ಅದೊಂದು ಸಂದೇಶದಿಂದ ಬೆಳಗಾವಿ ವಿಭಜನೆ ಮಾತಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಇತರರು ಸೈಲೆಂಟ್ ಆಗಿದ್ಯಾಕೆ?

ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ, ಜನಸಂಖ್ಯೆಯಲ್ಲಿ, ತಾಲೂಕುಗಳ ಸಂಖ್ಯೆಯೂ ಹೆಚ್ಚು, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ ಕೂಡ ಜಾಸ್ತಿ ಇದೆ. ಹೀಗಿದ್ದ ಜಿಲ್ಲೆಯನ್ನ ವಿಭಜನೆ ಮಾಡುವಂತೆ ಸಾಕಷ್ಟು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಇದೆ. ಆದರೆ ಇದೀಗ ವಿಭಜನೆ ಬಗ್ಗೆ ರಾಜಕೀಯ ನಾಯಕರು ಸೈಲೆಂಟ್ ಆಗಿದ್ದಾರೆ.

ಅದೊಂದು ಸಂದೇಶದಿಂದ ಬೆಳಗಾವಿ ವಿಭಜನೆ ಮಾತಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಇತರರು ಸೈಲೆಂಟ್ ಆಗಿದ್ಯಾಕೆ?
ಸಚಿವ ಸತೀಶ್ ಜಾರಕಿಹೊಳಿ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Sep 18, 2023 | 3:30 PM

ಬೆಳಗಾವಿ, ಸೆಪ್ಟೆಂಬರ್​ 18: ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ, ಎರಡನೇ ರಾಜಧಾನಿ ಬೆಳಗಾವಿ (Belagavi) ಜಿಲ್ಲೆಯನ್ನ ವಿಭಜನೆ ಮಾಡುವ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು. ಮೂರು ಜಿಲ್ಲೆಯಾಗಿ ವಿಭಜನೆ ಕುರಿತು ಹೇಳಿಕೆ ನೀಡ್ತಿದ್ದಂತೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಅಥಣಿ, ಬೈಲಹೊಂಗಲ ಭಾಗದಲ್ಲಿ ಹೆಚ್ಚಿನ ವಿರೋಧವಾಗಿದ್ದು, ಈ ವಿಚಾರ ಸರ್ಕಾರಕ್ಕೂ ನುಂಗಲಾರದ ತುತ್ತಾಗಿತ್ತು. ಅದೊಂದು ಸಂದೇಶದಿಂದ ಇದೀಗ ನಾಯಕರು ವಿಭಜನೆ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಅಷ್ಟಕ್ಕೂ ಸತೀಶ್ ಸೇರಿದಂತೆ ಉಳಿದ ನಾಯಕರು ಸೈಲೆಂಟ್ ಆಗಿದ್ಯಾಕೆ? ಸರ್ಕಾರದಿಂದ ಬಂದ ಸಂದೇಶ ಏನು ಇಲ್ಲಿದೆ ಆ ಕುರಿತಾದ ಒಂದು ವರದಿ.

ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ, ಜನಸಂಖ್ಯೆಯಲ್ಲಿ, ತಾಲೂಕುಗಳ ಸಂಖ್ಯೆಯೂ ಹೆಚ್ಚು, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ ಕೂಡ ಜಾಸ್ತಿ ಇದೆ. ಹೀಗಿದ್ದ ಜಿಲ್ಲೆಯನ್ನ ವಿಭಜನೆ ಮಾಡುವಂತೆ ಸಾಕಷ್ಟು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಇದೆ. ಜೆ.ಎಚ್ ಪಟೇಲರು ಸಿಎಂ ಇದ್ದ ಸಂದರ್ಭದಲ್ಲಿ ಜಿಲ್ಲಾ ವಿಭಜನೆ ಘೋಷಣೆ ಮಾಡಿ ನಂತರ ಕನ್ನಡಪರ ಹೋರಾಟಗಾರರ ಒತ್ತಡಕ್ಕೆ ಮಣಿದು ಮತ್ತೆ ವಾಪಾಸ್ ಪಡೆದಿದ್ದರು. ಇದಾದ ಬಳಿಕ ಚಿಕ್ಕೋಡಿಯನ್ನ ಜಿಲ್ಲೆ ಮಾಡುವಂತೆ ಸಾಕಷ್ಟು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: ಬೇರೆ ತಾಲೂಕಿನಿಂದ ಬಂದು ನಟಿಸುತ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ

