ಹಿಂದೂ ಧರ್ಮದ ರಕ್ಷಣೆಗೆ ಸಂತರು, ಶರಣರು ಒಂದಾಗಿ: ಭಾರತೀಯ ಸಂತ ಪರಿಷತ್​​

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಭಯೋತ್ಪಾದಕರ ಅಟ್ಟಹಾಸ ಬೆನ್ನಲ್ಲೇ ಬೆಳಗಾವಿಯಲ್ಲಿ ಭಾರತೀಯ ಸಂತ ಪರಿಷತ್ತಿನ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಅಯೋಧ್ಯ ಗೋವಿಂದ ಗಿರಿ ಮಹಾರಾಜರು ಹಿಂದೂಗಳಿಗೆ ಬಟೆಂಗೆ ತೋ ಕಟೆಂಗೆ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲದೇ ಹಿಂದೂಗಳು ಒಂದಾಗುವಂತೆ ಕೂಡ ಕರೆ ಕೊಟ್ಟಿದ್ದಾರೆ.

ಹಿಂದೂ ಧರ್ಮದ ರಕ್ಷಣೆಗೆ ಸಂತರು, ಶರಣರು ಒಂದಾಗಿ: ಭಾರತೀಯ ಸಂತ ಪರಿಷತ್​​
ಸ್ವಾಮೀಜಿಗಳ ಸಭೆ
Edited By:

Updated on: Apr 26, 2025 | 9:51 PM

ಬೆಳಗಾವಿ, ಏಪ್ರಿಲ್​ 26: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್​ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ (Pahalgam Terarist attack) ನಡೆಸಿದ್ದಾರೆ. ಪಹಲ್ಗಾಮ್ ಘಟನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ, ಪ್ರತೀಕಾರದ ಮಾತುಗಳನ್ನು ಜನರು ಆಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಭಾರತೀಯ ಸಂತ ಪರಿಷತ್ತಿನ ಸಭೆ ನಡೆಯಿತು. ಅಯೋಧ್ಯ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ ಗಿರಿ ಮಹಾರಾಜರ ನೇತೃತ್ವದಲ್ಲಿ ಮಹತ್ವದ ಸಂತರ ಸಭೆ ನಡೆಯಿತು. ಬೆಳಗಾವಿಯ ಸರಸ್ವತಿ ನಗರದಲ್ಲಿ ಇರುವ ಹುಕ್ಕೇರಿ ಹಿರೇಮಠದಲ್ಲಿ ನಡೆದ ಸಂತರ ಮಹತ್ವದ ಸಭೆಯಲ್ಲಿ 30 ಕ್ಕೂ ಅಧಿಕ ಸ್ವಾಮೀಜಿ ಭಾಗವಹಿಸಿದ್ದರು.

ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತುರ್ತಾಗಿ ಏರ್ಪಡಿಸಿದ್ದ ಸಂತರ ಸಭೆಯಲ್ಲಿ ಮಹತ್ವದ ಸಂದೇಶವನ್ನ್ನು ಅಯೋಧ್ಯ ಮಹಾರಾಜರು ಹಿಂದೂ ಸಮಾಜಕ್ಕೆ ಮತ್ತು ದೇಶದ ಸಂತರಿಗೆ ರವಾನಿಸಿದ್ದಾರೆ.
ದೇಶದ ಸಂತರು, ಶರಣರು, ಸ್ವಾಮೀಜಿಗಳೂ ಹಿಂದೂ ಧರ್ಮದ ರಕ್ಷಣೆಗೆ ಒಂದಾಗಬೇಕಿದೆ. ಇಲ್ಲವಾದರೆ ನಾವು ಜಾತಿ, ಭಾಷೆ, ಪ್ರಾದೇಶಿಕತೆ ಹೆಸರಿನಲ್ಲಿ ನಮ್ಮಲ್ಲಿಯ ಒಡಕು‌ ಮುಂದುವರೆದರೆ ಬಟೆಂಗೆ ತೋ ಕಟೆಂಗೆ ಅಂದ್ರೆ ನಾವು ತುಂಡು ತುಂಡಾದರೆ ನಮ್ಮನ್ನ ಕತ್ತರಿಸಿ ಬಿಡುತ್ತಾರೆ ಅಂತ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇನ್ನೂ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕರ ಕೃತ್ಯದ ಬಳಿಕ ಮೊದಲ ಬಾರಿಗೆ ಬೆಳಗಾವಿಯಲ್ಲಿ ಭಾರತೀಯ ಸಂತ ಪರಿಷತ್ತಿನ ಮಹತ್ವದ ಸಭೆ ನಡೆದಿದೆ. ಭಾರತೀಯ ಆಧ್ಯಾತ್ಮಿಕ ಗುರು ಗೋವಿಂದ ಗಿರಿ ಮಹಾರಾಜರು , ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ, ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯ ಟ್ರಸ್ಟ್ ಮತ್ತು ಕೃಷ್ಣ ಜನ್ಮಭೂಮಿ ಟ್ರಸ್ಟ್ ಮಥುರಾ ಉಪಾಧ್ಯಕ್ಷರೂ ಆಗಿದ್ದಾರೆ. ಸಭೆಯಲ್ಲಿ ಕೈಲಾಸ ಆಶ್ರಮ ಸ್ವಾಮೀಜಿ, ಹರಿಹರ ಪುರದ ಸ್ವಾಮೀಜಿ ಸೇರಿ 30 ಕ್ಕೂ ಅಧಿಕ ಸ್ವಾಮೀಜಿ ಭಾಗವಹಿಸಿದ್ದರು. ಈ ಭಾರತೀಯ ಸಂತ ಪರಿಷತ್ತಿನಲ್ಲಿ ಕಾಶ್ಮೀರದ ಘಟನೆಯನ್ನ ಪ್ರಮುಖ ವಿಚಾರವಾಗಿ ಇಟ್ಟುಕೊಂಡು ಸ್ವಾಮೀಜಿಗಳು ಚರ್ಚೆ ನಡೆಸಿದರು.

