ಚುನಾಯಿತ ಪ್ರತಿನಿಧಿಗಳ ತೀರ್ಪು ನಮ್ಮ ಪರ ಇದೆ; ಕಾಂಗ್ರೆಸ್ ಪರ ಅಲೆ ಇದೆ: ಸಿದ್ದರಾಮಯ್ಯ ಹೇಳಿಕೆ
ಬೆಳಗಾವಿಯಲ್ಲಿ ಬಿಜೆಪಿ ಸೋಲು ಕಂಡಿದೆ. ಇದು ಬಿಜೆಪಿಗೆ ಧಮ್ ಇಲ್ಲ ಎಂಬುದು ಸೂಚಿಸುತ್ತದೆ. ಗೆದ್ದ ಮತ್ತು ಸೋತ ಎಲ್ಲಾ ಅಭ್ಯರ್ಥಿಗೂ ಅಭಿನಂದನೆ ಹೇಳ್ತೇನೆ ಎಂದು ಕಾಂಗ್ರೆಸ್ ನಾಯಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬೆಳಗಾವಿ: ನಾವು 12 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಗಾಯತ್ರಿ ಕೇವಲ 6 ಮತಗಳನ್ನ ಸೋತರು. ಅಲ್ಲಿ 10 ಮಂದಿ ನಾಮಿನೆಟೆಡ್ ಮೆಂಬರ್ ಇದ್ರು. ಅವರು ವೋಟ್ ಹಾಕಿಲ್ಲ. ಅವರು ವೋಟ್ ಹಾಕಿದ್ರೆ ಗೆಲ್ತಾ ಇದ್ರು. ಬಾಕಿ ಕಡೆ ನಾವು ಉತ್ತಮ ಫೈಟ್ ನೀಡಿದ್ದೇವೆ. ಈ ಸಂದರ್ಭದಲ್ಲಿ ನಾನು ಜಿಲ್ಲಾ ಹಾಗೂ ಸ್ಥಳಿಯ ಸಂಸ್ಥೆ ಸದಸ್ಯರಿಗೆ ಧನ್ಯವಾದ ಹೇಳ್ತಿನಿ. ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಹೇಳ್ತಿನಿ. ಇದು ಜನಾಭಿಪ್ರಾಯ ಅಲ್ಲ. ಆದರೂ ಕೂಡ ಚುನಾಯಿತ ಪ್ರತಿನಿಧಿಗಳ ತೀರ್ಪು ನಮ್ಮ ಪರ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಧ್ರುವಿಕರಣ ಆರಂಭವಾಗಿದೆ. ಬೆಳಗಾವಿಯಲ್ಲಿ ಬಿಜೆಪಿ ಸೋಲು ಕಂಡಿದೆ. ಇದು ಬಿಜೆಪಿಗೆ ಧಮ್ ಇಲ್ಲ ಎಂಬುದು ಸೂಚಿಸುತ್ತದೆ. ಗೆದ್ದ ಮತ್ತು ಸೋತ ಎಲ್ಲಾ ಅಭ್ಯರ್ಥಿಗೂ ಅಭಿನಂದನೆ ಹೇಳ್ತೇನೆ ಎಂದು ಕಾಂಗ್ರೆಸ್ ನಾಯಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ವಿಜಯಪುರ: ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಕಾಂಗ್ರೆಸ್ ಗೆಲುವು ವಿಜಯಪುರ ಬಾಗಲಕೋಟ ದ್ವಿಸದಸ್ಯ ಸ್ಥಾನ ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ 3,245 ಮತಗಳನ್ನು ಪಡೆದುಕೊಂಡಿದ್ದಾರೆ. 1,026 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿ.ಎಚ್ ಪೂಜಾರಗೆ 2,219 ಮತ ಲಭಿಸಿದೆ. ಪಕ್ಷೇತರ ಮಲ್ಲಿಕಾರ್ಜುನ ಲೋಣಿಗೆ 1,466 ಮತಗಳು ಲಭ್ಯವಾಗಿವೆ.
