ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ; ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಗರಂ

ಪಿಎಂ ಪರಿಹಾರ ನಿಧಿಯಿಂದ ಎಷ್ಟು ಹಣ ಬಂದಿದೆ ಹೇಳಿ? ರಾಜ್ಯಕ್ಕೆ ಎಷ್ಟು ದುಡ್ಡು ಬಂದಿದೆ ಹೇಳಿ ನೋಡೋಣ? ಚಪ್ಪಾಳೆ ತಟ್ಟಿ, ದೀಪಹಚ್ಚಿ, ಘಂಟೆ ಬಾರಿಸಿ ಅಂತಾರೆ. 4 ಮನವಿ‌‌ ಕೊಟ್ಟರೂ ರಾಜ್ಯಕ್ಕೆ ಸಿಂಗಲ್‌ ಪೈಸೆ‌ ಕೊಟ್ಟಿಲ್ಲ ಎಂದು ಸರ್ಕಾರಕ್ಕೆ ವಿಪಕ್ಷ ‌ನಾಯಕ‌ ಸಿದ್ದರಾಮಯ್ಯ‌ ತರಾಟೆ ತೆಗೆದುಕೊಂಡಿದ್ದಾರೆ.

ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ; ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಗರಂ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: ganapathi bhat

Updated on: Dec 14, 2021 | 5:33 PM

ಬೆಳಗಾವಿ: ವಿಧಾನಸಭೆಯಲ್ಲಿ ಅತಿವೃಷ್ಟಿ ಮೇಲಿನ ಚರ್ಚೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದುವರಿಸಿದ್ದಾರೆ. ಈ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ರಾಜ್ಯಕ್ಕೆ ಬರಬೇಕಿದ್ದ ಪಾಲು ಪಡೆದುಕೊಳ್ಳುವಲ್ಲಿ ವಿಫಲ ಆಗಿದೆ. ಡಬಲ್​ ಇಂಜಿನ್​ ಸರ್ಕಾರ ಎಂದು ಮೋದಿ ಹೇಳಿದ್ದರು. ಇಲ್ಲಿ ಡಬಲ್ ದೋಖಾ‌ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವ ಕೃಷ್ಣಭೈರೇಗೌಡ, ರಾಜ್ಯಕ್ಕೆ ಪರಿಹಾರ ಬಾಕಿ ಇದೆ ಎಂದು ಬಿಎಸ್​ವೈ ಹೇಳಿದ್ರು. ಮೋದಿಗೆ ಹೇಳಿದ್ದಕ್ಕೆ ಯಡಿಯೂರಪ್ಪರನ್ನ ಇಳಿಸಿರಬೇಕು. ಅದಕ್ಕೆ ಈಗ ಎಲ್ಲರೂ ಪಾಠ ಕಲಿತುಕೊಂಡಿದ್ದಾರೆ. ಅದಕ್ಕೆ ಸಂಸದರು ಕೂಡ ಈ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕೃಷ್ಣಭೈರೇಗೌಡ ಹೇಳಿಕೆಗೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ಕೇಳಿಬಂದಿದೆ. ನಂತರ ಕೊರೊನಾ‌ ಪರಿಹಾರ ಕೊಟ್ಟಿಲ್ಲ‌ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಲಕ್ಷಲಕ್ಷ ಪರಿಹಾರ ‌ಕೊಟ್ಟಿದ್ದೇವೆ ಎಂದು ಸಚಿವ ಕಾರಜೋಳ ಹೇಳಿದ್ದಾರೆ. ಸಚಿವ ಕಾರಜೋಳ ಮಾತಿನಿಂದ ಸದನದಲ್ಲಿ ತೀವ್ರ ಗದ್ದಲ ಉಂಟಾಗಿದೆ. ಪಿಎಂ ಪರಿಹಾರ ನಿಧಿಯಿಂದ ಎಷ್ಟು ಹಣ ಬಂದಿದೆ ಹೇಳಿ? ರಾಜ್ಯಕ್ಕೆ ಎಷ್ಟು ದುಡ್ಡು ಬಂದಿದೆ ಹೇಳಿ ನೋಡೋಣ? ಚಪ್ಪಾಳೆ ತಟ್ಟಿ, ದೀಪಹಚ್ಚಿ, ಘಂಟೆ ಬಾರಿಸಿ ಅಂತಾರೆ. 4 ಮನವಿ‌‌ ಕೊಟ್ಟರೂ ರಾಜ್ಯಕ್ಕೆ ಸಿಂಗಲ್‌ ಪೈಸೆ‌ ಕೊಟ್ಟಿಲ್ಲ ಎಂದು ಸರ್ಕಾರಕ್ಕೆ ವಿಪಕ್ಷ ‌ನಾಯಕ‌ ಸಿದ್ದರಾಮಯ್ಯ‌ ತರಾಟೆ ತೆಗೆದುಕೊಂಡಿದ್ದಾರೆ.

