ನಮ್ಮ ಧರ್ಮ ಉಳಿಸುವುದಕ್ಕಾಗಿ ಮತಾಂತರ ಕಾಯ್ದೆ ಜಾರಿ ಅನಿವಾರ್ಯ; ಸಚಿವ ಕೆಎಸ್ ಈಶ್ವರಪ್ಪ

| Updated By: sandhya thejappa

Updated on: Dec 15, 2021 | 10:54 AM

ಪರಿಷತ್ ಚುನಾವಣೆಯಲ್ಲಿ ಬಿಜೆಪಿ 6ರಿಂದ 11ಕ್ಕೆ ಏರಿದೆ. ಕಾಂಗ್ರೆಸ್ 3, ಜೆಡಿಎಸ್​ನಿಂದ 2 ಕಸಿದುಕೊಂಡು ಗೆದ್ದಿದ್ದೇವೆ ಎಂದು ಬೆಳಗಾವಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಸೋತರೂ ಮೀಸೆ ಮಣ್ಣಾಗಿಲ್ಲ ಅಂತಾರೆ ಕಾಂಗ್ರೆಸ್​ನವರು.

ನಮ್ಮ ಧರ್ಮ ಉಳಿಸುವುದಕ್ಕಾಗಿ ಮತಾಂತರ ಕಾಯ್ದೆ ಜಾರಿ ಅನಿವಾರ್ಯ; ಸಚಿವ ಕೆಎಸ್ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
Follow us on

ಬೆಳಗಾವಿ: ಧಮ್ ತೋರಿಸುವುದು ಚುನಾವಣೆಗಳಲ್ಲಿ ಅಲ್ಲ. ಜನರ ಮನಸು ಗೆಲ್ಲುವ ವಿಚಾರದಲ್ಲಿ ತೋರಿಸಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ, ಇಂತಹ ಪದಗಳನ್ನು ಸಿದ್ದರಾಮಯ್ಯ ಬಳಸಬಾರದು ಎಂದರು. ಮತಾಂತರ ಕಾಯ್ದೆ ಪ್ರಶ್ನೆ ಮಾಡಲು ಕಾಂಗ್ರೆಸ್ನವರು ಯಾರು. ಕಾಯ್ದೆ ತಂದೆ ತರುತ್ತೇವೆ, ನಮ್ಮದೇ ಸರ್ಕಾರ ಇದೆ. ವಿರೋಧ ಪಕ್ಷದಲ್ಲಿ ಇರೋದಕ್ಕೆ ಮಾತ್ರ ವಿರೋಧಿಸುತ್ತಾರೆ. ನಮ್ಮ ಧರ್ಮ ಉಳಿಸುವುದಕ್ಕಾಗಿ ಕಾಯ್ದೆ ಜಾರಿ ಅನಿವಾರ್ಯವಾಗಿದೆ. ಪಾಕಿಸ್ತಾನದಲ್ಲಿ ಆದಂತೆ ಅಗಲು ಬಿಡುವುದಿಲ್ಲ ಅಂತ ಈಶ್ವರಪ್ಪ ಹೇಳಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ 6ರಿಂದ 11ಕ್ಕೆ ಏರಿದೆ. ಕಾಂಗ್ರೆಸ್ 3, ಜೆಡಿಎಸ್​ನಿಂದ 2 ಕಸಿದುಕೊಂಡು ಗೆದ್ದಿದ್ದೇವೆ ಎಂದು ಬೆಳಗಾವಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಸೋತರೂ ಮೀಸೆ ಮಣ್ಣಾಗಿಲ್ಲ ಅಂತಾರೆ ಕಾಂಗ್ರೆಸ್​ನವರು. ಸೋತರೂ ಕಾಂಗ್ರೆಸ್ ಪಕ್ಷವೇ ಗೆದ್ದಿದೆ ಅನ್ನೋದು ಎಷ್ಟು ಸರಿ. ಬೆಳಗಾವಿ ಸೋಲಿಗೆ ಕಾರ್ಯಕರ್ತರೇ ಹೊಣೆ ಹೊರಬೇಕು. ಸೋಲು ಗೆಲುವಿಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಅಂತ ಅಭಿಪ್ರಾಯಪಟ್ಟರು.

ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದು ಹೀಗೆ
ಬೆಳಗಾವಿಯಲ್ಲಿ ಕಾಂಗ್ರೆಸ್ಗೆ ಹೊಸ ಶಕೆ, ಶಕ್ತಿ ಬಂದಿದೆ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಈ ವೇಳೆ ಮುಂದುವರಿದು ಮಾತನಾಡಿದ ಅವರು, ನಾವು ಈಶ್ವರಪ್ಪ ಹೇಳಿಕೆಗೆ ಉತ್ತರಿಸುವಷ್ಟು ದೊಡ್ಡವರಲ್ಲ. ಚುನಾವಣೆಗಳಲ್ಲಿ ಹಣವೊಂದೇ ಆಗಲ್ಲ, ನಡವಳಿಕೆ ಮುಖ್ಯ. ಯಾರನ್ನೋ ಸೋಲಿಸಬೇಕೆಂದು ಸ್ಪರ್ಧೆ ಮಾಡಿರಲಿಲ್ಲ. ಮೊದಲ ದಿನದಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ, ಹೀಗಾಗಿ ಗೆದ್ದಿದ್ದೇವೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ

3 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ 6 ತಿಂಗಳಲ್ಲಿ ಕೊವಿಡ್ ಲಸಿಕೆ ಸಿದ್ಧವಾಗಲಿದೆ: ಅದಾರ್ ಪೂನಾವಲಾ

ಹಾವೇರಿ: ವಿಯೆಟ್ನಾಂ ಯುವತಿ ಜತೆ ಹಳ್ಳಿ ಹುಡುಗನ ಮದುವೆ; ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ನವಜೋಡಿ

Published On - 10:54 am, Wed, 15 December 21