ಎಂಎಲ್ಸಿ ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಹೇಳಿಕೆ ನೀಡಿದ್ದಾರೆ. ಅವಳಿ ಜಿಲ್ಲೆಯ 15 ವಿಧಾನಸಭಾ ಮತಕ್ಷೇತ್ರದ ನಾಯಕರ ಕಾರ್ಯಕರ್ತರ ಜಯ ಇದು. ಸ್ಥಳಿಯ ಸಂಸ್ಥೆಯ ಸದಸ್ಯರ ದ್ವನಿಯಾಗಿ ನಾನು ಕೆಲಸ ಮಾಡುವೆ. ಉಪ ಚುನಾವಣೆಯಲ್ಲಿ ನಾನು ಆಯ್ಕೆಯಾದ ಬಳಿಕ ಸತತವಾಗಿ ಸ್ಥಳಿಯ ಸಂಸ್ಥೆಯ ಜನ ಪ್ರತಿನಿಧಿಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ನೂತನ ಸದಸ್ಯರ ಜೊತೆ ಕೂಡಾ ನಾನು ನಿರಂತರ ಸಂಪರ್ಕದಲ್ಲೆದ್ದೇನೆ. 6,500ಕ್ಕೂ ಅಧಿಕ ಸ್ಥಳಿಯ ಸಂಸ್ಥೆಯ ಜನ ಪ್ರತಿನಿಧಿಗಳಿಗೆ ಖುದ್ದಾಗಿ ಭೇಟಿ ಆಗಿ ಅವರ ಅಹವಾಲು ಸ್ವೀಕರಿಸಿರುವೆ. ನಾನು ಮಾಡಿದ ದುಡಿಮೆಗೆ ನನಗೆ ಪಗಾರ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಸರ್ಕಾರಕ್ಕಿಂತ ವ್ಯಕ್ತಿಯ ಮೇಲೆ ಚುನಾವಣೆ ಹೋಗುತ್ತದೆ ಸರ್ಕಾರಕ್ಕಿಂತ ವ್ಯಕ್ತಿಯ ಮೇಲೆ ಚುನಾವಣೆ ಹೋಗುತ್ತದೆ. ಬಿಜೆಪಿ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂದು ಹಾನಗಲ್ ನಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ಸಚಿವ ಕಾರಜೋಳ ಅವರು ಹೇಳಿದ್ದರು 5 ಸಾವಿರ ಮತಗಳಿಂದ ನಾವು ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲ್ಲುತ್ತೇವೆ ಕಾಂಗ್ರೆಸ್ ಧೂಳಿ ಪಟ ಆಗುತ್ತದೆ ಎಂದಿದ್ದರು. ಈ ಚುನಾವಣೆಯ ಫಲಿತಾಂಶವೇ ಅವರಿಗೆ ಉತ್ತರ. ಮಾತು ಕಡಿಮೆ ಮಾಡಬೇಕು ಕೆಲಸ ಜಾಸ್ತಿ ಮಾಡಬೇಕು ಎಂದು ಕಾರಜೋಳಗೆ ಸುನೀಲಗೌಡ ಪಾಟೀಲ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ದ್ವಿಸದಸ್ಯ ವಿಧಾನಪರಿಷತ್ ಮತ ಎಣಿಕೆ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಗೌಡ 3,245, ಬಿಜೆಪಿ ಅಭ್ಯರ್ಥಿ ಪಿ.ಹೆಚ್ ಪೂಜಾರ್ 2,219, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ 1,466 ಮತಗಳನ್ನು ಪಡೆದುಕೊಂಡಿದ್ದಾರೆ. ತಿರಸ್ಕೃತಗೊಂಡ ಮತಗಳು 375 ಆಗಿವೆ. ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ಆರಂಭವಾಗಿದೆ. ಎರಡನೇ ಪ್ರಾಶಸ್ತ್ಯ ಎಣಿಕೆಯಲ್ಲಿ ಬಿಜೆಪಿ- ಪಕ್ಷೇತರ ಅಭ್ಯರ್ಥಿ ನಡುವೆ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಪಿ ಎಚ್ ಪೂಜಾರ, ಪಕ್ಷೇತ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಧ್ಯೆ ತೀವ್ರ ಹಣಾಹಣಿ ಉಂಟಾಗಿದೆ.
ಮೈಸೂರು: ಮೊದಲ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್‌ಗೆ ಜಯ ಮೈಸೂರಿನಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್‌ಗೆ ಜಯ ಲಭಿಸಿದೆ. ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಮಧ್ಯೆ ಗೆಲುವಿಗಾಗಿ ಫೈಟ್ ನಡೆಯುತ್ತಿದೆ. ದ್ವಿತೀಯ ಪ್ರಾಶಸ್ತ್ಯ ಮತಗಳ ಎಣಿಕೆ ಕಾರ್ಯ ಆರಂಭ ಆಗಿದೆ.
ಮೈಸೂರು ಚಾಮರಾಜನಗರ ಪರಿಷತ್ ಚುನಾವಣೆಯಲ್ಲಿ ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಎರಡನೇ ಸ್ಥಾನಕ್ಕೆ ಬಿಜೆಪಿ ಜೆಡಿಎಸ್ ನಡುವೆ ಹಣಾಹಣಿ ನಡೆಯುತ್ತಿದೆ. ಮೊದಲ ಪ್ರಾಶಸ್ತ್ಯ ಮತದ ಅಂತ್ಯದ ವೇಳೆಗೆ 139 ಮತಗಳ ಅಂತರ ಕಂಡುಬಂದಿದೆ. 139 ಮತಗಳ ಅಂತರದಿಂದ ಬಿಜೆಪಿ ಮುಂದಿದೆ. ಬಿಜೆಪಿ ರಘು ಕೌಟಿಲ್ಯಗೆ 1919 ಮತ, ಜೆಡಿಎಸ್ ಸಿ ಎನ್ ಮಂಜೇಗೌಡಗೆ 1780 ಮತ ಲಭಿಸಿದೆ. ಎರಡನೇ ಪ್ರಾಶಸ್ತ್ಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.
ತುಮಕೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ ತುಮಕೂರು ಜಿಲ್ಲೆಯಲ್ಲಿ ಸಾಮೂಹಿಕ ನಾಯಕತ್ವದಿಂದ ಜಯ ಲಭಿಸಿದೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ. ಅವಕಾಶ ನೀಡಿದ ನಾಯಕರು, ಕಾರ್ಯಕರ್ತರಿಗೆ ಅಭಿನಂದನೆ. ಮುಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಗೊಳಿಸ್ತೇವೆ. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ 3ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನ 8-9 ಶಾಸಕರು ಗೆಲ್ತಾರೆ ಎಂದು ತುಮಕೂರು ಕ್ಷೇತ್ರದ ವಿಜೇತ ಅಭ್ಯರ್ಥಿ ರಾಜೇಂದ್ರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: 6 ಮತಗಳ ಅಂತರದಿಂದ ಬಿಜೆಪಿಗೆ ಗೆಲುವು; ಮರು ಮತ ಎಣಿಕೆಗೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