AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ರಸ್ತೆ ಮೇಲೆ ಪಾಕ್​ ಧ್ವಜ ಅಂಟಿಸಿ ಪ್ರತಿಭಟನೆ, 6 ಜನ ವಶಕ್ಕೆ

Pahalgam Terrorist Attack: ಕಲಬುರಗಿಯ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದ್ದು, ಜನ ಸಾಮಾನ್ಯರಲ್ಲಿ ಅಚ್ಚರಿ ಮೂಡಿಸಿದ್ದು, ಪೊಲೀಸರ ನಿದ್ದೆಗೆಡಿಸಿತ್ತು. ಪಾಕಿಸ್ತಾನದ ಮೇಲಿನ ದ್ವೇಷಕ್ಕೆ ರಸ್ತೆಗಳ ಮೇಲೆ ಧ್ವಜದ ಸ್ಟೀಕರ್ ಅಂಟಿಸಿರುವದಾಗಿ ಬಜರಂಗದಳದ ಕಾರ್ಯಕರ್ತರು ಒಪ್ಪಿಕೊಂಡ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ಅನುಮತಿ ಪಡೆಯದೆ ಪಾಕಿಸ್ತಾನದ ಧ್ವಜದ ಸ್ಟೀಕರ್ ಅಂಟಿಸಿ ಜನರ ಗೊಂದಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ: ರಸ್ತೆ ಮೇಲೆ ಪಾಕ್​ ಧ್ವಜ ಅಂಟಿಸಿ ಪ್ರತಿಭಟನೆ, 6 ಜನ ವಶಕ್ಕೆ
ರಸ್ತೆ ಮೇಲೆ ಪಾಕ್​ ಧ್ವಜ ಅಂಟಿಸಿ ಪ್ರತಿಭಟನೆ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Apr 26, 2025 | 3:17 PM

Share

ಕಲಬುರಗಿ, ಏಪ್ರಿಲ್​ 26: ಜಮ್ಮು-ಕಾಶ್ಮೀರದ (Jammu-Kashmir) ಪಹಲ್ಗಾಮ್​ನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಗುಂಡಿನ ದಾಳಿಗೆ (Pahalgam Terrorist Attack) ಸಂಬಂಧಿಸಿದಂತೆ ಪಾಕಿಸ್ತಾನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಮಯದಲ್ಲಿ ಕಲಬುರಗಿಯ ಜಗತ್ ವೃತ ಹಾಗೂ ನ್ಯಾಷನಲ್ ಚೌಕ್​ನ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್​ಗಳನ್ನು ಸಾಲಾಗಿ ಅಂಟಿಸಲಾಗಿತ್ತು. ಇದು ಸಹಜವಾಗಿಯೇ ಜನಸಮಾನ್ಯರ ಅಚ್ಚರಿಗೆ ಕಾರಣವಾಗಿತ್ತು. ಇನ್ನು, ಈ ರೀತಿ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಕಂಡು ಪೊಲೀಸರು ಸಹ ಅಲರ್ಟ್​ ಆಗಿ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದವರು ಯಾರು? ಎಂಬುದನ್ನು ಪತ್ತೆ ಮಾಡಲು ಮುಂದಾದರು. ಈ ಸಮಯದಲ್ಲಿ ಬಜರಂಗದಳದ ಕೆಲ ಕಾರ್ಯಕರ್ತರು ಸ್ಥಳಕ್ಕೆ ಬಂದು ಪಾಕಿಸ್ತಾನದ ಮೇಲಿನ ದ್ವೇಷಕ್ಕಾಗಿ ರಸ್ತೆಗಳ ಮೇಲೆ ಸ್ಟೀಕರ್ ಅಂಟಿಸಿರುವುದಾಗಿ ಪೊಲೀಸರ ಮುಂದೆ ಹೇಳಿದರು. ಇದಾದ ಬಳಿಕ ಪೊಲೀಸರು‌ ಕೊಂಚ‌ ನಿರಾಳರಾಗಿ ನಿಟ್ಟುಸಿರು ಬಿಟ್ಟರು.

ಕಲಬುರಗಿ ನಗರದ ನ್ಯಾಷನಲ್ ಚೌಕ್ ರಸ್ತೆಗಳ ಮೇಲೆ ಪಾಕಿಸ್ತಾನ ಸ್ಟಿಕರ್ ಅಂಟಿಸಿರುವುದು ಕೆಲ‌ ಕಾಲ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಸ್ಥಳೀಯ ಕೆಲ ಮುಸ್ಲಿಂ ಮಹಿಳೆಯರು ರಸ್ತೆಗಳ ಮೇಲಿನ ಪಾಕಿಸ್ತಾನ ಧ್ವಜದ ಸ್ಟೀಕರ್​ಗಳನ್ನು ತೆರವು ಮಾಡಿ, “ಇಲ್ಲಿ ಯಾರು ಪಾಕಿಸ್ತಾನ ಪ್ರೇಮಿಗಳಿಲ್ಲ, ನಮ್ಮ ದೇಶದಲ್ಲಿನ ಕೋಮುಸೌಹಾರ್ದ ಹಾಳು ಮಾಡಲು ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ಬಳಿಕ ಕಲಬುರಗಿ ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನುಮತಿ ಪಡೆಯದೆ ರಸ್ತೆಗಳ ಮೇಲೆ ಪಾಕಿಸ್ತಾನ ಧ್ವಜದ ಸ್ಟೀಕರ್ ಅಂಟಿಸಿದಕ್ಕಾಗಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಇನ್ಮುಂದೆ ಯಾವುದೆ ರೀತಿಯಾದ ಹೋರಾಟ ಮಾಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಪ್ರತಿಭಟನೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮನವಿ ಮಾಡಿದ್ದಾರೆ.

ಇದನ್ನೂ ಓದಿ
Image
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
Image
ಮಂಗಳೂರು: ಪಹಲ್ಗಾಮ್​ ಉಗ್ರರ ದಾಳಿ ಸಮರ್ಥಿಸಿಕೊಂಡು ಫೇಸ್​ಬುಕ್​ನಲ್ಲಿ ಪೋಸ್
Image
ಪೀರ್ ಪಂಜಾಲ್ ಪರ್ವತದಲ್ಲಿ ಅಡಗಿ ಕುಳಿತಿದ್ದಾರಂತೆ ಪಹಲ್ಗಾಮ್ ದಾಳಿಕೋರರು
Image
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಎನ್​ಕೌಂಟರ್

ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು

ಪಾಕಿಸ್ತಾನ ಧ್ವಜಕ್ಕೆ ಮುಸ್ಲಿಂ ಮಹಿಳೆಯರು ಗೌರವ ನೀಡಿದ ವಿಚಾರವಾಗಿ ವಿಪಕ್ಷ ನಾಯಕ ಆರ್​ ಅಶೋಕ್​ ಮಾತನಾಡಿ, ರಸ್ತೆಯಲ್ಲಿ ಪಾಕಿಸ್ತಾನ ಧ್ವಜ ಕಂಡು ಮಹಿಳೆಯರು ಗೌರವ ನೀಡಿದ್ದಾರೆ. ದೇಶದೊಳಗೆ ಇರುವ ದ್ರೋಹಿಗಳನ್ನು ಮಟ್ಟ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Sat, 26 April 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್