ಬೆಂಗಳೂರು: ಒಮಿಕ್ರಾನ್ ಪ್ರಭೇದದ ವೈರಸ್ ಬಗ್ಗೆ ಅಲರ್ಟ್ ಹಿನ್ನೆಲೆಯಲ್ಲಿ ಬೆಳಗಾವಿ ವಿಧಾನಮಂಡಲ ಅಧಿವೇಶನದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಮೇಲೆ ಅಧಿವೇಶನದ ಭವಿಷ್ಯ ನಿರ್ಧಾರ ಆಗಲಿರುವ ಬಗ್ಗೆ ಹೇಳಲಾಗಿದೆ. ಮಾರ್ಗಸೂಚಿ ನಿಯಮ ಅಡ್ಡಿ ಆದ್ರೆ ಅಧಿವೇಶನ ಅನುಮಾನ ಎನ್ನಲಾಗುತ್ತಿದೆ. ಕೇಂದ್ರದ ಸಲಹೆ ಪ್ರಕಾರ ರಾಜ್ಯದಿಂದ ಮಾರ್ಗಸೂಚಿ ತಯಾರಾಗಲಿದೆ. ಕರ್ನಾಟಕ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಲಿದೆ.
ತಜ್ಞರ ಸಲಹೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಗಣಿಸಲಿದೆ. ಅಧಿವೇಶನಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಭೆಯನ್ನು ವಿಧಾನಸಭೆ ಸಚಿವಾಲಯ ಎದುರು ನೋಡುತ್ತಿದೆ.
ದೇಶದಾದ್ಯಂತ ಒಮಿಕ್ರಾನ್ ವೈರಸ್ ಅಲರ್ಟ್ ಹಿನ್ನೆಲೆ ಕೇಂಪೇಗೌಡ ಏರ್ಪೋರ್ಟ್ನಲ್ಲಿ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿದೇಶಿಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಏರ್ಪೋರ್ಟ್ನಲ್ಲಿ ಬಿಗಿ ಕ್ರಮಕ್ಕೆ ಮುಂದಾ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮುಂದಾಗಿದೆ. ಏರ್ಪೋರ್ಟ್ನಲ್ಲಿ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ ನೀಡಿದ್ದಾರೆ.
ವಿದೇಶದಿಂದ ಬರುವ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ಸರ್ಕಾರದ ಹೊಸ ಗೈಡ್ ಲೈನ್ಸ್ ಜಾರಿಗೆ ತಯಾರಿ ನಡೆಸಲಾಗಿದೆ. ಏರ್ಪೋರ್ಟ್ ಅಧಿಕಾರಿಗಳು, ಆರೋಗ್ಯಾಧಿಕಾರಿಗಳಿಂದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ.
ಇದನ್ನೂ ಓದಿ: ಇಂದು ಉನ್ನತಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ; ಕೊವಿಡ್ 19, ಲಸಿಕೆ ನೀಡಿಕೆ ಸ್ಥಿತಿ ಪರಿಶೀಲನೆ
ಇದನ್ನೂ ಓದಿ: CM Basavaraj Bommai: ರಾಜ್ಯದಲ್ಲಿ ಹೆಚ್ಚಾದ ಕೊರೊನಾ ಸೋಂಕು; ಇಂದು ಸಂಜೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