ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ, ಎಲ್ಲವನ್ನೂ ಸಿಎಂ ಅವರೇ ಇಟ್ಟುಕೊಳ್ಳಲಿ: ಬೊಮ್ಮಾಯಿಗೆ ಯತ್ನಾಳ್ ಟಾಂಗ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 12, 2022 | 4:59 PM

ರಾಜ್ಯ ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ. ಎಲ್ಲವನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಳ್ಳಲಿ. ಮೂರ್ನಾಲ್ಕು ತಿಂಗಳಲ್ಲಿ ಏನು ಅಭಿವೃದ್ಧಿ ಮಾಡಲು ಆಗುತ್ತೆ ಎಂದು ಶಾಸಕ ಬಸನಗೌಡ ಯತ್ನಾಳ್ ಪ್ರಶ್ನಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ, ಎಲ್ಲವನ್ನೂ ಸಿಎಂ ಅವರೇ ಇಟ್ಟುಕೊಳ್ಳಲಿ: ಬೊಮ್ಮಾಯಿಗೆ ಯತ್ನಾಳ್ ಟಾಂಗ್
ಬಿಜೆಪಿ ಶಾಸಕ ಬಸನಗೌಡ ಯತ್ನಾಳ್
Follow us on

ಬೆಳಗಾವಿ: ಗುಜರಾತ್​​ ವಿಧಾನಸಭಾ ಚನಾವಣೆ ಮುಗಿದೆ. ಬಿಜೆಪಿ ಗುಜರಾತ್​ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ, ಹಿಮಾಚಲದಲ್ಲಿ ಕಾಂಗ್ರೆಸ್​ ಅಧಿಕಾರದ ಗದ್ದುಗೆ ಏರಿದೆ. ಇವೆಲ್ಲದರ ಮಧ್ಯೆ ರಾಜ್ಯ ಸಚಿವ ಸಂಪುಟ ವಿಸ್ತರಣೆ (cabinet expansion) ಆಗುವ ಸಾಧ್ಯತೆಯಿದೆ ಎಂದು ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಸದ್ಯ ಈ ವಿಚಾರವಾಗಿ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ನೀಡಿದ್ದು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ. ಎಲ್ಲವನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಳ್ಳಲಿ. ಮೂರ್ನಾಲ್ಕು ತಿಂಗಳಲ್ಲಿ ಏನು ಅಭಿವೃದ್ಧಿ ಮಾಡಲು ಆಗುತ್ತೆ? ಹೊಸ ಸರ್ಕಾರದಲ್ಲಿ ಮಂತ್ರಿ ಆಗಬೇಕೆಂದು ಎಲ್ಲರೂ ಸುಮ್ಮನಿದ್ದಾರೆ ಎಂದು ಖಡಕ್​ ಆಗಿ ಹೇಳಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ

ಗುಜರಾತ್​ ಮಾದರಿಯಲ್ಲಿ​ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಗುಜರಾತ್ ಮಾದರಿಯಲ್ಲೇ ಹೊಸಬರಿಗೆ ಅವಕಾಶ ನೀಡಬೇಕು. ಈ ಬಾರಿ ಕರ್ನಾಟಕದಲ್ಲಿ ಬಹಳಷ್ಟು ಬದಲಾವಣೆ ಮಾಡ್ತಾರೆ. ಯಾರ ಮೇಲೆ ಆರೋಪಗಳಿವೆ ಅಂತಹವರಿಗೆ ಟಿಕೆಟ್ ನೀಡಲ್ಲ. ಒಂದೇ ಕುಟುಂಬದಲ್ಲಿ ಎರಡ್ಮೂರು ಟಿಕೆಟ್​​ಗಳು ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಅಪ್ಪ-ಮಕ್ಕಳು, ಅಣ್ಣ-ತಮ್ಮರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗಲಿದೆ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.

ಇದನ್ನೂ ಓದಿ: ಸಂಪುಟ ವಿಸ್ತರಣೆ ಸುಳಿವು ಕೊಟ್ಟ ಬೊಮ್ಮಾಯಿ: ಸಚಿವಾಕಾಂಕ್ಷಿಗಳಲ್ಲಿ ಚಿಗುರಿದ ಕುರ್ಚಿ ಕನಸು

