- Kannada News Photo gallery Fire Breaks out in Haveri firecracker Case 3 dead: Government School Staff Celebrated Ganesh Chaturthi simply
ಹಾವೇರಿ ಪಟಾಕಿ ಅಗ್ನಿ ದುರಂತದಲ್ಲಿ ಮೂವರ ಸಾವು: ಹಳೇ ವಿದ್ಯಾರ್ಥಿಗಳಿಗಾಗಿ ಸರಳವಾಗಿ ಗಣೇಶ ಚತುರ್ಥಿ ಆಚರಿಸಿದ ಶಾಲಾ ಆಡಳಿತ ಮಂಡಳಿ
ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಮದ ಬಳಿ ಇದ್ದ ಪಟಾಕಿ ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಮೂವರು ಸಜೀವ ದಹನವಾಗಿದ್ದರು. ಈ ಹಿನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳಿಗಾಗಿ ಪಟಾಕಿ ಹಚ್ಚದೆ ಶಾಲಾ ಆಡಳಿತ ಮಂಡಳಿ ಸರಳವಾಗಿ ಗಣೇಶ ಚತುರ್ಥಿ ಆಚರಿಸಿತು.
Updated on:Sep 19, 2023 | 9:57 AM

ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಮದ ಬಳಿ ಇದ್ದ ಪಟಾಕಿ ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಮೂವರು ಸಜೀವ ದಹನವಾಗಿದ್ದರು. ಈ ಹಿನ್ನೆಲೆಯಲ್ಲಿ ಪಟಾಕಿ ಗೋದಾಮಿನ ಮಾಲಿಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಈ ಘಟನೆಯಲ್ಲಿ ಹಾವೇರಿ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದ ಶಿವಲಿಂಗ ಅಕ್ಕಿ, ರಮೇಶ ಬಾರ್ಕಿ ,ದ್ಯಾಮಪ್ಪ ಓಲೇಕಾರ ಮೂವರು ಯುವಕರು ಮೃತಪಟ್ಟಿದರು.

ಪಟಾಕಿ ಅಂಗಡಿಯ ಅಗ್ನಿದುರಂತದಲ್ಲಿ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಕಾಟೇನಹಳ್ಳಿ ಗ್ರಾಮದಲ್ಲಿ ಸರಳವಾಗಿ ಗಣೇಶ ಹಬ್ಬ ಆಚರಿಸಲಾಗಿದೆ.

ಈ ಮೂವರು ಯುವಕರು ಕಾಟೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳಾಗಿದ್ದರು.

ಈ ಹಿನ್ನೆಲೆಯಲ್ಲಿ ಇವರ ಸ್ಮರ್ಣಾರ್ಥ ಶಾಲಾ ಆಡಳಿತ ಮಂಡಳಿ ಸರಳವಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ.

ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಪಟಾಕಿ ಹಚ್ಚದೆ ಗಣಪತಿಯನ್ನು ತಂದು ಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಬಳಿಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಣೇಶನಿಗೆ ಪೂಜೆ ಮಾಡಿ ಮತ್ತೆ ಇಂತಹ ಅವಘಡಗಳು ನಡೆಯದಂತೆ ನೋಡಿಕೊ ಗಣಪ ಎಂದು ಪಾರ್ಥಿಸಿದರು.
Published On - 3:20 pm, Mon, 18 September 23