ಇತ್ತ ಬೈಲಹೊಂಗಲ, ಅಥಣಿ, ಗೋಕಾಕ್ ಕೂಡ ಜಿಲ್ಲೆ ಮಾಡಬೇಕು ಅನ್ನೋ ಕೂಗಿದೆ. ಇನ್ನೂ ಹೊಸ ಸರ್ಕಾರ ರಚನೆಯಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಚಿಕ್ಕೋಡಿ, ಗೋಕಾಕ್ ಜಿಲ್ಲೆ ಮಾಡುವುದಾಗಿ ಹೇಳಿಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಬೈಲಹೊಂಗಲ ಮತ್ತು ಅಥಣಿ ತಾಲೂಕಿನ ಜನ ವಿರೋಧ ವ್ಯಕ್ತಪಡಿಸಿದ್ರೂ. ಎನೇ ಆದ್ರೂ ಮೊದಲು ಬೈಲಹೊಂಗಲ ಮತ್ತು ಅಥಣಿ ಜಿಲ್ಲೆ ಮಾಡಬೇಕು ಅಂತಾ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಈ ವಿಚಾರ ಸರ್ಕಾರದ ಗಮನಕ್ಕೆ ಬರ್ತಿದ್ದಂತೆ ಸತೀಶ್ ಜಾರಕಿಹೊಳಿ ಅವರಿಗೆ ಜಿಲ್ಲಾ ವಿಭಜನೆ ಕುರಿತು ಹೇಳಿಕೆ ನೀಡದಂತೆ ಸೂಚನೆ ಬಂದಿದೆ.

ಜಿಲ್ಲಾ ವಿಭಜನೆ ಮಾಡುವುದೂ ದೂರದ ಮಾತು ಆ ಬಗ್ಗೆ ಹೇಳಿಕೆ ಕೂಡ ನೀಡದಂತೆ ಸೂಚನೆ ಬಂದಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸದ್ಯ ಸತೀಶ್ ಜಾರಕಿಹೊಳಿ ಜಿಲ್ಲಾ ವಿಭಜನೆ ವಿಚಾರವನ್ನ ಇದೀಗ ಸರ್ಕಾರದತ್ತ ಬೊಟ್ಟು ಮಾಡಿ ಮಾತಾಡ್ತಿದ್ದಾರೆ.

ಅಷ್ಟಕ್ಕೂ ಜಿಲ್ಲಾ ವಿಭಜನೆ ವಿಚಾರದಲ್ಲಿ ಸತೀಶ್ ಸೈಲೆಂಟ್ ಆಗಿದ್ಯಾಕೆ, ಸರ್ಕಾರ ಸುಮ್ಮನಿರೋದ್ಯಾಕೆ ಎಂಬ ಪ್ರಶ್ನೆಗೆ ಉತ್ತರ, ಜಿಲ್ಲಾ ವಿಭಜನೆ ಮಾಡಿದರೆ ಯಾವ ತಾಲೂಕು ಜಿಲ್ಲೆಯನ್ನಾಗಿ ಮಾಡಬೇಕು ಅನ್ನೋದು ದೊಡ್ಡ ಸವಾಲಾಗಿದೆ. ಚಿಕ್ಕೋಡಿ, ಗೋಕಾಕ್ ಜಿಲ್ಲೆಯನ್ನ ಮಾಡಿದರೆ ಬೈಲಹೊಂಗಲ ಮತ್ತು ಅಥಣಿ ತಾಲೂಕಿನ ಜನ ಇದಕ್ಕೆ ವಿರೋಧ ಮಾಡ್ತಾರೆ. ಇದು ಸರ್ಕಾರದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.