ಇದನ್ನೂ ಓದಿ
ರಾಜಸ್ಥಾನ ಗಡಿಯ ಬಂಕರ್​ಗಳಲ್ಲಿ ಪಾಕಿಸ್ತಾನದ ಸೇನೆ ನಿಯೋಜನೆ
ಪಾಕ್ ಜೊತೆ ನಮಗೆ ಯಾವ ಸಂಬಂಧವೂ ಬೇಡ; ಸೌರವ್ ಗಂಗೂಲಿ
ಪಹಲ್ಗಾಮ್ ದಾಳಿಯ ತಟಸ್ಥ ತನಿಖೆಗೆ ಸಿದ್ಧ; ಪಾಕ್ ಪಿಎಂ ಶೆಹಬಾಜ್ ಷರೀಫ್ ಭರವಸೆ
ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ನಿಮ್ಮ ರಕ್ತ ಹರಿಯುತ್ತೆ

ಭಾರತೀಯ ಸಂಸ್ಕೃತಿಯ ಮತ್ತು ಹಿಂದೂ ಧರ್ಮದ ರಕ್ಷಣೆಗೆ ಸಂತರು, ಶರಣರು ಮತಪಥಗಳನ್ನ ಮರೆತು ಒಂದಾಗಿ ಶ್ರಮಿಸಲು ದೇಶಾದ್ಯಂತ ಜಾಗೃತಿ ಮೂಡಿಸಲು ನಿರ್ಧಾರ ಮಾಡಿದರು. ಪಹಲ್ಗಾಮ್ ಘಟನೆಯನ್ನ ಭಾರತೀಯ ಸಂತ ಪರಿಷತ್ತಿನಲ್ಲಿ ಬಲವಾಗಿ ಖಂಡಿಸಲಾಯಿತು. ಇದೇ ವೇಳೆ ಹಿಂದೂಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ತೀರ್ಮಾನ ತೆಗೆದುಕೊಂಡರು.

ಇದನ್ನೂ ಓದಿ: ಕಲಬುರಗಿ: ರಸ್ತೆ ಮೇಲೆ ಪಾಕ್​ ಧ್ವಜ ಅಂಟಿಸಿ ಪ್ರತಿಭಟನೆ, 6 ಜನ ವಶಕ್ಕೆ

ಒಟ್ಟಿನಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಹತ್ಯಾಕಾಂಡಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಧರ್ಮ ಕೇಳಿ ಹತ್ಯೆ ಮಾಡಿದಕ್ಕೆ ಸಂತರು, ಸ್ವಾಮೀಜಿಗಳೇ ಈಗ ಜನಜಾಗೃತಿಗೆ ಮುಂದಾಗಿದ್ದಾರೆ. ಹಿಂದೂ ಧರ್ಮದ ರಕ್ಷಣೆ ಮಾಡುವುದರ ಜೊತೆಗೆ ಹಿಂದೂಗಳನ್ನ ಒಗ್ಗೂಡಿಸಲು ಮುಂದಾಗಿದ್ದು ಇದರ ಮುಂದಾಳತ್ವ ಸ್ವಾಮೀಜಿಗಳೇ ವಹಿಸಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