ಕೆರೆ ಸಂರಕ್ಷಿಸಿ ಸಾಂಸ್ಕೃತಿಕ ನಗರಿ ಮೈಸೂರು ಉಳಿಸಲು ಮನವಿ ಕೆರೆ ಸಂರಕ್ಷಿಸಿ ಸಾಂಸ್ಕೃತಿಕ ನಗರಿ ಮೈಸೂರು ಉಳಿಸಲು ಮನವಿ ಮಾಡಲಾಗಿದೆ. ಇದಕ್ಕೆ ವಿಧಾನಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಪ್ರಸ್ತಾಪ ಮಾಡಿದ್ದಾರೆ. 135 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡಿ ನೀರು ಹರಿವಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಮುಂಡಿಬೆಟ್ಟ ಕುಸಿತದ ಬಗ್ಗೆ ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿಗಳ ಟಾಸ್ಕ್‌ಫೋರ್ಸ್ ರಚನೆಗೆ ಜಿಟಿಡಿ ಮನವಿ ಮಾಡಿದ್ದಾರೆ. ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರ ನೀಡಿದ್ದಾರೆ.

ಮೈಸೂರು ಲ್ಯಾಂಪ್ ಆಸ್ತಿಯನ್ನು ಟ್ರಸ್ಟ್ ಮಾಡದಂತೆ ವಿಧಾನಪರಿಷತ್‌ನಲ್ಲಿ ಸದಸ್ಯ ಬಿ.ಎಂ.ಎಲ್.ಕಾಂತರಾಜು ಮನವಿ ಮಾಡಿದ್ದಾರೆ. ಮೈಸೂರು ಲ್ಯಾಂಪ್ ಆಸ್ತಿಯನ್ನು ಟ್ರಸ್ಟ್ ಮಾಡುವುದಿಲ್ಲ ಎಂದು ವಿಧಾನಪರಿಷತ್‌ನಲ್ಲಿ ಸಚಿವ ಮುರುಗೇಶ್ ನಿರಾಣಿ ಉತ್ತರ ನೀಡಿದ್ದಾರೆ. ಡೆವಲಪ್‌ಮೆಂಟ್ ಕಮಿಷನ್, ಬಿಬಿಎಂಪಿ ಕಮಿಷನ್, ಎನ್ವಿರಾನ್ಮೆಂಟ್ ಸದಸ್ಯರಿರುತ್ತಾರೆ. ಅದನ್ನು ಮಾರಾಟ ಮಾಡಲು ಆಗಲ್ಲ. ಅದು ಅಭಿವೃದ್ಧಿ ಮಾಡಲು ಇರುವ ಜಾಗ, ಅಭಿವೃದ್ಧಿ ಮಾಡುತ್ತೇವೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಮಂಡ್ಯದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಕೆಐಎಡಿಬಿಯಿಂದ ಭೂಸ್ವಾಧೀನ ವಿಚಾರವಾಗಿ, ಕೆಐಎಡಿಬಿಯ 3 ಎಕರೆ 14 ಗುಂಟೆ ಜಾಗ ಭೂಗಳ್ಳರಿಂದ ಮಾರಾಟ ಮಾಡಿರುವುದು ಹೇಗೆ? ನಿವೇಶನ ಮಾಡಿ ಮಾರಿದ್ದು ಹೇಗೆ ಎಂದು ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ. ಮರಿತಿಬ್ಬೇಗೌಡ ಪ್ರಶ್ನೆಗೆ ಪರಿಷತ್‌ನಲ್ಲಿ ಸಚಿವ ನಿರಾಣಿ ಉತ್ತರ ನೀಡಿದ್ದಾರೆ. ಅಲ್ಲಿ ಯಾವುದೇ ನಿವೇಶನ ಬಂದಿಲ್ಲ, ಆಶ್ರಯ ಮನೆಗೆ ಅಲಾಟ್ ಮಾಡಲಾಗಿತ್ತು. ಮೂರು ಎಕರೆ ಜಾಗವನ್ನು ಸ್ವಾಧೀನ ಪಡಿಸುಕೊಳ್ಳುತ್ತೇವೆ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.

