Abolish Legislative Council: ಮೊದಲು ವಿಧಾನ ಪರಿಷತ್ ರದ್ದಾಗಬೇಕು- ಸ್ವತಃ ಮೇಲ್ಮನೆ ಸದಸ್ಯ ಲಕ್ಷ್ಮಣ ಸವದಿ ತೀವ್ರ ವಿಷಾದ
Karnataka Legislative Council: ಅತ್ಯುತ್ತಮ ಪ್ರಜಾಪ್ರಭುತ್ವದಡಿ ಜಾರಿಗೆ ತಂದಿರುವ ವಿಧಾನ ಪರಿಷತ್ನ ಸಹವಾಸವೇ ಬೇಡಾ, ಅದನ್ನು ರದ್ದುಗೊಳಿಸುವುದು ಬೆಟರ್ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದೆಯಾ, ಬಿಜೆಪಿ? ಚಿಂತಕರ ಚಾವಡಿ, ಮೇಲ್ಮನೆ ಎಂಬೆಲ್ಲಾ ಗುಣ ವಿಶೇಷಗಳೊಂದಿಗೆ, ಉತ್ತಮ ಉದ್ದೇಶದೊಂದಿಗೆ ಜಾರಿಗೆ ಬಂದಿರುವ ವಿಧಾನ ಪರಿಷತ್ ಸದನವನ್ನೇ ತೆಗೆದುಹಾಕಬೇಕು ಎಂಬ ಚಿಂತನೆ ಮನೆಮಾಡಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಒಂದೊಂದಾಗಿ ಕಾಡತೊಡಗಿದೆ.
ಬೆಳಗಾವಿ: ನಿನ್ನೆ ಹೊರಬಿದ್ದ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ ಫಲಿತಾಂಶದಿಂದ ಆಡಳಿತಾರೂಢ ಬಿಜೆಪಿ ನಿರಾಶೆಗೊಂಡಿದೆಯಾ? ಅದಕ್ಕೆ ನಾನಾ ಕಾರಣಗಳು, ಕ್ರಮಗಳ ಬಗ್ಗೆ ಚಿಂತಿಸುತ್ತಿದೆಯಾ? ಕೊನೆಗೆ, ಅತ್ಯುತ್ತಮ ಪ್ರಜಾಪ್ರಭುತ್ವದಡಿ ಜಾರಿಗೆ ತಂದಿರುವ ವಿಧಾನ ಪರಿಷತ್ನ (Legislative Council) ಸಹವಾಸವೇ ಬೇಡಾ, ಅದನ್ನು ರದ್ದುಗೊಳಿಸುವುದು ಬೆಟರ್ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದೆಯಾ, ಬಿಜೆಪಿ? ಚಿಂತಕರ ಚಾವಡಿ, ಮೇಲ್ಮನೆ ಎಂಬೆಲ್ಲಾ ಗುಣ ವಿಶೇಷಗಳೊಂದಿಗೆ, ಉತ್ತಮ ಉದ್ದೇಶದೊಂದಿಗೆ ಜಾರಿಗೆ ಬಂದಿರುವ ವಿಧಾನ ಪರಿಷತ್ ಸದನವನ್ನೇ ತೆಗೆದುಹಾಕಬೇಕು ಎಂಬ ಚಿಂತನೆ ಮನೆಮಾಡಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಒಂದೊಂದಾಗಿ ಕಾಡತೊಡಗಿದೆ.
