ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಡಿಕೆ ಶಿವಕುಮಾರ್, ಮಹಾಂತೇಶ್ ಕವಟಗಿಮಠ ಕಾರಣ: ಲಖನ್ ಜಾರಕಿಹೊಳಿ ಆರೋಪ
ಡಿಕೆ ಶಿವಕುಮಾರ್ ಜತೆಗೆ ಕವಟಗಿಮಠ ಮೀಟಿಂಗ್ ಮಾಡಿಕೊಂಡರು. ಇಲ್ಲವಾದರೆ ಮೊದಲು ಬಿಜೆಪಿ ಆಮೇಲೆ ನಾನು ಗೆಲ್ಲುತ್ತಿದೆ. ಬಿಜೆಪಿ ಸೋಲಿಗೆ ಮುಖ್ಯ ಕಾರಣ ಡಿ.ಕೆ. ಶಿವಕುಮಾರ್ ಎಂದು ಲಖನ್ ಜಾರಕಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿ: ವಿಧಾನ ಪರಿಷತ್ ಸ್ಥಾನ ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಮುಖ್ಯ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ಸೋಲಿಗೆ ಡಿ.ಕೆ. ಶಿವಕುಮಾರ್, ಮಹಾಂತೇಶ್ ಕವಟಗಿಮಠ ಅವರ ಫಿಕ್ಸಿಂಗ್ ಕಾರಣ ಎಂದು ವಿಜೇತ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಶಿವಕುಮಾರ್ ಜತೆಗೆ ಕವಟಗಿಮಠ ಮೀಟಿಂಗ್ ಮಾಡಿಕೊಂಡರು. ಇಲ್ಲವಾದರೆ ಮೊದಲು ಬಿಜೆಪಿ ಆಮೇಲೆ ನಾನು ಗೆಲ್ಲುತ್ತಿದೆ. ಬಿಜೆಪಿ ಸೋಲಿಗೆ ಮುಖ್ಯ ಕಾರಣ ಡಿ.ಕೆ. ಶಿವಕುಮಾರ್ ಎಂದು ಲಖನ್ ಜಾರಕಿಹೊಳಿ ಆರೋಪಿಸಿದ್ದಾರೆ.
ಮಹಾಂತೇಶ್ ಕವಟಗಿಮಠ ಅವರಿಗೆ ಇದು ಗೊತ್ತಾಗಲಿಲ್ಲ ಎಂದು ಡಿಕೆಶಿ ವಿರುದ್ಧ ಲಖನ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಮತದಾರರ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ. ಎಲ್ಲಾ ಜಾತಿ ಮತದಾರರ ಆಶೀರ್ವಾದ ನಮಗೆ ಮಾಡಿದ್ದಾರೆ. ಆದರೆ, ಹದಿಮೂರು ಜನ ಬಿಜೆಪಿ ಶಾಸಕರು, ಇಬ್ಬರು ಸಂಸದರು, ಓರ್ವ ರಾಜ್ಯಸಭಾ ಸದಸ್ಯರಿದ್ದಾರೆ. ಇಷ್ಟೆಲ್ಲಾ ಇದ್ದೂ ಕೂಡ ರಮೇಶ್ ಜಾರಕಿಹೊಳಿ ಸೊಲಿಸಿದ್ರು ಅಂತಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ರಮೇಶ್ ಕಾರಣ. ರಮೇಶ್ ಜಾರಕಿಹೊಳಿಯನ್ನ ಸೋತ್ರು ಮತ್ತು ಗೆದ್ದರು ಟಾರ್ಗೆಟ್ ಮಾಡುತ್ತಾರೆ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿ ಅಲ್ಲಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಲ್ಲ. ನಾನು ಪಕ್ಷೇತರ ಅಭ್ಯರ್ಥಿ ಬಂಡಾಯ ಅಭ್ಯರ್ಥಿ ಅಲ್ಲ. ಎಂದು ಲಖನ್ ಹೇಳಿಕೆ ನೀಡಿದ್ದಾರೆ.
ಜಾರಕಿಹೊಳಿ ವಿರುದ್ಧ ಧಮ್ ಇದ್ರೆ ಬಿಜೆಪಿ ಕ್ರಮ ಕೈಗೊಳ್ಳಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಫಲಿತಾಂಶದ ಬಗ್ಗೆ ಪಕ್ಷದ ನಾಯಕರು ಚರ್ಚೆ ಮಾಡುತ್ತಾರೆ. ಬೆಳಗಾವಿ ಫಲಿತಾಂಶ ಇದು ಅನಿರೀಕ್ಷಿತ ಹಿನ್ನಡೆ, ಸರಿಪಡಿಸುವ ಕೆಲಸ ಮಾಡ್ತೇವೆ. ಈ ಪರಿಷತ್ ಫಲಿತಾಂಶದಿಂದ ಒಂದು ಸಂದೇಶ ಹೋಗುತ್ತೆ ಎಂದು ಬೆಳಗಾವಿಯಲ್ಲಿ ವಸತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಲಖನ್ ಜಾರಕೊಹೊಳಿಗೆ ಗೆಲುವು: ಸಂಭ್ರಮಾಚರಣೆ ವೇಳೆ ನೋಟುಗಳನ್ನ ತೂರಿ ಹುಚ್ಚಾಟ ಸ್ವತಂತ್ರ ಅಭ್ಯರ್ಥಿ ಲಖನ್ ಜಾರಕೊಹೊಳಿಗೆ ಗೆಲುವು ಹಿನ್ನೆಲೆ ಸಂಭ್ರಮಾಚರಣೆ ವೇಳೆ ನೋಟುಗಳನ್ನ ತೂರಿ ಹುಚ್ಚಾಟ ಮಾಡಿರುವ ಘಟನೆ ನಡೆದಿದೆ. 500 ರೂ. ನೋಟುಗಳನ್ನ ತೂರಿ ಬೆಂಬಲಿಗ ಹುಚ್ಚಾಟ ಮೆರೆದಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬೆಂಬಲಿಗನ ಹುಚ್ಚಾಟ ಕಂಡುಬಂದಿದೆ. ಸಂಭ್ರಮಾಚರಣೆ ಮಧ್ಯೆ ನೋಟುಗಳನ್ನ ತೂರಲಾಗಿದೆ. ಬೆಂಬಲಿಗನೊಬ್ಬ ಸಾವಿರಾರು ರೂಪಾಯಿಯಷ್ಟು ನೋಟುಗಳ ತೂರಿದ್ದಾನೆ. ನೋಟುಗಳನ್ನ ತೂರುತ್ತಿದ್ದಂತೆ ಸ್ಥಳೀಯರು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಬಿಜೆಪಿಗೆ ಮುಳುವಾಯ್ತಾ ಲಖನ್ ಜಾರಕಿಹೊಳಿ ಸ್ಪರ್ಧೆ? ಬೆಳಗಾವಿಯಲ್ಲಿ ಕಾಂಗ್ರೆಸ್ಗೆ ಗೆಲುವು
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ; ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಗರಂ