Kittur: ಹುಚ್ಚು ಕೋತಿ ದಾಳಿಗೆ ಬೆಚ್ಚಿ ಬಿದ್ದ ಇಡೀ ಗ್ರಾಮ: ಬೇಗ ಹಿಡಿಯಿರಿ, ಇಲ್ಲ ಗುಂಡಿಕ್ಕಿ ಕೊಲ್ಲಿ ಎಂದ ಗ್ರಾಮಸ್ಥರು
ಕಳೆದ ಕೆಲ ದಿನಗಳಿಂದ ಊರಲ್ಲಿ ಮಂಗಗಳ ಹಿಡೊಂದು ಗ್ರಾಮದಲ್ಲಿ ಬಿಡು ಬಿಟ್ಟಿದ್ದು, ಅದರಲ್ಲಿ ಒಂದು ಕೋತಿಗೆ ಹುಚ್ಚು ಹಿಡಿದಿದೆ. ಒಂಟಿಯಾಗಿ ಓಡಾಡುವ ಜನರ ಮೇಲೆ ಅಟ್ಯಾಕ್ ಮಾಡಿ ಎಲ್ಲೆಂದರಲ್ಲಿ ಕಚ್ಚಿ ಪರಾರಿಯಾಗುತ್ತಿದೆ.
ಬೆಳಗಾವಿ: ಆ ಗ್ರಾಮದಲ್ಲಿ ಜನ ಒಂಟಿಯಾಗಿ ಓಡಾಡುವ ಹಾಗಿಲ್ಲ. ಗುಂಪು ಗುಂಪಾಗಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡೇ ಓಡಾಡುವ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಅದೊಬ್ಬರ ಭಯ (fear) ಎಷ್ಟಿದೆ ಅಂದರೆ ಸ್ವಲ್ಪ ಯಾಮಾರಿದರೂ ಅವರ ಕಥೆ ಮುಗಿಸಿ ಬಿಡ್ತಾನೆ ಆತ. ಕೆಲವೊಮ್ಮೆ ಮನೆಗಳಿಗೆ ಎಂಟ್ರಿಕೊಟ್ಟು ಅಟ್ಯಾಕ್ ಮಾಡ್ತಿರುವ ಆತನಿಂದ ಇಡೀ ಗ್ರಾಮವೇ ಆತಂಕಕ್ಕೊಳಗಾಗಿದೆ. ಆತನ ಸೆರೆಗೆ ಒಂದು ಟೀಮ್ ಕೂಡ ಗ್ರಾಮದಲ್ಲಿ ಬಿಡು ಬಿಟ್ಟಿದ್ರೂ ಆತ ಮಾತ್ರ ಎಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಾ ಗ್ರಾಮದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾನೆ.
ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ಜನರು ಯಾರೋ ವ್ಯಕ್ತಿಯ ಭಯ ಇಲ್ಲಾ ಬದಲಿಗೆ ಹುಚ್ಚು ಹಿಡಿದ ಕೋತಿ (mad monkey attack) ಭಯದಿಂದ ಈ ರೀತಿ ಜನ ಸುರಕ್ಷೆತೆಗಾಗಿ ದೊಣ್ಣೆ ಹಿಡಿದುಕೊಂಡು ಓಡಾಡ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಊರಲ್ಲಿ ಮಂಗಗಳ ಹಿಡೊಂದು ಗ್ರಾಮದಲ್ಲಿ ಬಿಡು ಬಿಟ್ಟಿದ್ದು, ಅದರಲ್ಲಿ ಒಂದು ಕೋತಿಗೆ ಹುಚ್ಚು ಹಿಡಿದಿದೆ. ಒಂಟಿಯಾಗಿ ಓಡಾಡುವ ಜನರ ಮೇಲೆ ಅಟ್ಯಾಕ್ ಮಾಡಿ ಎಲ್ಲೆಂದರಲ್ಲಿ ಕಚ್ಚಿ ಪರಾರಿಯಾಗುತ್ತಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಹತ್ತಕ್ಕೂ ಅಧಿಕ ಜನರ ಮೇಲೆ ಅಟ್ಯಾಕ್ ಮಾಡಿ ಗಾಯಗೊಳಿಸಿದ್ದು, ಇದರಿಂದ ಜನ ಮನೆಯಿಂದ ಹೊರ ಬರಲು ಕೂಡ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: Belagavi: ಕೃಷಿ ಚಟುವಟಿಕೆಗೆ ಬಳಕೆಯಾಗಬೇಕಿದ್ದ ಜಾಗದಲ್ಲಿ ಬಾರ್, ಕಂಡು ಕಾಣದಂತೆ ಕುಳಿತ ಲೋಕೋಪಯೋಗಿ ಇಲಾಖೆ
ಇನ್ನು ದಿನೇ ದಿನೇ ಹುಚ್ಚು ಹಿಡಿದ ಮಂಗನ ಹಾವಳಿ ಹೆಚ್ಚಾದ ಹಿನ್ನೆಲೆ ಅರಣ್ಯ ಇಲಾಖೆಗೂ ಸುದ್ದಿ ಮುಟ್ಟಿಸಿದ ಗ್ರಾಮಸ್ಥರು ಮಂಗನ ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ. ಈ ಕಾರಣಕ್ಕೆ ನಿನ್ನೆಯಿಂದ ಹತ್ತು ಜನ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬಿಡುಬಿಟ್ಟಿದ್ದು, ಮೂರು ಬೋನುಗಳನ್ನ ಗ್ರಾಮದಲ್ಲಿ ಫಿಕ್ಸ್ ಮಾಡಿ ಕೋತಿ ಸೆರೆಗೆ ಹರಸಾಹಸ ಪಡುತ್ತಿದ್ದಾರೆ. ಒಬ್ಬರು ಅರವಳಿಕೆ ತಜ್ಞರು ಕೂಡ ಕಾರ್ಯಾಚರಣೆಯಲ್ಲಿದ್ದು, ಅವಕಾಶ ಸಿಕ್ಕರೆ ಅರವಳಿಕೆ ಚಚ್ಚು ಮದ್ದು ನೀಡಿ ಕೋತಿ ಸೆರೆ ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ.