ಡಿ.22ರಂದು ನಮ್ಮ ಸಮುದಾಯದ ಅಂತಿಮ ಹೋರಾಟ

ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಡಿ.22ರಂದು ನಮ್ಮ ಸಮುದಾಯದ ಅಂತಿಮ ಹೋರಾಟ ಅಥವಾ ವಿಜಯೋತ್ಸವ ನಡೆಯಲಿದೆ. ನಾವು ಅಂತಿಮ ಘಟ್ಟಕ್ಕೆ ಬಂದಿದ್ದೇವೆ. ನಮಗೆ ಒಂದು ಕಡೆ ಆತಂಕ ಇದೆ, ಒಂದು ಕಡೆ ಆಗುತ್ತೆ ಅನ್ನೋದು ಇದೆ. ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಇರುವವರು ರಾತ್ರಿ ಕುಳಿತಾಗ ಅವರ ಮಾತು ಕೇಳಿದ್ರೆ ಹಿಗ್ಗುತ್ತೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಮಾತು ಕೇಳಿದ್ರೆ ನಮ್ಮ ಬಿಪಿ ಲೋ ಆಗುತ್ತೆ. ನಾವು ಲೈಫ್‌ಲೈನ್ ಡೆಡ್‌ಲೈನ್ ಕೊಡೋವರಲ್ಲ ಎಂದರು.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ, ಮುಖ್ಯಮಂತ್ರಿಗಳನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ಮತ್ತು ಸಿಪಿ ಯೊಗೇಶ್ವರ್

ಡಿ.19ರಂದು ಗಡುವು ನಾವು ಕೊಟ್ಟಿದ್ದಲ್ಲ, ಸಿಎಂ ಬೊಮ್ಮಾಯಿ ಅವರು ಕೊಟ್ಟಿದ್ದು. ವಿಧಾನಸಭಾ ಚುನಾವಣೆ ಫೆಬ್ರುವರಿ ಆಗಲಿ ಮೇ ಆಗಲಿ, ನೀತಿ ಸಂಹಿತೆ ಜಾರಿಗೂ ಮುನ್ನವೇ ಮೀಸಲಾತಿ ಘೋಷಣೆ ಮಾಡಬೇಕು. ಡಿ.22ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಶಕ್ತಿ ಪ್ರದರ್ಶನ ಆಗಬೇಕು. ಬೆಂಗಳೂರಲ್ಲಿ ಪ್ಯಾಲೇಸ್ ಗ್ರೌಂಡ್​ನಲ್ಲಿ ಸಮಾವೇಶ ಆದ ಮೇಲೆ ಬಹಳ ಬದಲಾಗಿದೆ. ನನಗೆ ದೆಹಲಿಗೆ ಹೋದ್ರೆ ಅಪಾಯಿಂಟ್‌ಮೆಂಟ್ ಕೊಡ್ತಿರಲಿಲ್ಲ. ಮೊನ್ನೆ ವಿಜಯಪುರಕ್ಕೆ ಬಂದು ಹೋದರಲ್ಲ. ಮುಂದಿನ ಚುನಾವಣೆಯಲ್ಲಿ ಇಡೀ ಕರ್ನಾಟಕಕ್ಕೆ ನಿಮ್ಮ ಯೋಗದಾನ ಬಳಸುತ್ತೇವೆ ಎಂದಿದ್ದಾರೆ.

ಮೀಸಲಾತಿ ಘೋಷಣೆ ಮಾಡಿದ್ರೆ ಶಿರಾ 

ವಿರಾಟ ಪಂಚಮಸಾಲಿ ಸಮಾವೇಶಕ್ಕೆ ನೂರು ಎಕರೆ ವ್ಯವಸ್ಥೆ ಮಾಡಿದ್ದಾರೆ, ಆ 100 ಎಕರೆ ಸಾಲೋದಿಲ್ಲ. ಡಿ.19ಕ್ಕೆ ಸಿಎಂ ಬೊಮ್ಮಾಯಿ ಮೀಸಲಾತಿ ಘೋಷಣೆ ಮಾಡಿದ್ರೆ ಡಿ.22ರಂದು ಬರುವ ಜನರಿಗೆ ಶಿರಾ ಮಾಡಿಸ್ತೀನಿ. ಬೆಳಗಾವಿ ಜಿಲ್ಲೆಯಿಂದ ಮೂರರಿಂದ ನಾಲ್ಕು ಲಕ್ಷ ಜನ ಬರುವ ವ್ಯವಸ್ಥೆ ಮಾಡಿ. ಚನ್ನಮ್ಮ ಜಿಲ್ಲೆಯಲ್ಲಿ ಐತಿಹಾಸಿಕ ನಿರ್ಣಯ ಆಗೋದಿದೆ. ನನ್ನಂತೂ ಪಕ್ಷದಿಂದ ಹೊರಗೆ ಹಾಕಲ್ಲ. ಬರೀ ಪ್ರೆಸ್‌ಮೀಟ್ ಅಷ್ಟೇ ಹತ್ತು ಕಿಲೋಮೀಟರ್ ನಡೆಯಲು ಆಗಲ್ಲ. ವಿಜಯಪುರ 8 ವಿಧಾನಸಭಾ ಕ್ಷೇತ್ರದಲ್ಲಿ 500 ಬಸ್ ನಾನು ಮಾಡ್ತೀನಿ. ಕ್ರಾಂತಿ ಆದ್ರೆ ಇತಿಹಾಸ ಎಂದು ಯತ್ನಾಳ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.