ಚಿಕ್ಕೋಡಿ, ಅ.27: ಹುಲಿ ಉಗುರಿನ ಪೆಂಡೆಂಟ್ (Tiger Claw Pendant) ಈಗ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಅರಣ್ಯಾಧಿಕಾರಿಗಳು ಅನೇಕ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮತ್ತೊಂದೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪುತ್ರನ ಕೊರಳಲ್ಲೂ ಪೆಂಟೆಂಟ್ ಪತ್ತೆಯಾಗಿದ್ದು ಅರಣ್ಯ ಅಧಿಕಾರಿಗಳು ಹೆಬ್ಬಾಳ್ಕರ್ ಮನೆಯಲ್ಲಿ ಶೋಧ ಮೃಣಾಲ್ನನ್ನು ವಿಚಾರಣೆ ನಡೆಸಿದ್ದಾರೆ. ಇದೀಗ ಶಾಸಕ ಲಕ್ಷ್ಮಣ ಸವದಿ (Laxman Savadi) ಕುಟುಂಬಕ್ಕೂ ಹುಲಿ ಉಗುರು ಸಂಕಷ್ಟ ತಂದಿದೆ. ಸವದಿ ಪುತ್ರ ಸುಮಿತ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಫೋಟೋ ವೈರಲ್ ಆಗಿದೆ.
ಹೌದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ದ್ವಿತೀಯ ಪುತ್ರ ಸುಮಿತ್ ಸವದಿ ಮದುವೆ ಸಮಾರಂಭ ವೇಳೆ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿರುವ ಫೋಟೋಸ್ ವೈರಲ್ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಬಳಿಕ ಈಗ ಲಕ್ಷಣ್ ಸವದಿ ಕುಟುಂಬಕ್ಕೆ ಹುಲಿ ಉಗುರು ಕಂಟಕವಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ದ್ವಿತೀಯ ಪುತ್ರ ಸುಮಿತ್ ಕೊರಳಲ್ಲೂ ಹುಲಿ ಉಗುರು ಮಾದರಿಯ ಪೆಂಡೆಂಟ್ ಕಂಡು ಬಂದಿದೆ. ಕಳೆದ ವರ್ಷ ಸುಮಿತ್ ಸವದಿ ಮದುವೆ ಸಮಾರಂಭ ವೇಳೆ ಸುಮಿತ್ ಅವರು ಎರಡು ಹುಲಿ ಉಗುರುಗಳಿರುವ ಪೆಂಡೆಂಟ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಹುಲಿ ಉಗರು ಪ್ರಕರಣ: ಪಕ್ಕಾ ಸಸ್ಯಾಹಾರಿಯಾಗಿರುವ ನನ್ನ ಮನೆಯಲ್ಲಿ ಹುಲಿಯುಗುರು ಹೇಗೆ ಬಂದೀತು? ಲಕ್ಷ್ಮಿ ಹೆಬ್ಬಾಳ್ಕರ್
ಹುಲಿ ಉಗುರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೂ ಸಂಕಷ್ಟ ಎದುರಾಗಿದೆ. ಅರಣ್ಯ ಅಧಿಕಾರಿಗಳು ಹೆಬ್ಬಾಳ್ಕರ್ ಮನೆಯಲ್ಲಿ ಶೋಧ ಮೃಣಾಲ್ನನ್ನು ವಿಚಾರಣೆ ನಡೆಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಫೋಟೋ ವೈರಲ್ ಆಗಿತ್ತು. ಬೆಳಗಾವಿಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕುವೆಂಪು ನಗರದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಡಿಸಿಎಫ್ ಶಂಕರ್ ಕಲ್ಲೋಳಕರ್ ನೇತೃತ್ವದಲ್ಲಿ 24 ಅಧಿಕಾರಿಗಳ ತಂಡ ಆಗಮಿಸಿ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ಪುತ್ರ ಧರಿಸಿರುವ ಪೆಂಡೆಂಟ್ ಪ್ಲಾಸ್ಟಿಕ್ದು ಮದುವೆ ಟೈಮ್ನಲ್ಲಿ ಅದು ಯಾರೋ ಗಿಫ್ಟ್ ಕೊಟ್ಟಿದ್ದು ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಅರಣ್ಯಾಧಿಕಾರಿಗಳಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ವಿಚಾರಣೆ ನಡೆಸಿದ್ದು, ಲಾಕೆಟ್ ಎಲ್ಲಿಂದ ಬಂತು ಯಾರು ಕೊಟ್ಟಿದ್ದು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:28 pm, Fri, 27 October 23