ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು!

| Updated By: sandhya thejappa

Updated on: Oct 21, 2021 | 1:06 PM

ಆತ್ಮಹತ್ಯೆ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನಿಂಗಪ್ಪ ಜೈಲಿನ ಹೊರ ತೋಟದ ಕೆಲಸಕ್ಕೆ ನಿಯೋಜನೆಗೊಂಡಿದ್ದ.

ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು!
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ಕೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 48 ವರ್ಷದ ನಿಂಗಪ್ಪ ಬುಗ್ಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಖೈದಿ. ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ನಿವಾಸಿಯಾಗಿರುವ ನಿಂಗಪ್ಪ ಬುಗ್ಗಿ ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಸದ್ಯ ಆತ್ಮಹತ್ಯೆ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನಿಂಗಪ್ಪ ಜೈಲಿನ ಹೊರ ತೋಟದ ಕೆಲಸಕ್ಕೆ ನಿಯೋಜನೆಗೊಂಡಿದ್ದ. ಜೈಲಿನ ಹಳೆ ವಸತಿ ಗೃಹದಲ್ಲೇ ಹಗ್ಗದಿಂದ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ರೈಲಿಗೆ ಸಿಲುಕಿ ವ್ಯಕ್ತಿ ಸಾವು
ವರದಾಪುರ ರೈಲ್ವೆ ನಿಲ್ದಾಣದಲ್ಲಿ ಅಕಸ್ಮಿಕವಾಗಿ ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವರದಾಪುರ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲಿಗೆ ಸಿಲುಕಿ ಗಾಯಗೊಂಡಿದ್ದ ವ್ಯಕ್ತಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಹೆಸರು, ವಿಳಾಸ ಇನ್ನು ತಿಳಿದು ಬಂದಿಲ್ಲ.

ಹೃದಯಾಘಾತದಿಂದ ಇನ್ಸ್​ಪೆಕ್ಟರ್ ಕೊನೆಯುಸಿರು
ಬೆಂಗಳೂರಿನಲ್ಲಿ ಹೃದಯಾಘಾತದಿಂದ ಇನ್ಸ್​ಪೆಕ್ಟರ್ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ಇನ್ಸ್​ಪೆಕ್ಟರ್ ರಫೀಕ್​ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಮನೆಯವರು ಕೂಡಲೆ ವೈದ್ಯರನ್ನ ಕರೆಸಿದ್ದಾರೆ. ಆದರೆ ಇನ್ಸ್​ಪೆಕ್ಟರ್ ಅಷ್ಟರಲ್ಲೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ

ಮಂದಿರ ದೇಣಿಗೆ ಲೆಕ್ಕ: ಚುನಾವಣೆ ಬಂದಾಗಲೇ ಇದರ ಬಗ್ಗೆ ಪ್ರಶ್ನೆ, ಸಂದೇಹ ಬರುತ್ತದೆ – ಪೇಜಾವರ ಶ್ರೀ ಅಸಮಾಧಾನ

100 ಕೋಟಿ ಡೋಸ್​ ಕೊವಿಡ್​ 19 ಲಸಿಕೆ ನೀಡಿಕೆ: ಭಾರತದ ಬದ್ಧತೆ, ನಾಯಕತ್ವವನ್ನು ಶ್ಲಾಘಿಸಿದ ಡಬ್ಲ್ಯೂಎಚ್​ಒದ ಪೂನಂ ಖೇತ್ರಪಾಲ್​ ಸಿಂಗ್​