ಗ್ರಾಮದಲ್ಲಿ ಮಂಗನ ಹಾವಳಿ ಹೆಚ್ಚಾದ ಹಿನ್ನೆಲೆ ಮಕ್ಕಳು ಮನೆಯಿಂದ ಹೊರ ಬರದ ಸ್ಥಿತಿ ಇದ್ರೆ ಇತ್ತ ಕೆಲಸಕ್ಕೆ, ಜಮೀನುಗಳಿಗೆ ಹೋಗುವವರಿಗೆ ಈಗಾಗಲೇ ಕೋತಿ ಕಚ್ಚಿದ್ದು ಇದರಿಂದ ಯಾರು ಕೆಲಸಕ್ಕೂ ಹೋಗದ ಹಾಗಾಗಿದೆ. ಕೋತಿ ಹಿಡಿಯಬೇಕು ಅಂದರೆ ಕೋತಿಗಳ ದೊಡ್ಡ ಹಿಂಡೇ ಗ್ರಾಮದಲ್ಲಿ ಬಿಡು ಬಿಟ್ಟಿದ್ದು ಅದ್ರಲ್ಲಿ ಹೋಗಿ ಹುಚ್ಚು ಹಿಡಿದ ಮಂಗ ತಪ್ಪಿಸಿಕೊಳ್ತಿದೆಯಂತೆ.
ಇದನ್ನೂ ಓದಿ: ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಜನ್ಮದಿನಾಚರಣೆಗೆ ಆಗಮಿಸಿದವರಿಗೆ ತಟ್ಟೆ, ಲೋಟ ಗಿಫ್ಟ್; ಮುಗಿ ಬಿದ್ದ ಮಹಿಳೆಯರು
ಗ್ರಾಮದಲ್ಲಿ ಈಗಾಗಲೇ ಕೋತಿಯಿಂದ ಕಚ್ಚಿಸಿಕೊಂಡವರ ನೋವು ಹೇಳತಿರದಾಗಿದೆ. ಇತ್ತ ಕಿತ್ತೂರ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಔಷಧಿ ಕೂಡ ಸಿಗದೇ ಗಾಯಾಳುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಗ್ರಾಮದ ಜನರು ಹುಚ್ಚು ಹಿಡಿದ ಕೋತಿಯನ್ನ ಶೀಘ್ರದಲ್ಲಿ ಹಿಡಿಯಬೇಕು ಇಲ್ಲವಾದರೆ ಗುಂಡಿಕ್ಕಿ ಕೊಲ್ಲಿ ಅಂತಾ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಒಂದು ಮಂಗನ ಕಾಟಕ್ಕೆ ಇಡೀ ಗ್ರಾಮದ ಜನರು ಬೆಚ್ಚಿ ಬಿದ್ದು ಭಯದಲ್ಲಿ ಓಡಾಡುವಂತ್ತಾಗಿದೆ. ಮಹಿಳೆಯರು ಸೇರಿದಂತೆ ವಯೋವೃದ್ದರು ಕೂಡ ಓಡಾಡದ ಸ್ಥಿತಿ ನಿರ್ಮಾಣವಾಗಿದ್ದು, ಆದಷ್ಟು ಬೇಗ ಹುಚ್ಚು ಹಿಡಿದ ಮಂಗನನ್ನ ಸೆರೆ ಹಿಡಿಯುವ ಕೆಲಸವಾಗಲಿ. ಇಲ್ಲವಾದರೆ ಗ್ರಾಮದಲ್ಲಿ ಇನ್ನಷ್ಟು ಜನರಿಗೆ ಮಂಗ ಕಚ್ಚಿ ಗಾಯಗೊಳಿಸಿ ಆಸ್ಪತ್ರೆ ಪಾಲಾಗುವಂತೆ ಮಾಡುತ್ತೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇನ್ನಷ್ಟು ಚುರುಕಾಗಿ ಕಾರ್ಯಾಚರಣೆ ಮಾಡಿ ಕೋತಿ ಸೆರೆಹಿಡಿಯಬೇಕು ಎನ್ನುತ್ತಿದ್ದಾರೆ ಗ್ರಾಮಸ್ಥರು.
ವರದಿ: ಸಹದೇವ ಮಾನೆ, ಟಿವಿ9, ಬೆಳಗಾವಿ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:25 pm, Sun, 15 January 23