Border Dispute: ಗಡಿ ವಿವಾದದ ಕಿಚ್ಚು ಮಿರಜ್​-ಕಾಗವಾಡ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

| Updated By: ವಿವೇಕ ಬಿರಾದಾರ

Updated on: Nov 30, 2022 | 4:48 PM

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

Border Dispute: ಗಡಿ ವಿವಾದದ ಕಿಚ್ಚು ಮಿರಜ್​-ಕಾಗವಾಡ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಕರ್ನಾಟಕ-ಮಹಾರಾಷ್ಟ್ರ ಗಡಿ
Follow us on

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ (Karnataka-Maharashtra border dispute) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಜಿಲ್ಲೆಯ ಮಹಾರಾಷ್ಟ್ರ ಗಡಿಗೆ ಹತ್ತಿಕೊಂಡಿರುವ ಕಾಗವಾಡ ಹೊರವಲಯ, ಮಿರಜ್​-ಕಾಗವಾಡ ರಸ್ತೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ರಸ್ತೆ ಮೂಲಕ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡನ್ನೂ ರಚಿಸಿ ಪ್ರಾರಂಭದಿಂದಲೂ, ಕಾರವಾರ, ನಿಪ್ಪಾಣಿ ಮತ್ತು ಬೆಳಗಾವಿ (ಹಿಂದಿನ ಬೆಳಗಾವಿ) ಸೇರಿದಂತೆ ಗಡಿಯಲ್ಲಿರುವ 865 ಹಳ್ಳಿಗಳನ್ನು ಅದರೊಂದಿಗೆ ವಿಲೀನಗೊಳಿಸಬೇಕೆಂದು ಮಹಾರಾಷ್ಟ್ರ ಹೇಳಿಕೊಂಡಿದೆ. ಇತ್ತ ಕರ್ನಾಟಕ, ಮಹಾರಾಷ್ಟ್ರದ ಗಡಿಯಲ್ಲಿರುವ 260 ಕನ್ನಡ ಮಾತನಾಡುವ ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕೆಂದು ಹೇಳಿದೆ. ಸದ್ಯ ವಿವಾದ ಸುಪ್ರಿಂ ಕೋರ್ಟ್​​ ಅಂಗಳದಲ್ಲಿದ್ದು, ಇಂದು (ನ.30) ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಎಂಇಎಸ್ ಆಹ್ವಾನ ಸ್ವೀಕರಿಸಿದ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ; ಡಿ 3ಕ್ಕೆ ಬೆಳಗಾವಿಗೆ ಆಗಮನ

ಕರ್ನಾಟಕದ ಬಸ್​ಗಳಿಗೆ ಮಸಿ ಬಳಿದು ಕಲ್ಲು ತೂರಾಟ; ರಾಜ್ಯದಲ್ಲಿ ಬುಗಿಲೆದ್ದ ಆಕ್ರೋಶ

ಮಹಾರಾಷ್ಟ್ರದಲ್ಲಿ ಎಂಇಎಸ್ ಸಂಘಟನೆ ಕಾರ್ಯಕರ್ತರು ಕೆಎಸ್​ಆರ್​ಟಿಸಿ ಬಸ್​​​​​ ಮೇಲೆ ಕಲ್ಲು ತೂರಿ, ಮಸಿ ಬಳೆದಿದ್ದಾರೆ. ಇದನ್ನು ಖಂಡಿಸಿ ಬೆಳಗಾವಿಯಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ಮಾಡುತ್ತಿದೆ. ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದ ಕಾರ್ಯಕರ್ತರು, ಮಹಾಂತೇಶ್ ‌ನಗರ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ‌ಹೆದ್ದಾರಿ ನಾಲ್ಕು ತಡೆದು ಪ್ರತಿಭಟನೆ ಮಾಡಿದ್ದಾರೆ. ರಸ್ತೆಯಲ್ಲೇ ಧರಣಿ ಕುಳಿತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಬೆಳಗಾವಿಯಲ್ಲಿ ಎಂಇಎಸ್​ ಪುಂಡರಿಗೆ ಎಡಿಜಿಪಿ ಅಲೋಕ್​ಕುಮಾರ್ ಖಡಕ್​ ವಾರ್ನಿಂಗ್​

ಎಂಇಎಸ್ ಪುಂಡರೇ ಇರಲಿ ಯಾವುದೇ ಎಸ್ ಪುಂಡರೇ ಇರಲಿ ತರ್ಲೆ ಮಾಡಿದರೆ ಕ್ರಮ. ಏನಾದರೂ ತರ್ಲೆ ಮಾಡಲು ಬಂದ್ರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಯಾರ ಮನೆಯಲ್ಲೋ ಊಟ ಮಾಡೋಕೆ, ಯಾರದ್ದೋ ಮದುವೆ ಅಥವಾ ಸಮಾಲೋಚನೆ ಮಾಡಲು ಬಂದ್ರೆ ಏನು ಮಾಡಲ್ಲ. ಆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದರೆ ಕಠಿಣ ಕ್ರಮ ಎಂದು ಖಡಕ್ ಎಚ್ಚರಿಕೆ ನೀಡಿದರು.

ಡಿ. 3ರಂದು ಬೆಳಗಾವಿಗೆ ಮಹಾ ಸಚಿವರು

ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಗೆ ಆಗಮಿಸುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿಗೆ ಎಂಇಎಸ್ ಪತ್ರ ಬರೆದಿತ್ತು. ಈ ಪತ್ರಕ್ಕೆ ಈಗ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. ಡಿ. 3ರಂದು ಬೆಳಗಾವಿಗೆ ಬರೋದಾಗಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ್ ಕ್ಲಿಕ್​ ಮಾಡಿ

Published On - 4:47 pm, Wed, 30 November 22