ಮನಮೋಹನ್ ಸಿಂಗ್‌ ನಿಧನ: ಬೆಳಗಾವಿಯಲ್ಲಿ ನಾಳೆ ನಡೆಯಬೇಕಿದ್ದ ಕಾಂಗ್ರೆಸ್​ ಕಾರ್ಯಕ್ರಮ ರದ್ದು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 26, 2024 | 11:03 PM

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಎರಡನೇ ದಿನ ಅಂದರೆ ನಾಳೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಮನಮೋಹನ್ ಸಿಂಗ್ ನಿಧನ ಬೆನ್ನಲ್ಲೇ ರಾಹುಲ್​ ಗಾಂಧಿ ಸೇರಿದಂತೆ ಇತರೆ ನಾಯಕರು ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.

ಮನಮೋಹನ್ ಸಿಂಗ್‌ ನಿಧನ: ಬೆಳಗಾವಿಯಲ್ಲಿ ನಾಳೆ ನಡೆಯಬೇಕಿದ್ದ ಕಾಂಗ್ರೆಸ್​ ಕಾರ್ಯಕ್ರಮ ರದ್ದು
ಮನಮೋಹನ್ ಸಿಂಗ್‌ ನಿಧನ: ಬೆಳಗಾವಿಯಲ್ಲಿ ನಾಳೆ ನಡೆಯಬೇಕಿದ್ದ ಕಾಂಗ್ರೆಸ್​ ಕಾರ್ಯಕ್ರಮ ರದ್ದು
Follow us on

ಬೆಳಗಾವಿ, ಡಿಸೆಂಬರ್​ 26: ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಪ್ರಧಾನಿ ಮನಮೋಹನ್​​ ಸಿಂಗ್ (Manmohan Singh) ಅವರು ಗುರುವಾರ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ. ಗಣ್ಯರ ನಿಧಕ್ಕೆ ರಾಜಕೀಯ ನಾಯಕರು, ಹಲವರು ಸಂತಾಪ ಸೂಚಿಸಿದ್ದಾರೆ. ಈ ಮಧ್ಯೆ ಬೆಳಗಾವಿಯಲ್ಲಿ ನಾಳೆ ನಡೆಯಬೇಕಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

ಬೆಳಗಾವಿಯಲ್ಲಿ ಇಂದಿನಿಂದ ಎರಡು ದಿನ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಡೆಯುತ್ತಿದೆ.  ಮೊದಲ ದಿನವಾದ ಇಂದು(ಡಿಸೆಂಬರ್ 26) ಸಭೆಗಳನ್ನು ಮಾಡಿ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಮಧ್ಯೆ ಮನಮೋಹನ್​​ ಸಿಂಗ್​ ನಿಧನದಿಂದಾಗಿ ನಾಳೆ ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ: Manmohan Singh Death: ಮೌನಕ್ಕೆ ಜಾರಿದ ಮನಮೋಹನ್ ಸಿಂಗ್​, ಮಾಜಿ ಪ್ರಧಾನಿಯ ವ್ಯಕ್ತಿಚಿತ್ರಣ ಇಲ್ಲಿದೆ

ಇತ್ತ ದೆಹಲಿಗೆ ತೆರಳಲು ವಿಶೇಷ ವಿಮಾನ ಸಿದ್ಧವಾಗಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ತೆರಳಲಿದ್ದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಸಿ ವೆನುಗೋಪಾಲ್ ಸೇರಿದಂತೆ ಇತರೆ ನಾಯಕರು ತೆರಳಿದ್ದಾರೆ. ಸದ್ಯ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ನಾಯಕರಿಗೆ ಭದ್ರತೆ ಒದಗಿಸಲಾಗಿದೆ.

ಮನಮೋಹನ್​ ಸಿಂಗ್​ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟ: ಹೆಚ್​.ಕೆ.ಪಾಟೀಲ್

ಸಚಿವ ಹೆಚ್​.ಕೆ.ಪಾಟೀಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರ ಆರ್ಥಿಕ ಧೋರಣೆಗಳು, ಸುಧಾರಣೆಗಳಿಂದಾಗಿ ಆರ್ಥಿಕತೆಯಲ್ಲಿ ಭಾರತವನ್ನ 5ನೇ ಸ್ಥಾನಕ್ಕೆ ತಂದವರು. ಡಾ.ಮನಮೋಹನ್​ ಸಿಂಗ್​ ಜೊಗೆ ನಿಕಟ ಸಂಪರ್ಕವಿತ್ತು. ಅವರದ್ದು ಮರೆಯುವ ವ್ಯಕ್ತಿತ್ವ ಅಲ್ಲ. ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದವರು. ಮನಮೋಹನ್​ ಸಿಂಗ್​ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.

ಮನಮೋಹನ್​ ಸಿಂಗ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ

ಟಿವಿ9ಗೆ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಆರ್ಥಿಕತೆಗೆ ಬಲ ಕೊಡುವ ಕೆಲಸ ಮಾಡಿದವರು ಡಾ.ಸಿಂಗ್​, ದೇಶ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಲು ಅಡಿಪಾಯ ಹಾಕಿದವರು. ಡಾ.ಮನಮೋಹನ್​ ಸಿಂಗ್ ಸಜ್ಜನ ರಾಜಕಾರಣಿಯಾಗಿದ್ದವರು. ಅವರ ದೂರದೃಷ್ಟಿಯ ರಾಜಕಾರಣಿ ಆಗಿದ್ದರು. ಭಾರತ ಇಂದು ಬೇರೆ ದೇಶಗಳಿಗೆ ಪೈಪೋಟಿ ಕೊಡಲು ಡಾ.ಸಿಂಗ್ ಕಾರಣ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ತಾವು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಮಾರ್ಗದರ್ಶನ ನೀಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:01 pm, Thu, 26 December 24