ಕಾಂಗ್ರೆಸ್​ನವರ ಬಗ್ಗೆ ಬಳಸಿದ ಅವಾಚ್ಯ ಪದ ಹಿಂಪಡೆದ ಸಚಿವ ಕೆ ಎಸ್ ಈಶ್ವರಪ್ಪ

ವಿಧಾನಸೌಧದಲ್ಲಿ ಕಾಂಗ್ರೆಸ್‌ನವರ ಬಗ್ಗೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ ಸಚಿವ ಈಶ್ವರಪ್ಪ ಕಟುವಾದ ಅವಾಚ್ಯ ಬೈಗುಳ ಪದ ಪ್ರಯೋಗ ಮಾಡಿದ್ದರು.

ಕಾಂಗ್ರೆಸ್​ನವರ ಬಗ್ಗೆ ಬಳಸಿದ ಅವಾಚ್ಯ ಪದ ಹಿಂಪಡೆದ ಸಚಿವ ಕೆ ಎಸ್ ಈಶ್ವರಪ್ಪ
ಸಚಿವ ಈಶ್ವರಪ್ಪ
Follow us
TV9 Web
| Updated By: guruganesh bhat

Updated on:Aug 10, 2021 | 8:16 PM

ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ಸಿಟ್ಟಿನ ಭರದಲ್ಲಿ ಆಡಿದ್ದ ‘ಆ ಮಾತನ್ನು’ ವಾಪಸ್ ಪಡೆದಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸಿಟ್ಟಿನ ಭರದಲ್ಲಿ ನಾನು ಆ ರೀತಿಯಾಗಿ ಹೇಳಿಕೆ ನೀಡಿದ್ದೇನೆ. ನಾನು ಆ ಪದವನ್ನು ವಾಪಸ್ ಪಡೆಯುತ್ತೇನೆ ಎಂದು ಅವರು ಬೆಳಗಾವಿಯಲ್ಲಿ ತಿಳಿಸಿದರು.

ಇತ್ತೀಚೆಗಷ್ಟೇ ಬಿಜೆಪಿಯ ಒಬ್ಬನೇ ಒಬ್ಬ ಕಾರ್ಯಕರ್ತನ ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ ಎಸ್​​ ಈಶ್ವರಪ್ಪ ಇದೀಗ  ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಧಾನಸೌಧದಲ್ಲಿ ಕಾಂಗ್ರೆಸ್‌ನವರ ಬಗ್ಗೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ ಸಚಿವ ಈಶ್ವರಪ್ಪ ಕಟುವಾದ ಅವಾಚ್ಯ ಬೈಗುಳ ಪದ ಪ್ರಯೋಗ ಮಾಡಿದ್ದರು. ಇದಕ್ಕೆ ಕಾಂಗ್ರೆಸ್​ ನಾಯಕರು ತಕ್ಷಣ ಪ್ರತಿಕ್ರಿಯಿಸಿದ್ದು, ತಿರುಗೇಟು ನೀಡಿದ್ದರು. ಆದಷ್ಟು ಬೇಗ ಈಶ್ವರಪ್ಪರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದರು.

