತಹ ಘಟನೆ ಜ.15ರಂದು ಜಿಲ್ಲೆಯ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಪ್ರಕಾಶ್ ಇರಟ್ಟಿ(26) ಕೊಲೆಯಾದ ಯುವಕ. ಇಬ್ಬರು ಬಾಲಾಪರಾಧಿ ಸೇರಿ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿಚಂದ್ರ ಪಾತ್ರೋಟ್, ಉಮೇಶ್ ಕಂಬಾರ್, ಮಾರುತಿ ವಡ್ಡರ್, ಅಭಿಷೇಕ್ ಪಾತ್ರೋಟ್, ಮನೋಜ್ ಪಾತ್ರೋಟ್, ವಿಜಯ್ ಕುಮಾರ್ ನಾಯಿಕ್ ಸೇರಿ ಇಬ್ಬರು ಬಾಲಾಪರಾಧಿಗಳು ಬಂಧಿತರು. ಪ್ರಕಾಶ್ ಚಲನವಲನ ಬಗ್ಗೆ ಮಾಹಿತಿ ನೀಡಲು ಆರೋಪಿಗಳು ಅಪ್ರಾಪ್ತರನ್ನು ಇನ್ಫಾರ್ಮರ್ ಆಗಿ ಬಳಸಿಕೊಂಡಿದ್ದರು.
ಕೊಳವಿ ಜಾತ್ರೆಯಲ್ಲಿ ಪ್ರಕಾಶ್ ಇರಟ್ಟಿ ಮತ್ತು ರವಿಚಂದ್ರ ಪಾತ್ರೋಟ್ ನಡುವೆ ಗಲಾಟೆಯಾಗಿತ್ತು. ಗಲಾಟೆ ಬಳಿಕ ಎರಡು ರೀಲ್ಸ್ ಹಾಕಿ ರವಿಚಂದ್ರ ನನ್ನು ಕೊಲೆಯಾದ ಪ್ರಕಾಶ್ ಉರಿಸಿದ್ದಾನೆ. ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಜಾತ್ರೆಗೆ ಪ್ರಕಾಶ್ ಹೋಗಿದ್ದಾನೆ. ಪ್ರಕಾಶ್ ಬರುವುದನ್ನು ಕಾದು ಕುಳಿತಿದ್ದ ಆರೋಪಿಗಳು ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಪ್ರಕರಣ ಕುರಿತಾಗಿ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದು, ಜ.14ರಂದು ಗೋಕಾಕ್ ತಾಲೂಕಿನ ಕೊಳವಿ ಹುಲಿಕಟ್ಟಿ ಗ್ರಾಮದ ಮಧ್ಯೆ ಕೊಲೆಯಾಗಿತ್ತು. ಕೊಳವಿ ಗ್ರಾಮದ ಪ್ರಕಾಶ್ ಇರಟ್ಟಿ ಎಂಬಾತ ಕೊಲೆಯಾಗಿದ್ದ. ಹುಲಿಕಟ್ಟಿ ಜಾತ್ರೆ ಮುಗಿಸಿ ವಾಪಾಸ್ ಮನೆಗೆ ಹೋಗುವಾಗ ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂಕ ಪ್ರಾಣಿ ಮೇಲೆ ಇದೆಂಥಾ ಕ್ರೌರ್ಯ: ನಾಯಿಯನ್ನ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಕೆಲ ತಿಂಗಳ ಹಿಂದೆ ಗೂಳಿ ಬಸವೇಶ್ವರ ಜಾತ್ರೆ ನಡೆದು ವಾದ ವಿವಾದ ಆಗಿತ್ತು. ಊರಿನ ಹಿರಿಯರು ಆರೋಪಿ ವಿಜಯ್ ಗೆ ಮತ್ತು ಪ್ರಕಾಶ್ ಗೆ ಬುದ್ದಿವಾದ ಹೇಳಿದ್ದರು. ಇದಾದ ಬಳಿಕ ಹುಲಿಕಟ್ಟಿ ಜಾತ್ರೆಗೆ ಹೋಗಿದ್ದ ಪ್ರಕಾಶ್ ಹತ್ಯೆಗೆ ಸ್ಕೇಚ್ ಹಾಕುತ್ತಾರೆ. ಒಂದು ಟೀಮ್ ಆತನ ಹಿಂಬಾಲಿಸಿದ್ತೇ ಮತ್ತೊಂದು ಟೀಮ್ ಹತ್ಯೆ ಮಾಡಿದೆ. ಆರೋಪಿ ಮತ್ತು ಕೊಲೆಯಾದ ಯುವಕರು ರೀಲ್ಸ್ಗಳನ್ನ ಹಾಕಿಕೊಂಡಿದ್ದರು. ಈ ವಿಚಾರ ಕೂಡ ಕೊಲೆಗೆ ಕಾರಣವಾಗಿದೆ ಅನ್ನೋ ಮಾಹಿತಿ ಇದೆ. ಈ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Mon, 20 January 25