ಬೆಳಗಾವಿ: ಮದುವೆ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಮೋಸ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇನ್ನೂ ಮೋಸ ಮಾಡಿದ ಯುವಕ ಇಂದು ಬೇರೆ ಯುವತಿ ಜೊತೆಗೆ ಮದುವೆ ಆಗುತ್ತಿದ್ದಾನೆ. ನ್ಯಾಯಕ್ಕಾಗಿ ನೊಂದ ಯುವತಿ ಬೆಳಗಾವಿ ಎಸ್.ಪಿ ಮೊರೆ ಹೋಗಿದ್ದಾರೆ. ಗೋಕಾಕ್ ನಗರದ ಆದರ್ಶ ಮಾಲದಿನ್ನಿ ವಿರುದ್ಧ ನೊಂದ ಯುವತಿ ಆರೋಪ ಮಾಡಿದ್ದಾರೆ.
ಯುವತಿ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದೇ ವಸತಿ ನಿಲಯ ಬಾಡಿಗೆ ನೀಡಿದ್ದ ಕಟ್ಟಡ ಮಾಲೀಕನ ಪುತ್ರನ ವಿರುದ್ಧ ಇದೀಗ ಮೋಸ ಮಾಡಿರುವ ಆರೋಪ ಮಾಡಿದ್ದಾರೆ. 2016ರ ಡಿಸೆಂಬರ್ 5ರಂದು ಯುವತಿಯನ್ನ ಮನೆಗೆ ಕರೆದು ಬಳಿಕ ಅತ್ಯಾಚಾರ ಎಸಗಿದ್ದನಂತೆ. ಅತ್ಯಾಚಾರ ಎಸಗುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಈ ವಿಷಯ ಬಹಿರಂಗ ಪಡಿಸಿದರೆ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಯುವತಿ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿದ್ದಂತೆ ಮದುವೆ ಆಗುವುದಾಗಿ ಮತ್ತೆ ಯುವತಿಯನ್ನ ನಂಬಿಸಿದ್ದಾನೆ. ಹೀಗೆ ನಂಬಿಸಿ ಅತ್ಯಾಚಾರ ಎಸಗಿ ಮೋಸ ಮಾಡಿರುವ ಯುವಕ ಇಂದು ಬೇರೆ ಯುವತಿ ಜೊತೆಗೆ ಮದುವೆ ಆಗುತ್ತಿರುವುದಾಗಿ ಯುವತಿ ಅಳಲು ತೋಡಿಕೊಂಡಿದ್ದಾರೆ.
ಈ ವಿಷಯವನ್ನ ಯುವತಿ, ಯುವಕನ ತಂದೆ ತಾಯಿ ಗಮನಕ್ಕೆ ತಂದಿದ್ದಾರೆ. ಆಗ ಯುವತಿಗೆ ಹಣದ ಆಮಿಷ ತೋರಿಸಿರುವ ಯುವಕನ ಪೋಷಕರು ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿದ್ದಾರೆ. ಇಂದು ಗೋಕಾಕ್‌ನಲ್ಲಿ ಬೇರೆ ಯುವತಿ ಜೊತೆಗೆ ಯುವಕ ಮದುವೆಯಾಗುತ್ತಿದ್ದು ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ವಕೀಲ ಎಂ.ಟಿ.ಪಾಟೀಲ್ ಮೂಲಕ ಎಸ್‌ಪಿ ಕಚೇರಿಗೆ ತೆರಳಿ ಯುವತಿ ದೂರು ನೀಡಿದ್ದಾರೆ. ನಿನ್ನೆ ಸಂಜೆ ಯುವತಿ ಎಸ್‌ಪಿ ಅವರಿಗೆ ಮನವಿ ಮಾಡಿಕೊಂಡಿದ್ದು ಇಂದು ಮದುವೆಯನ್ನ ತಡೆದು ತಮಗೆ ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡಿದ್ದಾರೆ. ಆದ್ರೇ ಯುವತಿಗೆ ಅನ್ಯಾಯವಾದ ಬಗ್ಗೆ ಎಲ್ಲಿಯೂ ದೂರು ನೀಡಿಲ್ಲ.
ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ
ಇದನ್ನೂ ಓದಿ: Deepak Chahar Injury: ಭಾರತಕ್ಕೆ ದೊಡ್ಡ ಶಾಕ್: ರೋಹಿತ್ನ ನಂಬಿಕಸ್ಥ ಪ್ಲೇಯರ್ ಶ್ರೀಲಂಕಾ ಸರಣಿಯಿಂದ ಔಟ್?