ಶೌಚಾಲಯಕ್ಕೆ ಮೋದಿ ಹೆಸರಿಡಬೇಕೆನ್ನುವುದು ಒಪ್ಪಬೇಕಾ? ಕಾಂಗ್ರೆಸ್ನವರ ಆ ಹೇಳಿಕೆಯನ್ನು ನಾವು ಒಪ್ಪಬೇಕಾ? ಅದಕ್ಕೆ ನಾನು ತಕ್ಷಣ ಆ ರೀತಿ ಹೇಳಕೆಯನ್ನು ನೀಡಿದೆ ಎಂದು ಅವರು ಹೇಳಿದರು. ಕೆ.ಎಸ್.ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂತೋಷ ಸಂತೋಷ ಎಂದರು. ಹಿಂದೆ ಭಾರತೀಯ ಜನಸಂಘ ಅಧ್ಯಕ್ಷ ದೀನದಯಾಳ ಉಪಾಧ್ಯ ಕಗ್ಗೊಲೆ ಆಯಿತು. ಆಗ ನಮ್ಮ ಹತ್ತಿರ ಶಕ್ತಿ ಇರಲಿಲ್ಲ. ಆಗ ಇಡೀ ರಾಷ್ಟ್ರೀಯ ನಾಯಕರು ಶಾಂತಿಯಿಂದ ಇರೀ ಎಂದರು. ಕೇರಳದಲ್ಲಿ ಆರ್‌ಎಸ್‌ಎಸ್ ಕಚೇರಿ ಮೇಲೆ ಅದೇ ರೀತಿ ದಾಳಿ ಮುಂದುವರಿಯಿತು. ಆಗ ನಮ್ಮ ಹಿರಿಯರು ಯಾವುದೇ ಕಾರಣಕ್ಕೂ ಸುಮ್ಮನಿರಬೇಡಿ ಎಂದರು. ನೀವಾಗೆ ನೀವು ಯಾರನ್ನೂ ಹೊಡಿಬೇಡಿ, ನಿಮ್ಮ ಹೊಡೆದವರನ್ನು ಬಿಡಬೇಡಿ ಫೇಸ್ ವಿತ್ ಸೇಮ್ ಸ್ಟಿಕ್ ಅಂತಾ ಹೇಳಿದರು. ಇದನ್ನು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಾನು ಹೇಳಿದ್ದು. ಹರಿಪ್ರಸಾದ್ ನಾಗಪುರ ಯೂನಿವರ್ಸಿಟಿ ಹೇಳಿಕೊಟ್ಟಿದ್ದು ಅಂತಾ ಅವರದೇ ಪದ ಬಳಸಿದರು. ಸುಲಭ ಶೌಚಾಲಯಗಳಿಗೆ ನರೇಂದ್ರ ಮೋದಿ ಹೆಸರಿಡಬೇಕು ಎಂದು ಹರಿಪ್ರಸಾದ್ರಂತಹ ವ್ಯಕ್ತಿ ಹೇಳಿದಮೇಲೆ ನನಗೂ ಸಿಟ್ಟು ಬಂತು. ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪೇ. ಸಿಟ್ಟಿನ ಭರದಲ್ಲಿ ಹೇಳಿ ಆ ಪದವನ್ನು ವಿತ್ ಡ್ರಾ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೋಗಿ ಸರ್ವೇ ಮಾಡಿಕೊಂಡು‌ ಬಂದಿದ್ದಾರೆ ನೆರೆ ಪೀಡಿತ ಬೆಳಗಾವಿ ಜಿಲ್ಲೆಗೆ ಇನ್ನೂ ಹಣ ಬಿಡುಗಡೆ ಮಾಡದ ವಿಚಾರವಾಗಿಯೂ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ‘ನಿನ್ನೆಯೇ ದೇವರೇ ಶಿವನೇ ಅಂತಾ ಗವರ್ನಮೆಂಟ್ ಬಂದಿದೆ. ಸರ್ಕಾರ ಬರ್ತಿದ್ದ ಹಾಗೇ ನೆರೆಹಾನಿ ಬಗ್ಗೆ ಇನ್ನೂ ವರದಿ ಬಂದಿಲ್ಲ. ವರದಿ ಬಂದ ಮೇಲೆ ಎಷ್ಟು ನಷ್ಟ ಆಗಿದೆ ನೋಡುತ್ತೇವೆ. ವರದಿ ಬಂದ ಮೇಲೆ ಖಂಡಿತ ಹಣ ಬಿಡುಗಡೆ ಮಾಡ್ತೇವೆ. ಇಡೀ ಕರ್ನಾಟಕದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಸರ್ವೇ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರು ವರದಿ ಕಳಿಸುತ್ತಿದ್ದಾರೆ. ಕಳೆದ ಬಾರಿ ಪ್ರವಾಹ ವೇಳೆ 1800 ಕೋಟಿ ರೂಪಾಯಿ ರಸ್ತೆ ದುರಸ್ತಿಗಾಗಿ ಬಿಡುಗಡೆ ಮಾಡಿದ್ವಿ. ಎಲ್ಲಾ ಜಿಲ್ಲೆಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಬೇಕೆಂಬ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೋಗಿ ಸರ್ವೇ ಮಾಡಿಕೊಂಡು‌ ಬಂದಿದ್ದಾರೆ. ಉಸ್ತುವಾರಿ ಸಚಿವರು ವರದಿ ನೀಡುತ್ತಿದ್ದಂತೆ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: 

ಕಾಂಗ್ರೆಸ್‌ನವರ ಬಗ್ಗೆ ಅವಾಚ್ಯ ಬೈಗುಳ ಪದ ಬಳಸಿದ ಸಚಿವ ಕೆ.ಎಸ್​. ಈಶ್ವರಪ್ಪ

ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

(Minister KS Eshwarappa who retracted an obscene word used on the Congress)

Published On - 7:58 pm, Tue, 10 August 21

ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್