ಮಾನ್ಯತೆ ನವೀಕರಣಕ್ಕೆ ಇಲ್ಲಸಲ್ಲದ ನಿಯಮ ಹಾಕಲಾಗಿದೆ ವಿಧಾನಪರಿಷತ್​​ನಲ್ಲಿ ನಿಯಮ 330ರಡಿ ಚರ್ಚೆ ಸದಸ್ಯ ಶ್ರೀಕಂಠೇಗೌಡ ಹೇಳಿಕೆ ನೀಡಿದ್ದಾರೆ. ಮಾನ್ಯತೆ ನವೀಕರಣಕ್ಕೆ ಇಲ್ಲಸಲ್ಲದ ನಿಯಮ ಹಾಕಿದೆ. ನವೀಕರಣಕ್ಕೆ ಇಲ್ಲಸಲ್ಲದ ನಿಯಮ ಸರ್ಕಾರ ಹಾಕಿದೆ. ಅನುದಾನಿತ, ಅನುದಾನ ರಹಿತ ಶಾಲೆಗಳ ಮಾನ್ಯತೆ, ಬಿಲ್ಡಿಂಗ್ ಸೇಫ್ಟಿ, ಫೈರ್ ಸೇಫ್ಟ್ ನಿಯಮದ ಜೊತೆ ಮಾನ್ಯತೆ ನವೀಕರಣ ವಿಷಯವನ್ನ ಸೇರಿಸಲಾಗಿದೆ. ಕೂಡಲೇ ಈ ನಿಯಮ ಸಡಿಲ ಮಾಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಮಾದರಿಯಲ್ಲಿ ವಿಶೇಷ ಕಾಯ್ದೆ ಜಾರಿಗೆ ತನ್ನಿ. ಈಗಾಗಲೇ ಸರ್ಕಾರ ನೇಮಿಸಿದ ಸಮಿತಿ ವರದಿ ನೀಡಿದೆ. ಈ ವರದಿ ಅಂಶಗಳನ್ನ ಅನುಷ್ಠಾನಗೊಳಿಸಲು ಒತ್ತಾಯ ಮಾಡಿದ್ದಾರೆ. ಸರ್ಕಾರಕ್ಕೆ ಪರಿಷತ್​ ಸದಸ್ಯ ಶ್ರೀಕಂಠೇಗೌಡ ಒತ್ತಾಯ ಮಾಡಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿ ಕಚೇರಿ ಸ್ಥಳಾಂತರ ಬಗ್ಗೆ ಪ್ರಶ್ನೆ ಮಾಡಲಾಗಿದೆ. ವಿಧಾನಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶ್ನೆ ಮಾಡಿದ್ದಾರೆ. ಎಸ್‌ಪಿ ಕಚೇರಿ ಸ್ಥಳಾಂತರದ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಎಸ್‌ಪಿ ಕಚೇರಿ ಜತೆ DAR ಕೂಡ ಸ್ಥಳಾಂತರ ಮಾಡಬೇಕಾಗುತ್ತೆ. ಎಲ್ಲವನ್ನೂ ಪರಿಶೀಲಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಧಾನ ಪರಿಷತ್ ಮೊಗಸಾಲೆಯಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಗಾನ ಲಹರಿ ವಿಧಾನ ಪರಿಷತ್ ಮೊಗಸಾಲೆಯಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಗಾನ ಲಹರಿ ಕೇಳಿಬಂದಿದೆ. ಭೋಜನ ವಿರಾಮದಲ್ಲಿ ಭೋಜೇಗೌಡ ಹಾಡು ಹಾಡಿದ್ದಾರೆ. ಸಚಿವರು ಮತ್ತು ಶಾಸಕರು ಭೋಜೇಗೌಡ ಹಾಡನ್ನು ಆನಂದಿಸಿದ್ದಾರೆ.

ಇದನ್ನೂ ಓದಿ: MLC Election Results: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ವಿವರ

ಇದನ್ನೂ ಓದಿ: ಚುನಾಯಿತ ಪ್ರತಿನಿಧಿಗಳ ತೀರ್ಪು ನಮ್ಮ ಪರ ಇದೆ; ಕಾಂಗ್ರೆಸ್ ಪರ ಅಲೆ ಇದೆ: ಸಿದ್ದರಾಮಯ್ಯ ಹೇಳಿಕೆ