ಬೆಳಗಾವಿ, ಜುಲೈ 30: ಭಾರತದ ನಯಾಗರ ಜಲಪಾತ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತಕ್ಕೆ (Gokak Falls) ಇದೀಗ ಉಕ್ಕಿ ಹರಿಯುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣಕ್ಕೆ ಸದ್ಯ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಗೋಕಾಕ್ ಜಲಪಾತದ ಜಲವೈಭವ ದುಪ್ಪಟ್ಟಾಗಿದೆ. ವಿಕೇಂಡ್ ಹಿನ್ನೆಲೆ ಸಾವಿರಾರು ಪ್ರವಾಸಿಗರು ಜಲಧಾರೆಯನ್ನ ಕಣ್ತುಂಬಿಕೊಂಡು ಎಂಜಾಯ್ ಮಾಡಿದ್ದಾರೆ.
ಗೋಕಾಕ್ ನಗರದಿಂದ ಹತ್ತು ಕಿಮೀ ದೂರದಲ್ಲಿರುವ ಗೋಕಾಕ್ ಫಾಲ್ಸ್ಗೆ ಇದೀಗ ಜೀವ ಕಳೆ ಬಂದಿದೆ. ಬಂಡೆಗಲ್ಲುಗಳ ಮಧ್ಯೆ ಹಾಲಿನಂತೆ ಹರಿದು ಬರುತ್ತಿರುವ ನೀರು ಕೆಲವೇ ಕ್ಷಣಗಳಲ್ಲಿ ಎತ್ತರಿಂದ ನೆಲಕ್ಕಪ್ಪಳಿಸುವ ರುದ್ರರಮಣೀಯ ದೃಶ್ಯ ರೋಮಾಂಚನವುಂಟು ಮಾಡುತ್ತೆ. ಇಂದು ವಿಕೇಂಡ್ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಜಲಪಾತದ ಜಲವೈಭವವನ್ನ ಕಣ್ತುಂಬಿಕೊಂಡರು.
ಇದನ್ನೂ ಓದಿ: Belagavi News: ಗೃಹಲಕ್ಷ್ಮೀ ಅರ್ಜಿ ನೋಂದಣಿಗೆ ಹಣ ವಸೂಲಿ ಆರೋಪ; ಗ್ರಾಮ ಒನ್ ಕೇಂದ್ರದ ಲಾಗ್‌ಇನ್ ಐಡಿ ರದ್ದು
ಕರ್ನಾಟಕದ ಎರಡನೇ ಅತೀ ದೊಡ್ಡ ಜಲಪಾತ ಅಂತಾ ಹೆಸರು ವಾಸಿಯಾಗಿರುವ ಗೋಕಾಕ್ ಜಲಪಾತ ನೋಡುವುದೇ ಚೆಂದ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಕಾರಣ ಜಲವೈಭವ ಇಮ್ಮಡಿಯಾಗುತ್ತೆ. ಇದು ನೋಡುಗರನ್ನ ತನ್ನತ್ತ ಸೆಳೆಯುವುದಷ್ಟೇ ಅಲ್ಲದೇ ರೋಮಾಂಚನ ಗೊಳಿಸಿ ಎಲ್ಲವನ್ನೂ ಮರೆಯಿಸಿ ಬಿಡುತ್ತೆ.
ಬೆಳಗಾವಿ ನಗರ ಸೇರಿದಂತೆ ಮಹಾರಾಷ್ಟ್ರ, ಬಾಗಲಕೋಟ, ವಿಜಯಪುರ, ಧಾರವಾಡ ಸೇರಿದಂತೆ ದೂರದ ಊರುಗಳಿಂದಲೂ ಪ್ರವಾಸಿಗರು ಆಗಮಿಸಿ ಫಾಲ್ಸ್ ವೀಕ್ಷಣೆ ಮಾಡಿ ಎಂಜಾಯ್ ಮಾಡುತ್ತಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ ಗೋಕಾಕ್ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Belagavi News: ಖಾನಾಪುರದಲ್ಲಿ ಪ್ರಾರ್ಥನೆ ವೇಳೆ ಕುಸಿದ ಶಾಲಾ ಕೊಠಡಿಯ ಮೇಲ್ಛಾವಣಿ, ಗೋಡೆ
ಯಾರು ನದಿಗೆ ಇಳಿಯದಂತೆ ಫಾಲ್ಸ್ ಬಳಿ ಹೋಗಿ ಸೇಲ್ಪಿ ಕ್ಲಿಕ್ಕಿಸಿಕೊಳ್ಳುವುದು, ರೀಲ್ಸ್ ಮಾಡದಂತೆ ತಡೆದಿದ್ದಾರೆ. ಗೋಕಾಕ್ ಡಿವೈಎಸ್ಪಿ ನೇತೃತ್ವದಲ್ಲಿ ಇಪ್ಪತ್ತಕ್ಕೂ ಅಧಿಕ ಪೊಲೀಸರ ಬಂದೋಬಸ್ತ್ ಇಲ್ಲಿ ಮಾಡಲಾಗಿದ್ದು ದೂರದಲ್ಲೇ ನಿಂತು ಜಲಪಾತದ ಸೊಬಗನ್ನ ಪ್ರವಾಸಿಗರು ಸವಿಯುತ್ತಿದ್ದಾರೆ.
ಸದ್ಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಇದರಿಂದ ಗೋಕಾಕ್ ಫಾಲ್ಸ್ಗೆ ನೀರಿನ ಪ್ರಮಾಣ ಹೆಚ್ಚಾಗಿ ತನ್ನ ಸೌಂದರ್ಯ ಹೆಚ್ಚಿಸಿಕೊಂಡು ಧುಮ್ಮಿಕ್ಕುತ್ತಿದ್ದಾಳೆ. ವಿಕೇಂಡ್ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಫಾಲ್ಸ್ನತ್ತ ಮುಖ ಮಾಡುತ್ತಿದ್ದು, ಅದರಲ್ಲಿಯೂ ಶಕ್ತಿ ಯೋಜನೆ ಹಿನ್ನೆಲೆ ಮಹಿಳೆಯರೇ ಹೆಚ್ಚಾಗಿ ಫಾಲ್ಸ್ಗೆ ಭೇಟಿ ನೀಡುತ್ತಿದ್ದಾರೆ. ಕುಟುಂಬ ಸಮೇತ ಬಂದು ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:01 pm, Sun, 30 July 23