Threat to Nitin Gadkari: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದು ಬೆಳಗಾವಿ ಹಿಂಡಲಗಾ ಜೈಲಿನ ಕೈದಿ
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಂಗಳೂರಿನ ಕೈದಿ ಜಯೇಶ್ ಪೂಜಾರಿ ಎಂದು ತಿಳಿದು ಬಂದಿದೆ.
ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಗೆ (Nitin Gadkari) ಜೀವ ಬೆದರಿಕೆ ಕರೆ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಮಹಾರಾಷ್ಟ್ರದ (Maharashtra) ನಾಗ್ಪುರ ಪೊಲೀಸರು ತನಿಕೆಯನ್ನು ಚುರುಕುಗೊಳ್ಳಿಸಿದ್ದು, ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನು ಬೆಳಗಾವಿಯ (Belagavi) ಹಿಂಡಲಗಾ (Hindalaga) ಜೈಲಿನಲ್ಲಿರುವ ಮಂಗಳೂರಿನ ಕೈದಿ ಜಯೇಶ್ ಪೂಜಾರಿ ಎಂದು ತಿಳಿದು ಬಂದಿದೆ.
ಕೈದಿ ಜಯೇಶ್ ಪೂಜಾರಿ ಅಂತರ್ಜಾಲದಲ್ಲಿ ಸಚಿವರ ಮೊಬೈಲ್ ನಂಬರ್ ಪಡೆದು 3 ಬಾರಿ ಬೆದರಿಕೆ ಕರೆ ಮಾಡಿದ್ದನು. ಸದ್ಯ ನಾಗ್ಪುರ ಪೊಲೀಸರು ಜಯೇಶ್ ಪೂಜಾರಿಯನ್ನು ವಶಕ್ಕೆ ಪಡೆಯಲಿದ್ದಾರೆ. ಇನ್ನು ಜಯೇಶ್ ಪೂಜಾರಿ ಬಳಸಿದ ಮೊಬೈಲ್ಗಾಗಿ ಪೊಲೀಸರು ಶೋಧಕಾರ್ಯ ನಡೆಸಿದರೂ, ಮೊಬೈಲ್ ಸಿಗಲಿಲ್ಲ. ಇಂದು (ಜ.15) ನಾಗ್ಪುರ ಪೊಲೀಸರು ಜಯೇಶ್ನನ್ನು ವಿಚಾರಣೆಗೆ ನಾಗ್ಪುರಗೆ ಕರೆದುಕೊಂಡು ಸಾಧ್ಯತೆ ಇದೆ. ಈ ಜಯೇಶ್ ಪೂಜಾರಿ ಕೊಲೆ ಸೇರಿ ಮೂರು ಪ್ರಕರಣದಲ್ಲಿ ಜೈಲು ಸೇರಿದ್ದಾನೆ.
ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ 3 ಬಾರಿ ಜೀವ ಬೆದರಿಕೆ ಕರೆ
ಜಯೇಶ್ ಪೂಜಾರಿ ಕರೆಗಾಗಿ ಜೈಲಿನಲ್ಲಿದ್ದ ಬೆಳಗಾವಿ ನಗರದ ಆರೋಪಿಯ ಮೊಬೈಲ್ ಬಳಸಿದ್ದನು. ತನ್ನ ಪತ್ನಿಗೆ ಕರೆ ಮಾಡುವುದಾಗಿ ಹೇಳಿ ಮೊಬೈಲ್ ಪಡೆದಿದ್ದನು. ಮಹಾರಾಷ್ಟ್ರ ಹಾಗೂ ಬೆಳಗಾವಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಇಂದು ಕೂಡ ಜೈಲಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಹಿಂಡಲಗಾ ಜೈಲಿನ ಕೈದಿಗಳು ಈ ಹಿಂದೆ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್‌ಗೆ ಜೀವ ಬೆದರಿಕೆ ಹಾಕಿದ್ದರು.
ಹಲವು ಬಾರಿ ದಾಳಿಯಾದರೂ ಜೈಲಿನಲ್ಲಿ ಮೊಬೈಲ್ ಬಳಕೆ ನಿಲ್ಲುತ್ತಿಲ್ಲ. ಈ ಸಬಂಧ ಕೆಲ ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಜೈಲಿಗೆ ಭೇಟಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