ಇದಕ್ಕೆ ಇಂಬು ನೀಡುವಂತೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನ ಪರಿಷತ್ ರದ್ದಾಗಬೇಕು (Abolish Legislative Council). ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಆದರೆ ಅವರು ಹೇಳಿರುವ ಧಾಟಿ, ಅವರ ಮಾತಿನ ಹಿನ್ನೆಲೆ ಬೇರೆಯಾಗಿದೆ. ಬೆಳಗಾವಿಯಲ್ಲಿ ಟಿವಿ9 ಜೊತೆ ಮಾತನಾಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಈ ಫಲಿತಾಂಶ ನೋಡಿದ್ರೆ ಪರಿಷತ್ ಇರೋದ್ರಲ್ಲಿ ಅರ್ಥವಿಲ್ಲ. ಇಡೀ ರಾಜ್ಯದ ಚುನಾವಣೆ ನೋಡಿದ್ರೆ ನಂಗೆ ಹೀಗೆ ಅನಸ್ತಿದೆ. ದುಡ್ಡಿನ ರಾಜಕಾರಣ ಆಗ್ತಿದೆ, ಅದೂ ಸಹ ಓಪನ್ ಸಿಕ್ರೇಟ್ ಆಗಿ. ಈ ವ್ಯವಸ್ಥೆಯಲ್ಲಿ ಪರಿಷತ್ ಇಡೋದು ಯಾವ ಪುರುಷಾರ್ಥಕ್ಕೆ? ನಾವೆಲ್ಲ ಜನರ ದೃಷ್ಟಿಯಲ್ಲಿ ಅವಮಾನಿತರಾಗ್ತಿದ್ದೀವಿ. ಸ್ವತಃ ಒರ್ವ ಪರಿಷತ್ ಸದಸ್ಯನಾಗಿ ಹೇಳ್ತಿದ್ದೀನಿ ಪರಿಷತ್ ರದ್ದಾಗಬೇಕು ಎಂದು ಲಕ್ಷ್ಮಣ ಸವದಿ ( MLC Laxman Savadi) ವಿಷಾದದ ಧಾಟಿಯಲ್ಲಿ ಹೇಳಿದ್ದಾರೆ.
ಪರಿಷತ್ ತಗೆದ್ರೆ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಲ್ಲ: ಪ್ರಜಾಪ್ರಭುತ್ವದಲ್ಲಿ ತಲೆ ತಗ್ಗಿಸೋ ಕೆಲಸ ಆಗ್ತಿದೆ. ಪರಿಷತ್ ನ್ನ ಮೊದಲು ಚಿಂತಕರ ಚಾವಡಿ ಅಂತಿದ್ರು. ಕೆಳಮನೆಯಲ್ಲಿ ಏನಾದ್ರು ತಪ್ಪಾದ್ರೆ ಇಲ್ಲಿ ಚರ್ಚೆ ಆಗ್ತಿತ್ತು. ಪರಿಷತ್ ತಗೆದ್ರೆ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗಲ್ಲ. ಈ ರೀತಿ ದುಂದು ವೆಚ್ಚದ ಚುನಾವಣೆಗಳು ನಿಲ್ಲುತ್ತವೆ. ಪರಿಷತ್ ಗೆ ಕಾನೂನಿನ ಅರಿವಿಲ್ಲದ ಜನ ಬರ್ತಿದಿದ್ದಾರೆ. ಕೇವಲ ದುಡ್ಡು ಖರ್ಚು ಮಾಡಿ ಬರ್ತಿದ್ದಾರೆ. ಪ್ರತಿಷ್ಠೆಗೆ ಬಿದ್ದು ಹಣ ಖರ್ಚು ಮಾಡಿ ಪರಿಷತ್ ಗೆ ಬರ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪರೋಕ್ಷವಾಗಿ ಲಕ್ಷಣ ಸವದಿ ಅಸಮಾಧಾನ ವ್ಯಕ್ತಡಿಸಿದರು. ಕೇವಲ ಸಿಎಂ ಒಬ್ರೆ ಅಲ್ಲ, ಎಲ್ಲಾ ಪಕ್ಷದ ನಾಯಕರು ಈ ಬಗ್ಗೆ ಅವಲೋಕನ ಮಾಡಬೇಕು ಎಂದೂ ಹಿತವಚನ ನುಡಿದರು.
ಇದನ್ನೂ ಓದಿ: ಡಿಕೆಶಿ ಬಗ್ಗೆ ಬಹಳ ಕಠೋರವಾಗಿ ಹೇಳುವನಿದ್ದೆ, ಆದ್ರೆ ಬಿಜೆಪಿ ನಾಯಕರಿಂದ ಫೋನ್ ಬಂದಿದೆ ಎಂದು ಮೌನಕ್ಕೆ ಜಾರಿದ ರಮೇಶ್ ಜಾರಕಿಹೊಳಿ!
Published On - 12:28 pm, Wed, 15 December 21