ಇದನ್ನೂ ಓದಿ: ಬೆಳಗಾವಿ ವಿಭಜಿಸಿ 3 ಜಿಲ್ಲೆಗಳನ್ನಾಗಿ ಮಾಡಿದರೆ ಏನು ತಪ್ಪಿದೆ? ಶಾಸಕ ಗಣೇಶ್ ಹುಕ್ಕೇರಿ ಪ್ರಶ್ನೆ

ಯಾವುದೇ ತಾಲೂಕನ್ನ ಜಿಲ್ಲೆ ಮಾಡಿದರೆ ಇನ್ನೂಳಿದ ಕಡೆ ಎಫೆಕ್ಟ್ ಆಗಲಿದೆ ಅನ್ನೋದನ್ನ ಮನಗಂಡಿರುವ ಸರ್ಕಾರ ಸೈಲೆಂಟ್ ಆಗಿದೆ. ಇನ್ನೂ ಲೋಕಸಭಾ ಚುನಾವಣೆ ಕೂಡ ಬರ್ತಿದ್ದು ಅದರ ಮೇಲೆ ಬಹಳಷ್ಟು ಪರಿಣಾಮ ಬೀರುತ್ತೆ ಅನ್ನೋದು ಸರ್ಕಾರದ ಗಮನಕ್ಕೆ ಬಂದಿದ್ದು ಯಾಕೆ ಜಿಲ್ಲಾ ವಿಭಜನೆ ವಿಚಾರದಲ್ಲಿ ವಿರೋಧ ಕಟ್ಟಿಕೊಳ್ಳುವುದು ಅಂತಾ ಸುಮ್ಮನಾಗಿದೆ. ಇನ್ನೂ ಸರ್ಕಾರ ಮತ್ತು ಸಚಿವರ ನಡೆ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಅನುಕೂಲಕ್ಕೆ ಹೇಳಿಕೆ ನೀಡ್ತಾರೆ ಚುನಾವಣೆ ಬಂದಾಗ ಮತ್ತೆ ಸೈಲೆಂಟ್ ಆಗುತ್ತಾರೆ ಈ ರೀತಿ ಮಾಡಬಾರದು ಒಂದು ನಿರ್ಣಯ ತೆಗೆದುಕೊಳ್ಳಲಿ ಅಂತಿದ್ದಾರೆ.

ಅತೀ ದೊಡ್ಡ ಜಿಲ್ಲೆಯನ್ನ ಆಡಳಿತಾತ್ಮಕ ಹಾಗೂ ಅಭಿವೃದ್ದಿ ದೃಷ್ಟಿಯಿಂದ ವಿಭಜನೆ ಮಾಡಬೇಕೆಂಬುದು ಎಲ್ಲರ ಒತ್ತಾಯ. ಸದ್ಯ ಗಡಿ ವಿವಾದ ಇರುವ ಕಾರಣಕ್ಕೆ ಅದು ಮುಗಿಯುವವರೆಗೂ ಕಾದು ನಂತರ ವಿಭಜನೆ ಮಾಡಿ ಅನ್ನೋದು ಕನ್ನಡಪರ ಹೋರಾಟಗಾರರ ಒತ್ತಾಯವಾಗಿದೆ. ಈ ನಡುವೆ ಸತೀಶ್ ಜಾರಕಿಹೊಳಿ ಏಕಾಏಕಿ ಜಿಲ್ಲಾ ವಿಭಜನೆ ಮಾತಾಡಿ ಇದೀಗ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುತ್ತೆ ಅಂತಾ ಸೈಲೆಂಟ್ ಆಗಿದ್ದಾರೆ. ಸರ್ಕಾರದ ನಡೆ ವಿರುದ್ದ ಇದೀಗ ಜಿಲ್ಲೆಯ ಜನ ಆಕ್ರೋಶ ಹೊರ ಹಾಕ್ತಿದ್ದು ಇದನ್ನ ಸರ್ಕಾರ ಹೇಗೆ ನಿಭಾಯಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್