ಸಂತೋಷ್ ಆತ್ಮಹತ್ಯೆಗೆ ಹೊಸ ಟ್ವಿಸ್ಟ್; ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಕಾಮಗಾರಿ ಮಾಡಿಸಿದ್ದಾರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷ ಹೇಳಿಕೆ

ಶಾಸಕ ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಸಂತೋಷ್ ಕಾಮಗಾರಿ ಮಾಡಿಸಿದ್ದಾರೆಂದು ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ

ಸಂತೋಷ್ ಆತ್ಮಹತ್ಯೆಗೆ ಹೊಸ ಟ್ವಿಸ್ಟ್; ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಕಾಮಗಾರಿ ಮಾಡಿಸಿದ್ದಾರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷ ಹೇಳಿಕೆ
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
Follow us
TV9 Web
| Updated By: ಆಯೇಷಾ ಬಾನು

Updated on:Apr 13, 2022 | 7:07 AM

ಬೆಳಗಾವಿ: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಸಂತೋಷ್ ಕಾಮಗಾರಿ ಮಾಡಿಸಿದ್ದಾರೆಂದು ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.

ಮೃತ ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದಾರೆ. ಸ್ಥಳೀಯ ಮಟ್ಟದ ನಾಯಕರು ಯಾರಾದರೂ ಪ್ರಕರಣದಲ್ಲಿ ಇನ್ವಾಲ್ವ್ ಅದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್, ಖಂಡಿತವಾಗಿ ಸ್ಥಳೀಯ ಮಟ್ಟದ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ. ಆ ಟೈಮ್‌ನಲ್ಲಿ ಯಾರು ಮಂತ್ರಿಗಳಿದ್ದರು? ಯಾರ ಜೊತೆ ಒಡನಾಟ ಇತ್ತು? ಸಂತೋಷ್ ಪಾಟೀಲ್‌ರವರು ಬಿಜೆಪಿ ಕಾರ್ಯಕರ್ತರು. ಮೊನ್ನೆ ನಡೆದ ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಯಾರ ಪರವಾಗಿ ಕೆಲಸ ಮಾಡಿದ್ದಾರೆ ಗೊತ್ತಾಗುತ್ತದೆ. ಯಾರ ಪರವಾಗಿ ಓಡಾಡಿದ್ದಾರೆ, ಯಾರ ಜೊತೆ ಒಡನಾಟ ಇತ್ತು? ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಗಾಡ್‌ಫಾದರ್ ಯಾರು? ಯಾರ ಧೈರ್ಯದಿಂದ ನಾಗೇಶ್ ಮನ್ನೋಳ್ಕರ್ ಕೆಲಸ ಮಾಡಿಸಿದ್ದಾರೆ? ಅದೆಲ್ಲಾ ಕೂಲಂಕುಷವಾಗಿ ತನಿಖೆಯಿಂದ ಹೊರಬರಬೇಕಾಗುತ್ತೆ.

ಇಲ್ಲಿ ಒಂದು ಜೀವ ಹೋಗಿದೆ ಇದರಲ್ಲಿ ರಾಜಕಾರಣ ಮಾಡೋದು ಬೇಡ. ಇಡೀ ಹಿಂಡಲಗಾ ಗ್ರಾಮದ ಎಲ್ಲಾ ಜನರಿಗೂ ಗೊತ್ತಿದೆ. 14 ಸಾವಿರ ವೋಟರ್ಸ್ ಇದ್ದಾರೆ, ಸುಮಾರು 20 ರಿಂದ 25 ಸಾವಿರ ಜನಸಂಖ್ಯೆ ಇರೋ ಈ ಊರಿನಲ್ಲಿ ಎಲ್ಲರಿಗೂ ಗೊತ್ತು. ಯಾರಿಂದ ಇವತ್ತು ಜೀವ ಹೋಗಿದೆ ಅಂತಾ. ಯಾರೋ ಒಬ್ಬರು ಯೂ ಗೋ ಅಹೆಡ್ ಅಂತಾ ಧೈರ್ಯ ನೀಡಿದ್ದಕ್ಕೆ, ನಾನೀದಿನಿ ನಾ ಮಾಡ್ತೀನಿ ಅಂದಿದ್ದಕ್ಕೆ ಆಗಿದೆ. ಈಗ ನಾವು ಕೂಡ 25 ರಿಂದ 30 ಲಕ್ಷ ರೂಪಾಯಿ ಕೆಲಸ ಯಾವುದೋ ಪ್ರವಾಹ ಬಂದಾಗ ಮಾಡಬೇಕಾದ್ರೆ ಆಯ್ತಪಾ ನೀನು ಮಾಡಪ್ಪಾ ಅಂತಾ ಹೇಳ್ತೀವಿ. ನಾವು ನಿಲ್ತೀವಿ, ಅಡ್ವಾನ್ಸ್‌ನಲ್ಲಿ ಕೆಲಸ ಮಾಡಿಸಿದರೂ ಅದನ್ನ ನಾವು ಸರಿ ಮಾಡಿಸಿಕೊಡ್ತೀವಿ. ಈ ನಾಲ್ಕು ಕೋಟಿ ಕಾಮಗಾರಿಗೆ ಯಾರಾದರೂ ಒಬ್ಬರು ಹೇಳಿರಬೇಕಲ್ಲ. ಅದನ್ನ ತಗೆಯುವಂತಹ ಕೆಲಸ ಇಲಾಖೆಯವರು ಮಾಡಲಿ ಎಂದು ರಮೇಶ್ ಜಾರಕಿಹೊಳಿ‌ ಅವರ ಬೆಂಬಲದಿಂದ ಸಂತೋಷ್ ಪಾಟೀಲ್ ಕೆಲಸ ಮಾಡಿರುವುದಾಗಿ ಪರೋಕ್ಷವಾಗಿ ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ; ಸಿಎಂ ಬೊಮ್ಮಾಯಿ ಇದ್ದ ಹೋಟೆಲ್​ಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

Published On - 7:00 am, Wed, 13 April 22

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