ಇಂದು ಉನ್ನತಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಮಹತ್ವದ ಸಭೆ; ಕೊವಿಡ್ 19, ಲಸಿಕೆ ನೀಡಿಕೆ ಸ್ಥಿತಿ ಪರಿಶೀಲನೆ
ಭಾರತದಲ್ಲಿ ಕಳೆದ 23ಗಂಟೆಯಲ್ಲಿ 8318 ಹೊಸ ಸೋಂಕಿತರು ದಾಖಲಾಗಿದ್ದಾರೆ. ಶುಕ್ರವಾರ ಬೆಳಗ್ಗೆ ದಾಖಲಾದ ಕೇಸ್ಗಳಿಗಿಂತ ಶೇ.21.1ರಷ್ಟು ಕಡಿಮೆಯಾಗಿದೆ. ಹಾಗೇ, 24 ಗಂಟೆಯಲ್ಲಿ 465 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ಭಾರತದಲ್ಲಿ ಕೊರನಾ ಸೋಂಕಿನ ಪ್ರಮಾಣ ತಗ್ಗಿದೆ. ಕೊವಿಡ್ 19 ಲಸಿಕೆ ಅಭಿಯಾನ (Covid 19 Vaccine Drive) ವೂ ಕೂಡ ವೇಗದಿಂದ ನಡೆಯುತ್ತಿದ್ದು, ದೇಶದ ಮುಕ್ಕಾಲು ಭಾಗ ಜನರಿಗೆ ಲಸಿಕೆಯೂ ಆಗಿದೆ. ಈ ಮಧ್ಯೆ ಕೊವಿಡ್ 19 ಸೋಂಕಿನ ಹೊಸ ರೂಪಾಂತರದ ಆತಂಕವೂ ಕಾಡುತ್ತಿದೆ. ಅಲ್ಲಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಸೋಂಕು ತಗುಲಿದೆ. ಇದೆಲ್ಲದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಇಂದು ಬೆಳಗ್ಗೆ 10.30ರ ಹೊತ್ತಿಗೆ ಉನ್ನತಾಧಿಕಾರಿಗಳೊಟ್ಟಿಗೆ ಸಭೆ ನಡೆಸಿ, ಕೊರೊನಾ ಸೋಂಕಿನ ಪ್ರಮಾಣ ಮತ್ತು ಲಸಿಕೆ ಅಭಿಯಾನದ ಬಗ್ಗೆ ಸಮಗ್ರ ಮಾಹಿತಿ ಪಡೆಯಲಿದ್ದಾರೆ.
ಭಾರತದಲ್ಲಿ ಕಳೆದ 23ಗಂಟೆಯಲ್ಲಿ 8318 ಹೊಸ ಸೋಂಕಿತರು ದಾಖಲಾಗಿದ್ದಾರೆ. ಶುಕ್ರವಾರ ಬೆಳಗ್ಗೆ ದಾಖಲಾದ ಕೇಸ್ಗಳಿಗಿಂತ ಶೇ.21.1ರಷ್ಟು ಕಡಿಮೆಯಾಗಿದೆ. ಹಾಗೇ, 24 ಗಂಟೆಯಲ್ಲಿ 465 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 1,07,019 ಕೊವಿಡ್ 19 ಸಕ್ರಿಯ ಪ್ರಕರಣಗಳು ಇವೆ. ಹಾಗೇ 24 ಗಂಟೆಯಲ್ಲಿ 73,58,017 ಡೋಸ್ ಲಸಿಕೆ ನೀಡಲಾಗಿದೆ. ಒಟ್ಟಾರೆ ಇಲ್ಲಿಯವರೆಗೆ 1,21,06,58,262 ಡೋಸ್ ಲಸಿಕೆ ನೀಡಲಾಗಿದೆ.
ರೂಪಾಂತರ ಆತಂಕ ಇನ್ನು ವಿಶ್ವದ ಹಲವು ದೇಶಗಳಲ್ಲಿ ಕೊರೊನಾದ ಹೊಸ ತಳಿ B.1.1.529 ವೈರಸ್ ಪತ್ತೆಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಓಮಿಕ್ರಾನ್ ಎಂದು ಹೆಸರಿಸಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ. ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಸಿಂಗಾಪುರ, ಹಾಂಗ್‌ಕಾಂಗ್, ಇಸ್ರೆಲ್‌ನಿಂದ ಭಾರತಕ್ಕೆ ಬರುವವರಿಗೆ ಕೊವಿಡ್ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್
Published On - 9:54 am, Sat, 27 November 21